ಸ್ಯಾಂಡಪ್ ಕಾಮೆಡಿಯನ್ ಮುನಾವರ್ ಫಾರೂಕಿ ಅವರ ಶೋ ಬೆಂಗಳೂರಿನಲ್ಲಿ ರದ್ದಾಗಿದ್ದು ಎಲ್ಲರಿಗೂ ಗೊತ್ತು. ಆದರೆ ಅದರ ನಂತವೂ ಇವರಿಗೆ ಸೋಲಾಗುತ್ತಲೇ ಇದೆ. ಮುನಾವರ್ ಅವರ ಮತ್ತೊಂದು ಶೋ ಈಗ ಕ್ಯಾನ್ಸಲ್ ಆಗಿದ್ದು, ಅವರ ವಿರುದ್ಧ ಕೇಸ್ ದಾಖಲಾಗಿದೆ. ಗುರುಗ್ರಾಮ್‌ನ ಸೊಹ್ನಾ ರಸ್ತೆಯಲ್ಲಿರುವ ಆರಿಯಾ ಮಾಲ್‌ನಲ್ಲಿ ಡಿಸೆಂಬರ್ 19 ರಂದು ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫರುಕಿ ಅವರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಈಗ ಶೋ ರದ್ದುಗೊಳಿಸುವಂತೆ ಸೋಮವಾರ ಗುರುಗ್ರಾಮ್ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರಚಾರದ ಪೋಸ್ಟರ್‌ಗಳಿಂದ ಫರುಕಿ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಂಗಳವಾರ ಸಂಘಟಕರು ಮತ್ತು ಮಾಲ್ ಆಡಳಿತವನ್ನು ಭೇಟಿಯಾದ ನಂತರ ಪ್ರದರ್ಶನದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಖಚಿತವಾಗಿ ಹೇಳುವುದಾದರೆ ಸಾರ್ವಜನಿಕ ಸುರಕ್ಷತೆಯ ಹಿತಾಸಕ್ತಿಯಲ್ಲಿ ಫರುಕಿ ಪ್ರದರ್ಶನ ನೀಡುವುದಿಲ್ಲ ಎಂದು ಕಾರ್ಯಕ್ರಮದ ಸಂಘಟಕರು ಹೇಳಿದ್ದಾರೆ.
Munawar Faruqui ಬೆಂಗಳೂರು ಕಾರ್ಯಕ್ರಮ ರದ್ದು: ಸಂಘಟಕರಿಗೆ ಪೋಲಿಸರ ಪತ್ರ!
ಈ ಘಟನೆಗೆ ಸಂಬಂಧಿಸಿ ಸೋಮವಾರ ದೂರು ಸ್ವೀಕರಿಸಿದ್ದೇವೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸದರ್) ಅಮನ್ ಯಾದವ್ ಹೇಳಿದ್ದಾರೆ. ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತೇವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಕ್ರಮ ತೆಗೆದುಕೊಳ್ಳುವ ಮೊದಲು ದೂರಿನ ಬಗ್ಗೆ ಸಂಘಟಕರು ಮತ್ತು ಮಾಲ್ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಪ್ರಕರಣದ ದೂರುದಾರರಾಗಿರುವ ಬಿಜೆಪಿ ಹರಿಯಾಣ ಘಟಕದ ಐಟಿ ಮುಖ್ಯಸ್ಥ ಅರುಣ್ ಯಾದವ್, ಫರುಕಿ ಅವರು ಲೈವ್ ಪ್ರದರ್ಶನಗಳು ಮತ್ತು ಪ್ರದರ್ಶನಗಳಂತಹ ಮುಕ್ತ ವೇದಿಕೆಗಳಲ್ಲಿ ಹಿಂದೂ ಸಮುದಾಯದ ಭಾವನೆಗಳನ್ನು ನಿರಂತರವಾಗಿ ಘಾಸಿಗೊಳಿಸುತ್ತಿದ್ದಾರೆ. ಗುರುಗ್ರಾಮದಲ್ಲಿ ಕಾಮಿಡಿ ಶೋನಲ್ಲಿ ಭಾಗವಹಿಸಲು ನಾವು ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದ ಆಯೋಜಕರಾದ ದಿ ಎಂಟರ್‌ಟೈನ್‌ಮೆಂಟ್ ಫ್ಯಾಕ್ಟರಿಯ ಸಂಸ್ಥಾಪಕ ಮುಬಿನ್ ತಿಸೇಕರ್, ಸಾರ್ವಜನಿಕ ಸುರಕ್ಷತೆಗಾಗಿ ಇದರಲ್ಲಿ ಫಾರುಕಿ ಭಾಗವಹಿಸುವುದಿಲ್ಲ. ಈಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರ ಹರಿದಾಡುತ್ತಿದ್ದು, ನಾವು ಶೋ ನೀಡಲು ಬಯಸುವುದಿಲ್ಲ. ಸಾರ್ವಜನಿಕ ಸುರಕ್ಷತೆಗಾಗಿ ಪ್ರದರ್ಶನ ನೀಡಬಾರದು ಎಂಬುದು ಫರುಕಿ ಮತ್ತು ಅವರ ಜಂಟಿ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.
ನವೆಂಬರ್ 28ರಂದು ಬೆಂಗಳೂರಿನ ಗುಡ್ ಶೆಫರ್ಡ್ ಸಭಾಂಗಣದಲ್ಲಿ (Good Shepherd auditorium) ನಡೆಯಬೇಕಿದ್ದ ಹಾಸ್ಯಗಾರ ಮುನಾವರ್ ಫಾರೂಕಿ (Munawar Faruqui) ಅವರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಬೆಂಗಳೂರು ಪೊಲೀಸರು (Bengaluru Police) ಸೂಚನೆ ನೀಡಿದ್ದಾರೆ. ಸಂಘಟಕರಿಗೆ ಬರೆದ ಪತ್ರದಲ್ಲಿ, "ಹಲವಾರು ಸಂಘಟನೆಗಳು ಈ ಸ್ಟ್ಯಾಂಡ್-ಅಪ್ ಕಾಮಿಡಿ ಶೋ (Stand up comedy) ಅನ್ನು ವಿರೋಧಿಸುತ್ತಿವೆ. ಇದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು. ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಮಾಹಿತಿ ಇದೆ" ಎಂದು ತಿಳಿಸಲಾಗಿದೆ. ಬಜರಂಗದಳದ ಬೆದರಿಕೆಯಿಂದಾಗಿ ಕಳೆದ ತಿಂಗಳು ಮುಂಬೈನಲ್ಲಿ ಫಾರೂಕಿ ಇದೇ ರೀತಿಯ ಕಾರ್ಯಕ್ರಮ ರದ್ದುಗೊಂಡಿತ್ತು.
ಬಜರಂಗದಳದ ಬೆದರಿಕೆಯಿಂದಾಗಿ ಕಳೆದ ತಿಂಗಳು ಮುಂಬೈನಲ್ಲಿ (Mumbai) ಫಾರೂಕಿ ಇದೇ ರೀತಿಯ ಕಾರ್ಯಕ್ರಮ ರದ್ದುಗೊಂಡಿತ್ತು. ಈ ಬಗ್ಗೆ ಹಾಸ್ಯಗಾರ ಫಾರೂಕಿ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಹಾಸ್ಯಗಾರ ಫಾರೂಕಿ ಬೆಂಬಲಿಸಿ ಟ್ವೀಟ್ ಮಾಡಿರಬಹುದು ಎಂದು ಹಲವರು ವಿಶ್ಲೇಷಿಸಿದ್ದಾರೆ. ಫರೂಕಿ ಅವರ ಕಾರ್ಯಕ್ರಮಗಳು ರದ್ದಾಗುತ್ತಲೇ ಇದ್ದು ಬಹಳಷ್ಟು ಕಲಾವಿದರು ಈ ಬಗ್ಗೆ ಫರೂಕಿ ಪರ ಮಾತನಾಡಿದ್ದಾರೆ.