ಪುಷ್ಪ 2 ಚಿತ್ರದ ಯಶಸ್ಸಿನ ನಂತರ, ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧನದ ವೇಳೆ ನಾನು ಬಟ್ಟೆ ಬದಲಿಸಿಕೊಂಡು ಬರುತ್ತೇನೆಂದರೂ ಪೊಲೀಸರು ಒಪ್ಪಿಗೆ ಕೊಡದಿದ್ದಾಗ ದಿಸ್ ಈಸ್ ಟೂ ಮಚ್ ಎಂದು ಹೇಳಿದ್ದಾರೆ.
ಹೈದರಾಬಾದ್ (ಡಿ.13): ನಟ ಅಲ್ಲು ಅರ್ಜುನ್‌ಗೆ ಇಂದು ಶುಕ್ರವಾರ ನಿಜಕ್ಕೂ ಕರಾಳ ದಿನ (ಬ್ಲಾಕ್ ಫ್ರೈಡೇ) ಆಗಿತ್ತು. ಪುಷ್ಪ-2 ಸಿನಿಮಾ 1000 ಕೋಟಿ ರೂ. ಗಳಿಕೆ ಮಾಡಿದ ಹಿನ್ನೆಲೆಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಿ ಎದ್ದಾಗ ಬೆಳಗ್ಗೆ 9 ಗಂಟೆ ಸಮಯವಾಗಿತ್ತು. ಹೆಂಡತಿ ಮಾಡಿಕೊಟ್ಟ ಟೀ ಕುಡಿಯುತ್ತಾ ಕುಳಿತುಕೊಂಡ ಕ್ಷಣವೇ ಪೊಲೀಸರು ಬಂದು ಗೇಟಿನಿಂದ ಅಲ್ಲು ಅರ್ಜುನ್‌ನನ್ನು ಕರೆದಿದ್ದಾರೆ. ಆಗ ಪೊಲೀಸರು ಏಕೆ ಬಂದಿದ್ದಾರೆಂದು ನೋಡೋಣ ಎಂದು ಬಂದ ಅಲ್ಲು ಅರ್ಜುನ್‌ನಲ್ಲಿ ಬಟ್ಟೆ ಬದಲಿಸಲೂ ಬಿಡದೇ ಪೊಲೀಸರು ಎತ್ತಾಕೊಂಡು ಹೋಗಿದ್ದಾರೆ.
ಹೌದು, ಅಲ್ಲು ಅರ್ಜುನ್ ಒಬ್ಬ ಸ್ಟಾರ್ ನಟನಾಗಿದ್ದಾರೆ. ತನ್ನ ಪುಷ್ಪ-2 ಸಿನಿಮಾದಲ್ಲಿ ನಟನೆಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹಲವು ಸಿನಿಮಾಗಳ ದಾಖಲೆಯನ್ನು ಪುಡಿ ಪುಡಿ ಮಾಡಿದ್ದಾರೆ. ಇನ್ನೇನು ನಮ್ಮ ಸಿನಿಮಾ ಗೆದ್ದಿದೆ ಎಂಬ ಖುಷಿಯಲ್ಲಿ ಚಿತ್ರತಂಡದ ಎಲ್ಲ ಸದಸ್ಯರೂ ನೆಮ್ಮದಿಯಿಂದ ನಿದ್ದೆ ಮಾಡಿದ್ದಾರೆ. ಆದರೆ, ಶುಕ್ರವಾರ ಬೆಳಗ್ಗೆ ಏಳುತ್ತಿದ್ದಂತೆಯೇ ಅಲ್ಲು ಅರ್ಜುನ್‌ಗೆ ಚಿಕ್ಕಡಪಲ್ಲಿ ಪೊಲೀಸರು ಶಾಕ್ ನೀಡಿದ್ದಾರೆ. ಬೆಳಗ್ಗೆ ಎದ್ದೇಳುವ ಸಮಯಕ್ಕೆ ಮನೆಯ ಮುಂದೆ ಹಾಜರಾಗಿದ್ದ ಪೊಲೀಸರು ಸೆಕ್ಯೂರಿಟಿ ತಡೆದರೂ ಕೇಳದರೆ ಒಳಗೆ ನುಗ್ಗಿ ಅಲ್ಲು ಅರ್ಜುನ್ ಅವರನ್ನು ಹೊರಗೆ ಕರೆಯುವಂತೆ ಹೇಳಿದ್ದಾರೆ.
ಆಗ ತಾನೇ ಹಾಸಿಗೆಯಿಂದ ಎದ್ದಿದ್ದ ಅಲ್ಲು ಅರ್ಜುನ್ ಫುಲ್ ಓವರ್ ಸ್ವೆಟರ್ ಕಂ ಟೀಷರ್ಟ್ ಧರಿಸಿಕೊಂಡು ಹೊರಗೆ ಬಂದಿದ್ದಾರೆ. ಈ ವೇಳೆ ಗಂಡ ಎದ್ದ ತಕ್ಷಣ ಕಾಫಿ ಕೊಡುವಂತೆ ಹೆಂಡತಿ ಕಾಫಿ ಲೋಟ ಹಿಡಿದುಕೊಂಡು ಪೊಲೀಸರು ಮಾತನಾಡುತ್ತಿದ್ದ ಕಾರ್ ಗ್ರೌಂಡ್ ಫ್ಲೋರ್‌ಗೆ ಬಂದಿದ್ದಾಳೆ. ಆಗ ಹೆಂಡತಿಯಿಂದ ಕಾಫಿ ಮಗ್ ಪಡೆದು ಕಾಫಿ ಕುಡಿಯುತ್ತಾ ಪೊಲೀಸರು ಬಂದಿರುವ ಬಗ್ಗೆ ಏನೆಂದು ಕೇಳಿದ್ದಾರೆ. ಆಗ ನಿಮ್ಮನ್ನು ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತದಿಂದ ಮಹಿಳೆ ಸತ್ತ ಕೇಸಿನಲ್ಲಿ ಬಂಧಿಸುವುದಾಗಿ ಹೇಳಿದ್ದಾರೆ. ಆಗ ಇದರಿಂದ ಶಾಕ್ ಆಗಿದ್ದಾರೆ. ಹೆಂಡತಿ ಕೂಡ ಶಾಕ್ ಆಗಿ ಏಕಾಏಕಿ ಕಣ್ಣೀರು ಹಾಕಿದ್ದಾರೆ. ಆಗ ಹೆಂಡತಿಯ ತಲೆ ಸವರಿ ಸಮಾಧಾನ ಮಾಡುತ್ತಾ ಇದೇನೂ ಆಗೊಲ್ಲ, ಸುಮ್ಮನಿರು ಎಂದು ಹೇಳಿದ್ದಾರೆ.
ಇದನ್ನೂ ಓದಿ: Breaking: ಪುಷ್ಪ-2 ಸಿನಿಮಾ ವಿವಾದ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅರೆಸ್ಟ್
undefined
ಇದಾದ ಕೂಡಲೇ ಅಲ್ಲು ಅರ್ಜುನ್‌ಗೆ ಬಂದು ಪೊಲೀಸ್ ಜೀಪ್ ಹತ್ತುವಂತೆ ಸೂಚನೆ ನೀಡಿದ್ದಾರೆ. ಆಗ ನಾನು ಹೋಗಿ ಬಟ್ಟೆ ಬದಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ. ಆದರೆ, ಬಟ್ಟೆ ಬದಲಿಸುವುದಕ್ಕೂ ಅವಕಾಶ ಮಾಡಿಕೊಡದೇ, ಆರೋಪಿ ತಪ್ಪಿಸಿಕೊಂಡು ಹೋಗಬಹುದೆಂದು ಅವರನ್ನು ಕಣ್ಣೆದುರಿಗೆ ಇದ್ದಾಗಲೇ ಎಳೆದುಕೊಂಡು ಹೋಗಿ ಜೀಪಿಗೆ ಹತ್ತಿಸಿದ್ದಾರೆ. ಆಗ ಅಲ್ಲು ಅರ್ಜುನ್ ಬಟ್ಟೆ ಬದಲಿಸುವುದಕ್ಕೂ ಬಿಡದ 'ಪೊಲೀಸರಿಗೆ ದಿಸ್ ಈಸ್ ಟೂ ಮಚ್' (This is Too Much) ಎಂದು ಹೇಳಿದ್ದಾರೆ. ಆದರೂ, ಯಾವುದನ್ನೂ ಲೆಕ್ಕಿಸದ ಪೊಲೀಸರು ಅಲ್ಲು ಅರ್ಜುನ್‌ನನ್ನು ಕಾರಿಗೆ ಕೂರಿಸಿಕೊಂಡು ಅಲ್ಲಿಂದ ಸೀರಾ ಠಾಣೆಗೆ ತೆರಳಿದ್ದಾರೆ.
ಮೆಡಿಕಲ್ ಚೆಕಪ್‌ಗೆ ರವಾನೆ: ಒಬ್ಬ ಆರೋಪಿಯನ್ನು ಬಂಧನ ಮಾಡಿದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು. ಇನ್ನು ವಿಚಾರಣೆ ಇದ್ದರೆ ಮೂರು ದಿನದಿಂದ ಎಷ್ಟು ಸಾಧ್ಯವೋ ಅಷ್ಟು ವಿಸ್ತರಿತ ದಿನಗಳೊಂದಿಗೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡಬಹುದು. ಇನ್ನು ಕಸ್ಟಡಿಗೆ ಪಡೆಯುವ ಮೊದಲು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿ ಅರ್ಜುನ್‌ನನ್ನು ಬಂಧಿಸಿದ ನಂತರ ನೇರವಾಗಿ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Allu Arjun Arrest: ಹೆಂಡ್ತಿಗೆ ಮುತ್ತು ಕೊಟ್ಟು ಕಾಫಿ ಹೀರುತ್ತಾ ಸ್ಟೈಲ್‌ಅಲ್ಲಿ ಪೊಲೀಸ್ ಕಾರು ಏರಿದ ಅಲ್ಲು ಅರ್ಜುನ್!