ಭಾರತದ ನಂ.1 ಶ್ರೀಮಂತನ ಮನೆ ಮದ್ವೆಯಲ್ಲಿ ಕಡು ಬಡವರಿಗೂ ಊಟ!

Published : Dec 08, 2018, 01:44 PM ISTUpdated : Dec 08, 2018, 01:59 PM IST
ಭಾರತದ ನಂ.1 ಶ್ರೀಮಂತನ ಮನೆ ಮದ್ವೆಯಲ್ಲಿ ಕಡು ಬಡವರಿಗೂ ಊಟ!

ಸಾರಾಂಶ

ಅಂಬಾನಿ ಮನೆ ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ಅನ್ನ ಸೇವೆಗೆ ಚಾಲನೆ ನೀಡಲಾಗಿದ್ದು, ಸಾವಿರಾರು ಮಂದಿ ಬಡವರಿಗೆ ಹಾಗೂ ವಿಶೇಷ ಚೇತನರಿಗೆ ಅನ್ನದಾನ ಮಾಡಲಾಗುತ್ತಿದೆ. 

ಉದಯಪುರ: ಭಾರತದ ನಂ.1 ಸಿರಿವಂತ ಮುಕೇಶ್ ಅಂಬಾನಿ ಮನೆಯಲ್ಲಿ ಮಗಳ ಮದುವೆಯ ಸಂಭ್ರಮ. ಉದಯಪುರದ ಅರಮನೆಯಲ್ಲಿ ನಡೆಯುವ ಈ ರಾಯಲ್ ವೆಡ್ಡಿಂಗ್‌ಗೆ ಅದ್ಧೂರಿ ತಯಾರಿ ನಡೆದಿದ್ದು, ಈಗಾಗಲೇ ಮದುವ ಪೂರ್ಮ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. 

ಸಿರಿವಂತರ ಮನೆ ಮದುವೆಯಲ್ಲಿ ವಿಶೇಷ ಆಹ್ವಾನಿತರಿಗೆ ಮಾತ್ರ ಎಂಟ್ರಿ ಎಂಬ ಭಾವನೆ ಸಹಜ. ಆದರೆ, ಇದಕ್ಕೆ ಅಪವಾದವೆಂಬಂತೆ ಈ ಸಿರಿವಂತ ದಂಪತಿಗಳು ಸಾವಿರಾರು ಬಡ, ವಿಶೇಷ ಚೇತನರಿಗೂ ಊಟ ಹಾಕುತ್ತಿದ್ದಾರೆ. ಅಲ್ಲದೇ  ಸದಾ ಬಡವರ ಹೊಟ್ಟೆ ತುಂಬಿಸುವಂಥ 'ಅನ್ನದಾನ' ಯೋಜನೆಗೂ ಮಗಳ ಮದುವೆ ಮೂಲಕವೇ ನಾಂದಿ ಹಾಡುತ್ತಿದೆ ಈ ಶ್ರೀಮಂತ ಕುಟುಂಬ.

ಅಂಬಾನಿ ಮನೆ ಮದ್ವೆ ಡ್ರೆಸ್ ಕೋಡ್ ಇದು

ಉದಯಪುರದಲ್ಲಿ ನಡೆಯುತ್ತಿರುವ ಅನ್ನ ಸೇವಾ ಯೋಜನೆಯಲ್ಲಿ 5000 ಮಂದಿಗೆ ಅಂಬಾನಿ ಕುಟುಂಬ ಅನ್ನದಾನ ಮಾಡುತ್ತಿದೆ. ಇದರಲ್ಲಿ ಸಾವಿರಾರು ಮಂದಿ ವಿಶೇಷ ಚೇತನರೂ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೇ ಖುದ್ದು ಅಂಬಾನಿ ದಂಪತಿಯೇ ಬಡವರಿಗೆ ಊಟ ಬಡಸುತ್ತಿರುವುದು ಮತ್ತೊಂದು ವಿಶೇಷ.

ಅಂಬಾನಿ ಮಗಳ ಮದ್ವೆ, ರಿವೀಲ್ ಆಯ್ತು ಹೊಸ ವಿಷ್ಯ

ಡಿಸೆಂಬರ್ 12ರಂದು ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮದುವೆ  ಉದ್ಯಮಿ ಆನಂದ್ ಪಿರಮಾಳ್ ಅವರೊಂದಿಗೆ ನಡೆಯಲಿದೆ. ಈಗಾಗಲೇ ಈ ಜೋಡಿ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ.

ಇಶಾ ಅಂಬಾನಿಗೆ 450 ಕೋಟಿ ಗಿಫ್ಟ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!