ಆಸ್ಪತ್ರೆಯಲ್ಲಿ ಎಸ್ಪಿಬಿಗೆ ಲಘು ವ್ಯಾಯಾಮ, ದೇಹ ಸ್ಥಿತಿ ಸ್ಥಿರ!

Published : Aug 29, 2020, 09:28 AM ISTUpdated : Aug 29, 2020, 10:14 AM IST
ಆಸ್ಪತ್ರೆಯಲ್ಲಿ ಎಸ್ಪಿಬಿಗೆ ಲಘು ವ್ಯಾಯಾಮ, ದೇಹ ಸ್ಥಿತಿ ಸ್ಥಿರ!

ಸಾರಾಂಶ

ಕೊರೋನಾ ಸೋಂಕಿಗೆ ತುತ್ತಾಗಿರುವ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ| ಆಸ್ಪತ್ರೆಯಲ್ಲಿ ಎಸ್ಪಿಬಿಗೆ ಲಘು ವ್ಯಾಯಾಮ, ದೇಹ ಸ್ಥಿತಿ ಸ್ಥಿರ| ಎಸ್‌ಪಿಬಿ ಅವರನ್ನು ಈಗಲೂ ವೆಂಟಿಲೇಟರ್‌ ಮತ್ತು ಇಎಂಒ ವ್ಯವಸ್ಥೆಯಲ್ಲಿ ಇಟ್ಟು ಚಿಕಿತ್ಸೆ

ಚೆನ್ನೈ(ಆ.29): ಕೊರೋನಾ ಸೋಂಕಿಗೆ ತುತ್ತಾಗಿರುವ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದ್ದು, ದೇಹಕ್ಕೆ ವಿಶ್ರಾಂತಿ ನೀಡುವ ಸಣ್ಣ ಪ್ರಮಾಣದ ದೈಹಿಕ ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಎಂಜಿಎಂ ಆಸ್ಪತ್ರೆ ಶುಕ್ರವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಅಭಿಮಾನಿಗಳ ಹಾರೈಕೆ: ಆಸ್ಪತ್ರೆಯಲ್ಲಿ ಎಸ್‌ಪಿಬಿ ಖುಷ್

ಎಸ್‌ಪಿಬಿ ಅವರನ್ನು ಈಗಲೂ ವೆಂಟಿಲೇಟರ್‌ ಮತ್ತು ಇಎಂಒ ವ್ಯವಸ್ಥೆಯಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಎಸ್‌ಪಿಬಿಗೆ ಪ್ರಜ್ಞೆ ಇದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ದೇಹಕ್ಕೆ ವಿಶ್ರಾಂತಿ ಸಿಗಲು ಸಣ್ಣ ಪುಟ್ಟವ್ಯಾಯಾಮವನ್ನು ಮಾಡಿಸಲಾಗುತ್ತಿದೆ ಎಂದು ಎಂಜಿಎಂ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಅನುರಾಧಾ ಭಾಸ್ಕರನ್‌ ತಿಳಿಸಿದ್ದಾರೆ.

ಮಾಳವಿಕಾರಿಂದ ಹರಡಿತಾ ಎಸ್‌ಬಿಪಿಗೆ ಕೊರೋನಾ ಸೋಂಕು!?

ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಆ.5ರಂದು ಎಸ್‌ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು.

ತಂದೆಗೆ ಕೊರೋನಾ ನೆಗೆಟಿವ್, ಆರೋಗ್ಯ ಸ್ಥಿರವಾಗಿದೆ: ಎಸ್‌ಪಿಬಿ ಪುತ್ರನ ಸ್ಪಷ್ಟನೆ!

ತಂದೆಯ ಶ್ವಾಸಕೋಶದಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ. ಅವರ ಆರೋಗ್ಯದಲ್ಲಿ ಮೊದಲಿಗಿಂತ ಕೊಂಚ ಸುಧಾರಿಸಿದ್ದು, ಮೆಲ್ಲನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚರಣ್​ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಸಿನಿಮಾ ನೋಡಿದವರು ಏನಂದ್ರು?
ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!