ವೈರಲ್ ಆಗ್ತಿದೆ ಪುನೀತ್, ಶಂಕರ್‌ನಾಗ್‌ ಅಭಿಮಾನಿಯ ಲಕ್ಸುರಿ ಆಟೋ

Published : Jun 08, 2023, 02:06 PM ISTUpdated : Jun 08, 2023, 03:20 PM IST
ವೈರಲ್ ಆಗ್ತಿದೆ ಪುನೀತ್,  ಶಂಕರ್‌ನಾಗ್‌ ಅಭಿಮಾನಿಯ ಲಕ್ಸುರಿ ಆಟೋ

ಸಾರಾಂಶ

ಬೆಂಗಳೂರಿನ ಈ ಆಟೋವನ್ನು ನೋಡಿದರೆ ನೀವು ಅಚ್ಚರಿ ಪಡದೇ ಇರುವುದಿಲ್ಲ. ಏಕೆಂದರೆ ಈ ಆಟೋ ಯಾವುದೇ ಐಷಾರಾಮಿ ಕಾರಿಗೂ ಕಡಿಮೆ ಇಲ್ಲ...

ಬೆಂಗಳೂರು: ಸಾಮಾನ್ಯವಾಗಿ ಆಟೋ ಎಂದರೆ  ಮೂರು ಜನ ಆರಾಮವಾಗಿ ಕುಳಿತು ಪ್ರಯಾಣಿಸುವ ವಾಹನ, ಭಾರತದ ಮಹಾನಗರಗಳಲ್ಲಿ ದೂರ ಹಾಗೂ ಸಮೀಪದ ಸ್ಥಳಗಳಿಗೆ ಆರಾಮವಾಗಿ ತೆರಳಲು, ಈ ಆಟೋ ಜನರಿಗೆ ನೆರವಾಗುತ್ತದೆ. ಇಂತಹ ಆಟೋದಲ್ಲಿ ಕುಳಿತುಕೊಳ್ಳಲು ಸ್ವಲ್ಪ ಜಾಗ ಬಿಟ್ಟರೆ ಬೇರೇನೂ ಇರುವುದಿಲ್ಲ. ಗಾಳಿ ಮಳೆಯ ಮಧ್ಯೆ ನೀವು ಈ ಆಟೋದಲ್ಲಿ ಪ್ರಯಾಣಿಸುತ್ತಿರೆಂದರೆ ನೀವು ಸಂಪೂರ್ಣ ಒದ್ದೆಯಾಗುವುದು ಕೂಡ ಪಕ್ಕಾ . ಆದರೆ ಬೆಂಗಳೂರಿನ ಈ ಆಟೋವನ್ನು ನೋಡಿದರೆ ನೀವು ಅಚ್ಚರಿ ಪಡದೇ ಇರುವುದಿಲ್ಲ. ಏಕೆಂದರೆ ಈ ಆಟೋ ಯಾವುದೇ ಐಷಾರಾಮಿ ಕಾರಿಗೂ ಕಡಿಮೆ ಇಲ್ಲ...

ಹೌದು ಲ್ಯಾಪ್‌ಟಾಪ್ ಇಡಬಲ್ಲಂತಹ ಅಥವಾ ಊಟ ಮಾಡಬಹುದಾದಂತಹ ಟ್ರೇ ಟೇಬಲ್, ಎಲ್‌ಇಡಿ ಲೈಟ್ಸ್, ಗ್ಲಾಸ್‌ನಿಂದ ಕೂಡಿದ ಡೋರ್, ತಣ್ಣನೆ ಗಾಳಿ ಬರಲು ಫ್ಯಾನ್ ಸೇರಿದಂತೆ ಎಲ್ಲಾ ಐಷಾರಾಮಿ ವ್ಯವಸ್ಥೆ  ಈ ಆಟೋದಲ್ಲಿದ್ದು, ನಿಮಗೊಂತರ ಹೊಸ ಲೋಕದಂತೆ ಭಾಸವಾಗುವುದರಲ್ಲಿ ಅನುಮಾನವೇ ಇಲ್ಲ.  ಈ ಆಟೋ ಚಾಲಕ ಕನ್ನಡದ ದಿವಂಗತ ನಟರಾದ ಪುನೀತ್ ರಾಜ್‌ಕುಮಾರ್ ಹಾಗೂ ಶಂಕರ್‌ನಾಗ್ ಅವರ ಅಭಿಮಾನಿಯಾಗಿದ್ದು, ಅವರ ಸಿನಿಮಾಗಳ ಕಲರ್‌ಫುಲ್‌ ಆದ ಪೋಸ್ಟರ್‌ಗಳು ಕೂಡ ಈ ಆಟೋ ಹಿಂದೆ ಪ್ಲೇ ಆಗುತ್ತಿದೆ. ಅಲ್ಲದೇ ಇದೇ ಭಾಗದಲ್ಲಿ ಸಂಚಾರ ನಿಯಮ ಉಲ್ಲಂಘಿಸದಂತೆ ಸಂದೇಶವನ್ನು ನೀಡಲಾಗುತ್ತಿದೆ. 

ಮಿಸ್‌ ಆಗಿ 10 ಸಾವಿರ ರೂಪಾಯಿ ಕಳಿಸಿದ ಪ್ರಯಾಣಿಕ, ವಾಪಾಸ್‌ ಕಳಿಸಿದ ಆಟೋ ಚಾಲಕ!

ಈ ವಿಡಿಯೋವನ್ನು ಅಜಿತ್ ಸಹನಿ (Ajith Sahani) ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ನೀವು ಎಂದಾದರೂ ಇಂತಹ ಸುಂದರವಾದ ಆಟೋದಲ್ಲಿ ಪ್ರಯಾಣಿಸಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ. 

 

ವಿಡಿಯೋದಲ್ಲಿ ಈ ಆಟೋದ ಸಂಪೂರ್ಣ ಚಿತ್ರಣವಿದ್ದು, ನೋಡಿದವರೆಲ್ಲರಿಗೂ ಒಮ್ಮೆ ಈ ಆಟೋದಲ್ಲಿ ಪ್ರಯಾಣಿಸಬೇಕಾಪ್ಪ ಎಂಬ ಆಸೆ ಮೂಡುತ್ತದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಈ ಆಟೋ ಚಾಲಕನ ವಿಭಿನ್ನ ಆಟೋ ಅಭಿರುಚಿಗೆ ತಲೆಬಾಗಿದ್ದಾರೆ. ಒಬ್ಬರು ಬಳಕೆದಾರರು ನಾನು ಇಂತಹ ಆಟೋನ್ನು ಶ್ರೀಲಂಕಾದಲ್ಲಿ ನೋಡಿದ್ದೆ ಬಹಳ ಇಷ್ಟವಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಸ್ಮಾರ್ಟ್‌ಸಿಟಿ ಬೆಂಗಳೂರಿನಲ್ಲಿರುವ ಹೈಟೆಕ್ ಆಟೋ ಇದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಆದರೆ ಮತ್ತೊಬ್ಬರು ಆಟೋ ಚಾಲಕರ ಮೇಲೆ ತಮ್ಮ ಅಸಮಾಧಾನ ಹೊರ ಹಾಕಿದ್ದು, ಬೇಕಾದಾಗ ಬರಲ್ಲ, ಸಮಂಜಸವಾದ ದರ ಹೇಳುವುದಿಲ್ಲ  ಆಪ್‌ಗಳಲ್ಲಿ ರೈಡಿಂಗ್ ಅನ್ನು ಸ್ವೀಕರಿಸುವುದಿಲ್ಲ, ಮತ್ತೆ ಹೇಗೆ ನಾವು ಆಟೋಗಳಲ್ಲಿ ಪ್ರಯಾಣಿಸುವುದು ಎಂದು ಕೇಳಿದ್ದಾರೆ. ಕೆಲ ದಿನಗಳ ಹಿಂದೆ ಆಟೋ ರಿಕ್ಷಾಗೆ ಏರ್ ಕೂಲರ್ ಅಳವಡಿಸಿದಂತಹ ದೃಶ್ಯವೊಂದು ವೈರಲ್ ಆಗಿತ್ತು. 

Electric Vehicle 197 ಕಿ.ಮೀ ಮೈಲೇಜ್, 3 ಲಕ್ಷ ರೂಪಾಯಿ, ಮೊಂಟ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?