ಕನ್ನಡ ನಟ, ನಟಿಯರಿಗೆ ಡ್ರಗ್ಸ್‌ ನೋಟಿಸ್‌ ಭೀತಿ: ಹೆಸರು ಬಾಯ್ಬಿಟ್ಟ ಅನಿಕಾ!

By Kannadaprabha News  |  First Published Aug 29, 2020, 7:26 AM IST

ಕನ್ನಡ ನಟ, ನಟಿಯರಿಗೆ ಡ್ರಗ್ಸ್‌ ನೋಟಿಸ್‌ ಭೀತಿ| ವಿಚಾರಣೆ ವೇಳೆ ನಟರ ಹೆಸರು ಹೇಳಿರುವ ಕಿಂಗ್‌ಪಿನ್‌ ಅನಿಕಾ| ಡ್ರಗ್ಸ್‌ ನಿಯಂತ್ರಣ ದಳದಿಂದ ನಟರ ವಿಚಾರಣೆ ಸಾಧ್ಯತೆ| ಕಿಂಗ್‌ಪಿನ್‌ ಅನಿಕಾ ಜತೆ ಚಿತ್ರರಂಗದ ಹಲವರ ಸಂಪರ್ಕ, ಬೆಂಗಳೂರಿನ ಪ್ರತಿಷ್ಠಿತ ಕಾಲೇಜಲ್ಲಿ ಓದಿದ್ದ ಅನಿಕಾ


ಬೆಂಗಳೂರು(ಆ.29): ಕನ್ನಡ ಚಿತ್ರರಂಗ ‘ಸ್ಯಾಂಡಲ್‌ವುಡ್‌’ನಲ್ಲಿ ಡ್ರಗ್‌ ದಂಧೆಯ ಕಿಡಿ ಹೊಗೆ ಆಡುವ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಇದೀಗ ಕೇಂದ್ರ ಮಾದಕ ನಿಯಂತ್ರಣ ದಳವು (ಎನ್‌ಸಿಬಿ) ಕನ್ನಡಚಿತ್ರ ರಂಗದ ಕೆಲ ನಟ-ನಟಿಯರಿಗೆ ನೋಟಿಸ್‌ ಕೊಡುವ ಸಾಧ್ಯತೆ ಇದೆ.

ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮುಗಿಸಿ ಡ್ರಗ್ಸ್‌ ದಂಧೆಯಲ್ಲಿ ಪಾಲ್ಗೊಂಡು ಇದೀಗ ಎನ್‌ಸಿಬಿ ತಂಡಕ್ಕೆ ಸಿಕ್ಕಿ ಬಿದ್ದಿರುವ ಅನಿಕಾ ಚಿತ್ರರಂಗದ ಹಲವು ಮಂದಿಯೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಟರು ಹಾಗೂ ಪ್ರಮುಖ ಸಂಗೀತ ನಿರ್ದೇಶಕರಿಗೆ ರೇವ್‌ ಪಾರ್ಟಿಯಲ್ಲಿ ಪರಿಚಯವಾಗಿದ್ದ ಅನಿಕಾ ನಿರಂತರವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದಳು. ಈ ಬಗ್ಗೆ ಎನ್‌ಸಿಬಿ ಅಧಿಕಾರಿಗಳ ಬಳಿ ಆರೋಪಿ ಬಾಯ್ಬಿಟ್ಟಿದ್ದಾಳೆ.

Tap to resize

Latest Videos

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್

ಈ ಹಿನ್ನೆಲೆಯಲ್ಲಿ ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾದ ನಟ-ನಟಿಯರು, ನಿರ್ದೇಶಕರು ಹಾಗೂ ಸಂಗೀತಾ ನಿರ್ದೇಶಕರಿಗೆ ತನಿಖಾ ತಂಡ ನೋಟಿಸ್‌ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೊದಲು ಡ್ರಗ್ಸ್‌ ಗಿರಾಕಿ ಆಗಿದ್ದ ಅನಿಕಾ, ದಂಧೆಯಲ್ಲಿ ದುಡ್ಡಿನ ಅಮಲು ಏರಿಸಿಕೊಂಡು ಪೆಡ್ಲರ್‌ಗಳ ಸಂಪರ್ಕ ಹೊಂದಿ ದಂಧೆಗೆ ಇಳಿದಿದ್ದಳು. ಡಾರ್ಕ್ ವೆಬ್‌ನಲ್ಲಿ ನಡೆಯುತ್ತಿದ್ದ ಡ್ರಗ್ಸ್‌ ಮಾಫಿಯಾ ಒಳ ಸುಳಿವು ಅರಿತ ಈಕೆ, ಜರ್ಮನಿ ಮತ್ತು ಬೆಲ್ಜಿಯಂನಿಂದ ಲಿಂಕ್‌ ಪಡೆದಿದ್ದಳು.

ಕಿರುತೆರೆ ನಟಿಯ ಡ್ರಗ್ಸ್‌ ಮಾಫಿಯಾ; ಸ್ಟಾರ್‌ ನಟರ ಹೆಸರು ರಿವೀಲ್?

ಈಗ ಬಂಧಿತರಾಗಿರುವ ಅನೂಪ್‌ ಮತ್ತು ರವೀಂದ್ರ ಕೈ ಜೋಡಿಸಿ ಈಕೆಯಿಂದ ಡ್ರಗ್ಸ್‌ ಖರೀದಿಸಿ ಸಬ್‌ ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಆ.21ರಂದು ಕಲ್ಯಾಣನಗರದ ಸರ್ವಿಸ್‌ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದಾಗ ಮೊದಲು ಮಹಮ್ಮದ್‌ ಅನೂಪ್‌ ಪತ್ತೆಯಾಗಿದ್ದು, ಈತ ಕೊಟ್ಟಮಾಹಿತಿ ಮೇರೆಗೆ ಥಣಿಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ರವೀಂದ್ರನನ್ನು ಬಂಧಿಸಲಾಗಿತ್ತು.

ಅಲ್ಲಿಂದ ದೊಡ್ಡಗುಬ್ಬಿಯಲ್ಲಿ ನೆಲೆಸಿದ್ದ ಅನಿಕಾ ಮನೆ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಹೈಡ್ರಾಮಾ ಮಾಡಿದ್ದಳು. ‘ಮಹಿಳಾ ಪೊಲೀಸ್‌ ಇಲ್ಲದೆ ನನ್ನ ಬಂಧನಕ್ಕೆ ಬಂದಿರುವ ನಿಮ್ಮ ವಿರುದ್ಧ ದೂರು ಕೊಡುವೆ’ ಎಂದು ಬೆದರಿಕೆ ಒಡ್ಡಿದ್ದಳು. ಕೊನೆಗೆ ಎನ್‌ಸಿಬಿ ಅಧಿಕಾರಿಗಳು, ಇಡೀ ಫ್ಲ್ಯಾಟ್‌ ಲಾಕ್‌ ಮಾಡಿ ಎಲ್ಲಿಯೂ ಹೋಗದಂತೆ ಗೃಹಬಂಧನದಲ್ಲಿ ಇರಿಸಿ ಸ್ಥಳಕ್ಕೆ ಮಹಿಳಾ ಅಧಿಕಾರಿಗಳನ್ನು ಕರೆಸಿ ಬಂಧಿಸಲಾಯಿತು ಎನ್‌ಸಿಬಿ ಮೂಲಗಳು ತಿಳಿಸಿವೆ.

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಘಾಟು: ಅನಿಕಾ ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್!

ಅಂಚೆಚೀಟಿಗೆ ಡ್ರಗ್ಸ್‌ ಸವರಿ ಮಾರುತ್ತಿದ್ದ ಅನಿಕಾ!

ಬಂಧಿತೆ ಅನಿಕಾ, ‘ಡಾರ್ಕ್ ವೆಬ್‌ಸೈಟ್‌’ನಲ್ಲಿ ವಿದೇಶದಿಂದ ಗುಣಮಟ್ಟದ ಎಂಡಿಎಂ ಮಾತ್ರೆಗಳು ಹಾಗೂ ಎಲ್‌ಎಸ್‌ಡಿ ದ್ರವ ಮಾದರಿ ಡ್ರಗ್ಸನ್ನು ಖರೀದಿಸುತ್ತಿದ್ದಳು. ಗುಣಮಟ್ಟದ ಕಾರಣಕ್ಕೆ ಈಕೆಯ ಬಳಿ ಮಾದಕ ದ್ರವ್ಯ ಖರೀದಿಗೆ ಹೆಚ್ಚು ಬೇಡಿಕೆ ಇರುತ್ತಿತ್ತು. ಈಕೆ ಸಹ ಗಣ್ಯ ಸಮೂಹಕ್ಕೆ ಮಾತ್ರ ಪೂರೈಕೆ ಮಾಡುತ್ತಿದ್ದಳು. ಎಲ್‌ಎಸ್‌ಡಿ ದ್ರವವನ್ನು ಅಂಚೆ ಚೀಟಿ ಹಿಂದೆ ಸವರಿ ಅದನ್ನು ಮಾರಾಟ ಮಾಡುತ್ತಿದ್ದಳು. ಒಂದು ಬಾರಿ ಚೀಟಿಯನ್ನು ನಾಲಿಗೆಯಿಂದ ಸವರಿಗೆ ಸಾಕು ಐದಾರು ಗಂಟೆ ಅಮಲಿನಲ್ಲಿ ಇರುತ್ತಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!