ಆಕಾಶದ ಫೋಟೋ ಕ್ಲಿಕ್ಕಿಸುವಾಗ ನಟಿಯ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಹಾರುವ ತಟ್ಟೆ!

Published : Aug 13, 2023, 02:16 PM ISTUpdated : Nov 21, 2023, 06:34 PM IST
ಆಕಾಶದ ಫೋಟೋ ಕ್ಲಿಕ್ಕಿಸುವಾಗ ನಟಿಯ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಹಾರುವ ತಟ್ಟೆ!

ಸಾರಾಂಶ

ಮಾಲಿವುಡ್​ ನಟಿ ದಿವ್ಯ ಪ್ರಭಾ ಅವರು ವಿಮಾನದಲ್ಲಿ ಪ್ರಯಾಣಿಸುವ ವೇಳೆ ತೆಗೆದ ಫೋಟೋದಲ್ಲಿ ಕುತೂಹಲದ ವಸ್ತು ಸೆರೆಯಾಗಿದ್ದು, ಇದು ಹಾರುವ ತಟ್ಟೆ ಎಂದು ಹೇಳಲಾಗುತ್ತಿದೆ.   

ಹಾರುವ ತಟ್ಟೆಯ (Unidentified flying object) ಕುರಿತು ಕುತೂಹಲ ಇಂದು-ನಿನ್ನೆಯದಲ್ಲ.  ಏಲಿಯನ್​ನಂತೆ ಹಾರುವ ತಟ್ಟೆಗಳ ಕುರಿತು ಎಷ್ಟೋ ದಶಕಗಳಿಂದ ಚರ್ಚೆ ನಡೆಯುತ್ತಲೇ ಇದೆ. ಆಕಾಶದಲ್ಲಿ ಹಲವರು ತಮಗೆ ಚಿತ್ರ-ವಿಚಿತ್ರ ದೃಶ್ಯಗಳು ಕಂಡಿರುವ ಬಗ್ಗೆ ಹೇಳಿದರೆ, ಇನ್ನು ಕೆಲವರು ಅವುಗಳ ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡಿರುವುದು ಇದೆ. ಆದರೆ ಈ ಫೋಟೋಗಳಿಗೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ನೀಡುವವರು ಇದ್ದಾರೆ. ಇವುಗಳ ಇರುವಿಕೆಯನ್ನು ಅಲ್ಲಗಳೆಯುವ ವರ್ಗವೂ ಇದ್ದರೆ, ಇದನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಆದರೆ ಇದರ ನಡುವೆಯೇ, ಇದೀಗ ಖ್ಯಾತ ನಟಿಯೊಬ್ಬರ ಕ್ಯಾಮೆರಾ ಕಣ್ಣಿಗೆ ನಿಗೂಢ ವಸ್ತು ಸೆರೆಯಾಗಿದ್ದು, ಅದನ್ನು ಅವರು ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಶೇರ್​ (Instagram share) ಮಾಡಿಕೊಂಡಿದ್ದಾರೆ. ಇದು ಬಹುಶಃ ಹಾರುವ ತಟ್ಟೆ ಇರಬಹುದು ಎನ್ನುವುದು ಅವರ ಮಾತು. ಈ ವಸ್ತು ತಮ್ಮ ಕ್ಯಾಮೆರಾ ಕಣ್ಣಲ್ಲಿ ಹೇಗೆ ಸೆರೆಯಾಯಿತು ಎನ್ನುವುದನ್ನು ನಟಿ ಬರೆದುಕೊಂಡಿದ್ದಾರೆ.

ಇಂಥದ್ದೊಂದು ಅಪೂರ್ವ ದೃಶ್ಯ ಕಂಡಿರುವ ನಟಿ,  ಕೇರಳದ ದಿವ್ಯ ಪ್ರಭಾ (Divya Prabha). ಮಾಲಿವುಡ್​ ನಟಿಯಾಗಿರುವ ಈಕೆ, ತಮ್ಮ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಹಾರುವ ತಟ್ಟೆಯ ಫೋಟೊ ಶೇರ್​ ಮಾಡಿಕೊಂಡಿದದ್ದಾರೆ.  ತಾವು ವಿಮಾನ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಕ್ಯಾಮೆರಾಕ್ಕೆ ಈ ವಿಚಿತ್ರ ವಸ್ತು ಕಂಡಿದುದಾಗಿ ಅವರು ಹೇಳಿದ್ದಾರೆ.  ನಾನು  ಮುಂಬೈನಿಂದ ಕೊಚ್ಚಿಗೆ ಬರುತ್ತಿದ್ದೆ. ವಿಮಾನವು ಕೊಚ್ಚಿಗೆ ಲ್ಯಾಂಡ್​ ಆಗುವ ಒಂದು ಗಂಟೆಗೂ ಮುನ್ನ ನಾನು ಆಕಾಶದ ಫೋಟೋಗಳನ್ನು ತೆಗೆದುಕೊಂಡೆ. ಈ ವೇಳೆ ದಿಢೀರನೇ ನನ್ನ ಫೋನ್​ ಕ್ಯಾಮೆರಾದಲ್ಲಿ ಏನೋ ಒಂದನ್ನು ನೋಡಿದೆ. ಅದೇನು ಅಂತಾ ನೋಡಿದಾಗ ದೂರದಲ್ಲಿ ಮೋಡಗಳ ನಡುವೆ ಒಂದು ವಿಚಿತ್ರವಾದ ಫ್ಲೈಯಿಂಗ್​ ಆಬ್ಜೆಕ್ಟ್​ ಹಾರುತ್ತಿರುವುದಾಗಿ ಕಂಡೆ. ಅದು ಕೆಲವೇ ಸೆಕೆಂಡುಗಳಲ್ಲಿ ಕಣ್ಮರೆಯಾಯಿತು. ಅದು ಏನೆಂದು ನನಗೆ ಇದುವರೆಗೂ ತಿಳಿದಿಲ್ಲ. ಬಹುಶಃ ಅದನ್ನು ನೋಡಿದರೆ ಹಾರುವ ತಟ್ಟೆ ಎನಿಸುತ್ತದೆ ಎಂದಿರುವ ಅವರು, ಇದರ ಬಗ್ಗೆ ಗೊತ್ತಿದ್ದರೆ ತಿಳಿಸುವಂತೆ ಕೇಳಿದ್ದಾರೆ.

ಭೂಮಿಯ ಕಡೆ..ಅನ್ಯಗ್ರಹ ಜೀವಿ ಪಡೆ, ಮುಂದೇನು ಕತೆ.?
 
ಕ್ಯಾಮೆರಾ ಕಣ್ಣಿಗೆ (camera) ಸೆರೆಯಾಗಿರುವ ಈ ಫೋಟೋ ನೋಡಿ ಹಲವರು ದಂಗಾಗಿದ್ದಂತೂ ಹೌದು. ಅನೇಕ ಮಂದಿ ಇದು ಹಾರುವ ತಟ್ಟೆಯೇ ಎನ್ನುತ್ತಿದ್ದರೆ, ಕೆಲವರು ತಮ್ಮದೇ ಆದ ವಿಶ್ಲೇಷಣೆ ನೀಡುತ್ತಿದ್ದಾರೆ. ಏಲಿಯನ್​ ಆಗಿರಬಹುದು ಎನ್ನುತ್ತಿರುವವರೇ ಹೆಚ್ಚು ಮಂದಿ.  ಇದರ ಜೊತೆಗೆ, ಇತ್ತೀಚೆಗಷ್ಟೇ ತಮಿಳುನಾಡಿನ ಮಾಜಿ ಡಿಜಿಪಿ ಒಬ್ಬರು ಸಹ ಇದೇ ರೀತಿಯ ಒಂದು ವಿಚಿತ್ರ ವಸ್ತುವಿನ ಕುರಿತು ಬರೆದಿರುವಾಗಿ ಕಮೆಂಟಿಗನೊಬ್ಬ ತಿಳಿಸಿದ್ದಾರೆ.

ಇನ್ನು ಹಾರುವ ತಟ್ಟೆಗೆ ವಿಜ್ಞಾನಿಗಳು (Scientists) ನೀಡುವ ಅರ್ಥವೇನೆಂದರೆ, ಭೂಮಿ ಇರುವ ಸೌರಮಂಡಲ ಕ್ಷೀರ ಪಥ (Milky way) (ಆಕಾಶ ಗಂಗೆ) ವೆಂದು ಕರೆಯಲ್ಪಡುವ ಗ್ಯಾಲಕ್ಸಿಯಲ್ಲಿದೆ. ಆಕಾಶಗಂಗೆ ಊಹಿಸಲಾರದಷ್ಟು ವಿಸ್ತಾರವಾಗಿದೆ. ಅದರ ಯಾವುದೋ ಒಂದು ಬಿಂದುವಿನಲ್ಲಿ ಸೌರ ಮಂಡಲದ ಸದಸ್ಯರಾದ ಸೂರ್ಯ, ಭೂಮಿ ಮತ್ತಿತರ ಗ್ರಹಗಳಿವೆ. ವೀಕ್ಷಕನಿಂದ ಅಥವಾ ವೀಕ್ಷಕನಿಗೆ ಸುಲಭವಾಗಿ ವಿವರಿಸಲಾಗದ ವಾಯವಿಕ ವಸ್ತು ಅಥವಾ ದ್ಯುತಿ ವಿದ್ಯಮಾನದ ಜನಪ್ರಿಯ ನಾಮವೇ ಹಾರುವ ತಟ್ಟೆ. 2015ರಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಾರುವ ತಟ್ಟೆ ಆಕಾರದ ವಸ್ತು ಆಕಾಶದಲ್ಲಿ ಕಾಣಿಸಿಕೊಂಡು ದಿಗ್ಭ್ರಮೆ ಸೃಷ್ಟಿಸಿತ್ತು. ಇದರ ಬಗ್ಗೆ ಪರ-ವಿರೋಧಗಳ ಚರ್ಚೆಯಾಗಿದ್ದರೂ ಕೊನೆಗೂ ಅದೇನು ಎಂದು ಪತ್ತೆ ಮಾಡಲು ಆಗಿರಲಿಲ್ಲ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ
ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?