
ರಾಮಾಯಣ ಸಿನಿಮಾದ ಕಲೆಕ್ಷನ್ ಮತ್ತು ಬಾಕ್ಸ್ ಆಫೀಸ್ ವರದಿಯ ಜಾದೂ ಇಲ್ಲಿದೆ. Magic in Ramayana Movie collection and Box Office Report news is here to know.
ರಣಬೀರ್ ಕಪೂರ್ ರಾಮನಾಗಿ ನಟಿಸಿರೋ, ನಮ್ಮ ರಾಕಿಂಗ್ ಸ್ಟಾರ್ ರಾವಣ ನಾಗಿ ಮಿಂಚಿರುವ ಬಹುನಿರೀಕ್ಷಿತ ಮಹಾಕಾವ್ಯ ‘ರಾಮಾಯಣ’ ಬಿಡುಗಡೆಯಾದ ಕ್ಷಣದಿಂದಲೇ ಬಾಕ್ಸ್ ಆಫೀಸ್ನಲ್ಲಿ ತನ್ನ ದಂಡಯಾತ್ರೆ ಆರಂಭಿಸಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜಯಘೋಷ, ಥಿಯೇಟರ್ಗಳ ಮುಂದೆ ಮುಗಿಬಿದ್ದಿರೋ ಜನಸ್ತೋಮ ನೋಡಿದ್ರೆ ರಾವಣನ ಖಜಾನೆ ಭರ್ತಿ ಆಗೋದು ಫಿಕ್ಸ್ ಆಗಿದೆ.
ರಾಮಾಯಣ ಸಿನಿಮಾ ಮೊದಲ ದಿನವೇ ಮೊದಲ ದಿನವೇ ಇಡೀ ವಿಶ್ವದಾದ್ಯಂತ ಸಿನಿಮಾ ಬಾಚಿಕೊಂಡ ಮೊತ್ತ ಬರೋಬ್ಬರಿ 130 ಕೋಟಿ ರೂಪಾಯಿ! ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಆರಂಭ ಪಡೆದಿದ್ದಲ್ಲದೆ, ವಿದೇಶಗಳಲ್ಲಿಯೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ಮೂಲಗಳಿಂದ ಈ ಚಿತ್ರವು 1150 ಕೋಟಿ ಗಳಿಕೆ ಮಾಡಿತ್ತು.
ರಾಮಾಯಣ ಚಿತ್ರದ ಬಜೆಟ್ (ರಾಮಾಯಣ ಭಾಗ-1 ಹಾಗೂ ಭಾಗ-2 ಸೇರಿದಂತೆ) 4000 ಕೋಟಿ ಎಂಬುದನ್ನು ಚಿತ್ರತಂಡ ಈಗಾಗಲೇ ಅಧಿಕೃತವಾಗಿ ಹೇಳಿಕೊಂಡಿದೆ. ಈ ಚಿತ್ರದ ಅಂದರೆ 'ರಾಮಾಯಣ: ಬಾಗ-1' ರ ಬಜೆಟ್ ಸರಿಸುಮಾರು 2000 ಕೋಟಿ ಆಗಿದ್ದು, ಬಿಡುಗಡೆಗೂ ಮೊದಲು ಹಾಗೂ ನಂತರದ ಒಂದೇ ವಾರದ ಕಲೆಕ್ಷನ್ ಮೂಲಕ ಈ ಚಿತ್ರವು 2000 ಕೋಟಿ ಗಳಿಕೆಯನ್ನು ಮೀರಬಹುದು ಎಂಬ ಅಂದಾಜಿದೆ. ನಂತರ ಬಂದ ಹಣವೆಲ್ಲವೂ ಲಾಭವೇ. ನಿರ್ಮಾಪಕರು ಈ ಚಿತ್ರವು 3000 ಕೋಟಿ ಗಳಿಸಲಿ ಎಂಬ ಟಾರ್ಗೆಟ್ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ಲಾಭ 1000 ಕೋಟಿಯ ಟಾರ್ಗೆಟ್! ಆದರೆ, ಈ ಟಾರ್ಗೆಟ್ ಮೀರಿ ಈ ರಾಮಾಯಣ ಸಿನಿಮಾ ಹೆಚ್ಚಿನ ಗಳಿಕೆ ಮಾಡಲಿದೆ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ!
ಮೊದಲ ದಿನವೇ 130 ಕೋಟಿ ಲೂಟಿ ಮಾಡಿರೋ ಈ ಸಿನಿಮಾ, ಸದ್ಯ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಯ ಹಿಂದಿನ ಎಲ್ಲಾ ದಾಖಲೆಗಳನ್ನೂ ಅಳಿಸಿಹಾಕುವ ಮುನ್ಸೂಚನೆ ಕೊಟ್ಟಿದೆ. ದೀಪಾವಳಿ ಸಾಲು ಸಾಲು ರಜೆ ಮುಗಿಯುವ ಹೊತ್ತಿಗೆ ಈ ನಂಬರ್ ಇನ್ನಾವ ಮಟ್ಟಕ್ಕೆ ಏರಲಿದೆಯೋ ಎಂಬ ಕಲ್ಪನೆಯೇ ವಿತರಕರು ಹಾಗೂ ಸಿನಿಪಂಡಿತರ ನಿದ್ದೆಗೆಡಿಸಿದೆ! ಕಾರಣ, ಭಾರತೀಯ ಚಿತ್ರರಂಗದಲ್ಲಿ ₹3000 ಕೋಟಿಯ ಮೈಲಿಗಲ್ಲು ತಲುಪಿದ ಮೊದಲ ಸಿನಿಮಾ ಇದಾಗಲಿದೆಯಾ ಅನ್ನೋ ಕುತೂಹಲ ಎಲ್ಲರನ್ನೂ ಅಚ್ಚರಿಗೆ ದೂಡಿದೆ.
ಇನ್ನು ಸತ್ಯ ಸಂಗತಿಯನ್ನು ಹೇಳಬೇಕು ಎಂದರೆ, ಈ ಇಡೀ ಗೇಮ್ನ ಅಸಲಿ ಕಿಂಗ್ ಯಾರು ಗೊತ್ತಾ? ಲಂಕೇಶ... ಅಂದ್ರೆ ನಮ್ಮ ರಾಕಿಂಗ್ ಸ್ಟಾರ್ ಯಶ್! ಕೇವಲ ರಾವಣನಾಗಿ ಬಣ್ಣ ಹಚ್ಚಿ ಪರದೆಯ ಮೇಲೆ ಅಬ್ಬರಿಸಿದ್ದು ಮಾತ್ರವಲ್ಲ, ಯಶ್ ಅವರು ತಮ್ಮ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಮೂಲಕ ಈ ಚಿತ್ರದ ಸಹ-ನಿರ್ಮಾಪಕರಾಗಿಯೂ ಕೈಜೋಡಿಸಿದ್ದಾರೆ.
ಪರದೆಯ ಮೇಲೆ ರಾವಣನ ಖದರ್ ಒಂದು ಕಡೆಯಾದ್ರೆ, ತೆರೆಯ ಮರೆಯಲ್ಲಿ ನಡೆದ ವ್ಯಾಪಾರ ಸಾಮ್ರಾಜ್ಯದಲ್ಲಿ ಯಶ್ ಪಡಿಯಲಿರೋ ಲಾಭದ ಲೆಕ್ಕಾಚಾರ ಊಹೆಗೂ ನಿಲುಕದ್ದು. ರಾವಣನ ಪಾತ್ರಕ್ಕೆ ಸಿಕ್ಕ ಭಾರಿ ಸಂಭಾವನೆಯ ಜೊತೆಗೆ, ನಿರ್ಮಾಣದ ಲಾಭದಲ್ಲೂ ದೊಡ್ಡ ಪಾಲು ಯಶ್ ಜೇಬು ಸೇರಲಿದೆ. ಚಿತ್ರ 3000 ಕೋಟಿಯ ಗಡಿ ಮುಟ್ಟಿದರೆ, ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ನಟ ಮತ್ತು ನಿರ್ಮಾಪಕನಾಗಿ ಯಶ್ ಹೊಸ ಇತಿಹಾಸ ಬರೆಯಲಿದ್ದಾರೆ.
ಅಂದಹಾಗೆ, ಅಂದು ‘ಕೆಜಿಎಫ್’ ಮೂಲಕ ಚಿನ್ನದ ಗಣಿ ತೋಡಿದ್ದ ಯಶ್, ಇಂದು ‘ರಾಮಾಯಣ’ದ ಮೂಲಕ ರಾವಣನ ಚಿನ್ನದ ಲಂಕೆಯನ್ನೇ ತಮ್ಮ ಖಜಾನೆಗೆ ಇಳಿಸಿಕೊಂಡಿದ್ದಾರೆ! ಸದ್ಯ ಸಿನಿಪಂಡಿತರು ಈ ರಾಮಾಯಣ ಸಿನಿಮಾ ಈ ಹಿಂದಿನ ಯಾವೆಲ್ಲಾ ದಾಖಲೆಗಳನ್ನು ಯಾವ ದಿನದಂದು ಮುರಿಯಲಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಏನೇ ಆಗಲಿ, ಟಾಕ್ಸಿಕ್ ಮೂಲಕ ಗ್ಲೋಬಲ್ ಲೆವಲ್ನಲ್ಲಿ ಸ್ವಲ್ಪ ಹಿನ್ನಡೆಗೆ ಜಾರಿದ್ದ ಯಶ್ ರಾಮಾಯಣದ ಮೂಲಕ ಹಿಂದೆಂದೂ ಕಾಣದ ಎತ್ತರಕ್ಕೆ ಏರಲಲಿದ್ದಾರೆ. ಜೊತೆಗೆ ರಾಕಿಂಗ್ ಸ್ಟಾರ್ ಖಜಾನೆ ಕೂಡ ಭರ್ತಿ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.