Nana Patekar: 3 ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕ; 2026ರಲ್ಲಿ ಸುಬೇದಾರ್ ಚಿತ್ರದಲ್ಲೂ ನಟಿಸಿರುವ ನಟ ನಾನಾ ಪಾಟೇಕರ್

Published : Oct 08, 2026, 09:21 AM IST
Nana Patekar

ಸಾರಾಂಶ

ಬಾಲಿವುಡ್‌ನ ಖ್ಯಾತ ನಟ ನಾನಾ ಪಾಟೇಕರ್ ಅವರು ಇಂದು, 08 ಅಕ್ಟೋಬರ್ 2026ರಂದು ಗೋವಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ 5:20ಕ್ಕೆ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಸತತ 45 ನಿಮಿಷಗಳ ಕಾಲ ಸಿಪಿಆರ್‌ (CPR) ನೀಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.

ಬಾಲಿವುಡ್‌ನ ಖ್ಯಾತ ನಟ ನಾನಾ ಪಾಟೇಕರ್ (Nana Patekar) ಅವರು ಇಂದು, 08 ಅಕ್ಟೋಬರ್ 2026ರಂದು ಗೋವಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ 5:20ಕ್ಕೆ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಸತತ 45 ನಿಮಿಷಗಳ ಕಾಲ ಸಿಪಿಆರ್‌ (CPR) ನೀಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ನಟ ನಾನಾ ಪಾಟೇಕರ್ ಅವರು 'ಕ್ರಾಂತಿವೀರ್' (1994) ಚಿತ್ರದ ಕ್ರಾಂತಿಕಾರಿ ನಾಯಕನ ಪಾತ್ರಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ, ಪರಿಂದಾ (1989) ಹಾಗೂ ಅಗ್ನಿ ಸಾಕ್ಷಿ (1996) ಚಿತ್ರಗಳ ನಟನೆಗೆ ಎರಡು ಬಾರಿ ಪೋಷಕ ನಟ ‘ರಾಷ್ಟ್ರ ಪ್ರಶಸ್ತಿ’ ಲಭಿಸಿವೆ.

ಈ ವರ್ಷ, 2026ರಲ್ಲೂ ನಟನೆ:

ಅನಿಲ್ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 2026ರ ಹಿಂದಿ ಸಾಹಸ ಪ್ರಧಾನ ಚಲನಚಿತ್ರ 'ಸುಬೇದಾರ್' (Subedaar) ನಲ್ಲಿ ಹಿರಿಯ ನಟ ನಾನಾ ಪಾಟೇಕರ್ ಅವರು ಒಂದು ಪ್ರಮುಖ ಅತಿಥಿ ಪಾತ್ರದಲ್ಲಿ (Special Cameo) ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ನಾನಾ ಪಾಟೇಕರ್ ಪಾತ್ರದ ಕುರಿತಾದ ಪ್ರಮುಖ ವಿವರಗಳು ಇಲ್ಲಿವೆ:

• ಪಾತ್ರದ ಹೆಸರು: ನಾನಾ ಪಾಟೇಕರ್ ಅವರು ಈ ಚಿತ್ರದಲ್ಲಿ 'ನಾನಾ ವಾಘಮಾರೆ' ಎಂಬ ಶಕ್ತಿಶಾಲಿ ಪಾತ್ರವನ್ನು ನಿರ್ವಹಿಸಿದ್ದಾರೆ.

• ಸರ್ಪ್ರೈಸ್ ಎಂಟ್ರಿ: ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಇವರ ಹಠಾತ್ ಎಂಟ್ರಿ ಪ್ರೇಕ್ಷಕರಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದು, ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಬಹಳಷ್ಟು ಸಿನಿಪ್ರೇಕ್ಷಕರು ಈ ಪಾತ್ರದಲ್ಲಿ ಅವರ ಪರಕಾಯ ಪ್ರವೇಶವನ್ನು ಪ್ರಶಂಸಿಸಿದ್ದಾರೆ.

• 'ವೆಲ್ಕಮ್' ಜೋಡಿಯ ಮರುಮಿಲನ: ಬಾಲಿವುಡ್‌ನ ಪ್ರಸಿದ್ಧ ಕಾಮಿಡಿ ಚಿತ್ರ 'ವೆಲ್ಕಮ್' ನಲ್ಲಿ 'ಉದಯ್ ಭಾಯ್' (ನಾನಾ ಪಾಟೇಕರ್) ಮತ್ತು 'ಮಜ್ನು ಭಾಯ್' (ಅನಿಲ್ ಕಪೂರ್) ಆಗಿ ಜನಮನ ಗೆದ್ದಿದ್ದ ಈ ಜೋಡಿ, ಹಲವು ವರ್ಷಗಳ ನಂತರ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದು ವಿಶೇಷವಾಗಿತ್ತು.

ಕನ್ನಡದಲ್ಲೂ ನಟಿಸಿದ್ದರು ನಾನಾ ಪಾಟೇಕರ್:

ಹೌದು, 2010ರಲ್ಲಿ ನಟ ನಾನಾ ಪಾಟೇಕರ್ ಅವರು ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. 'ಲೂಸ್ ಮಾದ' ಖ್ಯಾತಿಯ ನಟ ಯೋಗೇಶ್ ನಟನೆಯ 'ಯಕ್ಷ' ಸಿನಿಮಾದಲ್ಲಿ ನಟಿಸುವ ಮೂಲಕ ನಾನಾ ಪಾಟೇಕರ್ ಅವರು ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿ, ಇಲ್ಲಿನ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು.

ಯೋಗೇಶ್ ಅಭಿನಯದ 'ಯಕ್ಷ' (2010) ಚಿತ್ರದಲ್ಲಿ ಬಾಲಿವುಡ್‌ನ ಈ ಖ್ಯಾತ ನಟ ನಾನಾ ಪಾಟೇಕರ್ ಅವರು ಯೋಗರಾಜ್ ಪುಲಕೇಶಿ (Yograj Pulakeshi) ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ನಾಯಕ ಯಕ್ಷ ರಾಜ್ ಪುಲಿಕೇಶಿ ತಂದೆ, ಯೋಗರಾಜ್ ಪುಲಕೇಶಿಯಾಗಿ ಕಾಣಿಸಿಕೊಂಡಿದ್ದಾರೆ.

75 ವರ್ಷದ ನಾನಾ ಪಾಟೇಕರ್ ಇಂದು ನಮ್ಮನ್ನಗಲುವ ಮೂಲಕ ಚಿತ್ರರಂಗಕ್ಕೆ ಅಪಾರ ನಷ್ಟವುಂಟಾಗಿದೆ ಎಂದು ಚಿತ್ರರಂಗದ ಗಣ್ಯರು, ಸಹಕಲಾವಿದರು ಸೇರಿದಂತೆ ಅಪಾರ ಅಭಿಮಾನಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

NANA PATEKAR DEATH: ನಮ್ಮನ್ನಗಲಿದ ನಟ ನಾನಾ ಪಾಟೇಕರ್; ಕನ್ನಡದ 'ಯಕ್ಷ' ಸಿನಿಮಾದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು
Nana Patekar: ಬಾಲಿವುಡ್ ನಟ ನಾನಾ ಪಾಟೇಕರ್ ನಿಧನ, ಗೋವಾದ ನಿವಾಸದಲ್ಲಿ ಕೊನೆಯುಸಿರು