ಅರ್ಜುನ್ ಕಪೂರ್ ಬರ್ತ್ಡೇಯಲ್ಲಿ ಚೈಯಾ ಚೈಯಾ ಹಾಡಿಗೆ ಮಲೈಕಾ ಡ್ಯಾನ್ಸ್ ಹಿಗ್ಗಾ ಮುಗ್ಗಾ ಟ್ರೋಲ್
ಬಾಲಿವುಡ್ ನಟ ಅರ್ಜುನ್ ಕಪೂರ್ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅರ್ಜುನ್ ಕಪೂರ್ ಬಹುಕಾಲದ ಗೆಳತಿ ಮಲೈಕಾ ಅರೋರಾ ನಟನ ಹುಟ್ಟುಹಬ್ಬದ ಬ್ಯಾಷ್ನಲ್ಲಿ ಚೈಯಾ ಚೈಯಾ ಹಾಡಿಗೆ ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಆದರೆ ನೆಟಿಜನ್ಗಳು ಮಲೈಕಾರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಕಾರಣವೇನು ಗೊತ್ತಾ?
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಜೋಡಿ ಈವೆಂಟ್ಗಳು ಅಥವಾ ಕುಟುಂಬ ಪಾರ್ಟಿಗಳಲ್ಲಿ ಅಥವಾ ಸಾರ್ವಜನಿಕ ಪ್ರದರ್ಶನವಾಗಿರಲಿ ಜನರ ಗಮನ ಸೆಳೆಯುವುದರಲ್ಲಿ ಹಿಂದೆ ಬೀಳುವುದ್ದಿಲ್ಲ.
ನಿನ್ನೆ, ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಅವರ 38ನೇ ಹುಟ್ಟುಹಬ್ಬದ ಮುನ್ನಾದಿನದ ಪಾರ್ಟಿಯಲ್ಲಿ ಲೇಡಿಲವ್ ಮಲೈಕಾ ಅರೋರಾ, ಬಿಳಿ ಮತ್ತು ಕೆಂಪು ಮ್ಯಾಕ್ಸಿ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ರಾತ್ರಿ ಅರ್ಜುನ್ ಕಪೂರ್ಅಪಾರ್ಟ್ಮೆಂಟ್ಗೆ ಬರುವಾಗ ಮಲೈಕಾ ಅವರನ್ನು ಪ್ಯಾಪ್ ಮಾಡಲಾಯಿತು. ಅರ್ಜುನ್ ತಂಗಿ ಅನ್ಶುಲಾ ಕಪೂರ್ ಕೂಡ ಸ್ವಲ್ಪ ಸಮಯದ ನಂತರ ಕಾಣಿಸಿಕೊಂಡರು.
Image:
ಅರ್ಜುನ್ ಅವರ ಮುಂಬೈನ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಸಮಾರಂಭದಲ್ಲಿ ಮಲೈಕಾ ಅರೋರಾ ನೃತ್ಯ ಮಾಡಿದ ವೀಡಿಯೊ Instagram ನಲ್ಲಿ ವೈರಲ್ ಆಗಿದೆ. ಚೈಯಾ ಚೈಯಾ ಹಾಡಿಗೆ ಡ್ಯಾನ್ಸ್ ಮಾಡಿದ್ದು ಮಲೈಕಾರ ಸೆಕ್ಸಿ ಮೂವ್ಸ್ ಇಂಟರ್ನೆಟ್ನಲ್ಲಿ ಸದ್ದು ಮಾಡಿದೆ.
ಬಾಲಿವುಡ್ ದಿವಾ, ಅವರ ನಯವಾದ ನೃತ್ಯದ ಚಲನೆಗಳೊಂದಿಗೆ, ಬಿಳಿ ಮತ್ತು ಕೆಂಪು ಮ್ಯಾಕ್ಸಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ ಮತ್ತು ವಿಡಿಯೋ ಸಖತ್ ವೈರಲ್ ಆಗಿದೆ
ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ನೆಟಿಜನ್ಗಳು ಆಕೆಯ ನೃತ್ಯದ ಚಲನೆಗಳಿಂದ ಪ್ರಭಾವಿತರಾಗಲಿಲ್ಲ. ಅವರು ಪ್ರಚಾರ ಮತ್ತು ಗಮನಕ್ಕಾಗಿ ಹತಾಶರಾಗಿದ್ದಾರೆ ಎಂದು ಮಲೈಕಾ ರನ್ನು ದೂಷಿಸಿದ್ದಾರೆ.
ಅವಳು ತುಂಬಾ ದುಃಖದಿಂದ ಹತಾಶಳಾಗಿದ್ದಾಳೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು,'ಅವಳು ತುಂಬಾ ವಿಚಿತ್ರವಾಗಿ ನೃತ್ಯ ಮಾಡುತ್ತಿದ್ದಾಳೆ' ಎಂದು ಕಾಮೆಂಟ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಹವರು ಅವರನ್ನು ಅಂಟಿ ಎಂದು ಕರೆದು ಡ್ಯಾನ್ಸ್ ಮೇಲೆ ಕಿಡಿಕಾರಿದ್ದಾರೆ.
ಮಲೈಕಾ ಮತ್ತು ಅರ್ಜುನ್, ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ ಸಮಯದಿಂದ ಯಾವಾಗಲೂ ಟ್ರೋಲ್ಗಳಿಗೆ ಗುರಿಯಾಗುತ್ತಾರೆ. ಇತ್ತೀಚೆಗಷ್ಟೇ, ಮಲೈಕಾ ಗರ್ಭಿಣಿಯಾಗಿದ್ದಾರೆ ಸುಳ್ಳು ಕಥೆಯನ್ನು ವರದಿ ಮಾಡಿದ ಮಾಧ್ಯಮವನ್ನು ಅರ್ಜುನ್ ಟೀಕಿಸಿದ್ದರು.