ಈ ವೇದಿಕೆಯಲ್ಲಿ ಭಜನೆಗಳು ವೀಡಿಯೊ ಮತ್ತು ಆಡಿಯೊ ಸ್ವರೂಪಗಳಲ್ಲಿ ಲಭ್ಯವಿರುತ್ತವೆ. ಇದು ಹಿರಿಯ ನಾಗರಿಕರು, ಮಕ್ಕಳು ಮತ್ತು ಯುವಕರಿಗೆ 20 ಕ್ಕೂ ಹೆಚ್ಚು ಪೌರಾಣಿಕ ಶೋಗಳನ್ನು ಹೊಂದಿದೆ.
ನವದೆಹಲಿ (ಮೇ.16): ತನ್ನ ಅಡಲ್ಟ್ ಕಂಟೆಂಟ್‌ಗಳ ಕಾರಣಕ್ಕಾಗಿಯೇ ಸುದ್ದಿಯಲ್ಲಿರುವ ಓವರ್ ದಿ ಟಾಪ್ ಅಂದರೆ ಒಟಿಟಿ ವೇದಿಕೆ ಉಲ್ಲು ಈಗ ಹೊಸ ವಿಚಾರವಾಗಿ ಸುದ್ದಿಯಲ್ಲಿದೆ. ತನ್ನ 18+ ವಿಡಿಯೋ ಕಂಟೆಂಟ್‌ನಿಂದ ಯುವಕರಲ್ಲಿ ಜನಪ್ರಿಯವಾಗಿರುವ ಉಲ್ಲು ಈಗ ಹರಿ ಓಂ ಎನ್ನುವ ಒಟಿಟಿ ವೇದಿಕೆಯನ್ನು ಆರಂಭ ಮಾಡಿದೆ ಎಂದು ಉಲ್ಲು ಕಂಪನಿಯ ಸಿಇಒ ವಿಭು ಅಗರ್ವಾಲ್ ತಿಳಿಸಿದ್ದಾರೆ. ಹರಿ ಓಂ ಒಟಿಟಿಯಲ್ಲಿ ಪೌರಾಣಿಕ ಭಕ್ತಿ ವಿಡಿಯೋ ಕಂಟೆಂಟ್‌ಗಳು ಇರಲಿದೆ ಎಂದು ತಿಳಿಸಿದ್ದಾರೆ. 2024ರ ಜೂನ್‌ನಿಂದ ಈ ಒಟಿಟಿ ಆರಂಭವಾಗಲಿದೆ. ಪೌರಾಣಿಕ ಭಕ್ತಿ ಕಂಟೆಂಟ್ ಎಲ್ಲಾ ವಯೋಮಾನದವರಿಗೂ ಇರಲಿದೆ ಎಂದು ತಿಳಿಸಿದ್ದಾರೆ. ಈ ವೇದಿಕೆಯಲ್ಲಿ ಭಜನೆಗಳು ವೀಡಿಯೊ ಮತ್ತು ಆಡಿಯೊ ಸ್ವರೂಪಗಳಲ್ಲಿ ಲಭ್ಯವಿರುತ್ತವೆ. ಇದು ಹಿರಿಯ ನಾಗರಿಕರು, ಮಕ್ಕಳು ಮತ್ತು ಯುವಕರಿಗೆ 20 ಕ್ಕೂ ಹೆಚ್ಚು ಪೌರಾಣಿಕ ಶೋಗಳನ್ನು ಹೊಂದಿರೋದು ಮಾತ್ರವಲ್ಲದೆ, ಇದು ಪುರಾಣಕ್ಕೆ ಸಂಬಂಧಿಸಿದ ಅನಿಮೇಟೆಡ್ ಸರಣಿಗಳನ್ನು ಸಹ ಹೊಂದಿರುತ್ತದೆ.
“ಭಾರತೀಯರಾಗಿ, ನಮ್ಮ ಮೂಲ, ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಗೌರವವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಭಾರತೀಯ ಪುರಾಣಗಳಲ್ಲಿ ಜನರ ಆಸಕ್ತಿಯನ್ನು ಗುರುತಿಸಿ, ಹರಿ ಓಂ ಅನ್ನು ವಿಶ್ವದಾದ್ಯಂತ ಕುಟುಂಬ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾಗಿದೆ" ಎಂದು ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹರಿ ಓಂ ಅವರ ಸಾಲಿನಲ್ಲಿ ಶ್ರೀ ತಿರುಪತಿ ಬಾಲಾಜಿ, ಮಾತಾ ಸರಸ್ವತಿ, ಛಾಯಾ ಗ್ರಹ ರಾಹು ಕೇತು, ಜೈ ಜಗನ್ನಾಥ್, ಕೈಕೇಯಿ ಕೇ ರಾಮ್, ಮಾ ಲಕ್ಷ್ಮಿ ಮುಂತಾದ ಹಲವು ಧಾರಾವಾಹಿಗಳು ತಯಾರಾಗುತ್ತಿವೆ. ಈ ಸರಣಿಗಳಲ್ಲಿ ಪ್ರಮುಖ ನಟ-ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ.
ಬಟ್ಟೆ ಬಿಚ್ಚಲು ಬೆದರಿಸಿದ: ಉಲ್ಲು ಆ್ಯಪ್ CEO ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
ಈ ಫೆಬ್ರವರಿಯಲ್ಲಿ ಉಲ್ಲು ಡಿಜಿಟಲ್ ಐಪಿಒ ಮೂಲಕ ನಿಧಿ ಸಂಗ್ರಹಿಸಲು ಸೆಬಿಗೆ ಅರ್ಜಿ ಸಲ್ಲಿಸಿತ್ತು. ಅದೇ ಸಮಯದಲ್ಲಿ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಸೆಬಿ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ದೂರುಗಳ ನಂತರ ಉಲ್ಲು ವಿರುದ್ಧ ತನಿಖೆಯನ್ನು ಪ್ರಾರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ಬೆನ್ನಲ್ಲಿಯೇ ಹೊಸ ಭಕ್ತಿ ಒಟಿಟಿ ವೇದಿಕೆಯನ್ನು ಉಲ್ಲು ಆರಂಭ ಮಾಡಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ವಯಸ್ಕ ಕಂಟೆಂಟ್ ನೀಡುವ ಒಟಿಟಿಗಳನ್ನು ನಿಷೇಧ ಮಾಡಿದೆ. ಆದರೆ, ಇದರಲ್ಲಿ ಉಲ್ಲು ಸೇರಿರಲಿಲ್ಲ.
'ಹಾಸನದಲ್ಲಿ ಹುಡುಗ್ರು ಸಿಕ್ಕಾಪಟ್ಟೆ ರೇಗಿಸ್ತ್ರಿದ್ರು, ಪ್ರಪೋಸ್ ಯಾರೂ ಮಾಡಿರ್ಲಿಲ್ಲ': ಗಿಚ್ಚಿ ಗಿಲಿಗಿಲಿ ಜಾಹ್ನವಿ