ಎಲ್ಲಿಗೆ ಪಯಣ..?: ಅಧಿಕೃತವಾಗಿ ಅರಮನೆ ತೊರೆದ ಹ್ಯಾರಿ ದಂಪತಿ!

Suvarna News   | Asianet News
Published : Jan 19, 2020, 04:51 PM IST
ಎಲ್ಲಿಗೆ ಪಯಣ..?: ಅಧಿಕೃತವಾಗಿ ಅರಮನೆ ತೊರೆದ ಹ್ಯಾರಿ ದಂಪತಿ!

ಸಾರಾಂಶ

ಅಧಿಕೃತವಾಗಿ ಅರಮನೆಯ ಜವಾಬ್ದಾರಿಗನ್ನು ಕಳಚಿದ ಹ್ಯಾರಿ ದಂಪತಿ| ಅರಮನೆ ಬಿಟ್ಟು ಹೊರ ನಡೆದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್| ಅಧಿಕೃತ ಘೋಷಣೆ ಹೊರಡಿಸಿದ ಬಕಿಂಗ್‌ಹ್ಯಾಮ್ ಅರಮನೆ ವಕ್ತಾರ| ಹ್ಯಾರಿ ಮತ್ತು ಮೇಘನ್ ಇನ್ನು ಮುಂದೆ ಸಾರ್ವಜನಿಕ ಹಣವನ್ನು ಬಳಸುವಂತಿಲ್ಲ| ಮನೆ ನವೀಕರಣಕ್ಕಾಗಿ ಬಳಸಿದ್ದ 2.4 ಮಿಲಿಯನ್ ಪೌಂಡ್ಸ್ ಮರಳಿಸಲಿರುವ ಹ್ಯಾರಿ ದಂಪತಿ|

ಲಂಡನ್(ಜ.19): ಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗನ್ನು ಕಳಚಿ ಹೊರ ನಡೆದಿದ್ದಾರೆ. 

ಈ ಕುರಿತು ಬಕಿಂಗ್‌ಹ್ಯಾಮ್ ಅರಮನೆ ಅಧಿಕೃತ ಘೋಷಣೆ ಹೊರಡಿಸಿದ್ದು, ರಾಜ ಮನೆತನದ ಈ ದಂಪತಿ ಇನ್ನು ಸಾಮಾನ್ಯರಂತೆ ಜೀವನ ನಡೆಸಲಿದೆ ಎಂದು ಹೇಳಿದೆ.

ತಮ್ಮ ಕೆಲಸ ಕಾರ್ಯಗಳಿಗೆ ಹ್ಯಾರಿ ಮತ್ತು ಮೇಘನ್ ಸಾರ್ವಜನಿಕ ಹಣವನ್ನು ಬಳಸುವಂತಿಲ್ಲ ಎಂದು ಹೇಳಿರುವ ಅರಮನೆ ವಕ್ತಾರ, 2020ರಿಂದ ಅರಮನೆಯ ಹೊಸ ವ್ಯವಸ್ಥೆಗಳು ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

ಹ್ಯಾರಿ ದಂಪತಿ ರಾಜ ಪ್ರಭುತ್ವ ತೊರೆಯಲು ರಾಣಿ ಎಲಿಜಬೆತ್‌ ಸಮ್ಮತಿ!

ಒಪ್ಪಂದದಂತೆ ಹ್ಯಾರಿ ದಂಪತಿ  ವಿಂಡ್ಸರ್​ ಕಾಸ್ಟಲ್‌​ನ ತಮ್ಮ ಮನೆಯ ನವೀಕರಣಕ್ಕಾಗಿ ಮಾಡಿರುವ ವೆಚ್ಚ ಸೇರಿದಂತೆ, ಸಾರ್ವಜನಿಕರ ತೆರಿಗೆ ಮೊತ್ತ 2.4 ಮಿಲಿಯನ್​ ಪೌಂಡ್ಸ್​ ಮರಳಿಸಬೇಕಾಗಿದೆ. 

ಕಳೆದ ಹತ್ತು ದಿನಗಳ ಹಿಂದೆಯಷ್ಟೆ ಹ್ಯಾರಿ ಮತ್ತು ಮೇಘನ್​ ದಂಪತಿ ರಾಜ ಮನೆತನದ ವೈಭೋಗಗಳನ್ನು ತೊರೆಯುವುದಾಗಿ ಘೋಷಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್