90ರ ದಶಕದಲ್ಲಿ ಎಆರ್ ರೆಹಮಾನ್ ಹಾಗೂ ಪ್ರಭುದೇವ ದೇಶದ ಸಿನಿ ರಸಿಕರಲ್ಲಿ ಕ್ರೇಜ್ ಹುಟ್ಟಿಸಿದ್ದರು. ದಶಕಗಳ ಕಾಯುವಿಕೆಯ ಬಳಿಕ ಈಗ ಎಆರ್ ರೆಹಮಾನ್ ಹಾಗೂ ಪ್ರಭುದೇವ ಜೊತೆಯಾಗಿ ಸಿನಿಮಾ ಘೋಷಣೆ ಮಾಡಿದ್ದಾರೆ.
ಚೆನ್ನೈ (ಮಾ.22): 90ರ ದಶಕದಲ್ಲಿ ತಮ್ಮ ಸೂಪರ್‌ಹಿಟ್ ಸಿನಿಮಾ ಹಾಗೂ ಹಾಡುಗಳ ಕಾರಣಕ್ಕಾಗಿ ಪ್ರಸಿದ್ಧರಾಗಿದ್ದ ಎಆರ್ ರೆಹಮಾನ್ ಹಾಗೂ ನಟ ಹಾಗೂ ಡಾನ್ಸರ್ ಪ್ರಭುದೇವ ಬರೋಬ್ಬರಿ 25 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಎಆರ್‌ಆರ್‌ಪಿಡಿ6 ಎನ್ನುವ ಹೆಸರಿನ ಸಿನಿಮಾದ ಮೂಲಕ ಪ್ರಭುದೇವ ಹಾಗೂ ಎಆರ್ ರೆಹಮಾನ್ ಒಂದಾಗಿದ್ದಾರೆ. ಮನೋಜ್ ಎಂಎಸ್ ನಿರ್ದೇಶನದ ಈ ಚಿತ್ರದ ಮೊದಲ ಪೋಸ್ಟರ್ ಮಾರ್ಚ್ 22 ರಂದು ರಿಲೀಸ್ ಆಗಿದೆ. ಬಿಹೈಂಡ್‌ವುಡ್ಸ್ ನಿರ್ಮಾಣ ಮಾಡಲಿರುವ ಈ ಚಿತ್ರದಲ್ಲಿ ಯೋಗಿ ಬಾಬು, ಅಜು ವರ್ಗೀಸ್, ಅರ್ಜುನ್ ಅಶೋಕನ್, ಡಾ ಸಂತೋಷ್ ಜಾಕೋಬ್, ಸುಶ್ಮಿತಾ ನಾಯಕ್, ಮೊಟ್ಟ ರಾಜೇಂದ್ರನ್, ಲೊಲ್ಲು ಸಭಾ ಮನೋಹರ್, ಸಿಂಗಂ ಪುಲಿ, ಲೊಲ್ಲು ಸಭಾ ಸ್ವಾಮಿನಾಥನ್ ಮತ್ತು ರೆಡಿನ್ ಕಿಂಗ್ಸ್ಲಿ ಸೇರಿದಂತೆ ಪ್ರಮುಖರ ತಾರಾಂಗಣವಿದೆ.
ನಟ ಪ್ರಭುದೇವ ತಮ್ಮ ಅಧಿಕೃತ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಈ ಸಿನಿಮಾದ ಪೋಸ್ಟರ್‌ಅನ್ನು ಹಂಚಿಕೊಂಡಿದ್ದಾಋಏ. ಅನೂಪ್ ಶೈಲಜಾ ಸಿನಿಮಾದ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಲಿದ್ದು, ರೇಮಂಡ್ ಡೆರಿಕ್ ಕ್ರಿಸ್ಟಾ ಚಿತ್ರಕ್ಕೆ ಸಂಕಲನ ಮಾಡಲಿದ್ದಾರೆ.
ಇನ್ನು ಎಆರ್ ರೆಹಮಾನ್ ಹಾಗೂ ಪ್ರಭುದೇವ ಜೊತೆಯಾಗಿ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಿಗೆ ಎಕ್ಸೈಟ್‌ಮೆಂಟ್ ನೀಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬರು. ಎಂಥಾ ಅದ್ಭುತವಾದ ಅಪ್‌ಡೇಟ್ ಇದು. ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡಬೇಕು ಎಂದು ದಶಕಗಳಿಂದ ಕಾಯುತ್ತಿದ್ದೆ. ಇವರಿಬ್ಬರು ಸೇರಿ ಒಂದು ಸಿನಿಮಾ ಮಾಡಲು ಕಾರಣರಾದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಅಭಿನಂದನೆಗಳು ಎಂದಿದ್ದಾರೆ.
ಗೋ ವಿತ್ ದಿ ಫ್ಲೋ; ಹಲವು ವರ್ಷಗಳ ನಂತರ ಕನ್ನಡಕ್ಕೆ ಮತ್ತೆ ಬಂದ ಪ್ರಭುದೇವ
ರೆಹಮಾನ್ ಹಾಗೂ ಪ್ರಭುದೇವ ಜೊತೆಯಾಗಿ ಮಾಡಿದ್ದ ಮೊದಲ ಸಿನಿಮಾ ಜಂಟಲ್‌ಮೆನ್. ಇದರಲ್ಲಿ ಚಿಕ್ಕು ಬುಕ್ಕು ರೈಲೇ ಎನ್ನುವ ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಅವರು ಕಾಣಿಸಿದ್ದರು. ಅದಾದ ಬಳಿಕ ಕಾದಲನ್‌ನಲ್ಲಿ ಇವರು ಮೊಟ್ಟ ಮೊದಲ ಫುಲ್ ಪ್ರಾಜೆಕ್ಟ್ ಮಾಡಿದ್ದರು. ಇದರಲ್ಲಿ ಪೆಟ್ಟಾಯ್ ರಾಪ್ ಹಾಗೂ ಟೇಕ್ ಇಟ್ ಈಸಿ ಊರ್ವಸಿ ಹಾಡುಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿತ್ತು. ಅದಾದ ಬಳಿಕ ಇವರಿಬ್ಬರೂ ಲವ್ ಬರ್ಡ್ಸ್, ಮಿ. ರೋಮಿಯೋ ಹಾಗೂ ಮಿನ್ಸಾರ ಕಣವು ಚಿತ್ರದಲ್ಲಿ ಜೊತೆಯಾಗಿದ್ದರು. ಈ ಎಲ್ಲಾ ಸಿನಿಮಾಗಳ ಹಾಡುಗಳು ಅದ್ಭುತ ಯಶಸ್ಸು ಕಂಡಿದ್ದವು.
'ಕರಟಕ ದಮನಕ' ನೋಡಲು ಇಲ್ಲಿದೆ ಐದು ಕಾರಣ: ಶಿವಣ್ಣ-ಪ್ರಭುದೇವ ಜುಗಲ್ಬಂಧಿ ಮೇಲೆ ಎಲ್ಲರ ಕಣ್ಣು!