ಟೆಲಿವಿಷನ್‌ ಕಲ್ಚರ್‌ ಆಂಡ್ ಸ್ಫೋರ್ಟ್ಸ್‌ ಕ್ಲಬ್‌ನಲ್ಲಿ ಅವ್ಯವಹಾರ; ಕಿರುತೆರೆ ನಟ ರವಿ ಕಿರಣ್‌ ಮೇಲೆ ಆರೋಪ!

By Vaishnavi ChandrashekarFirst Published Feb 13, 2024, 11:57 AM IST
Highlights

ಟೆಲಿವಿಷನ್ ಕಲ್ಚರಲ್ ಆ್ಯಂಡ್ ​ಸ್ಪೋರ್ಟ್ಸ್‌ ಕ್ಲಬ್‌ನ ಕಾರ್ಯದರ್ಶಿ ಆಗಿರುವ ಕಿರುತೆರೆ ನಟ ರವಿ ಕಿರಣ್. ಏನಿದು ಆರೋಪ? 

ಟೆಲಿವಿಷನ್‌ ಕಲ್ಚರ್‌ ಆಂಡ್ ಸ್ಫೋರ್ಟ್ಸ್‌ ಕ್ಲಬ್‌ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಖ್ಯಾತ ಕಿರುತೆರೆ ನಟ ರವಿ ಕಿರಣ್ ವಿರುದ್ಧ ಆರೋಪ ಕೇಳಿ ಬರುತ್ತಿದೆ. ಉತ್ತರಹಳ್ಳಿ ಬಿಎಚ್‌ಸಿಎಸ್‌ ಲೇಔಟ್‌ನಲ್ಲಿರುವ ಈ ಕ್ಲಬ್ ಜಿಎಸ್‌ಟಿ, ಬಿಬಿಎಂಪಿ ಟ್ಯಾಕ್ಸ್‌ ಸೇರಿದಂತೆ ಹಲವು ತೆರಿಗೆ ಪಾವತಿ ಮಾಡಿಲ್ಲ ಎನ್ನಲಾಗಿದೆ. 

ಹೌದು! ಸರ್ಕಾರ ಕೊಟ್ಟ ಅನುದಾನದಲ್ಲಿ ನಿರ್ಮಾಣವಾದ ಈ ಕ್ಲಬ್‌ಗೆ ಸಂಬಂಧಿಸಿದಂತೆ ಜಿಎಸ್‌ಟಿ, ಬಿಬಿಎಂಪಿ ಟ್ಯಾಕ್ಸ್‌ ಸೇರಿದಂತೆ ಯಾವುದೇ ರೀತಿಯಲ್ಲಿ ತೆರಿಗೆ ಕಟ್ಟಿಲ್ಲ. ಅಲ್ಲದೆ ಕ್ಲಬ್‌ನಲ್ಲಿರುವ ಸದಸ್ಯರಿಂದಲೇ ಹಣವನ್ನು ವಸೂಲಿ ಮಾಡಿ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಟಿಸಿಎಸ್‌ಸಿ ಕ್ಲಬ್‌ನಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ದುರ್ನಡತೆಯ ದೂರು ಬಂದಿರುವ ಕಾರಣ ನಟ ರವಿ ಕಿರಣ್ ಅವರನ್ನು ಕಾರ್ಯದರ್ಶಿ ಸ್ಥಾನದಿಂದ ಅಮಾನತು ಗೊಳ್ಳಿಸಲಾಗಿದೆ. ಈ ವಿಚಾರದ ಬಗ್ಗೆ ತನಿಖೆ ಮಾಡಬೇಕು ಎಂದು ಡಿಅರ್‌ ಕಚೇರಿಗೆ ದೂರು ನೀಡಲಾಗಿದೆ. 

ಕೊನೆಗೂ ಸಿಕ್ಕ ಒರಿಜಿನಲ್​ ರಾವುಲ್ಲಾ! ಬೆಳ್ಳುಳ್ಳಿ ಕಬಾಬ್​ ಓನರ್​ ಜೊತೆ ಕರಿಮಣಿ ಮಾಲೀಕನ ಎಂಟ್ರಿ!

ಕಳೆದ ಶನಿವಾರ ಬೆಳಗ್ಗೆ 8 ಗಂಟೆಗೆ ಕ್ಲಬ್‌ನ ಕಚೇರಿಯ ತಿಜೋರೀಯಲ್ಲಿ ಇಟ್ಟಿದ್ದ 6 ಲಕ್ಷ 70 ಸಾವಿರ ರೂಪಾಯಿ ಅಧ್ಯಕ್ಷರು ಮತ್ತು ಸಮಿತಿಯ ಯಾವ ಸದಸ್ಯರಿಗೆ ತಿಳಿಸಿದೆ ಎತ್ತಿಕೊಂಡು ಹೋಗಿದ್ದಾರಂತೆ. ಅಲ್ಲಿದ್ದ ಒಂದಿಷ್ಟು ದಾಖಲೆಗಳನ್ನೂ ಸಹ ಎತ್ತಿಕೊಂಡು ಹೋಗಿರುವುದರಿಂದ ಈಗ ಪ್ರಕಟಣಾ ಪೋಲಿಸ್ ಠಾಣೆ ಹತ್ತಿದೆ. ಈ ಘಟನೆ ಬಗ್ಗೆ ಸುಬ್ರಹ್ಮಣ್ಯ ನಗರ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಆರಂಭವಾಗಿದೆ. 

click me!