ಮುಜೆ ಬುಡ್ಡಾ ಮಿಲ್‌ಗಯಾ ಅಂತ ಕುಣಿದ ಅಂಟಿ : ನೆಟ್ಟಿಗರ ಕಾಮೆಂಟ್ ಓದ್ಲೇಬೇಡಿ

By Anusha Kb  |  First Published Jul 9, 2023, 1:49 PM IST

ಇಲ್ಲೊಬ್ಬರು ಮಹಿಳೆಯರು ಲತಾ ಮಂಗೇಶ್ಕರ್ ಹಾಡಿದ  ಬಾಲಿವುಡ್‌ ಸಿನಿಮಾದ ಮುಜೆ ಬುಡ್ಡ ಮಿಲ್‌ಗಯಾ ಎಂಬ ಹಿಂದೆ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.


ಸಾಮಾಜಿಕ ಜಾಲತಾಣಗಳು ಈಗ ವಯಸ್ಸಿನ ಬೇಧವಿಲ್ಲದೇ ಎಲ್ಲರಿಗೂ ವೇದಿಕೆಯೊದಗಿಸಿದ್ದು,  ಎಲ್ಲರೂ ತಮ್ಮಲ್ಲಿರುವ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಹಾಕುವುದನ್ನು ನೀವು ವೀಡಿಯೋದಲ್ಲಿ ನೋಡಬಹುದಾಗಿದೆ.  ಕೆಲವರು ಸಿನಿಮಾ ತಾರೆಯರಿಗೇನು ತಾವು ಕಡಿಮೆ ಇಲ್ಲ ಎಂಬಂತೆ ಡಾನ್ಸ್ ಮಾಡುತ್ತಾರೆ. ಅಷ್ಟೇ  ಚಂದ ಮೇಕಪ್ ಮಾಡ್ತಾರೆ. ಒಟ್ಟಿನಲ್ಲಿ ಉತ್ತಮ ಮನೋರಂಜನೆಯನ್ನು ಈ ವೀಡಿಯೋಗಳಿಂದ  ಪಡೆಯಬಹುದಾಗಿದೆ. 

ಅದೇ ರೀತಿ ಇಲ್ಲೊಬ್ಬರು ಮಹಿಳೆಯರು ಲತಾ ಮಂಗೇಶ್ಕರ್ ಹಾಡಿದ  ಬಾಲಿವುಡ್‌ ಸಿನಿಮಾದ ಮುಜೆ ಬುಡ್ಡ ಮಿಲ್‌ಗಯಾ ಎಂಬ ಹಿಂದೆ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ಮಹಿಳೆ ಯಾವ ನಟಿಗೂ ಕಡಿಮೆ ಇಲ್ಲದಂತೆ ಕಾಣುತ್ತಿದ್ದು, ಡಾನ್ಸ್ ಕೂಡ ಚೆನ್ನಾಗಿ ಮಾಡುತ್ತಿದ್ದಾರೆ. ನೀಲಿ ಬಣ್ಣದ ಸೀರೆಯುಟ್ಟಿರುವ ಅವರು ಸಾರಿಯಲ್ಲಿ ಸಖತ್ ಆಗಿ ಕಾಣಿಸುತ್ತಿದ್ದು, ಪಕ್ಕದಲ್ಲಿ ಅವರ ಮಗನೂ ಇದ್ದಾನೆ. 

Tap to resize

Latest Videos

Viral Post : ಮಳೆಯಲ್ಲಿ ಜೊಮಾಟೋ ಡೆಲಿವರಿ ಬಾಯ್ಸ್ AI ಡಾನ್ಸ್ ವೈರಲ್

ಆದರೆ ಈ ವೀಡಿಯೋಗೆ ನೆಟ್ಟಿಗರಿಂದ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಾಯತ್ರಿ ವರ್ಮಾ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ಈ ವೀಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.  ಇವರು ಡಾನ್ಸ್‌ ಮಾಡುತ್ತಿರುವ ಕೋಣೆಯ ಹಿಂಭಾಗದ ಗೋಡೆಯಲ್ಲಿ ಬುದ್ಧನ ಚಿತ್ರವಿದ್ದು, ಪಕ್ಕದಲ್ಲೇ ಮಗನೂ ಕುಳಿತಿದ್ದಾನೆ.  ವೀಡಿಯೋ ಪೋಸ್ಟ್ ಮಾಡಿದ ಅವರು ಬುದ್ಧನಿಗೆ ಡಾನ್ಸ್‌ಗೆ ರಿಯಾಕ್ಟ್ ಮಾಡು ಎಂದು ಹೇಳಿದೆ. ಆದರೆ ಆತ ಏನು ಮಾಡಿದ ನೋಡಿ ಎಂದು ಬರೆದುಕೊಂಡಿದ್ದಾರೆ.  ಹಾಡಿನಲ್ಲಿ ಬುಡ್ಡಾ ಎಂದರೆ ಅಜ್ಜ ಎಂದು ಅರ್ಥವಾಗುತ್ತದೆ. ಆದರೆ ಇವರು ಬುಡ್ಡನ ಬದಲು ಬುದ್ಧ ಸಿಕ್ಕಿದ ಎಂದು ಹೇಳುತ್ತಾ ಡಾನ್ಸ್ ಮಾಡಿದ್ದಾರೆ. 

ವೀಡಿಯೋ ನೋಡಿದ ಅನೇಕರು ಬಹಳ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.  ಒಮ್ಮೆ ಸಾಮಾಜಿಕ ಜಾಲತಾಣಕ್ಕೆ ಬಂದ ಮೇಲೆ ನಮ್ಮ ಬದುಕು ಸಾರ್ವಜನಿಕವಾಗುತ್ತದೆ. ನೆಗೆಟಿವ್ ಹಾಗೂ ಪಾಸಿಟಿವ್ ಕಾಮೆಂಟ್‌ಗಳು ಸಾಮಾನ್ಯವಾಗಿದ್ದು, ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಂದೆ ಸಾಗಬೇಕಾಗಿದೆ. ಅದೇ ರೀತಿ ಇಲ್ಲೂ ಇವರಿಗೂ  ನೆಗೆಟಿವ್ ಕಾಮೆಂಟ್‌ಗಳು ಬಂದಿವೆ.  ಮತ್ತೆ ಅನೇಕರು ನೀವು ತುಂಬಾ ಸುಂದರವಾಗಿ ಕಾಣಿಸುತ್ತೀರಿ, ನಿಮಗೆ ನಿಜವಾಗಿಯೂ ಪ್ರತಿಭೆ ಇದೆ. ಎಂದೆಲ್ಲಾ ಈ ಮಹಿಳೆಯನ್ನು ಹೊಗಳಿದ್ದಾರೆ. 

ಅರ್ಜುನ್ ಕಪೂರ್ ಬರ್ತ್‌ಡೇಯಲ್ಲಿ ಚೈಯಾ ಚೈಯಾ ಹಾಡಿಗೆ ಮಲೈಕಾ ಡ್ಯಾನ್ಸ್ ಹಿಗ್ಗಾ ಮುಗ್ಗಾ ಟ್ರೋಲ್‌

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಇರುವ ಪ್ರತಿಭೆಗಳಿಗೆ ಲೆಕ್ಕವಿಲ್ಲ ಐಶ್ವರ್ಯ ರೈನಿಂದ ಹಿಡಿದು ಪ್ರಿಯಾಂಕಾ ಚೋಪ್ರಾ (priyankha Chopra), ಕರೀನಾ ಕಪೂರ್ (Kareena Kapoor) ತರ ಕಾಣಿಸುವವರು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಸ್ಟಾರ್‌ಗಳಾಗಿದ್ದು, ಸೆಲೆಬ್ರಿಟಿಗಳೆನಿಸಿದ್ದಾರೆ. 

 

click me!