Besharam Rang ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದೇನು?

By Suvarna NewsFirst Published Feb 6, 2023, 9:35 PM IST
Highlights

ಪಠಾಣ್‌ ಚಿತ್ರದ ಬೇಷರಂ ರಂಗ್‌ ವಿವಾದದ ಕುರಿತು ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿಕೆ ನೀಡಿದ್ದಾರೆ. ಏನದು?

ಕಳೆದ ಜನವರಿ 25ರಂದು ತೆರೆಕಂಡ ಪಠಾಣ್‌ ಚಿತ್ರ (Pathaan Cinema) ಬಹು ಯಶಸ್ಸಿನತ್ತ ಸಾಗುತ್ತಿದೆ. 250 ಕೋಟಿ ರೂಪಾಯಿ ವೆಚ್ಚದಲ್ಲಿ ತೆರೆ ಕಂಡ ಈ ಚಿತ್ರ ಇದಾಗಲೇ ವಿಶ್ವಾದ್ಯಂತ 700 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ. ಈ ಚಿತ್ರ ಬಿಡುಗಡೆಯ ಮುಂಚಿನಿಂದಲೂ ವಿವಾದ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದೇ ಇರುವ ವಿಷಯ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬೇಷರಂ ಹಾಡಿನಲ್ಲಿ ಕೇಸರಿ ಬಣ್ಣದ (Saffron colour) ಬಿಕಿನಿ ತೊಟ್ಟಿ ನರ್ತಿಸಿದ್ದು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಹೊರತಾಗಿಯೂ ಭರ್ಜರಿ ಯಶಸ್ಸಿನತ್ತ ಚಿತ್ರ ಓಡುತ್ತಿದೆ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಕಳೆದ ಕೆಲ ವರ್ಷಗಳಿಂದ ಒಂದರ ಮೇಲೊಂದರಂತೆ ಫ್ಲಾಪ್‌ ಸಿನಿಮಾ ನೀಡುತ್ತಾ ಬಂದಿದ್ದ ನಟ ಶಾರುಖ್‌ ಖಾನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ಅವರು ಪಠಾಣ್‌ನಿಂದ ಮತ್ತೆ ಚಿಗುರಿದ್ದಾರೆ. ನಾಲ್ಕು ವರ್ಷಗಳ ಬಳಿಕ ಕಮ್‌ಬ್ಯಾಕ್‌ ಆಗಿರೋ ಶಾರುಖ್‌ಗಂತೂ ಪಠಾಣ್‌ ಚಿತ್ರ ಲಾಟರಿ ಹೊಡೆದಿದೆ. 

ಬೇಷರಂ ರಂಗ್‌  (Besharam Rang) ವಿವಾದದ ಬಳಿಕ ಹಲವು ಕ್ಷೇತ್ರಗಳ ಗಣ್ಯರು ಇದರ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದರು. ಇಂದಿನ ಚಿತ್ರತಾರೆಯರು ಬಿಕಿನಿ ತೊಟ್ಟು ನಟಿಸುವುದು ಹೊಸತೇನಲ್ಲ. ಅದೇ ರೀತಿ ದೀಪಿಕಾ ಬಿಕಿನಿ ತೊಟ್ಟಿದ್ದರೂ ಸಮಸ್ಯೆ ಇರಲಿಲ್ಲ. ಆದರೆ ಕೇಸರಿ ಬಿಕಿನಿ ತೊಟ್ಟು ಬೇಷರಂ ರಂಗ್‌ ಎಂದು ಹಾಡಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದಾಗಿ ಚಿತ್ರದ ಬೈಕಾಟ್‌ ಟ್ರೆಂಡ್‌ (Boycott trend) ಶುರುವಾಗಿತ್ತು. ಚಿತ್ರ ಬಿಡುಗಡೆಯಾದಾಗಲೂ ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆಗಳೂ ನಡೆದಿದ್ದವು. ಕಳೆದ ವರ್ಷ ಲಾಲ್ ಸಿಂಗ್ ಚಡ್ಡಾ, ಬ್ರಹ್ಮಾಸ್ತ್ರ, ಶಂಶೇರಾ ಮುಂತಾದ ಹಲವಾರು ಚಿತ್ರಗಳು ಕೂ ಬಹಿಷ್ಕಾರವನ್ನು ಎದುರಿಸಿದ್ದವು  ಟ್ವಿಟರ್‌ನಲ್ಲಿ 'ಬಾಲಿವುಡ್ ಬಹಿಷ್ಕಾರ' ಪ್ರವೃತ್ತಿಯು ಪ್ರಾಮುಖ್ಯತೆಯನ್ನು ಪಡೆದುಕೊಂಡ ಬೆನ್ನಲ್ಲೇ ಪಠಾಣ್‌ ಬಹಿಷ್ಕಾರವೂ ಚಿತ್ರತಂಡವನ್ನು ದಂಗು ಬಡಿಸಿತ್ತು. ಆದರೆ ಇವೆಲ್ಲವುಗಳ ನಡುವೆಯೂ ಪಠಾಣ್‌ ಬ್ಲಾಕ್‌ಬಸ್ಟರ್‌ ಆಗಿ ಹೊರಹೊಮ್ಮಿದೆ.

ಬಾಕ್ಸ್​ ಆಫೀಸ್​ ಕಲೆಕ್ಷನ್​ ಲಿಸ್ಟ್​ ಬಿಡುಗಡೆ: ಶಾರುಖ್​ ಅಭಿಮಾನಿಗಳಿಗೆ ಭಾರೀ ನಿರಾಸೆ!

ಕೇಸರಿ ಬಿಕಿನಿಯ ಕುರಿತು ಭಾರಿ ವಿರೋಧ ವ್ಯಕ್ತವಾಗುತ್ತಲೇ ದೀಪಿಕಾ ಬಿಕಿನಿ ಬಿಟ್ಟು ಕೇಸರಿ ಲುಂಗಿ ತೊಟ್ಟಿದ್ದೂ ಆಗಿದೆ. ಆದರೆ ಇದರ ನಡುವೆಯೇ, ಹಲವಾರು ಕ್ಷೇತ್ರದ ಗಣ್ಯರು ಕೇಸರಿ ಬಿಕಿನಿಯ ಕುರಿತು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (CM Yogi Adithyanath) ಅವರು, ಈ ಬಗ್ಗೆ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಅವರು ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಯೋಗಿ ಆದಿತ್ಯನಾಥ ಅವರು ಹೇಳಿದ್ದೇನೆಂದರೆ, ಸಿನಿಮಾ ನಿರ್ದೇಶಕರು  ಸಿನಿಮಾ ಮಾಡುವಾಗ ವಿವಾದಕ್ಕೆ ಕಾರಣವಾಗುವ ಯಾವುದೇ ದೃಶ್ಯಗಳನ್ನು ಮಾಡಬಾರದು. ಈ ಕುರಿತು  ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ. ಯಾವುದೇ ನಟ, ನಿರ್ದೇಶಕ ಸಿನಿಮಾ (Cinema) ಮಾಡುವಾಗ ವಿವಾದಕ್ಕೆ ಕಾರಣವಾಗುವ ಅಥವಾ ಸಾರ್ವಜನಿಕರಿಗೆ ನೋವುಂಟು ಮಾಡುವ ದೃಶ್ಯಗಳ ಬಗ್ಗೆ ಜಾಗ್ರತನಾಗಿರಬೇಕು. ಅಂತಹ ದೃಶ್ಯ, ಕಥೆ, ಹಾಡುಗಳನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಬಾರದು ಎಂದು ಹೇಳಿದರು. ಎಲ್ಲರೂ  ಕಲಾವಿದರನ್ನು ಗೌರವಿಸಬೇಕು ಎಂದೂ ಹೇಳಿದ್ದಾರೆ.

ಇದೇ ವೇಳೆ, ತಮ್ಮ ರಾಜ್ಯ ಉತ್ತರ ಪ್ರದೇಶದಲ್ಲಿ ಕಲೆಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಮತ್ತು ಉತ್ತೇಜನದ ಕುರಿತು ಮಾತನಾಡಿದರು.  ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶವು ಒಂದು  ನೀತಿಯನ್ನು ಹೊಂದಿದೆ. ಅದನ್ನು ಎಲ್ಲರೂ ಅನುಸರಿಸಲೇಬೇಕಿದೆ.  ಉತ್ತರ ಪ್ರದೇಶದಲ್ಲಿ (Uttara Pradesh) ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಚಿತ್ರಗಳಲ್ಲಿ ಉತ್ತಮ  ಪ್ರೋತ್ಸಾಹ ಮತ್ತು ವಾತಾವರಣ ಇದೆ. ಇದರಿಂದಾಗಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚಿತ್ರಗಳ ಚಿತ್ರೀಕರಣ ಹೆಚ್ಚಾಗಿದೆ. ಆದರೆ ಚಲನಚಿತ್ರವನ್ನು ನಿರ್ಮಿಸುವಾಗ ಯಾರ ಭಾವನೆಗೂ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು. 

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

ಇತ್ತೀಚೆಗೆ, ಸುನೀಲ್ ಶೆಟ್ಟಿ (Sunil Shetty) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಳಿ  'ಬಾಲಿವುಡ್ ಬಹಿಷ್ಕಾರ' ಪ್ರವೃತ್ತಿಯನ್ನು ಕೊನೆಗೊಳಿಸಲು ಮತ್ತು ಹಿಂದಿ ಚಲನಚಿತ್ರೋದ್ಯಮವನ್ನು ಉಳಿಸಲು ಸಹಾಯ ಮಾಡುವಂತೆ ವಿನಂತಿಸಿದ್ದರು.  ಬಾಲಿವುಡ್  ಬಹಿಷ್ಕರಿಸಿ ಟ್ರೆಂಡ್‌ ಶುರುವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದ ಅವರು,  ಒಂದು ಕೊಳೆತ ಸೇಬು ಎಲ್ಲೆಡೆ ಇದೆ, ಆದರೆ ಅದರ ಕಾರಣದಿಂದಾಗಿ ನೀವು ಇಡೀ ಉದ್ಯಮವನ್ನು ಕೊಳೆತ ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.

click me!