pawan kalyan wifes ತೆಲುಗು ಸಿನಿಮಾರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಈ ಬಾರಿಯ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಆಂಧ್ರದ ಉಪಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಬೆಂಗಳೂರು (ಜೂ.14): ತಮ್ಮ ಮಾಸ್ ಡೈಲಾಗ್‌ಗಳು ಹಾಗೂ ವಿಶಿಷ್ಟ ಮ್ಯಾನರಿಸಂ ಕಾರಣದಿಂದ ತೆಲುಗು ಸಿನಿಮಾ ರಂಗದ ಜನಪ್ರಿಯ ತಾರೆಯಾಗಿರುವ ಪವನ್ ಕಲ್ಯಾಣ್‌ಗೆ ಸಿನಿಮಾ ಮಂದಿ ಪ್ರೀತಿಯಿಂದ ಕರೆಯೋದು ಪವರ್ ಸ್ಟಾರ್ ಎನ್ನುವ ಹೆಸರಿನಲ್ಲಿ. ಆಂಧ್ರ ಪ್ರದೇಶದ ವಿಧಾನಸಭೆಗೆ ಕಾಲಿಡಬೇಕು ಎನ್ನುವ ತಮ್ಮ ಮಹತ್ವಾಕಾಂಕ್ಷೆಯನ್ನು ಪವನ್ ಕಲ್ಯಾಣ್ ಸಾಕಾರ ಮಾಡಿಕೊಂಡಿದ್ದಾರೆ. ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಪವನ್ ಕಲ್ಯಾಣ್, 2024ರಲ್ಲಿ ಚುನಾವಣೆಯಲ್ಲಿ ವೈಯಕ್ತಿಕವಾಗಿ ಮಾತ್ರವಲ್ಲ ತಮ್ಮ ಪಕ್ಷ ಜನಸೇನಾ ಪಕ್ಷಕ್ಕೂ ದೊಡ್ಡ ಮಟ್ಟದ ಗೆಲುವು ನೀಡಿದ್ದಾರೆ. ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಪವನ್ ಕಲ್ಯಾಣ್, ರಾಜಕೀಯ ಜೀವನದಲ್ಲಿ ಮಾತ್ರವಲ್ಲಿ ವೈಯಕ್ತಿಕ ಜೀವನದಲ್ಲೂ ಏಳು ಬೀಳು ಕಂಡವರು. ಪವನ್ ಕಲ್ಯಾಣ್ ಬದುಕಿನಲ್ಲಿ ಬಂದ ಮೂವರು ಪತ್ನಿಯರ ಬಗ್ಗೆ ಇಲ್ಲಿದೆ ಡೀಟೇಲ್ಸ್.
ನಂದಿನಿ ಜೊತೆ ಮೊದಲ ಮದುವೆ: 1996ರಲ್ಲಿ ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ, ವಿಶಾಖಪಟ್ಟಣದಲ್ಲಿರುವ ಸತ್ಯಾನಂದ ಆಕ್ಟಿಂಗ್ ಇನ್ಸ್‌ಟಿಟ್ಯೂಟ್‌ನಲ್ಲಿ ಕಲಿಯುತ್ತಿದ್ದರು. ಈ ವೇಳೆ ಅವರಿಗೆ ನಂದಿನಿ ಎನ್ನುವ ಹುಡುಗಿಯ ಪರಿಚಯವಾಗಿತ್ತು. ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಒಂದು ವರ್ಷದ ನಂತರ ಹೈದರಾಬಾದ್‌ನಲ್ಲಿ ಅತ್ಯಂತ ಸಾಂಪ್ರದಾಯಿವಾಗಿ ನಂದಿನಿಯನ್ನು ವಿವಾಹವಾಗಿದ್ದರು. ಆದರೆ, ಮದುವೆಯಾಗಿ ಕೆಲವೇ ವರ್ಷದಲ್ಲಿ ಇಬ್ಬರ ನಡುವಿನ ಸಂಬಂಧ ಹಳಸಿಹೋಗಿತ್ತು. ನಂದಿನಿ ತನ್ನನ್ನು ಮತ್ತು ತನ್ನ ಮನೆಯನ್ನು ತೊರೆದಿದ್ದಾಳೆ ಎಂದು ಪವನ್ ಕಲ್ಯಾಣ್ ಆರೋಪ ಮಾಡಿದರೆ, ನಂದಿನಿ ಇದನ್ನು ನಿರಾಕರಿಸಿದರು. 2001ರ ಹೊತ್ತಿಗೆ ಇಬ್ಬರೂ ಬೇರೆ ಬೇರೆಯಾದರೆ, ಪವನ್ ಕಲ್ಯಾಣ್ ಬಳಿಕ ಸಹ ನಟಿ ರೇಣು ದೇಸಾಯಿ ಅವರೊಂದಿಗೆ ಸಂಬಂಧ ಬೆಳೆಸಿದರು.
2007 ರಲ್ಲಿ, ಕಲ್ಯಾಣ್ ವಿರುದ್ಧ ನಂದಿನಿ ಅವರು ವಿವಾಹ ವಿಚ್ಛೇದನ ನೀಡದೆ ರೇಣು ದೇಸಾಯಿ ಅವರನ್ನು ವಿವಾಹವಾದರು ಎಂದು ಆರೋಪಿಸಿ ದ್ವಿಪತ್ನಿತ್ವದ ಪ್ರಕರಣವನ್ನು ದಾಖಲಿಸಿದರು. ಕಲ್ಯಾಣ್ ಅವರ ಕಾನೂನು ತಂಡವು ಅವರು ಮತ್ತು ರೇಣು ಲಿವ್-ಇನ್ ಸಂಬಂಧದಲ್ಲಿದ್ದಾರೆ, ಮದುವೆಯಾಗಿಲ್ಲ ಎಂದು ವಾದಿಸಿದರು. ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತ್ತು. ತರುವಾಯ, ಕಲ್ಯಾಣ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು, ಮತ್ತು ಆಗಸ್ಟ್ 2008 ರಲ್ಲಿ, ಕಲ್ಯಾಣ್ ನಂದಿನಿಗೆ ₹5 ಕೋಟಿ ಜೀವನಾಂಶವನ್ನು ಪಾವತಿಸುವುದರೊಂದಿಗೆ ಅವರು ತಮ್ಮ ವಿಚ್ಛೇದನವನ್ನು ಅಧಿಕೃತಗಪಳಿಸಿದರು. ವಿಚ್ಛೇದನದ ನಂತರ, ನಂದಿನಿ ಯುಎಸ್‌ಗೆ ತೆರಳಿದ್ದು, ಪ್ರಸ್ತುತ ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ರೇಣು ದೇಸಾಯಿ ಜೊತೆ 2ನೇ ಮದುವೆ: 2009 ರಲ್ಲಿ ಮದುವೆಯಾಗುವ ಮೊದಲು ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಎಂಟು ವರ್ಷಗಳ ಲಿವ್-ಇನ್ ಸಂಬಂಧವನ್ನು ಹೊಂದಿದ್ದರು. ಅವರಿಗೆ 2010 ರಲ್ಲಿ ಆದ್ಯ ಎಂಬ ಮಗಳು ಇದ್ದಳು. ಇವರ ಮದುವೆಯು 2012 ರಲ್ಲಿ ಔಪಚಾರಿಕ ವಿಚ್ಛೇದನದಲ್ಲಿ ಕೊನೆಗೊಂಡಿತು. ಬೇರ್ಪಡುವಿಕೆಯ ಹೊರತಾಗಿಯೂ, ರೇಣು ಅವರು ಪವನ್ ಕಲ್ಯಾಣ್ ಜೊತೆ ಸೌಹಾರ್ದ ಸಂಬಂಧವನ್ನು ಹೊಂದಿದ್ದಾರೆ.
ಅನ್ನಾ ಲೆಜ್ನೆವಾ ಜೊತೆ ಮೂರನೇ ಮದುವೆ: 2013 ರಲ್ಲಿ ಕಲ್ಯಾಣ್ ಅವರು ತಮ್ಮ ಮೂರನೇ ಪತ್ನಿ, ರಷ್ಯಾದ ಮಾಜಿ ಮಾಡೆಲ್ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು, ಅವರು 'ತೀನ್ ಮಾರ್' ಚಿತ್ರದಲ್ಲಿ ಕೆಲಸ ಮಾಡುವಾಗ ಭೇಟಿಯಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ: 2017 ರಲ್ಲಿ ಜನಿಸಿದ ಮಾರ್ಕ್ ಶಂಕರ್ ಪವನೋವಿಚ್ ಮತ್ತು ಅನ್ನಾ ಅವರ ಹಿಂದಿನ ಮದುವೆಯಿಂದ ಪೋಲೆನಾ ಅಂಜನಾ ಪವನೋವಾ ಎನ್ನುವ ಪುತ್ರಿಯನ್ನು ಹೊಂದಿದ್ದಾರೆ.
ಉಪ ಮುಖ್ಯಮಂತ್ರಿ, ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ವೈವಾಹಿಕ ಜೀವನದ ಇಂಟ್ರೆಸ್ಟಿಂಗ್ ಸ್ಟೋರಿ!
ಬುಧವಾರ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಚುನಾವಣೆಯಲ್ಲಿ ದೊಡ್ಡ ಮಟ್ಟದ ಗೆಲುವು ಅವರ ಅಭಿಮಾನಿಗಳಿಗೂ ಖುಷಿ ತಂದಿದ್ದು ಇದರ ನಡುವೆ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಕೂಡ ಹೈಲೈಟ್. ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಎರಡರಲ್ಲೂ ಪವನ್ ಕಲ್ಯಾಣ್ ಅವರ ಜೀವನವು ಸಾಧನೆಗಳು ಮತ್ತು ಸವಾಲುಗಳ ರೋಲರ್ ಕೋಸ್ಟರ್ ಆಗಿದೆ. ಅವರ ಇತ್ತೀಚಿನ ರಾಜಕೀಯ ಗೆಲುವಿನೊಂದಿಗೆ ಅವರು ಆಂಧ್ರಪ್ರದೇಶದ ಆಡಳಿತದಲ್ಲಿ ಮಹತ್ವದ ಪ್ರಭಾವ ಬೀರಲು ಸಿದ್ಧರಾಗಿದ್ದಾರೆ.
ಆಂಧ್ರ ಡಿಸಿಎಂ ಆದ ತಮ್ಮ ಪವನ್ ಕಲ್ಯಾಣ್.. ಅಣ್ಣ ಚಿರಂಜೀವಿಗೆ ತಾನೇ ಸಿಎಂ ಆದಷ್ಟು ಖುಷಿ : ವೀಡಿಯೋ