ಚೀನಾದ ಪೋರನ ಬಾಲಿವುಡ್ ಪ್ರೇಮ... ಹಿಂದಿ ಹಾಡಿಗೆ ಸಖತ್ ಸ್ಪೆಫ್

By Anusha KbFirst Published Feb 6, 2023, 4:58 PM IST
Highlights

 ಹಾಗೆಯೇ ಈಗ ಚೀನಾದ ಪೋರನೊಬ್ಬ ಬಾಲಿವುಡ್ ಸಿನಿಮಾವೊಂದರ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು, ಈತನ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ಹಾಡುಗಳು ಗಡಿ ಮೀರಿ ಖ್ಯಾತಿ ಗಳಿಸಿವೆ. ವಿಶ್ವದಾದ್ಯಂತ ಬಾಲಿವುಡ್ ಹಾಡಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಕಲೆಗೆ ದೇಶ ಭಾಷೆಯ ಗಡಿ ಇಲ್ಲ.  ತನ್ನನ್ನು ಇಷ್ಟ ಪಟ್ಟವರನ್ನು ತನ್ನತ್ತ ಸೆಳೆಯುತ್ತಲ್ಲೇ ಇರುವ ಮಾಂತ್ರಿಕ ಶಕ್ತಿ ಈ ಕಲೆಗಿದೆ.  ಹಾಗೆಯೇ ಈಗ ಚೀನಾದ ಪೋರನೊಬ್ಬ ಬಾಲಿವುಡ್ ಸಿನಿಮಾವೊಂದರ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು, ಈತನ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  2000ನೇ ಇಸವಿಯಲ್ಲಿ ತೆರೆ ಕಂಡ ಮೊಹಬತೇ ಸಿನಿಮಾದ ಪ್ಯಾರ್ ಕೈಸೇ ಹೋತ ಹೇ ಹಾಡಿಗೆ ಬಾಲಕ ಸಖತ್ ಆಗಿ ಹೆಜ್ಜೆ ಹಾಕಿದ್ದಾನೆ. ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ  1.2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಬಾಲಕನ ಪ್ರತಿಭೆಗೆ ತಲೆದೂಗಿದ್ದಾರೆ. 

ವಿಡಿಯೋದಲ್ಲಿ ಬಾಲಕ ತನ್ನತ್ತ ಕ್ಯಾಮರಾ ತಿರುಗಿಸಿಕೊಂಡು ನಂತರ ಡಾನ್ಸ್ ಮಾಡಲು ಶುರು ಮಾಡುತ್ತಾನೆ.  ಭಾಷೆ ಗೊತ್ತಿಲ್ಲದಿದ್ದರೂ ಈತನ ಸ್ಪೆಪ್‌ಗಳು ಹಾಡು ಹಾಗೂ ಮ್ಯೂಸಿಕ್‌ಗೆ ಸಖತ್ ಆಗಿ ಮ್ಯಾಚ್ ಆಗುತ್ತಿದೆ. ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್‌ ಪೇಜ್ Lucky_hang_hang ನಲ್ಲಿ ಪೋಸ್ಟ್ ಮಾಡಿದ್ದು,  ಈ ಹಾಡಿನೊಂದಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾನೆ ಈ ಬಾಲಕ.  ಈತನ ಡಾನ್ಸ್ ಹಾಗೂ ಹಾವಭಾವವನ್ನು ಜನರು ಮೆಚ್ಚಿದ್ದಾರೆ. 

ಬಾಲಿವುಡ್ ಹಾಡಿಗೆ ಜಪಾನ್ ಬೆಡಗಿಯರ ಸಖತ್ ಡಾನ್ಸ್: ವಿಡಿಯೋ ಸಖತ್ ವೈರಲ್‌

ಈತ ಪ್ರತಿಯೊಂದು ಹೆಜ್ಜೆಯನ್ನು ಮ್ಯಾಚ್ ಮಾಡುತ್ತಿದ್ದು, ಈತ ಭಾರತದ ನಟ ಹಾಗೂ ಖ್ಯಾತ ಡಾನ್ಸರ್‌ ಹೃತಿಕ್ ರೋಷನ್‌ಗೆ ಸ್ಪರ್ಧೆ ನೀಡಲಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಪುಟ್ಟ ಬಾಲಕನಿಂದ ಇನ್ನಷ್ಟು ಬಾಲಿವುಡ್ ಹಾಡುಗಳಿಗೆ ಡಾನ್ಸ್ ನಿರೀಕ್ಷಿಸುತ್ತಿದ್ದೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಎಂಟು  ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. 

ಬಾಲಿವುಡ್ ಹಾಡುಗಳಿಗೆ ವಿದೇಶಿಗರು ಮಾರು ಹೋಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ದಕ್ಷಿಣ ಆಫ್ರಿಕಾದ ತಾಂಜಾನಿಯಾದ ಇನ್‌ಫ್ಲುಯೆನ್ಸರ್‌ ಕಿಲಿ ಪೌಲ್ ಹಾಗೂ ಆತನ ಸಹೋದರಿ ನೀಮ್ ಪೌಲ್ ಕೂಡ ಬಾಲಿವುಡ್‌ನ ಹಾಡುಗಳಿಗೆ ಸಖತ್ ಆಗಿ ಹೆಜ್ಜೆ ಹಾಕಿ ಅದೇ ಕಾರಣಕ್ಕೆ ಫೇಮಸ್ ಆಗಿದ್ದಾರೆ. ಇಂಟರ್‌ನೆಟ್ ಜೊತೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರಭಾವಶಾಲಿಯಾಗಿರುವ ಇಂದಿನ ಕಾಲಘಟ್ಟದಲ್ಲಿ ಕುಳಿತಲ್ಲಿಂದಲೇ ನಾವು ಬೇರೆ ಬೇರೆ ಕಲೆ ಸಂಸ್ಕೃತಿ, ನೃತ್ಯ ಪ್ರಕಾರಗಳನ್ನು ಅರಿಯಬಹುದಾಗಿದೆ. 

ಬಾಲಿವುಡ್ ಹಾಡಿಗೆ ಅಮೆರಿಕಾ ಟೆನಿಸ್ ತಾರೆ ಭರ್ಜರಿ ಡ್ಯಾನ್ಸ್!

ಈ ಹಿಂದೆ ಕಿಲಿ ಪೌಲ್ ಯಶ್ ನಟನೆಯ ಕೆಜಿಎಫ್ ಸಿನಿಮಾ ಡೈಲಾಗ್ ಹೇಳುವ ಮೂಲಕ ಜನರ ರಂಜಿಸಿದ್ದರು. ಇದಕ್ಕೂ ಮೊದಲು ಅವರು ಹಲವು ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಜೊತೆಗೆ ಡೈಲಾಗ್ ಸಿಂಕ್ ಮಾಡಿದ್ದಾರೆ. 2021ರ ನವಂಬರ್‌ನಲ್ಲಿ ಕಿಲಿ ಪೌಲ್‌ (Kili Paul) ಅವರು, ಶೇರ್‌ ಷಾ ಚಿತ್ರದ  ಜುಬಿನ್‌ ನೌಟಿಯಾಲ್‌ (Jubin Nautiyal) ಹಾಗೂ ಆಸೀಸ್‌ ಕೌರ್‌ (Asees Kaur) ಅವರು ಹಾಡಿದ  ರತನ್‌ ಲಂಬಿಯಾನ್‌ ಹಾಡಿಗೆ ಹೆಜ್ಜೆ ಹಾಕಿದ್ದರು.  ಇದು ಭಾರಿ ಫೇಮಸ್‌ ಆಗಿತ್ತು. ಅದರ ಜೊತೆಗೆ ಅವರಿಗೆ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳನ್ನು ತಂದು ಕೊಟ್ಟಿತ್ತು. ಅಲ್ಲದೇ ಈ ಹಾಡಿನಿಂದಾಗಿ ಬಾಲಿವುಡ್‌ ಮೇಲಿನ ಅವರ ಪ್ರೀತಿ ಮತ್ತಷ್ಟು ಹೆಚ್ಚಾಗಿತ್ತು. ಅಲ್ಲದೇ ಅವರು ಅರ್ಜಿತ್ ಸಿಂಗ್‌ (Arijit Singh) ಅವರ ಹೃದಯ ಕಲಕುವಂತಹ ಭಾವನಾತ್ಮಕವಾದ ಹಾಡುಗಳಿಗೂ ಹೆಜ್ಜೆ ಹಾಕಿದ್ದರು. 

ಡಾನ್ಸ್‌ ಮಾಡುವ ವೇಳೆ ತಾಂಜಾನಿಯಾದ ಸಾಂಪ್ರದಾಯಿಕ ಮಸಾಯಿ ಉಡುಪುಗಳನ್ನೇ ಕಿಲಿ ಪೌಲ್‌ ಧರಿಸುತ್ತಾರೆ. ಅಲ್ಲದೇ ನೃತ್ಯ ಅಥವಾ ನಟನೆ ಯಾವುದೇ ಇರಲಿ ತುಂಬಾ ಭಾವನಾತ್ಮಕವಾಗಿ ಅವರು ನಟಿಸುತ್ತಾರೆ. ರಣಬೀರ್‌  ಕಪೂರ್‌ (Ranbir Kapoor) ನಟನೆಯ 2016ರಲ್ಲಿ ಹಿಟ್‌ ಆಗಿದ್ದಂತಹ ಯೇ ದಿಲ್‌ ಹೈ ಮುಷ್‌ಕಿಲ್‌ ಸಿನಿಮಾದಲ್ಲಿ ರಣಬೀರ್‌ ಹೃದಯ ಒಡೆದ ಪ್ರೇಮಿಯಾಗಿ ಈ ಹಾಡನ್ನು ಹಾಡುತ್ತಾರೆ.  ಸಿನಿಮಾದಲ್ಲಿ ಅಯಾನ್‌ ಆಗಿ ರಣಬೀರ್‌ ನಟಿಸಿದ್ದರೆ ಈತನ ಪ್ರೇಮಿ ಅಲಿಜೆಯಾಗಿ ಅನುಷ್ಕಾ ಶರ್ಮಾ ನಟಿಸಿದ್ದರು. ಈ ಸಿನಿಮಾದಲ್ಲಿ ರಣಬೀರ್‌ ಪ್ರೀತಿಯನ್ನು ಅನುಷ್ಕಾ ಒಪ್ಪಿರಲಿಲ್ಲ. 

 

ಸದ್ಯ ಈ ಹಾಡಿಗೆ ಭಾವನಾತ್ಮಕವಾಗಿ ನಟಿಸಿರುವ ಕಿಲಿ ಪೌಲ್‌, ಈ ಹಾಡನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ಅನುಷ್ಕಾ ಶರ್ಮಾ ಹಾಗೂ ನಿರ್ದೇಶಕ ಕರಣ್‌ ಜೋಹರ್‌ ಅವರಿಗೆ ಈ ವಿಡಿಯೋವನ್ನು ಟ್ಯಾಗ್‌ ಮಾಡಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಹವಾ ಸೃಷ್ಟಿಸಿದೆ. ಈ ಮೂಲಕ ಹಾಡು ಅಥವಾ ಕಲೆಗೆ ದೇಶ ಭಾಷೆಯ ಗಡಿಗಳಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.. 

click me!