
ಖ್ಯಾತ ಅಮೆರಿಕನ್ ಗಾಯಕಿ(American Singer) ಸ್ಪೆಷಲ್ ವಿಡಿಯೋ ಮಾಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಗಾಯಕಿ ಮೇಟಾ ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಈ ವಿಡಿಯೋ ಹಂಚಿಕೊಂಡಿದ್ದು ಇದರಲ್ಲಿ ಗಾಯಕಿಯ ಮುಖಕ್ಕೆ ಹಾವು ಕಚ್ಚುವುದನ್ನು ಕಾಣಬಹುದು. 21 ವರ್ಷದ ಗಾಯಕಿ ಈ ಬಾರಿ ಜೇ-ಝೆಡ್ ಲೇಬಲ್ ರಾಕ್ ನೇಷನ್ ಹಾಡಲು ಒಪ್ಪಿಕೊಂಡಿದ್ದರು. ಬ್ಲಾಕ್ ಹಾಟ್ ಔಟ್‌ಫಿಟ್‌ನಲ್ಲಿ ನೆಲದ ಮೇಲೆ ಮಲಗಿ ಎದೆ ಮೇಲೆ ಕರಿ ಹಾವನ್ನು(Snake) ಹರಿಬಿಟ್ಟು ಮುಖಕ್ಕೆ ಕಚ್ಚಿಸಿಕೊಂಡಿದ್ದಾರೆ ಈಕೆ.
ಕಪ್ಪು ಹಾವು ಆಕೆಯ ದೇಹದ ಮೇಲೆ ಓಡಾಡುತ್ತಿರುವಾಗಲೇ ಮತ್ತೊಬ್ಬರು ಬಿಳಿ ಹಾವನ್ನು ಆಕೆಯ ಮೈಮೇಲೆ ಬಿಟ್ಟಿದ್ದಾರೆ. ಆದರೆ ಅಷ್ಟೊತ್ತಿಗೆ ಆಕೆಯ ಕೆನ್ನೆಯ ಸಮೀಪ ಬಂದಿದೆ. ಅದನ್ನು ತಕ್ಷಣ ಹಿಡಿದು ದೂರ ಎಸೆಯಲು ಗಾಯಕಿ ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಹಾವು ಅವರ ಮುಖಕ್ಕೆ ಕಚ್ಚಿತ್ತು. ನಿಮಗಾಗಿ ವಿಡಿಯೋ ಮಾಡಲು ನಾನೇನು ಅನುಭವಿಸುತ್ತೇನೆ ನೋಡಿ ಎಂದು ಗಾಯಕಿ ತಮ್ಮ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ವಿಡಿಯೋ ತುಣುಕು ಒಂದೇ ವಾರದಲ್ಲಿ 4.4 ಲಕ್ಷ ವ್ಯೂಸ್ ಪಡೆದಿದೆ. ಕೆಲವು ದಿನಗಳ ಹಿಂದೆ ಗಾಯಕಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಅವರು ಹಾಡುವುದನ್ನು ನೋಡಬಹುದು.
ಫಾರ್ಮ್‌ಹೌಸಲ್ಲಿದ್ದ ಸಲ್ಮಾನ್ ಖಾನ್ ಅಪಾಯದಿಂದ ಪಾರು
ಒಬ್ಬ ಬಳಕೆದಾರರು ನೀವು ಸುಲಭವಾಗಿ ಹೊರಬಂದಿದ್ದೀರಿ. ಆ ಚಿಕ್ಕ ವ್ಯಕ್ತಿಗೆ ಹಿಡಿತವೂ ಸಿಗಲಿಲ್ಲ. ದಯವಿಟ್ಟು ಈ ಒಂದು ಅನುಭವದಿಂದ ಸುಂದರವಾದ ಪ್ರಾಣಿಗಳ ಬಗ್ಗೆ ನೆಗಟಿವ್ ಭಾವನೆ ಬರುವಂತೆ ಮಾಡಲು ಬಿಡಬೇಡಿ ಎಂದಿದ್ದಾರೆ. ಹಾವು ತಿನಿಸು ಎಂದುಕೊಂಡಿದೆ ಎಂದು ಮತ್ತೊಬ್ಬರು ಕಮೆಂಟಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಕ್ಲಿಪ್‌ನಲ್ಲಿ ಮೃಗಾಲಯದ ವ್ಯಕ್ತಿಯ ಮುಖದ ಮೇಲೆ ಹೆಬ್ಬಾವು ದಾಳಿ ಮಾಡಿದ್ದು, ಆತನ ಕೆನ್ನೆ ರಕ್ತಸಿಕ್ತವಾಗಿತ್ತು. ಲಾಸ್ ಏಂಜಲೀಸ್‌ನ ಸಮೀಪವಿರುವ ದಿ ರೆಪ್ಟೈಲ್ ಮೃಗಾಲಯದ ಸಂಸ್ಥಾಪಕ ಝೂಕೀಪರ್ ಜೇ ಬ್ರೂವರ್ ಅವರು ಜಿರಾಫೆಗಳು ಮತ್ತು ಆನೆಗಳಿಂದ ಕೊಮೊಡೊ ಡ್ರ್ಯಾಗನ್‌ಗಳು ಮತ್ತು ಉಪ್ಪುನೀರಿನ ಮೊಸಳೆಗಳವರೆಗೆ ಅವರು ಆರೈಕೆ ಮಾಡುವ ಪ್ರಾಣಿಗಳ ವೀಡಿಯೊಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿ, ಜೇ ನಿರ್ದಿಷ್ಟವಾಗಿ ದೊಡ್ಡ ಹೆಬ್ಬಾವಿಗೆ ಸೇರಿದ ಕೆಲವು ಮೊಟ್ಟೆಗಳನ್ನು ಹಿಂಪಡೆಯಲು ಪ್ರಯತ್ನಿಸುತ್ತಿರುವುದನ್ನು ತೋರಿಸಿದ್ದರು. ಜೇ ಎಚ್ಚರಿಕೆಯಿಂದ ಮೊಟ್ಟೆಗಳನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು. ಕೆಲವು ಮೊಟ್ಟೆಗಳು ಗೊಂಚಲುಗಳಲ್ಲಿ ಒಟ್ಟಿಗೆ ಅಂಟಿಕೊಂಡಿತ್ತು. ಆದ್ದರಿಂದ, ಮೊಟ್ಟೆಗಳನ್ನು ತೆಗೆದುಕೊಳ್ಳಲು ತನ್ನ ಇನ್ನೊಂದು ಕೈಯನ್ನು ಬಿಡಿಸಲು ಅವನು ತನ್ನ ಕೋಲನ್ನು ಕೆಳಗೆ ಇಟ್ಟಿದ್ದರು. ಹಾವು ಅವರ ಮೇಲೆ ದಾಳಿ ಮಾಡುವ ಮೂಲಕ ತನ್ನ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿತ್ತು.
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಹಾವು ಕಡಿತ
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿದೆ. ಬಾಲಿವುಡ್ ಸ್ಟಾರ್ ನಟ, ಬಿಗ್‌ಬಾಸದ ಹೋಸ್ಟ್‌ಗೆ ಪಾನ್ವೆಲ್ ಫಾರ್ಮ್ ಹೌಸ್‌ನಲ್ಲಿ ಹಾವು ಕಚ್ಚಿದೆ. ಅದೃಷ್ಟವಶಾತ್ ನಟ ಅಪಾಯದಿಂದ ಪಾರಾಗಿದ್ದು ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ. ನಟನಿಗೆ ಕಚ್ಚಿರುವ ಹಾವು ವಿಷಕಾರಿ ಅಲ್ಲ ಎಂದು ಹೇಳಲಾಗಿದೆ. ಎಬಿಪಿ ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದೆ. ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ. ನಟನನ್ನು ಚಿಕಿತ್ಸೆಗಾಗಿ ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಂದು ಬೆಳಗ್ಗೆ 9 ಗಂಟೆಗೆ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು.
ಹಾವು ಸಲ್ಮಾನ್ ಖಾನ್ ಅವರ ಕೈಗೆ ಕಚ್ಚಿದೆ. ಆದರೆ ಅವರು ಈಗ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ವಿಷ ನಿವಾರಕ ಔಷಧವನ್ನು ನೀಡಲಾಯಿತು. ಕೆಲವು ಗಂಟೆಗಳ ವೀಕ್ಷಣೆಯ ನಂತರ ನಟನನ್ನು ಮನೆಗೆ ಹೋಗಲು ಅನುಮತಿಸಲಾಯಿತು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.