ಟಾಲಿವುಡ್ ಬಾಹುಬಲಿ ನಟ ಪ್ರಭಾಸ್ ಇನ್ಸ್‌ಟಾಗ್ರಾಮ್‌ನಲ್ಲಿ ಕುತೂಹಲದ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ತುಂಬಾ ವಿಶೇಷವಾಗಿರೋರು ಬರ್ತಾರೆ ಎಂದು ಸುಳಿವು ನೀಡುವ ಪೋಸ್ಟ್‌ಅನ್ನು ಅವರು ಹಂಚಿಕೊಂಡಿದ್ದಾರೆ.
ತೆಲುಗು ಸೂಪರ್‌ಸ್ಟಾರ್ ಪ್ರಭಾಸ್ ಇನ್ಸ್‌ಟಾಗ್ರಾಮ್‌ನಲ್ಲಿ ಕುತೂಹಲದ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಮೇ.17 ರಂದು ಅವರು ಇನ್ಸ್‌ಟಾಗ್ರಾಮ್ ಸ್ಟೋರೀಸ್ ಮೂಲಕ ಕ್ರಿಪ್ಟಿಕ್ ನೋಟ್‌ಅನ್ನು ಹಂಚಿಕೊಂಡಿದ್ದು, ತಮ್ಮ ಜೀವನದಲ್ಲಿ ವಿಶೇಷವಾಗಿರೋರು ಬರ್ತಾರೆ ಅನ್ನೋ ಸುಳಿವನ್ನೂ ಅವರು ನೀಡಿದ್ದಾರೆ. ಅದರೊಂದಿಗೆ ತಮ್ಮ ಅಭಿಮಾನಿಗಳಿಗೂ ಸರ್ಪ್ರೈಸ್ ನೀಡಿರುವ ಪ್ರಭಾಸ್, ತಾವು ಅದನ್ನು ತಿಳಿಸುವವರೆಗೂ ನೀವು ಅದನ್ನು ಅಂದಾಜು ಮಾಡುತ್ತಲೇ ಇರಿ ಎಂದೂ ಬರೆದುಕೊಂಡಿದ್ದಾರೆ. ಅವರ ಬಹು ನಿರೀಕ್ಷಿತ ಚಿತ್ರ 'ಕಲ್ಕಿ: 2898 AD' ಬಿಡುಗಡೆಗೆ ಮುಂಚಿತವಾಗಿ, ಪ್ರಭಾಸ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, "ಡಾರ್ಲಿಂಗ್ಸ್!! ಅಂತಿಮವಾಗಿ ಒಬ್ಬರು ನಮ್ಮ ಜೀವನದಲ್ಲಿ (ಸ್ಮೈಲಿ ಎಮೋಜಿ) ಪ್ರವೇಶಿಸಲಿದ್ದಾರೆ (ಸ್ಮೈಲಿ ಎಮೋಜಿ). ದಯವಿಟ್ಟು ನಿರೀಕ್ಷಿಸಿ (sic)' ಎಂದು ಬರೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ, 44 ವರ್ಷದ ನಟ, ತಮ್ಮ ಮುಂಬರುವ ಚಿತ್ರದ ಪ್ರಮೋಷನ್ ಭಾಗವಾಗಿ ಏನಾದರೂ ಘೋಷಣೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. Kalki: 2898 AD ಸಿನಿಮಾ ಜೂನ್ 27ರಂದು ಬಿಡುಗಡೆಗೆ ಸಿದ್ಧವಾಗಿದೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯ ವೇಳೆ ಪೀರಿಯಾಡಿಕ್ ಡ್ರಾಮಾದ ನಿರ್ದೇಶಕ ನಾಗ್ ಅಶ್ವಿನ್ ಈ ಚಿತ್ರಕ್ಕೆ ಕಲ್ಕಿ 2898 ಎಡಿ ಎನ್ನು ಹೆಸರನ್ನು ಇಟ್ಟಿದ್ದೇಕೆ ಎನ್ನುವುದನ್ನು ತಿಳಿಸಿದ್ದರು. ನಮ್ಮ ಸಿನಿಮಾ ಮಹಾಭಾರತದಲ್ಲಿ ಆರಂಭವಾಗಿ 2898 ಎಡಿಯಲ್ಲಿ ಕೊನೆಗೊಳ್ಳುತ್ತದೆ. ಅದೇ ಕಾರಣಕ್ಕಾಗಿ ಸಿನಿಮಾಗೆ ಕಲ್ಕಿ 2898 ಎಡಿ ಎನ್ನುವ ಹೆಸರನ್ನು ಇಟ್ಟಿದ್ದೇವೆ. ಇದು 6 ಸಾವಿರ ವರ್ಷಗಳ ಸುದೀರ್ಘ ಸಮಯ ಎಂದು ಅವರು ತಿಳಿಸಿದ್ದಾರೆ.
ಕಣ್ಣಪ್ಪ ಚಿತ್ರಕ್ಕೆ ಬಂತು ಭರ್ಜರಿ 'ಬಾಹುಬಲಿ' ಬಲ; ವಿಶೇಷ ಪಾತ್ರದಲ್ಲಿ ಡಾರ್ಲಿಂಗ್ ಪ್ರಭಾಸ್!
ಇನ್ನೊಂದೆಡೆ ಫ್ಯಾನ್ಸ್ ಗೆ ಪ್ರಭಾಸ್ ಗುಡ್ ನ್ಯೂಸ್ ಕೊಟ್ರಾ ಎನ್ನುವ ಮಾತೂ ಇದೆ. 44 ವರ್ಷವಾಗಿದ್ದರೂ ಸ್ಟಿಲ್ ಬ್ಯಾಚುಲರ್ ಆಗಿರುವ ಪ್ರಭಾಸ್ ಈ ಪೋಸ್ಟ್ ಮೂಲಕ ಮದ್ವೆ ಸೀಕ್ರೆಟ್‌ಅನ್ನು ತಿಳಿಸ್ತಾರಾ ಎನ್ನುವ ಅನುಮಾನಗಳೂ ಎದ್ದಿವೆ. ಡಾರ್ಲಿಂಗ್ಸ್..ಬಹಳ ವಿಶೇಷವಾದ ಯಾರೋ ಒಬ್ರು ನಮ್ಮ ಜೀವನಕ್ಕೆ ಆಗಮಿಸಲಿದ್ದಾರೆ ಕಾಯಿರಿ ಅಂತಾ ನಟ ಪೋಸ್ಟ್ ಮಾಡಿದ್ದಾರೆ. ಇದು ಕಲ್ಕಿ ಸಿನಿಮಾದ ಬಗ್ಗೆ ಅಪ್ಡೇಟ್ ಹಾ..? ಮದ್ವೆ ಬಗ್ಗೆನಾ..? ಪ್ರಭಾಸ್ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Baahubali: ಮತ್ತೆ ಶುರುವಾಯ್ತು ಬಾಹುಬಲಿಯ ರಾಜ್ಯಭಾರ! ಮಾಹಿಷ್ಮತಿ ಸಾಮ್ರಾಜ್ಯ ತೋರಿಸುತ್ತಾರೆ ಮೌಳಿ..!