LOVE BREAKUP: ಏನಿದು 'ಪ್ರೀತಿ.. ಗೀತಿ.. ಇತ್ಯಾದಿ..'.. ಸಿಎಂ ದಳಪತಿ ವಿಜಯ್ ಮಗ ಜೇಸನ್ ಸಂಜಯ್ ಲವ್‌-ಬ್ರೇಕಪ್‌ ಕಥೆ ವೈರಲ್

Published : Oct 07, 2026, 09:35 AM IST
Jason Sanjay Thalapathy Vijay

ಸಾರಾಂಶ

ಮಗನ ಸಿನಿಮಾ ಗೆಲುವಿಗೆ ತಂದೆ ವಿಜಯ್ ಕೂಡ ಭರ್ಜರಿ ಬೆಂಬಲ ನೀಡಿದ್ದಾರೆ. ‘ಸಿಗ್ಮಾ’ ಬಿಡುಗಡೆಯ ದಿನ ಮಧುರಾಂತಕಂನಲ್ಲಿ ನಡೆದ ರೋಡ್‌ಶೋ ವೇಳೆ ಕಾರ್ಯಕರ್ತರೊಬ್ಬರು ನೀಡಿದ ಜೇಸನ್ ಅವರ ಫೋಟೋ ಫ್ರೇಮ್ ಅನ್ನು ವಿಜಯ್ ಹೆಮ್ಮೆಯಿಂದ ತಲೆಯ ಮೇಲೆ ಎತ್ತಿ ಹಿಡಿದು ಜನರಿಗೆ ತೋರಿಸಿದ್ದರು. ಈ ದೃಶ್ಯ ಅಭಿಮಾನಿಗಳ ಗಮನ ಸೆಳೆದಿತ್ತು.

Tamil Nadu CM Vijay’s son Jason Sanjay has opened up about his love story-ಜೇಸನ್ ಸಂಜಯ್ ಲವ್‌ಸ್ಟೋರಿಯಲ್ಲಿ ಟ್ವಿಸ್ಟ್! ಒಂದೂವರೆ ವರ್ಷ ಪ್ರೀತಿಸಿ ದೂರವಾದ ಕಥೆ.. ಏನಿದು ‘ಸಿಗ್ಮಾ’ ನಿರ್ದೇಶಕರ ಪ್ರೀತಿ, ಗೀತಿ, ಇತ್ಯಾದಿ..

ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಇದೀಗ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ತಂದೆಯಂತೆ ನಟನೆಯತ್ತ ಮುಖ ಮಾಡದೆ, ನಿರ್ದೇಶನದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿರುವ ಜೇಸನ್, ತಮ್ಮ ಚೊಚ್ಚಲ ಸಿನಿಮಾ ‘ಸಿಗ್ಮಾ’ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ಸಕ್ಸಸ್ ಖುಷಿಯಲ್ಲಿರುವ ಜೇಸನ್, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಒಂದು ಕುತೂಹಲಕಾರಿ ಅಧ್ಯಾಯವನ್ನು ತೆರೆದಿಟ್ಟಿದ್ದಾರೆ. ಅದರಲ್ಲೂ ಕಾಲೇಜು ದಿನಗಳಲ್ಲಿನ ತಮ್ಮ ಲವ್‌ಸ್ಟೋರಿ ಮತ್ತು ಬ್ರೇಕಪ್ ಬಗ್ಗೆ ಅವರು ಹೇಳಿರುವ ಮಾತುಗಳು ಇದೀಗ ಅಭಿಮಾನಿಗಳ ಗಮನ ಸೆಳೆದಿವೆ.

ಜೀವನದಲ್ಲಿ ಪ್ರೀತಿ ಮಾಡಿದ್ದು ಒಂದೇ ಬಾರಿ

ಜೇಸನ್ ಸಂಜಯ್ ಹೇಳುವ ಪ್ರಕಾರ, ಅವರ ಜೀವನದಲ್ಲಿ ಪ್ರೀತಿ ಮಾಡಿದ್ದು ಒಂದೇ ಬಾರಿ. ಅದು ಕೂಡ ಕಾಲೇಜು ದಿನಗಳಲ್ಲಿ. ಸುಮಾರು ಒಂದೂವರೆ ವರ್ಷಗಳ ಕಾಲ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಕಾಲ ಕಳೆದಂತೆ ಆ ಸಂಬಂಧವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಜಗಳ, ಆರೋಪ-ಪ್ರತ್ಯಾರೋಪಗಳಿಲ್ಲದೆ ಇಬ್ಬರೂ ಕುಳಿತು ಮಾತನಾಡಿ, ಪರಸ್ಪರ ಒಪ್ಪಿಗೆಯಿಂದಲೇ ಸಂಬಂಧಕ್ಕೆ ಅಂತ್ಯ ಹಾಡಿದ್ದಾಗಿ ಜೇಸನ್ ತಿಳಿಸಿದ್ದಾರೆ.

ಬ್ರೇಕಪ್ ಬಳಿಕದ ದಿನಗಳು ಕೂಡ ಜೇಸನ್‌ಗೆ ಸುಲಭವಾಗಿರಲಿಲ್ಲವಂತೆ. ಆ ನೋವಿನಿಂದ ಹೊರಬರಲು ಅವರು ಸಂಗೀತದ ಮೊರೆ ಹೋಗಿದ್ದರು. ವಿಶೇಷವಾಗಿ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರ ಲವ್ ಸಾಂಗ್‌ಗಳನ್ನು ನಿರಂತರವಾಗಿ ಕೇಳುತ್ತಿದ್ದೆ ಎಂದು ಜೇಸನ್ ಹೇಳಿದ್ದಾರೆ. ಪ್ರೀತಿಯ ನೆನಪುಗಳಿಂದ ದೂರವಾಗಲು ಸಾಮಾಜಿಕ ಜಾಲತಾಣಗಳಿಂದಲೂ ಅಂತರ ಕಾಯ್ದುಕೊಂಡಿದ್ದರಂತೆ.

ಹಳೆಯ ಸಂಬಂಧಕ್ಕೆ ಮತ್ತೆ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡುವುದು ನೋವನ್ನು ಮತ್ತಷ್ಟು ಹೆಚ್ಚಿಸಬಹುದು

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಗಳನ್ನು ಹಾಕುವುದು, ಹಳೆಯ ಸಂಬಂಧಕ್ಕೆ ಮತ್ತೆ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡುವುದು ನೋವನ್ನು ಮತ್ತಷ್ಟು ಹೆಚ್ಚಿಸಬಹುದು ಎಂಬುದನ್ನು ಅರಿತಿದ್ದ ಜೇಸನ್, ಇಬ್ಬರೂ ಸಂಪರ್ಕ ಕಡಿದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಮನಸ್ಸಿಗೆ ನೋವಾದರೂ ತಾವು ತೆಗೆದುಕೊಂಡ ನಿರ್ಧಾರವನ್ನು ಪಾಲಿಸುವ ಮೂಲಕ ನಿಧಾನವಾಗಿ ಆ ಹಂತದಿಂದ ಹೊರಬಂದಿದ್ದಾರಂತೆ. ಇದೀಗ ಆ ವಿಚಾರವನ್ನು ಹಿಂದಿನ ಅಧ್ಯಾಯವಾಗಿಯೇ ನೋಡುತ್ತಿರುವ ಜೇಸನ್, ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಮುಂದೆ ಸಾಗಲೇಬೇಕು ಎಂಬ ಮಾತನ್ನೂ ಹೇಳಿದ್ದಾರೆ.

ಇನ್ನು ಜೇಸನ್ ಅವರ ಗಮನ ಸಂಪೂರ್ಣವಾಗಿ ಸಿನಿಮಾ ಕಡೆಗೆ ತಿರುಗಿದೆ. ‘ಸಿಗ್ಮಾ’ ಚಿತ್ರದ ಕಥೆ, ಸ್ಕ್ರಿಪ್ಟ್ ಹಾಗೂ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದ ಅವರು, ತಮ್ಮ ಚೊಚ್ಚಲ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರೆ. ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಂಡಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ಸೋಮವಾರದ ಅಂತ್ಯಕ್ಕೆ ಭಾರತದಲ್ಲಿ ₹6.19 ಕೋಟಿ ನಿವ್ವಳ ಹಾಗೂ ₹7.04 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಮಗನ ಸಿನಿಮಾ ಗೆಲುವಿಗೆ ತಂದೆ ವಿಜಯ್ ಕೂಡ ಭರ್ಜರಿ ಬೆಂಬಲ ನೀಡಿದ್ದಾರೆ. ‘ಸಿಗ್ಮಾ’ ಬಿಡುಗಡೆಯ ದಿನ ಮಧುರಾಂತಕಂನಲ್ಲಿ ನಡೆದ ರೋಡ್‌ಶೋ ವೇಳೆ ಕಾರ್ಯಕರ್ತರೊಬ್ಬರು ನೀಡಿದ ಜೇಸನ್ ಅವರ ಫೋಟೋ ಫ್ರೇಮ್ ಅನ್ನು ವಿಜಯ್ ಹೆಮ್ಮೆಯಿಂದ ತಲೆಯ ಮೇಲೆ ಎತ್ತಿ ಹಿಡಿದು ಜನರಿಗೆ ತೋರಿಸಿದ್ದರು. ಈ ದೃಶ್ಯ ಅಭಿಮಾನಿಗಳ ಗಮನ ಸೆಳೆದಿತ್ತು. ವಿಜಯ್ ಕುಟುಂಬದ ಇತರ ಸದಸ್ಯರೂ ಚೆನ್ನೈನ ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳೊಂದಿಗೆ ಮೊದಲ ದಿನದ ಮೊದಲ ಶೋ ವೀಕ್ಷಿಸಿ ಸಂಭ್ರಮಿಸಿದ್ದರು.

ಒಟ್ಟಿನಲ್ಲಿ ಕಾಲೇಜಿನ ಪ್ರೀತಿ, ಬ್ರೇಕಪ್ ನೋವು, ಯುವನ್ ಸಾಂಗ್ಸ್ ಹಾಗೂ ಸಿನಿಮಾ ಕನಸು—ಜೇಸನ್ ಸಂಜಯ್ ಅವರ ಜೀವನದ ಈ ವಿಭಿನ್ನ ಅಧ್ಯಾಯಗಳು ಇದೀಗ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೌಂದರ್ಯ ಕೊನೆಯ ಮಾತುಗಳು: ಸಾವಿಗೂ ಮುನ್ನ ಅತ್ತಿಗೆ ಮಗಳ ಬಳಿ ಏನಂದಿದ್ದರು ಗೊತ್ತಾ?
ನಾನಿ ಮನೆಯಲ್ಲಿ 'ದೋಸೆ' ಹಾಕಲು ಯಾರಿಗೂ ಬರಲ್ವಾ? ಮನೆಗೆ ಬಂದ ಆ ಸ್ಟಾರ್ ನಟಿಯೇ ದೋಸೆ ಹಾಕಿದ್ದು ಏಕೆ?