ರೈಲು ಹೊರಡುವ 2 ನಿಮಿಷ ಮುನ್ನ ಇನ್ನು ಗಂಟೆ ಮೊಳಗುತ್ತೆ!

Kannadaprabha News   | Asianet News
Published : Jul 13, 2020, 04:40 PM ISTUpdated : Jul 13, 2020, 04:46 PM IST
ರೈಲು ಹೊರಡುವ 2 ನಿಮಿಷ  ಮುನ್ನ ಇನ್ನು ಗಂಟೆ ಮೊಳಗುತ್ತೆ!

ಸಾರಾಂಶ

ರೈಲು ಹೊರಡುವ 2 ನಿಮಿಷ ಮುನ್ನ ಇನ್ನು ಗಂಟೆ ಮೊಳಗುತ್ತೆ!  ಬೋಗಿಗಳಲ್ಲಿ ಸಿಸಿಟೀವಿ ರೈಲ್ವೆಯಿಂದ 20 ಹೊಸ ಸ್ಕೀಂ | ರೈಲು ಹಳಿ ತಪ್ಪುವುದನ್ನು ತಂತ್ರಜ್ಞಾನದ ಮೂಲಕವೇ ತಡೆಯಲು ವ್ಯವಸ್ಥೆ

ನವದೆಹಲಿ (ಜು. 13): ರೈಲ್ವೆ ಪ್ರಯಾಣವನ್ನು ಇನ್ನಷ್ಟು ಹೆಚ್ಚು ಸುರಕ್ಷಿತ ಹಾಗೂ ಆರಾಮದಾಯಕ ಮಾಡಲು ರೈಲ್ವೆ ಉದ್ಯೋಗಿಗಳೇ ಸಿದ್ಧಪಡಿಸಿದ 20 ಹೊಸ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳಲು ರೈಲ್ವೆ ಮಂಡಳಿ ತೀರ್ಮಾನಿಸಿದೆ.

ರೈಲು ಹೊರಡುವ ಸಂಕೇತವಾಗಿ, ಅದು ಹೊರಡುವ ಕೆಲ ನಿಮಿಷ ಮುನ್ನ ಗಂಟೆ ಮೊಳಗುವುದು, ಕೋಚ್‌ಗಳಲ್ಲಿ ಸಿಸಿಟೀವಿ ಅಳವಡಿಸಿ, ಅದರ ದೃಶ್ಯಗಳನ್ನು ದೃಶ್ಯ ಕಂಟ್ರೋಲ್‌ ರೂಮ್‌ನಲ್ಲಿ ನೇರಪ್ರಸಾರ ಮಾಡುವುದು, ಮೊಬೈಲ್‌ ಫೋನ್‌ನಲ್ಲಿನ ಆ್ಯಪ್‌ ಮೂಲಕವೇ ಕಾಯ್ದಿರಿಸದ (ಎನ್‌ರಿಸವ್‌್ರ್ಡ) ಟಿಕೆಟ್‌ ಮುದ್ರಣ- ಇತ್ಯಾದಿ ನವೀನ ತಂತ್ರಜ್ಞಾನಗಳು ಜಾರಿಗೆ ಬರಲಿವೆ.

ಖಾಸಗಿ ರೈಲು ಓಡಿಸಲು ದಿಗ್ಗಜ ಕಂಪನಿಗಳ ಆಸಕ್ತಿ

ವಿನೂತನ ಪರಿಕಲ್ಪನೆಗಳನ್ನು ಉದ್ಯೋಗಿಗಳು ನೀಡಬಹುದು ಎಂದು 2018ರಲ್ಲೇ ರೈಲ್ವೆ ಇಲಾಖೆ ವೆಬ್‌ಸೈಟ್‌ನಲ್ಲಿ ತನ್ನ ಉದ್ಯೋಗಿಗಳಿಗೆ ಆಹ್ವಾನ ನೀಡಿತ್ತು. ಸೆಪ್ಟೆಂಬರ್‌ 2018ರಿಂದ ಡಿಸೆಂಬರ್‌ 2019ರವರೆಗೆ 2645 ಪರಿಕಲ್ಪನೆಗಳನ್ನು ಉದ್ಯೋಗಿಗಳು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ್ದರು. ಇವುಗಳನ್ನು ಪರಾಮರ್ಶಿಸಿ ಅಂತಿಮವಾಗಿ 20 ನವೀನ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳಲು ರೈಲ್ವೆ ಮಂಡಳಿ ತೀರ್ಮಾನಿಸಿದೆ. ಈ ಬಗ್ಗೆ ಎಲ್ಲ ವಲಯಗಳ ರೈಲ್ವೆ ಮ್ಯಾನೇಜರ್‌ಗಳಿಗೆ ಆದೇಶ ನೀಡಲಾಗಿದ್ದು, 3 ತಿಂಗಳಲ್ಲಿ ಜಾರಿಗೆ ಸೂಚಿಸಲಾಗಿದೆ.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
India Latest News Live: ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20 - ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!