'ಮಿಲ್ಕಿ ಬ್ಯೂಟಿ' ಟೈಟಲ್‌ ಬಗ್ಗೆ ತಮನ್ನಾ ಹೇಳಿದ್ದೇನು? ಬೇಸರವೇ ಖುಷಿಯೇ..? ಹೊರಬಿತ್ತು...

Published : Apr 18, 2025, 04:53 PM ISTUpdated : Apr 18, 2025, 05:10 PM IST
'ಮಿಲ್ಕಿ ಬ್ಯೂಟಿ' ಟೈಟಲ್‌ ಬಗ್ಗೆ ತಮನ್ನಾ ಹೇಳಿದ್ದೇನು? ಬೇಸರವೇ ಖುಷಿಯೇ..? ಹೊರಬಿತ್ತು...

ಸಾರಾಂಶ

ಅಶೋಕ್ ತೇಜ ನಿರ್ದೇಶನದ 'ಒಡೆಲಾ 2' ಸಿನಿಮಾ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸಬ್ಜೆಕ್ಟ್ ಆಗಿದೆ. ಈ ಸಿನಿಮಾದ ಬಗ್ಗೆ ನಿರೀಕ್ಷೆ ಮೂಡಲು ಕಾರಣ ಒಂದು ಹೊಸತನದ ಸಬ್ಜೆಕ್ಟ್, ಇನ್ನೊಂದು ತಮನ್ನಾ ಭಾಟಿಯಾ..

ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಸದ್ಯ ತಮ್ಮ 'ಒಡೆಲಾ 2' ಸಿನಿಮಾದ ಪ್ರಚಾರಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಅಶೋಕ್ ತೇಜಾ ನಿರ್ದೇಶನದ ಈ ಸಿನಿಮಾ ನಿನ್ನೆ, ಅಂದರೆ 17 ಏಪ್ರಿಲ್ 2025ರಂದು ಬಿಡಗಡೆ ಆಗಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದು, ಈ ಚಿತ್ರವು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಫಲಿತಾಂಶಕ್ಕಾಗಿ ಸದ್ಯ ಕಾಯಲಾಗುತ್ತಿದೆ. ಈಗ ಸಿನಿಮಾ ಪ್ರಚಾರಕ್ಕಿಂತ ಹೆಚ್ಚಾಗಿ, ಪ್ರಚಾರದ ವೇಳೆ ನಟಿ ತಮನ್ನಾ ಅವರು ಮಾತನ್ನಾಡಿರುವ ಸಂಗತಿ ವೈರಲ್ ಆಗುತ್ತಿದೆ. ಹಾಗಿದ್ದರೆ ಅದೇನು?

ಹೌದು, ನಟಿ ತಮನ್ನಾ ಅವರಿಗೆ ಮಾಧ್ಯಮಗಳು 'ಮಿಲ್ಕಿ ಬ್ಯೂಟಿ' ಎಂಬ ಅಲಂಕಾರ ಕೊಟ್ಟು ಕರೆಯುತ್ತಾರೆ. ಆ ಬಗ್ಗೆ ಹೇಳಿಕೊಂಡಿರುವ ತಮನ್ನಾ ಅವರು 'ನಿಜವಾಗಿ ಹೇಳಬೇಕು ಎಂದರೆ, ನನಗೆ ನನ್ನ ಆಪ್ತರು ಹಾಗಂತ ಕರೆಯುತ್ತಿದ್ದರು. ಅದನ್ನು ಮೀಡಿಯಾದವರು ಬಳಸಿಕೊಂಡು ಹಾಗೇ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನನಗೆ ನಿಜವಾಗಿಯೂ ಗೊತ್ತಿಲ್ಲ ಯಾಕೆ ಹಾಗೆ ಕರೆಯುತ್ತಾರೆ ಎಂದು.. ಏಕೆಂದರೆ, ಯಾರೂ ಆ ಬಗ್ಗೆ ನನ್ನ ಅಭಿಪ್ರಾಯ ಕೇಳಿಯೇ ಇಲ್ಲ. ಅದರೆ, ಹಾಗಂತ ಈಗ ಎಲ್ಲರೂ ಕರೆಯುತ್ತಾರೆ. ನನಗೆ ಆ ಬಗ್ಗೆ ಬೇಸರವೂ ಇಲ್ಲ, ಖುಷಿಯೂ ಇಲ್ಲ. 

ಶ್ರೀದೇವಿಯನ್ನೂ ಬಿಟ್ಟಿರಲಿಲ್ಲ ರವಿಚಂದ್ರನ್.. 'ಚೆಲುವೆ'ಗೇ ಗಾಳ ಹಾಕಿದ್ದರು ಕ್ರೇಜಿ ಸ್ಟಾರ್..!

ಆದರೆ, ನಾನು ನನ್ನ ಸೌಂದರ್ಯಕ್ಕೆ, ಹಾಲಿನಂತಹ ಬಿಳಿ ಬಣ್ಣಕ್ಕೆ ಮಾತ್ರ ಸೀಮಿತ ಆಗಬಾರದು. ನನ್ನ ಪ್ರತಿಭೆ ಕೂಡ ಬೆಳಕಿಗೆ ಬರಬೇಕು. ನಾನು ಇಷ್ಟು ಸುದೀರ್ಘ ಅವಧಿಯಿಂದ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ, ನನಗೆ ಮಿಲ್ಕಿ ಬ್ಯೂಟಿ ಎಂದು ಹೆಸರಿಸಿ, ಒಳ್ಳೆಯ ಪಾತ್ರವೇ ಸಿಗಲಿಲ್ಲ ಎನ್ನುವಂತಾಗಿದೆ. ಈ ಬಗ್ಗೆ ನನಗೆ ಬೇಸರವೂ ಇದೆ. ಆದರೆ, ಇನ್ಮುಂದೆ ಹಾಗಾಗಬಾರದು. ನಂಗೆ ಮಿಲ್ಕಿ ಬ್ಯೂಟಿ ಎನ್ನುವ ಜೊತೆಗೆ ಉತ್ತಮ ಪಾತ್ರವೂ ಸಿಗಬೇಕಿದೆ' ಎಂದಿದ್ದಾರೆ ಹಾಲಿನ ಬಣ್ಣದ ಹುಡುಗಿ ತಮನ್ನಾ ಭಾಟಿಯಾ. ಅವರ ಮಾತಿನಲ್ಲಿ ಸುಳ್ಳೇನಿದೆ, ಸತ್ಯವೇ ಎಲ್ಲವೂ ಎನ್ನಬಹುದು ತಾನೇ?

ಅಶೋಕ್ ತೇಜ ನಿರ್ದೇಶನದ 'ಒಡೆಲಾ 2' ಸಿನಿಮಾ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸಬ್ಜೆಕ್ಟ್ ಆಗಿದೆ. ಈ ಸಿನಿಮಾದ ಬಗ್ಗೆ ನಿರೀಕ್ಷೆ ಮೂಡಲು ಕಾರಣ ಒಂದು ಹೊಸತನದ ಸಬ್ಜೆಕ್ಟ್, ಇನ್ನೊಂದು ತಮನ್ನಾ ಭಾಟಿಯಾ ಅವರೇ ಮುಖ್ಯ ಪಾತ್ರದಲ್ಲಿ ನಟಿಸಿರೋದು. ಈ ಚಿತ್ರವು ನಿನ್ನೆ ಬಿಡುಗಡೆ ಆಗಿರುವುದರಿಂದ, ಇಂದೇ ಚಿತ್ರದ ಫಲಿತಾಂಶದ ಬಗ್ಗೆ ಹೇಳಲಾಗದು. ಆದರೆ, ಸಿನಿಮಾ ಗೆದ್ದರೆ ನಟಿ ತಮನ್ನಾ ಭಾಟಿಯಾ ಅವರಿಗೆ ಭವಿಷ್ಯದಲ್ಲಿ ಮತ್ತಷ್ಟು ಅವಕಾಶಗಳು ಬರೋದು ನಿಶ್ಚಿತ ಎನ್ನಬಹುದು. ಏನಾಗುತ್ತೋ ಏನೋ, ಕಾದು ನೋಡಬೇಕಿದೆ. 'ಕಾಲಾಯ ತಸ್ಮೈ ನಮಃ' ಎನ್ನದೇ ಬೇರೆ ದಾರಿಯಿಲ್ಲ. 

ಊರ್ಮಿಳಾ ಹೆಸರನ್ನು ಮಗಳಿಗೆ ಇಟ್ಟಿದ್ದೇಕೆ ಶ್ರೀದೇವಿ..? ಆದ್ರೆ 'ತಾಯಿಗೆ ತಕ್ಕ ಮಗಳಲ್ಲ' ಅನ್ನೋದ್ಯಾಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌