
ಕರಾಚಿ: ಪಾಪ್ ಸಿಂಗರ್ ಜಸ್ಟಿನ್ ಬೈಬರ್ ಹಾಡನ್ನು ಇಷ್ಟಪಡದವರಿಲ್ಲ,. ಪಾಶ್ಚಾತ್ಯ ಸಂಗೀತವನ್ನು ಇಷ್ಟಪಡುವ ಬಹುತೇಕ ಅದರಲ್ಲೂ ಯುವ ಸಮೂಹದ ಜನ ಜಸ್ಟಿನ್ ಬೈಬರ್ ಹಾಡನ್ನು ಬಹಳವಾಗಿ ಇಷ್ಟಪಡುತ್ತಾರೆ. ಅದರಲ್ಲೂ 2010ರಲ್ಲಿ ರಿಲೀಸ್ ಆದ ಬೇಬಿ ಹಾಡನ್ನು ಇಷ್ಟಪಡದ ಜನರಿಲ್ಲ, ಅನೇಕರ ನಾಲಗೆ ತುದಿಯಲ್ಲೇ ಈ ಹಾಡು ಇದ್ದು, ಆಗಾಗ ಈ ಹಾಡನ್ನು ಗುನುಗುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಇಡೀ ಪಾಕಿಸ್ತಾನದ ಇಡೀ ಕುಟುಂಬವೇ ಜಸ್ಟಿನ್ ಬೈಬರ್ ಅಭಿಮಾನಿಯಾಗಿದ್ದು, ಇಡೀ ಕುಟುಂಬ ಜೊತೆಯಾಗಿ ಸೇರಿ ಜಸ್ಟಿನ್ ಬೈಬರ್ ಹಾಡನ್ನು ಅದೇ ಜೋಶ್‌ನಲ್ಲಿ ಹಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.
ಆದರೆ ಇಲ್ಲಿ ಎಲ್ಲೋ ರಿಲೀಕ್ಸ್ ಮ್ಯಾಚ್ ಆಗ್ತಿಲ್ಲ, ಆದರೂ ಅದೇ ಸ್ಟೈಲ್‌ನಲ್ಲಿ ಕುಟುಂಬದವರೆಲ್ಲಾ ಸೇರಿ ಬೇಬಿ ಟ್ಯೂನ್ ಅಲ್ಲಿ ಹಾಡು ಹಾಡುತ್ತಿದ್ದು ವೀಡಿಯೋ ವೈರಲ್ ಆಗಿದೆ. ಕಲ್ಚರ್ ಗಲ್ಲಿ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ವೀಡಿಯೋದಲ್ಲಿ ಕುಟುಂಬವೊಂದು ನಿರ್ಮಾಣವಾಗುತ್ತಿರುವ ಬಿಲ್ಡಿಂಗ್‌ನ ಕೆಳ ಭಾಗದಲ್ಲಿ ಕುಳಿತಿದ್ದು, ಮನೋರಂಜನೆಗೋಸ್ಕರ ಕುಟುಂಬದವರೆಲ್ಲಾ ಸೇರಿ ಜಸ್ಟಿನ್ ಬೈಬರ್‌ನ ಬೇಬಿ ಹಾಡನ್ನು ಹಾಡುತ್ತಿದ್ದು ಕುಟುಂಬದ ಹಿರಿಯ ಮಹಿಳೆಯರು ಕೂಡ ಈ ಹಾಡಿಗೆ ಸಾಥ್ ನೀಡಿದ್ದಾರೆ. ಒಬ್ಬ ಮಹಿಳೆ ಹಾಡುತ್ತಿದ್ದರೆ ಅಲ್ಲಿದವರೆಲ್ಲಾ ಹಾಡಿಗೆ ದನಿ ಗೂಡಿಸುತ್ತಿದ್ದಾರೆ. ಆದರೆ ಈ ವೀಡಿಯೋ ಸೆರೆಯಾದ ಪ್ರದೇಶ ಯಾವುದು ಎಂದು ಎಲ್ಲೂ ಉಲ್ಲೇಖವಿಲ್ಲ,
ಗಾಯಕ ಜಸ್ಟಿನ್ ಬೀಬರ್ ಮುಖಕ್ಕೆ ಪಾರ್ಶ್ವವಾಯು; ನಗಲೂ ಆಗದ ವಿಚಿತ್ರ ಕಾಯಿಲೆಗೆ ಕಾರಣವಾಗೋದೇನು ?
ತಮ್ಮ ನಿರ್ಮಾಣವಾಗುತ್ತಿರುವ ಮನೆಯನ್ನು ನೋಡಲು ಬಂದ ವೇಳೆ ಕುಟುಂಬದವರು ಮನೋರಂಜನೆಗೋಸ್ಕರ ಜಸ್ಟಿನ್ ಬೈಬರ್ ಅವರ ಖ್ಯಾತ ಹಾಡು ಬೇಬಿಯನ್ನು ಹಾಡಿದರು ಎಂದು ವೀಡಿಯೋ ಪೋಸ್ಟ್ ಮಾಡಿ ಬರೆದಯಲಾಗಿದೆ. ಈ ವೀಡಿಯೋಗೆ ಸಮಾಜಿಕ ಜಾಲತಾಣ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೆಲವರು ಇಷ್ಟ ಪಟ್ಟರೆ ಮತ್ತೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ವೀಡಿಯೋದಲ್ಲಿ ಕಾಮಾಗಾರಿ ಕೆಲಸವೂ ಜೊತೆ ಜೊತೆಗೆ ನಡೆಯುತ್ತಿದ್ದು, ಒಬ್ಬ ಅಲ್ಲೇ ಕಟ್ಟಡದ ಅವಶೇಷಗಳನ್ನು ರಾಶಿ ಮಾಡುತ್ತಿದ್ದಾನೆ. ಮನೆಯನ್ನು ನವೀಕರಣಗೊಳಿಸುತ್ತಿರುವಂತೆ ಈ ವೀಡಿಯೋ ಕಾಣಿಸುತ್ತಿದ್ದು, ವೀಡಿಯೋ ನೋಡಿದ ಕೆಲವರು ಯಾರಿಗೆ ಗುಂಡಿ ತೋಡುತ್ತಿದ್ದೀರಿ ಎಂದು ಪ್ರಶ್ನಿಸಿದರೆ ಮತ್ತೆ ಕೆಲವರು ಯಾರ ಸಮಾಧಿಯನ್ನು ತೋಡುತ್ತಿದ್ದೀರಿ ಎಂದು ಕೇಳಿದ್ದಾರೆ. ಮತ್ತೆ ಅನೇಕರು ಲವ್ ಇಮೋಜಿ ಮೂಲಕ ಈ ವೀಡಿಯೋವನ್ನು ಇಷ್ಟಪಟ್ಟಿದ್ದಾರೆ.
ಪಾಪ್ ಗಾಯಕ justin Bieber ಬಗ್ಗೆ ನಿಮಗೆಷ್ಟು ಗೊತ್ತು?
ಅಂದಹಾಗೆ ಜಸ್ಟಿನ್ ಬೈಬರ್‌ನ ಬೇಬಿ ಅಲ್ಬಂ ಸಾಂಗ್ 2010ರಲ್ಲಿ ಬಿಡುಗಡೆಯಾಗಿದ್ದು ಸೂಪರ್ ಡ್ಯೂಪರ್ ಹಿಟ್ ಆಗಿದೆ. ಯೂಟ್ಯೂಬ್‌ನಲ್ಲಿ ಕೋಟ್ಯಾಂತರ ಜನ ಈ ವೀಡಿಯೋ ವೀಕ್ಷಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.