ಖ್ಯಾತ ನಟನಿಗೆ ಇದೆಂಥ ಸಾವು? ಭಿಕ್ಷೆ ಬೇಡುತ್ತ ಬೀದಿಯಲ್ಲಿಯೇ ಹೆಣವಾದ ಮೋಹನ್!

By Suvarna News  |  First Published Aug 4, 2023, 5:02 PM IST

ಕಮಲ್​ ಹಾಸನ್​ ಸೇರಿದಂತೆ ಹಲವು ನಾಯಕರ ಜೊತೆ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ಕಾಲವುಡ್​ ನಟ ಮೋಹನ್​ ಅವರು ಭಿಕ್ಷೆ ಬೇಡುತ್ತಾ ಬೀದಿ ಬದಿ ಹೆಣವಾಗಿ ಸಿಕ್ಕಿದ್ದಾರೆ. 
 


ಬಣ್ಣದ ಲೋಕ ನೋಡುಗರಿಗೆ ತುಂಬಾ ಚೆನ್ನ. ಒಮ್ಮೆ ಈ ಸಿನಿ ಲೋಕದಲ್ಲಿ (Cine Indistry) ಯಶಸ್ಸು ಕೈಹಿಡಿದರೆ ಅದು ಎಷ್ಟು ಬೇಕಾದರೂ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿ ವಿಶ್ವಖ್ಯಾತಿಯನ್ನೂ ಗಳಿಸುತ್ತದೆ. ಅದಕ್ಕಾಗಿಯೇ ಇಂಥ ಸ್ಥಾನಕ್ಕೇರಲು ನಟ-ನಟಿಯರು ಯಾವ ಚಾಲೆಂಜ್​ ಆದರೂ ಸ್ವೀಕರಿಸಲು ತಯಾರಿರುತ್ತಾರೆ. ಆದರೆ ಎಲ್ಲರಿಗೂ ಅದೃಷ್ಟ ಒಲಿಯುವುದಿಲ್ಲ. ಒಂದೆರಡು ಚಿತ್ರಗಳಲ್ಲಿ ಯಶಸ್ವಿಯಾದರೂ ಕೊನೆಗೆ ಒಂದರ ಮೇಲೊಂದು ಚಿತ್ರ ತೋಪೆದ್ದು ಹೋದರೆ ಅವರ ಘೋರ ಜೀವನ ಯಾರಿಗೂ ಬೇಡ. ಅದರಲ್ಲಿಯೂ ಸಹ ಕಲಾವಿದರು, ಹಾಸ್ಯ ನಟರ ಬದುಕಂತೂ ಅತ್ಯಂತ ಶೋಚನೀಯ. ಸ್ಯಾಂಡಲ್​ವುಡ್​ ಸೇರಿದಂತೆ  ಎಲ್ಲ ಕಡೆ ಹಿರಿಯ ಸಿನಿಮಾ ನಟರು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲು ಕೂಡ ಯಾರೂ ಬರದಂಥ ಸನ್ನಿವೇಶ ಎದುರಾಗಿರುವ ಹಲವು ಉದಾಹರಣೆಗಳಿವೆ. ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯುವ ಕಾಲವಿದು. ಒಮ್ಮೆ ಕೆಳಕ್ಕೆ ಬಿದ್ದರೆ ಅವರಿಗೆ ನರಕವೇ ಗತಿ. ಅಂಥದ್ದೊಂದಕ್ಕೆ ಉದಾಹರಣೆಯಾಗಿದ್ದಾರೆ ಕಾಲಿವುಡ್​ನ ಖ್ಯಾತ ಹಾಸ್ಯ ನಟರೆಂದು ಗುರುತಿಸಿಕೊಂಡಿದ್ದ ಮೋಹನ್​. ಇಂದು ಅವರು  ಬೀದಿ ಬದಿಯಲ್ಲಿ ಹೆಣವಾಗಿ ಸಿಕ್ಕಿದ್ದಾರೆ!

ಹೌದು. ನಟ ಕಮಲ್‌ ಹಾಸನ್‌ ಸೇರಿದಂತೆ ಹಲವು ಖ್ಯಾತನಾಮರ ಜೊತೆ ತಮಿಳು ಚಿತ್ರಗಳಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದವರು ಮೋಹನ್ (Mohan)​.  80- 90ರ ದಶಕದಲ್ಲಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದ ನಟ ಇವರು. 1989ರಲ್ಲಿ ಕಮಲ್‌ ಹಾಸನ್‌ (Kamal Hassan) ನಾಯಕನಾಗಿ ನಟಿಸಿದ್ದ ಅಪೂರ್ವ ಸಗೊಧರ್ಗಳ್‌ ಚಿತ್ರದ ಮೂಲಕ ಕಾಲಿವುಡ್‌ ಪ್ರವೇಶಿಸಿದ ಮೋಹನ್‌, ಆ ಚಿತ್ರದಲ್ಲಿ ಕಮಲ್‌ ಹಾಸನ್‌ ಅವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅಭಿಸಾಯ ಮಣಿತರ್ಗಳ್‌. ನಾನ್‌ ಕಡುವುಳ್‌ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಹಾಸ್ಯಕ್ಕೆ ಮನಸೋಲದವರೇ ಇಲ್ಲವೇನೋ. ಕೆಲವು ಒಳ್ಳೊಳ್ಳೆ ಚಿತ್ರಗಳನ್ನೂ ನೀಡಿದ್ದರು. 

Tap to resize

Latest Videos

ಶಾಲೆಗೂ ಹೋಗಿಲ್ಲ, ಹಿಂದಿಯೂ ಬರೋಲ್ಲ: ಹೃತಿಕ್ ರೋಷನ್ ಅಪ್ಪನ ಅಚ್ಚರಿ ಹೇಳಿಕೆ!

ಬಾಲಾ ನಿರ್ದೇಶನದ ನಾನ್​ ಕಡವುಳ್​ ಸಿನಿಮಾ 2009ರಲ್ಲಿ ತೆರೆ ಕಂಡಿತ್ತು. ಇದು ಬ್ಲಾಕ್​ ಬಸ್ಟರ್​ ಎಂದೂ ಸಾಬೀತು ಮಾಡಿತ್ತು. ಆದರೆ ಇದರ ಬಳಿಕ ಅವರಿಗೆ ಅದೃಷ್ಟ  ಕೈಹಿಡಿರಲಿಲ್ಲ. ಒಂದರ ಮೇಲೊಂದರಂತೆ ಚಿತ್ರ ಹಳ್ಳಹಿಡಿದವು. ಅವಕಾಶಗಳೇ ಸಿಗಲಿಲ್ಲ. ಚಿತ್ರರಂಗವನ್ನೇ ಆಶ್ರಯಿಸಿಕೊಂಡಿದ್ದ ಮೋಹನ್​ ಅವರು ಬೇರೆ ವೃತ್ತಿಯ ಕಡೆಗೂ ಮುಖ ಮಾಡಲೇ ಇಲ್ಲ. ಅನಿವಾರ್ಯವಾಗಿ ಅವರು ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುವ ಸ್ಥಿತಿ ಬಂದಿತ್ತು. ಕೆಲ ವರ್ಷ ಭಿಕ್ಷೆ ಬೇಡುತ್ತಲೇ ಇದ್ದರೂ ಚಿತ್ರರಂಗದವರ್ಯಾರೂ ಅವರ ನೆರವಿಗೆ ಬಂದಿರಲಿಲ್ಲ. ಸಿನಿಮಾದಲ್ಲಿ ಸಿಗದ ಅವಕಾಶದಿಂದಾಗಿ   ಹುಟ್ಟೂರು ತಿರುಪರಂಕುಂದ್ರಮ್‌ಗೆ ಮರಳಿದ್ದರು. ಅಲ್ಲಿಯೇ ಭಿಕ್ಷೆ ಬೇಡುತ್ತಿದ್ದರು ಎಂದು ಹೇಳಲಾಗುತ್ತಿದೆ.
 
 ಇದೀಗ ಅವರು, ತಮಿಳುನಾಡಿನ ಮಧುರೈನ (Madhurai) ತಿರುಪರಂಕುಂದ್ರಮ್‌ ಬಳಿಯ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರಿಗೆ 60 ವರ್ಷ ವಯಸ್ಸಾಗಿತ್ತು. ಪತ್ನಿ   10 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಒಂಟಿಯಾಗಿ ಬದುಕುವ ಅನಿವಾರ್ಯತೆ ಎದುರಾಗಿತ್ತು. ಒಂದೆಡೆ ಅವಕಾಶಗಳಿಂದ ವಂಚಿತರಾಗಿ, ಇನ್ನೊಂದೆಡೆ ಒಂಟಿ ಬಾಳು.. ಆದರೂ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅವರು ಈಗ ಅನಾಥವಾಗಿ ಕೊನೆಯುಸಿರೆಳೆದಿದ್ದಾರೆ. ಆರಂಭದಲ್ಲಿ ನಟ ಎಂಬ ಗುರುತೂ ಸಿಕ್ಕಿರಲಿಲ್ಲ. ಬಳಿಕ ಗುರುತು ಪತ್ತೆಯಾಗಿದೆ. ಕಲಾವಿದನ ನಿಧನಕ್ಕೆ ಹಲವರು ಈಗ ಸಂತಾಪ ಸೂಚಿಸಿದ್ದಾರೆ. 

ಗುಟ್ಟಾಗಿ ಮದ್ವೆಯಾದ್ರಂತೆ ನಟಿ ರಶ್ಮಿಕಾ ಮಂದಣ್ಣ! ಹುಡುಗನ ಬಗ್ಗೆ ರಿವೀಲ್​ ಮಾಡಿದ ನಟಿ

click me!