ವೈನ್, ಬಿಯರ್ ಮಾರಾಟ ಕುಸಿತ, ಮೋದಿ ಕಳ್ಳ ಎಂದ ರಾಹುಲ್‌ಗೆ ಸಂಕಷ್ಟ; ಜ.19ರ ಟಾಪ 10 ಸುದ್ದಿ!

Suvarna News   | Asianet News
Published : Jan 19, 2020, 05:27 PM ISTUpdated : Jan 19, 2020, 05:36 PM IST
ವೈನ್, ಬಿಯರ್ ಮಾರಾಟ ಕುಸಿತ, ಮೋದಿ ಕಳ್ಳ ಎಂದ ರಾಹುಲ್‌ಗೆ ಸಂಕಷ್ಟ; ಜ.19ರ ಟಾಪ 10 ಸುದ್ದಿ!

ಸಾರಾಂಶ

ಬರೋಬ್ಬರಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ವೈನ್ ಬಳಕೆ ಪ್ರಮಾಣ ಕಡಿಮೆಯಾಗಿದೆ. ಇತ್ತ ಕಾಂಗ್ರೆಸ್  ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೋದಿಯನ್ನು ಕಳ್ಳ ಎಂದು ಕರೆದ ರಾಹುಲ್‌ಗೆ ಸಮನ್ಸ್ ಜಾರಿಯಾಗಿದೆ.ಎಲ್ಲಾ ರಾಜ್ಯಗಳು ಪೌರತ್ವ ಕಾಯ್ದೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ. ಬೆಂಗಳೂರು ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಟೀಂ ಇಂಡಿಯಾ ಕ್ರಿಕೆಟಿಗರು, ತೂಕ ಇಳಿಸಿ ಬಳುಕುವ ಬಳ್ಳಿಯಂತಾದ ಡರ್ಟಿ ಪಿಕ್ಟರ್ ಬೆಡಗಿ ಸೇರಿದಂತೆ ಜನವರಿ 19ರ ಟಾಪ್ 10 ಸುದ್ದಿ ಇಲ್ಲಿವೆ.  

ಜಮೀರ್ ಭಾಯ್ ಆಪರೇಷನ್ ಹಸ್ತ: ಜೆಡಿಎಸ್‌ಗೆ ಮರ್ಮಾಘಾತ...

ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಜಮಿರ್ ಅಹ್ಮದ್ ಖಾನ್ ಆಪರೇಷನ್ ಹಸ್ತ ಮಾಡಿದ್ದಾರೆ. 

ಸ್ಕೂಲ್ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ಕೊಟ್ಟ 11ನೇ ತರಗತಿ ವಿದ್ಯಾರ್ಥಿನಿ!

ಛತ್ತೀಸ್ ಗಢದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. 11 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸ್ಕೂಲ್ ಹಾಸ್ಟೆಲ್ ನಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ. ನವಜಾತ ಶಿಶು ಹುಟ್ಟುವ ಮುನ್ನವೇ ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

250ಕೆಜಿ ತೂಕದ ಐಸಿಸ್ ಉಗ್ರನನ್ನು ಎತ್ತುವಲ್ಲಿ ಸುಸ್ತಾದ ಪೊಲೀಸರು!

ಐಸಿಸ್ ಮುಖ್ಯಸ್ಥ ಅಬುಲ್ ಬಕರ್ ಅಲ್ ಬಾಗ್ದಾದಿ ಹತ್ಯೆ ಬಳಿಕ ನಿಟ್ಟುಸಿರು ಬಿಟ್ಟಿರುವ ಇರಾಕ್ ಹಾಗೂ ಸಿರಿಯಾ ಭದ್ರತಾ ಪಡೆಗಳು, ಇದೀಗ ಆತನ ಸಹಚಚರ ಬೇಟೆ ಶುರು ಮಾಡಿದ್ದಾರೆ.ಅದರಂತೆ ಇರಾಕ್  ಭದ್ರತಾ ಪಡೆಗಳ ನಿದ್ರೆಗೆಡಿಸಿದ್ದ ಐಸಿಸ್‌ನ ದೈತ್ಯ ಉಗ್ರನೋರ್ವ ಬಂಧನಕ್ಕೀಡಾಗಿದ್ದು, ಆತನನ್ನು ಬಂಧಿಸಿ ಕರೆದೊಯ್ಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

'ಮೋದಿ ಕಳ್ಳ' ಎಂದ ರಾಹುಲ್‌ ಗಾಂಧಿಗೆ ಸಮನ್ಸ್!

ಪ್ರಧಾನಿ ನರೇಂದ್ರ ಮೋದಿ ಓರ್ವ ಕಳ್ಳ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಧಾನಿ ಕುರಿತು ಹಗುರವಾಗಿ ಮಾತನಾಡಿದ್ದಕ್ಕೆ ರಾಂಚಿ ಸಿವಿಲ್ ನ್ಯಾಯಾಲಯ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ.

ರಾಜ್ಯಗಳು ಸಿಎಎ ಜಾರಿ ಮಾಡಲೇಬೇಕು: ಕಾಂಗ್ರೆಸ್ ನಾಯಕ

 ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಕಾಂಗ್ರೆಸ್ ತೀವ್ರ ಪ್ರತಿಭಟನೆ ಹಾಗೂ ಕಾಂಗ್ರೆಸ್ ಆಡಳಿತದ ಪಂಜಾಬ್ ಸರ್ಕಾರವೇ ಸಿಎಎ ವಿರುದ್ಧ ಗೊತ್ತುವಳಿ ಅಂಗೀಕರಿಸಿದ ನಡುವೆಯೇ, ಯಾವುದೇ ರಾಜ್ಯವು ಸಿಎಎ ಜಾರಿಯನ್ನು ನಿರಾಕರಿ\ಸುವಂತಿಲ್ಲ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪ್ರತಿಪಾದಿಸಿದ್ದಾರೆ.

INDvAUS ಬೆಂಗಳೂರು ಪಂದ್ಯ; ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ; ಇಲ್ಲಿದೆ ಕಾರಣ!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಅಭಿಮಾನಿಗಳ ಕುತೂಹಲ ಡಬಲ್ ಮಾಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸೀಸ್ ತಂಡಕ್ಕೆ ಸ್ಟೀವ್ ಸ್ಮಿತ್ ಮತ್ತೆ ಆಸರೆಯಾಗಿದ್ದಾರೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. 

ವೈನ್, ಬಿಯರ್ ಕುಡಿಯೋದು ಕಡಿಮೆ ಮಾಡಿದ ಅಮೆರಿಕನ್ನರು: ಮತ್ತೇನು ಬೇಕೆಂದರು?

ಕಳೆದ 25ವರ್ಷಗಳಲ್ಲೇ ಮೊದಲ ಬಾರಿ ಅಮೆರಿಕದಲ್ಲಿ ವೈನ್ ಬಳಕೆ ಪ್ರಮಾಣ ಕಡಿಮೆಯಾಗಿದ್ದು, ವೈನ್ ಉತ್ಪಾದಕರಲ್ಲಿ ಆತಂಕ ಮೂಡಿಸಿದೆ. ಅದರಂತೆ ಬಿಯರ್ ಮಾರಾಟವೂ ಕುಂಠಿತಗೊಂಡಿದೆ.

'ಡರ್ಟಿ ಪಿಕ್ಚರ್‌'ನಲ್ಲಿ ಹೆಚ್ಚಾದ ತೂಕಕ್ಕೆ ವಿದ್ಯಾ ಮಾಡಿದ್ರು ಈ ಥೆರಪಿ; ಕೇಳಿದ್ರೆ ಶಾಕ್ ಆಗ್ತೀರಾ!

ಬಾಲಿವುಡ್ ಬ್ಯೂಟಿ ವಿದ್ಯಾ ಬಾಲನ್ ಅಂದ್ರೆ ಸಾಕು ಕಣ್ಮುಂದೆ ಬುರುವುದು ಡರ್ಟಿ ಪಿಕ್ಚರ್, ಕಹಾನಿ. ಬರೀ ನಟನೆ ಮಾತ್ರವಲ್ಲ  ಆಕೆಯ ಡ್ರೆಸ್ಸಿಂಗ್ ಸೆನ್ಸ್‌ಗೂ ಫಿದಾ ಆಗೋದು ಗ್ಯಾರಂಟಿ. ನ್ಯಾಷನಲ್ ಅವಾರ್ಡ್, ಫಿಲ್ಮಫೇರ್ ಅವಾರ್ಡ್, ಸ್ಕ್ರೀನ್ ಅವಾರ್ಡ್ ಹಾಗೂ ಪದ್ಮ ಶ್ರೀ ಪ್ರಶಸ್ತಿ ಪಡೆದುಕೊಂಡಿರುವ ವಿದ್ಯಾ ಇದೀಗ ತೂಕ ಇಳಿಸಿಕೊಂಡಿದ್ದಾರೆ.

ಟೊಯೋಟಾ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್ ಕಾರಿನ ಬೆಲೆ ಬಹಿರಂಗ!

ಕಿಯಾ ಮೋಟಾರ್ಸ್ ಭಾರತದಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. SUV ಕಾರಿನಲ್ಲಿ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿರುವ ಕಿಯಾ ಇದೀಗ mpv ಕಾರಿನ ಮೂಲಕ ಇನೋವಾಗೆ ಪೈಪೋಟಿ ನೀಡಲು ಸಜ್ಜಾಗಿದೆ. ನೂತನ ಕಾರಿನ ಬೆಲೆ ಬಹಿರಂಗವಾಗಿದೆ.

17 ಜನರಿಗೂ ಸಚಿವ ಸ್ಥಾನ ಬೇಕು: ವಿಶ್ವನಾಥ್ 

ಅಮಿತ್‌ ಶಾ ರಾಜ್ಯಕ್ಕೆ ಬಂದು ಹೋದ ಹಿನ್ನಲೆಯಲ್ಲೇ ಸಂಪುಟ ವಿಸ್ತರಣೆಯ ವಿಚಾರ ಇನ್ನಷ್ಟು ಹುರುಪು ಪಡೆದುಕೊಂಡಿದೆ. 17 ಶಾಸಕರೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದು ಈ ಬಗ್ಗೆ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!