ಅವಳ ಕಾಟ ತಡೀಲಿಕ್ಕಾಗ್ತಿಲ್ಲ ಎಂದು ಎಫ್​ಬಿ ಲೈವ್​ಗೆ ಬಂದು ವಿಷ ಸೇವಿಸಿದ ನಟ ತೀರ್ಥಾನಂದ

By Suvarna NewsFirst Published Jun 14, 2023, 2:31 PM IST
Highlights

ಹಾಸ್ಯನಟ ತೀರ್ಥಾನಂದ ರಾವ್​ ಅವರು ಫೇಸ್​ಬುಕ್​ ಲೈವ್​ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಲಿವ್​ ಇನ್​ ಪಾರ್ಟನರ್​ ವಿರುದ್ಧ  ಅವರು ಆರೋಪ ಮಾಡಿದ್ದೇನು? 
 

ಕಾಮಿಡಿ ಸರ್ಕಸ್ ಕೆ ಅಜೂಬೆಯಲ್ಲಿ ನಟ ಕಪಿಲ್ ಶರ್ಮಾ ಅವರೊಂದಿಗೆ ಕೆಲಸ ಮಾಡುತ್ತಿರುವ  ಹಾಸ್ಯ ನಟ ತೀರ್ಥಾನಂದ ರಾವ್ (Thirthanand Rao) ಅವರು ಫೇಸ್​ಬುಕ್​ ಲೈವ್​ಗೆ ಬಂದು  ವಿಷ ಕುಡಿದ ಘಟನೆ ನಡೆದಿದೆ. ನೇರಪ್ರಸಾರದಲ್ಲಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿರುವ ನಟ  ಜೀವ ಕಳೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಯುವತಿಯೊಬ್ಬಳ ಜೊತೆ ಲಿವ್​ ಇನ್​ ರಿಲೇಷನ್​ನಲ್ಲಿ ಇರುವುದಾಗಿ ಹೇಳಿಕೊಂಡಿರುವ ತೀರ್ಥಾನಂದ್​ ಅವರು ಈಕೆ  ಮಾನಸಿಕವಾಗಿ ತಮ್ಮನ್ನು  ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ,  ಇದಾಗಲೇ ತಮ್ಮಿಂದ ಸಿಕ್ಕಾಪಟ್ಟೆ  ಹಣ ಕಿತ್ತುಕೊಂಡಿದ್ದಾಳೆ ಎಂದು ತೀರ್ಥಾನಂದ್​ ಅವರು ಆರೋಪಿಸಿ ವಿಷ ಸೇವಿಸಿದ್ದಾರೆ. ಕಳೆದ ವರ್ಷ ಇವರು ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಸಮಯದಲ್ಲಿ ಆರ್ಥಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದರು. ಕಳೆದ  ಡಿಸೆಂಬರ್ 27 ರಂದು ಸಂಜೆ ವಿಷ ಸೇವಿಸಿದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಮ್ಮ  ಕುಟುಂಬವು ಒಂದೇ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿದ್ದರೂ ವರ್ಷಗಳಿಂದ ತಮ್ಮೊಂದಿಗೆ  ಮಾತುಕತೆ ನಡೆಸುತ್ತಿಲ್ಲ. ನನ್ನ ಕೆಲವು ನಟನೆಗಳಿಗೆ ಸಂಭಾವನೆ ಸಿಕ್ಕಿರುವುದಿಲ್ಲ. ಇದರಿಂದ ಆರ್ಥಿಕ ತೊಂದರೆ ಎದುರಿಸುತ್ತಿದ್ದೇನೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ (suicide) ಯತ್ನಿಸಿದ್ದೆ ಎಂದಿದ್ದರು.  ಇದೀಗ ಯುವತಿಯ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಿದ್ದಾರೆ. 
 
ನಾನು ಓರ್ವ ಯುವತಿಯ ಜೊತೆ ಕಳೆದ ವರ್ಷ ಅಕ್ಟೋಬರ್​ನಿಂದ ಸಂಬಂಧದಲ್ಲಿ (Live in Relation) ಇದ್ದೇನೆ. ಈಕೆ ಎಮೋಷನಲ್​ ಆಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದು, ನನ್ನಿಂದ ದುಡ್ಡು ಕಿತ್ತುಕೊಂಡಿದ್ದಾಳೆ. ಈಕೆಯಿಂದಾಗಿ ನಾನು ಮೂರ್ನಾಲ್ಕು ಲಕ್ಷ ರೂಪಾಯಿ ಸಾಲದಲ್ಲಿದ್ದೇನೆ. ಅವಳಿಂದಾಗಿ ನಾನು ಇಷ್ಟೆಲ್ಲಾ ನೋವು ಅನುಭವಿಸುತ್ತಿದ್ದರೂ, ಈಗ ಅವಳೇ  ನನ್ನ ವಿರುದ್ಧ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನನ್ನ ವಿರುದ್ಧ ಯಾವುದಕ್ಕೆ ದೂರು ಕೊಟ್ಟಿದ್ದಾಳೋ ಗೊತ್ತಿಲ್ಲ. ದೂರಿನಲ್ಲಿ ಏನು ಇದೆ ಎನ್ನುವುದು ನನಗೆ ತಿಳಿದಿಲ್ಲ. ಇಷ್ಟೆಲ್ಲಾ ಮಾಡಿದ ಬಳಿಕವೂ  ನನಗೆ ಕರೆ ಮಾಡಿ ಮೀಟ್ ಮಾಡಬೇಕು ಎಂದಿದ್ದಾಳೆ. ಇದನ್ನು ನನ್ನಿಂದ ಸಹಿಸಲು ಆಗುತ್ತಿಲ್ಲ ಎಂದು ತೀರ್ಥಾನಂದ್​ ಫೇಸ್​ಬುಕ್​ ಲೈವ್​ನಲ್ಲಿ ಹೇಳಿದ್ದಾರೆ.

ಲಕ್ಷ್ಮೀ ದೇವಿಗೆ ಇದೆಂಥ ಅವಮಾನ! ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು 'ಗಂಧೀಬಾತ್​' ಪೋಸ್ಟರ್​

ನೇರಪ್ರಸಾರದಲ್ಲಿಯೇ  ಕೀಟ ನಾಶಕವನ್ನು ಗ್ಲಾಸ್​​ಗೆ ಹಾಕಿ ಕುಡಿದಿದ್ದಾರೆ. ಇದನ್ನು ನೋಡುತ್ತಿದ್ದ ಅವರ ಸ್ನೇಹಿತರು ತಕ್ಷಣ ಸ್ಥಳಕ್ಕೆ ಡೌಢಾಯಿಸಿದ್ದಾರೆ. ಅಷ್ಟರಲ್ಲಿ ತೀರ್ಥಾನಂದ ಅವರು  ಕುಸಿದು ಬಿದ್ದಿದ್ದರು. ನಂತರ ಪೊಲೀಸರಿಗೆ ಕರೆ ಮಾಡಿ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.  ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ಚೇತರಿಸಿಕೊಂಡಿದ್ದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು,  'ನಾನು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದೇನೆ.  ನನ್ನ ಕುಟುಂಬವೂ ನನ್ನನ್ನು ತೊರೆದಿದೆ. ನಾನು ಆಸ್ಪತ್ರೆಗೆ ದಾಖಲಾದಾಗ (Hospitalised) ನನ್ನ ತಾಯಿ ಮತ್ತು ಸಹೋದರ ನನ್ನನ್ನು ನೋಡಲು ಬರಲಿಲ್ಲ. ಅದೇ ಕಾಂಪ್ಲೆಕ್ಸ್ ನಲ್ಲಿ ವಾಸವಿದ್ದರೂ ನನ್ನ ಕುಟುಂಬ ಸದಸ್ಯರು ನನ್ನೊಂದಿಗೆ ಮಾತನಾಡುವುದಿಲ್ಲ. ನನ್ನ ಚಿಕಿತ್ಸೆಗೆ ಅವರು ಒಂದು ಪೈಸೆಯನ್ನೂ ಖರ್ಚು ಮಾಡಲಿಲ್ಲ. ಆಸ್ಪತ್ರೆಯಿಂದ ಬಂದ ನಂತರವೂ ಮನೆಯಲ್ಲಿ ಒಬ್ಬನೇ ಇರುತ್ತೇನೆ. ಇದಕ್ಕಿಂತ ಕೆಟ್ಟದ್ದು ಏನಿದೆ ನನ್ನ ಜೀವನದಲ್ಲಿ ಎಂದು ಪ್ರಶ್ನಿಸಿದ್ದರು.

Latest Videos

 ತೀರ್ಥಾನಂದ ಅವರು ಕಳೆದ ವರ್ಷ  ಶೆಮರೂ ಮಿನಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರ ಕೆಲಸಕ್ಕೆ  ಸಂಭಾವನೆ ಸಿಕ್ಕಿರಲಿಲ್ಲವಂತೆ.  ತಾವು ನಟಿಸಿದ ವೆಬ್ ಸೀರಿಸ್​ಗೂ (Web Series) ಹಣ ನೀಡಿಲ್ಲ ಎಂದು ಅವರು ತಿಳಿಸಿದ್ದರು. ತೀರ್ಥಾನಂದರು 2016 ರಲ್ಲಿ ಕಪಿಲ್ ಅವರೊಂದಿಗೆ ಕೆಲಸ ಮಾಡಿದರು ಮತ್ತು ಕಾಮಿಡಿ ಸರ್ಕಸ್ ಕೆ ಅಜೂಬ್‌ನ ಭಾಗವಾಗಿದ್ದರು.  ನಂತರ   ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.  

Main Hoon Na: ಹಾಡಿನಲ್ಲಿ ಎರಡು ಇಂಗ್ಲಿಷ್​ ಪದ ಬಳಕೆಗೆ ಕೆಂಡಾಮಂಡಲವಾಗಿದ್ದ ಜಾವೇದ್​ ಅಖ್ತರ್​!

click me!