
Gauhar Khan Angry On Election Officials ಬಾಲಿವುಡ್ ನಟಿ ಹಾಗೂ ಮಾಡೆಲ್ ಗೌಹರ್ ಖಾನ್ ಚುನಾವಣಾ ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ. ನಟನೆ ಮಾತ್ರವಲ್ಲದೆ, ಟಿವಿ ನಟಿ ಗೌಹರ್ ಖಾನ್ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿಯೂ ಹೆಡ್‌ಲೈನ್ಸ್‌ನಲ್ಲಿ ಇರುತ್ತಾರೆ. ಬಹಳ ಸಮಯದಲ್ಲಿ ಅವರು ಟಿವಿಯಲ್ಲಾಗಲಿ ಸಿನಿಮಾದಲ್ಲಾಗಲಿ ಕಾಣಿಸಿಕೊಂಡಿಲ್ಲ. ಆದರೆ, ಸೋಮವಾರ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನದ ವೇಳೆ ಮತ ಹಾಕುವ ವೇಳೆ ಅವರು ಕಾಣಿಸಿಕೊಂಡಿದ್ದಾರೆ. ಆದರೆ, ಪೂಲಿಂಗ್ ಬೂತ್‌ನಲ್ಲಿ ಸಮಸ್ಯೆ ಆಗಿದ್ದಕ್ಕೆ ಚುನಾವಣಾ ಅಧಿಕಾರಿಗಳ ವಿರುದ್ಧವೇ ಫುಲ್ ಗರಂ ಆಗಿ ಹೊರಬಂದಿದ್ದಾರೆ. ಅತ್ಯಂತ ಕೆಟ್ಟದಾಗಿ ವೋಟಿಂಗ್ ಮ್ಯಾನೇಜ್‌ಮೆಂಟ್ ಮಾಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಐದನೇ ಹಂತದ ಲೋಕಸಭೆ ಚುನಾವಣೆಗೆ ಎಂಟು ರಾಜ್ಯಗಳ 49 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ವೇಳೆ ಮಹಾರಾಷ್ಟ್ರದಲ್ಲಿ ಕೂಡ ಸೋಮವಾರ ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವದ ಮಹಾಹಬ್ಬದಲ್ಲಿ ಮತದಾನ ಮಾಡಲು ಹಲವು ಬಾಲಿವುಡ್ ತಾರೆಯರು ಆಗಮಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಅಮೀರ್ ಖಾನ್, ಅಕ್ಷಯ್ ಕುಮಾರ್, ಸನ್ಯಾ ಮಲ್ಹೋತ್ರಾ, ರಾಜ್‌ಕುಮಾರ್ ರಾವ್, ಜಾನ್ವಿ ಕಪೂರ್, ರಣದೀಪ್ ಹೂಡಾ, ಶ್ರಿಯಾ ಸರಣ್ ಸೇರಿದಂತೆ ಹಲವು ಗಣ್ಯರು ಮತದಾನ ಮಾಡಿದ್ದಾರೆ.
ಇದೇ ವೇಳೆ ಬಿಸಿಲಿನ ವಾತಾವರಣ ನಡುವೆಯೂ ಗೌಹರ್ ಖಾನ್ ತಮ್ಮ ಎಸಿ ಕಾರ್‌ನಲ್ಲಿ ಮತದಾನ ಮಾಡಲು ಪೂಲಿಂಗ್ ಬೂತ್‌ಗೆ ಬಂದಿದ್ದರು. ಆದರೆ, ಮತ ಹಾಕಿ ಪೂಲಿಂಗ್ ಬೂತ್‌ನಿಂದ ಹೊರಬಂದ ಬೆನ್ನಲ್ಲಿಯೇ ಮ್ಯಾನೇಜ್‌ಮೆಂಟ್ ವಿರುದ್ಧ ಅವರು ಕಿಡಿಕಾರಿದರು. ಪೂಲಿಂಗ್ ಬೂತ್‌ನಲ್ಲಿ ಸಿಕ್ಕಾಪಟ್ಟೆ ಕನ್‌ಫ್ಯೂಸ್ ಆಯಿತು. ಅಲ್ಲಿಯ ಮ್ಯಾನೇಜ್‌ಮೆಂಟ್ ಕೂಡ ಕೆಟ್ಟದಾಗಿತ್ತು ಎಂದು ಹೇಳುತ್ತಲೇ ಕಾರ್‌ಅನ್ನು ಏರಿದ್ದಾರೆ. ಪೂಲಿಂಗ್ ಬೂತ್‌ನ ಮ್ಯಾನೇಜ್‌ಮೆಂಟ್ ವಿರುದ್ಧ ಅವರಿಗೆ ಅಸಮಾಧಾನ ಇದ್ದಂತೆ ಕಂಡಿತು.
ಇದರ ಬೆನ್ನಲ್ಲಿಯೇ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ. 'ನೀವ್ ಬರ್ತೀರಿ ಅಂತಾ ಪೂಲಿಂಗ್ ಬೂತ್‌ನಲ್ಲಿ ರೆಡ್ ಕಾರ್ಪೆಟ್ ಹಾಕೋಕೆ ಆಗೋದಿಲ್ಲ' ಎಂದು ಬರೆದಿದ್ದರೆ, ನಿಮಗೆ ಶಾಲೆಗಳಲ್ಲಿ ವೋಟ್ ಹಾಕೋಕೆ ಆಗೋದಿಲ್ಲ. ಪೂಲಿಂಗ್ ಬೂತ್ ತಾಜ್ ಹೋಟೆಲ್ ಅಲ್ಲಿ ಇದ್ದಿದ್ರೆ ನಿಮಗೆ ಖುಷಿಯಾಗ್ತಿತ್ತು ಎಂದು ಟೀಕಿಸಿದ್ದಾರೆ. ಹೋದಲ್ಲಿ, ಬಂದಲ್ಲಿ ಎಎಲ್ಲಾ ಕಡೆ ನಿಮಗೆ ಸ್ಪೆಷಲ್ ಟ್ರೀಟ್‌ಮೆಂಟ್ ಬೇಕು ಅಂದ್ರೆ ಮಾಡೋಕೆ ಆಗಲ್ಲ ಎಂದಿದ್ದಾರೆ. ನೀವು ಈಕೆಯನ್ನ ಯಾವುದೇ ಟೈಮ್‌ನಲ್ಲಿ ನೋಡಿದ್ರೂ ಸಿಟ್ಟಲ್ಲೆ ಇರ್ತಾರೆ. ಜನರನ್ನೆ ಕಂಡ್ರೆ ಈಕೆಗೆ ಸಿನ್ನು ಬರುತ್ತದೆ ಎಂದು ಹೇಳಿದ್ದಾರೆ.
ಆಗಿದ್ದೇನು: ಮೂಲಗಳ ಪ್ರಕಾರ ಗೌಹರ್ ಖಾನ್‌ಗೆ ಮತ ಹಾಕಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ಕೆಲವೊಂದು ಮಾಹಿತಿಯ ಪ್ರಕಾರ ಆಕೆ ಮತ ಹಾಕಿದ ಬಳಿಕವೂ ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಪೂಲಿಂಗ್ ಬೂತ್‌ಗೆ ಹೋದಾಗ ಅದರಲ್ಲಿ ಆಕೆಯ ಹೆಸರು ಇದ್ದಿರಲಿಲ್ಲ. ಆದರೆ, ತನ್ನಲ್ಲಿ ಆಧಾರ್ ಕಾರ್ಡ್ ಇದೆ ವೋಟ್ ಹಾಕೋಕೆ ಬಿಡಿ ಎಂದಿದ್ದಾರೆ. ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಇದ್ದರೆ ವೋಟ್ ಹಾಕೋಕೆ ಬಿಡಬೇಕು ಎಂದು ಚುನಾವಣಾ ಆಯೋಗಕ್ಕೆ ಅವರು ಮನವಿ ಮಾಡಿದ್ದಾರೆ.
ರಂಜಾನ್ ಉಪವಾಸ ಮಾಡಲ್ಲ ಎಂದ ನಟಿ ಗೌಹರ್ ಖಾನ್; ಕಾರಣವೇನು?
ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಗೌಹರ್, ' ನನಗೆ ಒಂದು ಮನವಿ ಇದೆ. ದೇಶದ ನಾಗರೀಕ ಎನ್ನುವ ಕಾರಣಕ್ಕಾಗಿ ಆಧಾರ್ ಕಾರ್ಡ್ ಇದ್ದ ಮೇಲೆ ವೋಟ್ ಮಾಡಲು ಮತ್ತೆ ಯಾವ ದಾಖಲೆ ಬೇಕು. ನಿಮ್ಮ ಆಧಾರ್ ಕಾರ್ಡ್, ನೀವು ಭಾರತದ ಪ್ರಜೆ ಅನ್ನೋದಕ್ಕೆ ಇರುವ ದಾಖಲೆ. ಆಗ ನಿಮಗೆ ವೋಟ್ ಮಾಡಲು ಬಿಡಬೇಕು. ಆದರೆ, ವೋಟಿಂಗ್ ಬೂತ್‌ಗೆ ಹೋದಾಗ ಅವರು ಮತದಾರರ ಲಿಸ್ಟ್‌ನಲ್ಲಿ ನಿಮ್ಮ ಹೆಸರಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಆಧಾರ್ ಕಾರ್ಡ್ ಇದ್ದವರಿಗೆ ಮತದಾನ ಮಾಡುವ ಅವಕಾಶ ನೀಡಬೇಕು ಎಂದು ಗೌಹರ್ ಖಾನ್ ಮನವಿ ಮಾಡಿದ್ದಾರೆ.
ಲವ್, ಮದುವೆ ಬಗ್ಗೆ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ಸತ್ಯ ಹಂಚಿಕೊಂಡ ನಟಿ ಗೌಹರ್ ಖಾನ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.