Bride Groom Dance: ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಯ್ತು ವಧು ವರನ ಜಬರ್‌ದಸ್ತ್‌ ಡಾನ್ಸ್‌

Suvarna News   | Asianet News
Published : Dec 21, 2021, 06:57 PM IST
Bride Groom Dance: ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಯ್ತು ವಧು  ವರನ ಜಬರ್‌ದಸ್ತ್‌ ಡಾನ್ಸ್‌

ಸಾರಾಂಶ

ವಧು  ವರನ ಜಬರ್‌ದಸ್ತ್‌ ಡಾನ್ಸ್‌ ಬಾಲಿವುಡ್‌ ಹಾಡಿಗೆ ಸೊಂಟ ಬಳುಕಿಸದ ನವ ಜೋಡಿ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಯ್ತು ವಿಡಿಯೋ  

ನವದೆಹಲಿ(ಡಿ.21): ಮದುವೆ ಎಂದರೆ ವಧುವಿಗಂತೂ ಅಂದು ವಿರಾಮ ಎಂಬುದಿರುವುದಿಲ್ಲ. ಮೇಕಪ್ ಫೋಟೋ ಶೂಟ್‌ ಜೊತೆ ವಿವಾಹದ ಹಲವು ವಿಧಿಗಳು ವಧು ವರ ಇಬ್ಬರನ್ನು ಹೈರಾಣಾಗಿ ಮಾಡುತ್ತವೆ. ಆದರೆ ಇಲ್ಲೊಂದು ಜೋಡಿ ಮಾತ್ರ ಯಾವುದೇ ಚಿಂತೆ ಇಲ್ಲದೇ ತಮ್ಮ ಬದುಕಿನ ವಿಶೇಷ ದಿನದಂದು ಜಬರ್‌ದಸ್ತ್‌ ಆಗಿ ಡಾನ್ಸ್‌ ಮಾಡುವ ಮೂಲಕ ನೆಟ್ಟಿಗರು ಫಿದಾ ಆಗುವಂತೆ ಮಾಡಿದ್ದಾರೆ. 

ಭಾರತೀಯ ಮದುವೆಗಳು ಹಾಡು ಹಾಗೂ ಸಂಗೀತಾ ಇವುಗಳಿಲ್ಲದೇ ಎಂದಿಗೂ ಕೊನೆಗೊಳ್ಳುವುದೇ ಇಲ್ಲ. ನಾವು ಬೇರೆಯವರ ಮದುವೆಗೆ ಅತಿಥಿಗಳಾಗಿ ಹೋಗುವುದಾದರೆ ಅದೊಂದು ಎಲ್ಲಾ ಚಿಂತೆಗಳನ್ನು ಮರೆತು ಆರಾಮವಾಗಿ ಸಂಭ್ರಮಿಸಲು ಇರುವ ಒಂದು ಉತ್ತಮ ಅವಕಾಶ. ಮದುವೆಯಲ್ಲಿ ಜನರು ಡಾನ್ಸ್‌ ಮಾಡುವ ದೃಶ್ಯಾವಳಿಗಳನ್ನು ನಾವು ಈಗಾಗಲೇ ಬೇಕಾದಷ್ಟು ನೋಡಿದ್ದೇವೆ. ಆದರೆ ಇತೀಚೆಗೆ ಮದುವೆಯ ಕೇಂದ್ರ ಬಿಂದುವಾಗಿರುವ ವಧು ಹಾಗೂ ವರರೇ ಬಿಂದಾಸ್ ಆಗಿ ಸ್ಟೆಪ್‌ ಹಾಕುವ ಮೂಲಕ ಮದುವೆ ಮಂಟಪ ಪ್ರವೇಶಿಸಿ ತಮ್ಮ ಮದುವೆಯನ್ನು ಸ್ಮರಣೀಯವಾಗಿಸುತ್ತಿದ್ದಾರೆ. ಎಲ್ಲಕ್ಕೂ ಹೆಚ್ಚು ಇದು ಅವರ ಬದುಕಿನ ವಿಶೇಷ ದಿನವಾಗಿರುತ್ತದೆ. ಇದೇ ರೀತಿ ವಧು ಹಾಗೂ ವರ ಬಿಂದಾಸ್‌ ಆಗಿ ತಮ್ಮ ಮದುವೆ ದಿನ ಮಾಡಿದ ಡಾನ್ಸ್‌  ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿದೆ. ಬಾಲಿವುಡ್‌ (Bollywood)ನ ಸೇ ಶವ ಶವ ಹಾಡಿಗೆ ಈ ಜೋಡಿ ಡಾನ್ಸ್‌ ಮಾಡಿದೆ.

ಈ ವಿಡಿಯೋದಲ್ಲಿರುವ ವಧು ವರರನ್ನು ವಧು ಪ್ರಗ್ಯಾ ( Pragya) ಹಾಗೂ ವರ ಅನಂತ್‌ ( Anant) ಎಂದು ಗುರುತಿಸಲಾಗಿದೆ. ನಟ ಶಾರೂಕ್‌ ಖಾನ್‌ (Shahrukh Khan,) ಹೃತಿಕ್‌ ರೋಷನ್‌ (Hrithik Roshan), ಕಾಜೋಲ್‌ (Kajol), ಕರೀನಾ ಕಪೂರ್‌ (Kareena Kapoor) ಅಭಿನಯದ ಬಾಲಿವುಡ್‌ನ ಕಭಿ ಖುಷಿ ಕಭಿ ಗಮ್‌ (Kabhi Khushi Kabhi Gum) ಸಿನಿಮಾದ ಪ್ರಸಿದ್ಧ ಹಾಡಿಗೆ ಈ ಜೋಡಿ ಸಖತ್‌ ಸ್ಟೆಪ್‌ ಹಾಕಿದೆ. 

Viral video: ಗಂಡಿನ ಹಣೆಗೆ ಕುಂಕಮವಿಟ್ಟು ಸಂಪ್ರದಾಯ ಮುರಿದ ವಧು

ಇವರ ಸೂಪರ್‌ ಎನಿಸಿದ ಸ್ಟೆಪ್‌ಗಳು ನವ ದಂಪತಿಗೆ ಹೊಸ ಕಪಲ್‌ ಗೋಲ್‌ನ್ನು ಸೃಷ್ಟಿ ಮಾಡಿದರು. ವಧು ಪ್ರಗ್ಯಾ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರೆ, ಅನಂತ್ ಕಪ್ಪು ಬಣ್ಣದ ಟುಕ್ಸೆಡೊ ಧರಿಸಿದ್ದರು. ನೃತ್ಯದ ಉದ್ದಕ್ಕೂ, ದಂಪತಿಗಳು ಪರಸ್ಪರ ತಮ್ಮ ಕಣ್ಣುಗಳನ್ನು ಬೆರೆಯುವುದನ್ನು ಎಲ್ಲೂ ತಪ್ಪಿಸಿಕೊಳ್ಳಲಿಲ್ಲ.  ಇವರ ಈ ಕೆಮೆಸ್ಟ್ರಿ ಕೂಡ
ಕೂಡ ಚೆನ್ನಾಗಿದ್ದು, ನೋಡುಗರಿಗೆ ಖುಷಿ ನೀಡುತ್ತಿದೆ. 

Viral Video: ಮದುವೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ನವ ದಂಪತಿ

ವೈವಾಹಿಕ್‌ ವೆಡ್ಡಿಂಗ್‌(Vaivahik Wedding) ಹೆಸರಿನ ಇನ್ಸ್ಟಾಗ್ರಾಮ್‌ ಖಾತೆದಾರರು ಈ ವಿಡಿಯೋವನ್ನು ಶೇರ್‌ ಮಾಡಿದ್ದು, ಈ ಜೋಡಿಯ ಕೆಮಿಸ್ಟ್ರಿಯೇ ಎಲ್ಲ ಎಂದು ಬರೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, 7000ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ದಂಪತಿಗಳ ನೃತ್ಯ ಮತ್ತುಕೆಮಿಸ್ಟ್ರಿಯನ್ನು ಜನರು ಸಂಪೂರ್ಣವಾಗಿ ಇಷ್ಟಪಡುತ್ತಿದ್ದು,  ತುಂಬಾ ಸುಂದರವಾಗಿದೆ ಎಂದು ಒಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ. ಪ್ರೀತಿ ಮತ್ತು ಬೆಂಕಿಯನ್ನು ವ್ಯಕ್ತಪಡಿಸುವ ಎಮೋಜಿಗಳನ್ನು  ಇಲ್ಲಿ ವ್ಯಕ್ತಪಡಿಸುವುದರ ಜೊತೆ ನವ ದಂಪತಿಗೆ ಶುಭಾಶಯ ತಿಳಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌