RAMAYANA: ರಾಮಾಯಣ ಬಾಕ್ಸ್ ಆಫೀಸ್‌ನಲ್ಲಿ ರಾಕಿಂಗ್ ಸ್ಟಾರ್ 'ರಾವಣ'ನ ಅಬ್ಬರ; ಯಶ್‌ಗೆ ತೆರೆ ಮೇಲೆ ಜೈಕಾರ, ತೆರೆ ಹಿಂದೆ ಝಣಝಣ ಕಾಂಚಾಣ!

Published : Nov 06, 2026, 10:55 PM ISTUpdated : Nov 06, 2026, 11:02 PM IST
Yash in Ramayana Movie

ಸಾರಾಂಶ

'ಕೆಜಿಎಫ್' ಮೂಲಕ ದೇಶಾದ್ಯಂತ ಅಭಿಮಾನಿ ಬಳಗವನ್ನು ವಿಸ್ತರಿಸಿಕೊಂಡ ಯಶ್, ಇದೀಗ ರಾಮಾಯಣದ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈ ಚಿತ್ರದ ಲಾಭದ ಲೆಕ್ಕಾಚಾರದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಹೆಸರು ರಾಕಿಂಗ್ ಸ್ಟಾರ್ ಯಶ್. ನಟನೆ-ನಿರ್ಮಾಣ ಎರಡರ ಮೂಲಕ ಯಶ್ ಜೇಬಿಗಿಳಿಸುವ ಹಣವೆಷ್ಟು? ನೋಡಿ ಈ ಸ್ಟೋರಿ..

RAMAYANA Movie: ಬೆಳ್ಳಿಪರದೆಯಲ್ಲಿ ರಾವಣನಾಗಿ ಅಬ್ಬರಿಸಿದ ಯಶ್‌ಗೆ ತೆರೆಯ ಹಿಂದೆಯೂ ಭರ್ಜರಿ ಲಾಭದ ನಿರೀಕ್ಷೆ!

ಭಾರತೀಯರ ಮನದಲ್ಲಿ ತಲೆಮಾರುಗಳಿಂದ ನೆಲೆಸಿರುವ ರಾಮಾಯಣ ಮಹಾಕಾವ್ಯ ಈಗ ಜಾಗತಿಕ ಬೆಳ್ಳಿಪರದೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ರಣಬೀರ್ ಕಪೂರ್ ಶ್ರೀರಾಮನಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿರುವ ಬಹುಕೋಟಿ ವೆಚ್ಚದ 'ರಾಮಾಯಣ: ಭಾಗ-1' ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಪ್ರೇಕ್ಷಕರ ಗಮನ ಸೆಳೆದಿರುವ ಈ ಸಿನಿಮಾ ಈಗ ಗಳಿಕೆಯ ವಿಚಾರದಲ್ಲೂ ಸುದ್ದಿಯ ಕೇಂದ್ರಬಿಂದುವಾಗಿದೆ.

ಮೊದಲ ದಿನವೇ ₹130 ಕೋಟಿ ಗಳಿಕೆ; ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ?

ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಜಾಗತಿಕವಾಗಿ ಸುಮಾರು ₹130 ಕೋಟಿ ಗಳಿಕೆ ಮಾಡಿದೆ ಎಂಬ ವರದಿಗಳು ಚಿತ್ರತಂಡದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿವೆ. ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಆರಂಭ ಪಡೆದಿರುವ ಚಿತ್ರಕ್ಕೆ ವಿದೇಶಗಳಲ್ಲಿಯೂ ಪ್ರೇಕ್ಷಕರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಮುನ್ನವೇ ವಿವಿಧ ಹಕ್ಕುಗಳು ಮತ್ತು ಇತರ ವ್ಯವಹಾರಗಳ ಮೂಲಕ ಸುಮಾರು ₹1,150 ಕೋಟಿ ಆದಾಯ ಬಂದಿದೆ ಎಂಬ ಅಂದಾಜುಗಳೂ ಹರಿದಾಡುತ್ತಿವೆ.

ಚಿತ್ರದ ಮೊದಲ ಮತ್ತು ಎರಡನೇ ಭಾಗಗಳ ಒಟ್ಟು ಬಜೆಟ್ ಸುಮಾರು ₹4,000 ಕೋಟಿ ಎಂದು ಹೇಳಲಾಗಿದ್ದು, ಮೊದಲ ಭಾಗಕ್ಕೆ ಮಾತ್ರ ಅಂದಾಜು ₹2,000 ಕೋಟಿ ವೆಚ್ಚವಾಗಿದೆ ಎನ್ನಲಾಗಿದೆ. ಹೀಗಾಗಿ ಚಿತ್ರತಂಡದ ಮುಂದಿರುವ ಗುರಿಯೂ ದೊಡ್ಡದಾಗಿದೆ. ಮೊದಲ ಭಾಗದ ಗಳಿಕೆ ₹3,000 ಕೋಟಿ ಗಡಿ ದಾಟಿದರೆ ನಿರ್ಮಾಪಕರಿಗೆ ಗಣನೀಯ ಲಾಭ ದೊರೆಯುವ ನಿರೀಕ್ಷೆಯಿದೆ. ಆದರೆ ಅಂತಿಮ ಲೆಕ್ಕಾಚಾರಕ್ಕೆ ಚಿತ್ರಮಂದಿರಗಳ ಗಳಿಕೆ, ವಿತರಣೆ ಪಾಲು ಮತ್ತು ಇತರ ವೆಚ್ಚಗಳ ವಿವರಗಳು ಮುಖ್ಯವಾಗಲಿವೆ.

ಯಶ್‌ಗೆ ಡಬಲ್ ಧಮಾಕಾ; ನಟನೆಯ ಜೊತೆಗೆ ನಿರ್ಮಾಣದ ಲಾಭವೂ!

ಈ ಚಿತ್ರದ ಲಾಭದ ಲೆಕ್ಕಾಚಾರದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಹೆಸರು ರಾಕಿಂಗ್ ಸ್ಟಾರ್ ಯಶ್. ತೆರೆಮೇಲೆ ದಶಕಂಠ ರಾವಣನಾಗಿ ತಮ್ಮ ಖದರ್ ತೋರಿಸಿರುವ ಅವರು, ತಮ್ಮ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಚಿತ್ರದ ಸಹ-ನಿರ್ಮಾಪಕರಾಗಿಯೂ ಕೈಜೋಡಿಸಿದ್ದಾರೆ.

ಹೀಗಾಗಿ ಯಶ್‌ಗೆ ಕೇವಲ ನಟನೆಯ ಸಂಭಾವನೆ ಮಾತ್ರವಲ್ಲದೆ, ನಿರ್ಮಾಣದ ಪಾಲಿನಿಂದಲೂ ಆದಾಯ ಬರುವ ಸಾಧ್ಯತೆಯಿದೆ. ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡಿದರೆ ಅವರ ಪಾಲಿನ ಲಾಭವೂ ದೊಡ್ಡದಾಗಬಹುದು ಎಂಬ ಚರ್ಚೆ ಚಿತ್ರರಂಗದಲ್ಲಿ ನಡೆಯುತ್ತಿದೆ. ಆದರೆ ಯಶ್ ಅವರಿಗೆ ಸಿಗಲಿರುವ ನಿಖರ ಸಂಭಾವನೆ ಅಥವಾ ಲಾಭದ ಪಾಲಿನ ಅಧಿಕೃತ ವಿವರಗಳು ಲಭ್ಯವಿಲ್ಲ.

ಕೆಜಿಎಫ್‌ನಿಂದ ರಾಮಾಯಣದವರೆಗೆ; ಯಶ್‌ಗೆ ಮತ್ತೊಂದು ಜಾಗತಿಕ ವೇದಿಕೆ!

'ಕೆಜಿಎಫ್' ಮೂಲಕ ದೇಶಾದ್ಯಂತ ಅಭಿಮಾನಿ ಬಳಗವನ್ನು ವಿಸ್ತರಿಸಿಕೊಂಡ ಯಶ್, ಇದೀಗ ರಾಮಾಯಣದ ಮೂಲಕ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ರಾವಣನ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಇರುವ ಕುತೂಹಲದ ಜೊತೆಗೆ, ಚಿತ್ರದ ನಿರ್ಮಾಣದಲ್ಲಿ ಅವರ ಪಾಲುದಾರಿಕೆಯೂ ಚರ್ಚೆಗೆ ಕಾರಣವಾಗಿದೆ.

ಅಂದಹಾಗೆ, 'ರಾಮಾಯಣ' ಚಿತ್ರದ ಬಾಕ್ಸ್ ಆಫೀಸ್ ಪ್ರಯಾಣದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ₹3,000 ಕೋಟಿ ಗಳಿಕೆಯ ಗುರಿ ತಲುಪುತ್ತದೆಯೇ? ಯಶ್ ಅವರ ನಿರ್ಮಾಣದ ಪಾಲಿಗೆ ಎಷ್ಟು ಲಾಭ ಸಿಗಬಹುದು? ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳ ಕಲೆಕ್ಷನ್ ವರದಿಗಳೇ ಉತ್ತರ ನೀಡಲಿವೆ. ಲಂಕೆಯ ರಾವಣನಾಗಿ ಪರದೆಯ ಮೇಲೆ ಅಬ್ಬರಿಸುತ್ತಿರುವ ಯಶ್, ತೆರೆಯ ಹಿಂದಿನ ವ್ಯವಹಾರದಲ್ಲೂ ಹೊಸ ದಾಖಲೆ ಬರೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಕ್ರಮ ಸಂಬಂಧದ ಕಥೆಯಲ್ಲಿ ಅನಿರೀಕ್ಷಿತ ಟ್ವಿಸ್ಟ್: IMDbಯಲ್ಲಿ 8.3 ರೇಟಿಂಗ್ ಪಡೆದ ಹಾರರ್ ಸಿನಿಮಾ!
ಯಶ್ ಆರ್ಭಟಕ್ಕೆ ಸ್ಕ್ರೀನ್ ಶೇಕ್, ಲಂಕೆಯ 'ಕಿಂಗ್' ರಾಕಿಂಗ್‌ ಕಡೆ ಹರಿದ ಕೋಟಿ ಕೋಟಿ ಹಣ; ರಾವಣನ ಖಜಾನೆ ಭರ್ತಿ!