ಕಾಮೆಡಿ ಮೂಲಕ ಲಕ್ಷಾಂತರ ಜನರ ರಂಜಿಸ್ತಿದ್ದಾರೆ ಧನರಾಜ್, ವಿಡಿಯೋಸ್ ವೈರಲ್

By Suvarna NewsFirst Published Dec 19, 2021, 7:05 PM IST
Highlights
  • ಲಕ್ಷಾಂತರ ವಿಡಿಯೋ ಪ್ರಿಯರ ಟಿಕ್ ಟಾಕ್ ಸ್ಟಾರ್ ಧನರಾಜ್ ಆಚಾರ್
  • ಕುಟುಂಬ ಸಮೇತ ಫನ್ನಿ ವಿಡಿಯೋ ಮಾಡ್ತಾರೆ ಈ ಕಲಾವಿದ
  • ಪತ್ನಿಯಿಂದ ಹಿಡಿದು ಅಜ್ಜಿ ತನಕ ಎಲ್ರೂ ಇವರ ವಿಡಿಯೋದಲ್ಲಿದ್ದಾರೆ

- ಸುಕನ್ಯಾ ಎನ್ .ಆರ್
ಪತ್ರಿಕೋದ್ಯಮ ವಿದ್ಯಾರ್ಥಿನಿ

ಕಲೆ ಪ್ರತಿಯೊಬ್ಬ ಕಲಾವಿದನ ಜೀವನಾಡಿ. ಕಲೆಗೆ ಬೆಲೆ ಕಟ್ಟಲು ಅಸಾಧ್ಯವಾದುದು,  ಅನೇಕ ಕಲಾವಿದರು ನಮ್ಮ ಸುತ್ತಮುತ್ತ ಎಲೆಮರೆ ಕಾಯಿಯಂತೆ ನಮ್ಮೊಡನೆ ಇದ್ದಾರೆ.  ಒಬ್ಬ ಕಲಾವಿದ ಒಂದು ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರ ಮನ ಗೆಲ್ಲುವುದು ಸವಾಲಿನ ಕೆಲಸವೇ ಸರಿ. ಹೌದು. ನಮ್ಮ ಕೈಬೆರಳು ಹೇಗೆ ಸಮನಾಗಿ ಇರುವುದಿಲ್ಲವೋ, ಹಾಗೇಯೇ ಸಮಾಜದ ಜನರ ಅಭಿರುಚಿ ಕೂಡ ವಿಭಿನ್ನವಾಗಿರುತ್ತದೆ. ಸಾಮಾಜಿಕ ಜಾಲತಾಣದ ಮೂಲಕ ಲಕ್ಷಾಂತರ ಹಾಸ್ಯ ಪ್ರಿಯರ ಮನಸ್ಥಿತಿಗೆ ತಕ್ಕಂತೆ ಪ್ರತಿದಿನ ಮನರಂಜಿಸುವ ವ್ಯಕ್ತಿಯೇ, ಟಿಕ್ ಟಾಕ್ ಸ್ಟಾರ್ ಧನರಾಜ್ ಆಚಾರ್ .

Latest Videos

ಧನರಾಜ್ ನಡೆದು ಬಂದ ಹಾದಿ: 

ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದವರು. ರಾಘವೇಂದ್ರ ಆಚಾರ್ ಮತ್ತು ಸಂಧ್ಯಾ ಎಸ್ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಬನಕಟ್ಟೆ ಹಿರಿಯ ಪ್ರಾಥಮಿಕ ಶಾಲೆ ಅನಂತಾಡಿಯಲ್ಲಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಕೊಂಬೆಟ್ಟು ಶಾಲೆಯಲ್ಲಿ ಹಾಗೂ ಪದವಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿದರು. ಶಾಲಾ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನಾಟಕಗಳಲ್ಲಿ ನಟಿಸುತ್ತಾ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು .

ಇವರ ತಾಯಿ ಕೂಡ ಕಲಾವಿದೆಯಾಗಿ ಮಹಿಳಾ ಸಂಘದ ಸಮಾರಂಭಗಳಲ್ಲಿ ನಟಿಸುತ್ತಿದ್ದರು. ಧನರಾಜ್ ಅವರು ತಾಯಿಯ ಸೆರಗು ಹಿಡಿದು ಅವರೊಟ್ಟಿಗೆ ಒಬ್ಬರಾಗಿ ಸೇರಿಕೊಳ್ಳುತ್ತಾರೆ. ಕಲೆಯು ಧನು ಅವರಿಗೆ ರಕ್ತಗತವಾಗಿ ಒಲಿದು ಬಂದ ವರ ಎಂದರೆ ಸುಳ್ಳಾಗದು. ವೇದಿಕೆಯ ಮೇಲೆ ಮೂಗನ ಪಾತ್ರದ ಮೂಲಕ ಪ್ರಥಮ ಬಾರಿ ನಟಿಸಿ ಅನೇಕ ಪ್ರಶಂಸೆಗಳ ಸುರಿಮಳೆ ಚಪ್ಪಾಳೆಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಮನೆಯವರ ಪ್ರೋತ್ಸಾಹ ನಟನೆಯ ಕಡೆ ಮನಸ್ಸನ್ನ ಆಯಸ್ಕಾಂತದ ಹಾಗೆ ಸೆಳೆಯುವಂತೆ ಮಾಡಿದೆ.

ನಟಿಸಲು ಪ್ರಾರಂಭಿಸಿದ ಮೊದಮೊದಲು, ವೇದಿಕೆಯ ಮೆಟ್ಟಿಲೇರಲು ಭಯ ಎಂಬ ನೆರಳು ನನ್ನನ್ನು ಆವರಿಸಿತ್ತು. ಪಿಯುಸಿ ಬಂದಾಗ ಅನೇಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ದೊರಕಿತು, ಜೊತೆಗೆ ಮಿಮಿಕ್ರಿ ಮಾಡುತ್ತಾ ಸಾಗಿದೆ, ನಂತರದ ದಿನಗಳಲ್ಲಿ ಸಭಾಕಂಪನ ನನ್ನಿಂದ ದೂರವಾಹೀತು ಎನ್ನುತ್ತಾರೆ ಧನರಾಜ್. ಪದವಿಗೆ ಸೇರಿದಾಗ ಹಲವಾರು ನಾಟಕಗಳು,ಛದ್ಮವೇಷ , ಸಾಂಸ್ಕೃತಿಕ ಚಟುವಟಿಕೆ ಹೀಗೆ ಹತ್ತು ಹಲವು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಿಕ್ಕಂತಹ ಸಣ್ಣಪುಟ್ಟ ಪಾತ್ರಗಳಿಗೂ ಜೀವ ತುಂಬುತ್ತ 
ಮನೆಯವರ ಸಂಪೂರ್ಣ ಬೆಂಬಲವು ಆಸಕ್ತಿಯ ಹಕ್ಕಿಗೆ ರೆಕ್ಕೆ ಕಟ್ಟಿ ಹಾರುವಂತೆ ಮಾಡಿತು.

ಬಣ್ಣದ ಲೋಕಕ್ಕೆ ಪ್ರವೇಶ

ಪದವಿ ಶಿಕ್ಷಣದ ನಂತರ ಮೂರು ವರ್ಷ ರಂಗಾಯಣದಲ್ಲಿ ತರಬೇತಿ ಪಡೆದುಕೊಂಡರು. ರಂಗ ತರಬೇತಿ ಮುಗಿಸಿ ಬೆಂಗಳೂರಿಗೆ ಹೋಗಿ ಅಲ್ಲಿ ಅಮೃತವರ್ಷಿಣಿ ಎಂಬ ಧಾರಾವಾಹಿಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸೇರಿಕೊಂಡು ಟೆಕ್ನಿಕಲ್ ಹಾಗೂ ಕ್ಯಾಮೆರಾ ವಿಷಯ ಸಂಬಂಧಪಟ್ಟ ವಿಷಯಗಳನ್ನು ಅರಿತುಕೊಂಡು, ನಂತರ ಉದಯ ಟಿವಿಯಲ್ಲಿ ಐದು ವರ್ಷ ಕಾರ್ಯನಿರ್ವಹಿಸುತ್ತಾರೆ.

ಪ್ರಯತ್ನಕ್ಕೆ ತಕ್ಕ ಪ್ರತಿಫಲ

ಕೆಲಸದ ಒತ್ತಡದ ನಡುವೆ ಆಸಕ್ತಿಯ ದಾಹ ಬಿಡದೆ ತನ್ನದೇ ವಿಭಿನ್ನ ಆಲೋಚನೆಗಳೊಂದಿಗೆ ಸಮಾಜದ ಜನರ ಅಭಿರುಚಿಗೆ ಅನುಗುಣವಾಗಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ರಂಜಿಸುವ ಸಲುವಾಗಿ ಹಾಸ್ಯಮಾಯವಾದ ವಿಡಿಯೋ ಮಾಡಲು ಶುರು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧನರಾಜ್ ಅವರ ಪ್ರತಿಯೊಂದು ವೀಡಿಯೋ ವೈರಲ್ ಆಗುತ್ತ ಹಾಸ್ಯಪ್ರಿಯರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.

ಪ್ರಸ್ತುತ ಪರಿಸ್ಥಿಗೆ ಸರಿ ದೂಗುವಂತಹ ವಿಷಯದೊಂದಿಗೆ ಮಾಡುವ ಪ್ರತಿಯೊಂದು ವೀಡಿಯೋ ಒಂದೊಳ್ಳೆ ಉತ್ತಮ ಸಂದೇಶವನ್ನ ಸಾರುತ್ತದೆ. ಆ ಕಾರಣದಿಂದಲೇ  ಧನರಾಜ್ ಟಿಕ್ ಟಾಕ್ ಸ್ಟಾರ್ ಎಂದೇ ಕರೆಯಲ್ಪಡುತ್ತಾರೆ. ಚಿಕ್ಕ ವಯಸ್ಸಿನಿಂದಲೂ ವಿಡಿಯೋ ಮಾಡುವುದೆಂದರೆ ಬಹಳ ಖುಷಿ. ತಮಾಷೆಗಾಗಿ ವಿಡಿಯೋ ಮಾಡುತ್ತಾ ಕುಟುಂಬದವರ ಜೊತೆ ನಗುತ್ತಾ, ತಂಟೆ ತರಲೆ ಮಾಡಿ, ಹೊರ ಜಗತ್ತಿಗೆ ತನ್ನನ್ನು  ಹಾಗೂ ತನ್ನ ಕುಟುಂಬದವರನ್ನು ಪರಿಚಯಿಸುವಂತೆ ಆಗಿದೆ, ಎಂದು ಸಂತೋಷ ವ್ಯಕ್ತಪಡಿಸುತ್ತಾರೆ .

ಕೈ ಕೈ ಸೇರಿದರೆ ಚಪ್ಪಾಳೆ

ಪ್ರತಿಯೊಬ್ಬ ವ್ಯಕ್ತಿಯ ಯಶಸ್ವಿನ ಹಿಂದೆ ಕಾಣದ ಕೈಗಳ ಶ್ರಮ ಅಪಾರವಾದುದು. ಹಾಗೆಯೇ, ಧನರಾಜ್ ಅವರು ಪರದೆಯ ಮುಂದೆ ಹಾಸ್ಯ ಮಾಯವಾಗಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ಹೇಗೆ ನಗಿಸುತ್ತಾರೆ ಎಂಬುವುದು ತಿಳಿದಿದೆ. ಅವರು ಪಾತ್ರಕೆ ಜೀವ ತುಂಬುತ್ತಾರೆ, 
ಅವರ ಕುಟುಂಬ ಪ್ರೋತ್ಸಾಹ ತುಂಬುತ್ತ ಸದಾ ನೆರಳಿನಂತೆ ಜೊತೆಯಾಗಿರುತ್ತಾರೆ.  ಕೂಡು ಕುಟುಂದಲ್ಲಿ ಬೆಳೆದು
ಲಕ್ಷಾಂತರ ಅಭಿಮಾನಿಗಳು ಇವರನ್ನ ಇಷ್ಟ ಪಡಲು ಕಾರಣ, ಕುಟುಂಬದ ವಾತಾವರಣ ಜನರೊಡನೆ ಬೆರೆಯುವ ಹೊಂದಾಣಿಕೆ, ಇವೆಲ್ಲವೂ ಧನರಾಜ್ ಅವರನ್ನ ಸಮಾಜ ದೊಡನೆ ಸ್ನೇಹಮಯವಾಗಿ ಬೆರೆಯುವ ರೀತಿಯನ್ನು ತಿಳಿಸಿಕೊಡಲು ಸಹಾಯ ಮಾಡಿದೆ. 
ಆ ಕಾರಣದಿಂದಲೇ ಜನರಿಗೆ ಹತ್ತಿರವಾಗಿದ್ದಾರೆ. ಕುಟುಂಬವೇ ನನ್ನ ಬಹು ದೊಡ್ಡ ಶಕ್ತಿ ಎಂದು ಹೆಮ್ಮೆ ಯಿಂದ ಹೇಳುತ್ತಾರೆ ಧನರಾಜ್.

ಸಂಗಾತಿ ತಂದ ಸಂತಸ

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಧನರಾಜ್ ಅವರ ಪತ್ನಿ ಪ್ರಜ್ಞಾ ಧನರಾಜ್  ಆಚಾರ್. ಆಕೆಯೂ ಕೂಡ ಅದ್ಭುತ ಕಲಾವಿದೆ 
ಎಂಬುವುದು ತಿಳಿದಿರಲಿಲ್ಲ. ನನ್ನ ಅಭಿರುಚಿಗೆ ತಕ್ಕಂತೆ ಕೈ ಹಿಡಿದ ಪತ್ನಿಯು ಕೂಡ ಕುಟುಂಬದ ಸದಸ್ಯರಲ್ಲಿ ಒಬ್ಬಳಾಗಿ, ಪ್ರತಿಯೊಂದು ವಿಷಯಕ್ಕೂ ಬೆಂಬಲಿಸುತ್ತಾ  ಕಥಾ ಭಾಗವನ್ನ ಅವಳೊಡನೆ ಹಂಚಿಕೊಂಡು ನಾವಿಬ್ಬರೂ ಜೊತೆಗೂಡಿ ಹಾಸ್ಯಪ್ರಿಯರನ್ನು 
ರಂಜಿಸುತ್ತಿದ್ದರೆ ಕನ್ನಡದ ಅನೇಕ ಕಲಾವಿದರ ಜೊತೆಗೂಡಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಧನು ಅವರ ಬಹು ದೊಡ್ಡ ಗುರಿ ಒಬ್ಬ ಕಲಾವಿದನಾಗಿರುವುದರ ಜೊತೆಗೆ ನಿರ್ದೇಶಕನಾಗಬೇಕೆಂಬ ಕನಸನ್ನ ನನಸು ಮಾಡುವಲ್ಲಿ ಪ್ರಯತ್ನಗಳ ನಡುವೆ ಪ್ರತಿಫಲದ ನಿರೀಕ್ಷೆಗೆ ಕಾಯುತ್ತಿದ್ದಾರೆ.

ಮೋದಿಯವರ ಮಾತಿನಂತೆ ನಡೆದ ಧನು

ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸದಾ ಒಂದುನುಡಿಯನ್ನು ಪಾಲಿಸುತ್ತಾರೆ. ಯಾವಾಗಲೂ ನಾವು ಏನು ಮಾಡಬೇಕೆಂಬ ಕನಸು ಕಾಣಬೇಕು, ವಿನಹ ಏನು ಆಗಬೇಕೆಂಬುದು ಅಲ್ಲ. ಹಾಗೆನೇ ಧನರಾಜ್ ಅವರು 

ತಾನು ಬೆಸ್ಟ್ ಆಕ್ಟರ್ ಆಗಬೇಕೆಂಬ ಕನಸು ಕಾಣೋದಿಲ್ಲ , ಬೆಸ್ಟ್ ಆಕ್ಟಿಂಗ್ ಮಾಡಬೇಕೆಂದು ಭಯಸುತ್ತಾರೆ ಎಂದು ಹೇಳುತ್ತಾರೆ. ಆ ಕಾರಣದಿಂದಲೇ ಹಾಸ್ಯ ಪಾತ್ರವನ್ನ ಇಷ್ಟ ಪಟ್ಟು ಮಾಡುತ್ತೇನೆ. ಜೊತೆಗೆ ಧನರಾಜ್ ಆಚಾರ್ ಎಂಬ ಹೆಸರೊಂದಿಗೆ ಯೂಟ್ಯೂಬ್ ಚಾನೆಲ್ ಶುರು ಮಾಡಿ ವಾರಕೊಂದು ಸಂದೇಶಪೂರಕ ವಿಡಿಯೋ ದೊಂದಿಗೆ ಹಾಜರಾಗುತ್ತಾ ಲಕ್ಷಾಂತರ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸುತ್ತಿದ್ದಾರೆ.

 

click me!