ಶಸ್ತ್ರಚಿಕಿತ್ಸೆಗಾಗಿ ಇಂದು ಅಮೆರಿಕಕ್ಕೆ ತೆರಳಲಿರುವ ಶಿವರಾಜ್‌ ಕುಮಾರ್‌

Published : Dec 18, 2024, 10:13 AM IST
ಶಸ್ತ್ರಚಿಕಿತ್ಸೆಗಾಗಿ ಇಂದು ಅಮೆರಿಕಕ್ಕೆ ತೆರಳಲಿರುವ ಶಿವರಾಜ್‌ ಕುಮಾರ್‌

ಸಾರಾಂಶ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆರೋಗ್ಯ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಡಿಸೆಂಬರ್ 24 ರಂದು ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಜನವರಿ ಅಂತ್ಯದ ವೇಳೆಗೆ ಮತ್ತೆ ಸಿನಿಮಾ ಕೆಲಸ ಆರಂಭಿಸುವ ನಿರೀಕ್ಷೆಯಿದೆ.

ಬೆಂಗಳೂರು (ಡಿ.18): ಆರೋಗ್ಯ ಸಮಸ್ಯೆಯ ಕಾರಣದಿಂದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಇಂದು ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಪ್ರಸ್ತುತ ಇರುವ ತಮ್ಮ ಎಲ್ಲಾ ಬದ್ಧತೆಗಳನ್ನು ಮುಕ್ತಾಯ ಮಾಡಿ ಕರುನಾಡ ಕಿಂಗ್‌ ಶಿವರಾಜ್‌ಕುಮಾರ್‌ ಅಮೆರಿಕ್ಕೆ ಹೋಗುತ್ತಿದ್ದಾರೆ.ಅನಾರೋಗ್ಯದ ಕಾರಣಕ್ಕಾಗಿ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದೇನೆ ಎಂದು ಶಿವರಾಜ್ ಕುಮಾರ್ ಈ ಹಿಂದೆಯೇ ತಿಳಿಸಿದ್ದಾರೆ. ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿರುವ ಮಿಯಾಮಿಯಲ್ಲಿ ಡಿಸೆಂಬರ್‌ 24 ರಂದು ಶಿವರಾಜ್‌ಕುಮಾರ್‌ಗೆ ಶಸ್ತ್ರಚಿಕಿತ್ಸೆ ಆಗಲಿದೆ. ಶಸ್ತ್ರಚಿಕಿತ್ಸೆ ಬಳಿಕ ಕೆಲ ತಿಂಗಳು ವಿಶ್ರಾಂತಿ ಪಡೆದುಕೊಳ್ಳಲಿದ್ದು, ಜನವರಿ ಅಂತ್ಯದ ವೇಳೆಗೆ ಮತ್ತೆ ಸಿನಿಮಾ ಕೆಲಸ ಆರಂಭಿಸಬಹುದು ಎನ್ನಲಾಗಿದೆ. ಗುಣಮುಖರಾಗಿ ಬನ್ನಿ ಶಿವಣ್ಣ ಎಂದು ಲಕ್ಷಾಂತರ ಅಭಿಮಾನಿಗಳ ಹಾರೈಸಿದ್ದಾರೆ.

ಇತ್ತೀಚೆಗೆ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ 'ಯುಐ' ಸಿನಿಮಾದ ಪ್ರಿರಿಲೀಸ್‌ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್‌ ಕಾಣಿಸಿಕೊಂಡಿದ್ದರು. ಡಿಸೆಂಬರ್‌ 20 ರಂದು ಯುಐ ಸಿನಿಮಾ ರಿಲೀಸ್‌ ಆಗುತ್ತಿದೆ. ಇದರಲ್ಲಿ ಶಿವರಾಜ್‌ ಕುಮಾರ್‌, ದುನಿಯಾ ವಿಜಯ್‌, ಡಾಲಿ ಧನಂಜಯ ಹಾಗೂ ಉಪೇಂದ್ರ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಅಮೆರಿಕಕ್ಕೆ ತೆರಳುವ ಮುನ್ನ ಶಿವಣ್ಣ ಫ್ಯಾಮಿಲಿ ಹೋಟೆಲ್​ನಲ್ಲಿ ಕಾಣಿಸಿಕೊಂಡದ್ದು ಹೀಗೆ... ವಿಡಿಯೋ ವೈರಲ್​

ಈ ಹಂತದಲ್ಲಿ ಮಾತನಾಡಿದ್ದ ಶಿವರಾಜ್‌ ಕುಮಾರ್‌, ನನಗೆ ಆರೋಗ್ಯ ಸಮಸ್ಯೆ ಇದ್ದು, ಡಿಸೆಂಬರ್‌ 24ಕ್ಕೆ ಆಪರೇಷನ್‌ಗೆ ಒಳಗಾಗುತ್ತಿದ್ದೇನೆ. ಡಿಸೆಂಬರ್‌ 20 ರಂದು ಅಮೆರಿಕದಲ್ಲಿದ್ದುಕೊಂಡೇ ಯುಐ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದರು.
ಇತ್ತೀಚೆಗೆ ತಿರುಪತಿ ದೇವಸ್ಥಾನಕ್ಕೂ ಭೇಟಿ ನೀಡಿದ್ದ ಶಿವರಾಜ್‌ ಕುಮಾರ್‌, ತೀರಾ ಅಪರೂಪ ಎನ್ನುವಂತೆ ಮುಡಿ ಕೊಟ್ಟಿದ್ದರು. ಅವರು ಮುಡಿಕೊಟ್ಟಿರುವ ಚಿತ್ರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುತ್ತಿದ್ದ ಶಿವಣ್ಣ, ಈ ವರೆಗೂ ಮುಡಿಕೊಟ್ಟಿದ್ದು ಕಂಡಿಲ್ಲ. ಚಿಕಿತ್ಸೆ ನಿಮಿತ್ತ ಅಮೆರಿಕಾಕ್ಕೆ ತೆರಳುವ ಸಮಯದಲ್ಲಿ ದೇವರ ಮೊರೆ ಹೋಗಿದ್ದಾರೆ. 

ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಶಿವರಾಜ್‌ ಕುಮಾರ್! ಚಿಕಿತ್ಸೆಗೂ ಮುನ್ನ ಹಾಟ್‌ ಸೀಟ್‌ನಲ್ಲಿ ಶಿವಣ್ಣ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!