ಯೂಟ್ಯೂಬರ್‌, ಬಿಗ್‌ಬಾಸ್‌ ವಿನ್ನರ್‌ ಎಲ್ವಿಶ್‌ ಯಾದವ್‌ ಬಂಧನ

By Santosh Naik  |  First Published Mar 17, 2024, 3:37 PM IST

ಹಾವಿನ ವಿಷದ ಪ್ರಕರಣದಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ.


ನವದೆಹಲಿ (ಮಾ.17): ಎಲ್ವಿಶ್ ಯಾದವ್ ಬಗ್ಗೆ ದೊಡ್ಡ ಸುದ್ದಿ ವರದಿಯಾಗಿದೆ. ಯೂಟ್ಯೂಬರ್  ಹಾಗೂ ಬಿಗ್‌ ಬಾಸ್‌ ಒಟಿಟಿ ವಿನ್ನರ್‌ ಆಗಿರುವ ಎಲ್ವಿಶ್‌ ಯಾದವ್‌ನನ್ನು ನೋಯ್ಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾವಿನ ವಿಷದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಈತನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ, ನೋಯ್ಡಾ ಪೊಲೀಸರು ಹಾವಿನ ವಿಷದೊಂದಿಗೆ 5 ಜನರನ್ನು ಬಂಧಿಸಿದ್ದರು. ಕಳೆದ ವರ್ಷ, ನೋಯ್ಡಾ ಪೊಲೀಸರು ಸೆಕ್ಟರ್ 39 ರಲ್ಲಿ ಈ ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿದ್ದರು, ಇಂದು ಎಲ್ವಿಶ್ ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಅದರ ಬೆನ್ನಲ್ಲಿಯೇ ಅವರನ್ನು ಬಂಧಿಸಲಾಗಿದೆ. ಸ್ವಲ್ಪ ಸಮಯದ ನಂತರ ಎಲ್ವಿಶ್ ಯಾದವ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ತಮ್ಮ ಪಾರ್ಟಿಯ ಸಮಯದಲ್ಲಿ ಹಾವಿನ ವಿಷವನ್ನು ಅವರು ಬಳಕೆ ಮಾಡಿದ್ದರು ಎನ್ನುವ ದೊಡ್ಡ ಆರೋಪ ಅವರ ಮೇಲಿದೆ.

ಏನಿದು ಪ್ರಕರಣ: ನವೆಂಬರ್ 8 ರಂದು ನೋಯ್ಡಾ ಪೊಲೀಸರು ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಬಳಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಯೂಟ್ಯೂಬರ್ ಎಲ್ವಿಶ್ ಯಾದವ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪೊಲೀಸರು ಐವರನ್ನು ಬಂಧಿಸಿದ್ದರು. ಇದರಲ್ಲಿ ರಾಹುಲ್, ಟಿಟುನಾಥ್, ಜಯಕರನ್, ನಾರಾಯಣ್ ಮತ್ತು ರವಿನಾಥ್ ಸೇರಿದ್ದಾರೆ. ರಾಹುಲ್ ಹೆಸರಿನಲ್ಲಿ 20 ಎಂಎಲ್ ವಿಷ ಪತ್ತೆಯಾಗಿತ್ತು.

Tap to resize

Latest Videos

ನೆತ್ತಿಗೇರಿತಾ ಬಿಗ್​ಬಾಸ್​ ಖ್ಯಾತಿ? ಆಗ ಕಳ್ಳಹಾವು ಸಾಗಾಣಿಕೆ- ಈಗ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗ ಥಳಿತ!
 

ಎಲ್ವಿಶ್ ಯಾದವ್‌ ಹೇಳಿದ್ದೇನು?: ವಿಷಯ ಬೆಳಕಿಗೆ ಬಂದ ನಂತರ, ಎಲ್ವಿಶ್ ತಮ್ಮ ಸ್ಪಷ್ಟೀಕರಣವನ್ನು ನೀಡುವ ವೀಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.  'ಇಂದು ಬೆಳಗ್ಗೆ ಈ ಸುದ್ದಿ ನೋಡಿದೆ. ಎಲ್ವಿಶ್‌ ಯಾದವ್‌ ಡ್ರಗ್‌ ದಂಧೆಯಲ್ಲಿ ತೊಡಗಿದ್ದಾರೆ ಎನ್ನುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದೆ. ಆತನನ್ನು ಬಂಧಿಸಲಾಗಿದೆ ಎನ್ನುವ ಸುದ್ದಿ ಬರುತ್ತದೆ.  ನನ್ನ ವಿರುದ್ಧ ನಡೆಯುತ್ತಿರುವ ಎಲ್ಲಾ ವಿಷಯಗಳನ್ನು ನಾನು ನಿಮಗೆ ಹೇಳುತ್ತೇನೆ. ಅವುಗಳು ಸುಳ್ಳು ಮತ್ತು ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಕುರಿತಾಗಿ ಹೇಳುತ್ತಿರುವ ಯಾವುದೇ ವಿಚಾರ ಕೂಡ ಸತ್ಯವಿಲ್ಲ. ಆರೋಪಗಳಿಂದ ನನ್ನ ಹೆಸರಿಗೆ ಕಳಂಕ ತರಬೇಡಿ. ನಾನು ಯುಪಿ ಪೊಲೀಸರೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ. ಈ ವಿಷಯದಲ್ಲಿ ನನ್ನ ವಿರುದ್ಧದ ಆರೋಪಗಳಲ್ಲಿ 1% ರಷ್ಟು ಸಾಬೀತಾದರೆ, ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ ಎಂದು ನಾನು ಉತ್ತರ ಪ್ರದೇಶ ಪೊಲೀಸ್ ಮತ್ತು ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಿನಂತಿಸಲು ಬಯಸುತ್ತೇನೆ. ಯಾವುದೇ ಪುರಾವೆಗಳಿಲ್ಲದೆ ನನ್ನ ಹೆಸರನ್ನು ಹಾಳುಮಾಡಲು ಪ್ರಯತ್ನಿಸಬೇಡಿ ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ.

ಹಾವಿನ ವಿಷ ಹೀರಿ ಕಿಕ್ಕೇರಿಸಿಕೊಳ್ತಿದ್ರಾ? ಬಿಗ್‌ಬಾಸ್‌ ವಿನ್ನರ್‌ ಆಯೋಜಿಸ್ತಿದ್ದ ರೇವ್ ಪಾರ್ಟಿ: ಐವರ ಬಂಧನ

ಈ ಸಂಪೂರ್ಣ ವಿಷಯದಲ್ಲಿ ಎಲ್ವಿಶ್ ತಾನು ನಿರಪರಾಧಿ ಎಂದು ಘೋಷಿಸಿಕೊಂಡಿದ್ದಾರೆ. ಅವರ ಪ್ರಕಾರ, ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಆದರೆ ಇತ್ತೀಚೆಗೆ ಬಿಡುಗಡೆಯಾದ ಆಡಿಯೋ ಕ್ಲಿಪ್‌ನಲ್ಲಿ ಎಲ್ವಿಶ್ ಹೆಸರು ಬಹಿರಂಗವಾಗಿದೆ. ಆಡಿಯೋದಲ್ಲಿ, ಬಂಧಿತ ಆರೋಪಿ ರಾಹುಲ್ ಯಾದವ್ ಪಿಎಫ್‌ಎ (ಮೇನಕಾ ಗಾಂಧಿಯ ಪೀಪಲ್ಸ್ ಫಾರ್ ಅನಿಮಲ್ಸ್) ಸದಸ್ಯರಿಗೆ ಈ ಡ್ರಗ್ಸ್ ಅನ್ನು ಎಲ್ವಿಶ್ ಪಾರ್ಟಿಗೆ ತಲುಪಿಸಿದ್ದೇನೆ ಎಂದು ಹೇಳಿದ್ದಾನೆ.

click me!