ಮುಂಬೈನಲ್ಲಿ ಮತ್ತೊಂದು ಐಷಾರಾಮಿ ಫ್ಲ್ಯಾಟ್‌ ಖರೀದಿ ಮಾಡಿದ ಶಾಹಿದ್‌ ಕಪೂರ್‌, ಅಬ್ಬಬ್ಬಾ ಬೆಲೆ ಇಷ್ಟೊಂದಾ?

By Santosh Naik  |  First Published May 28, 2024, 10:15 PM IST

ನಟ ಶಾಹಿದ್‌ ಕಪೂರ್‌, ಅವರ ಪತ್ನಿ ಮೀರಾ ಮುಂಬೈನಲ್ಲಿ ಮತ್ತೊಂದು ಐಷಾರಾಮಿ ಫ್ಲ್ಯಾಟ್‌ ಖರೀದಿ ಮಾಡಿದ್ದಾರೆ. ಇದಕ್ಕಾಗಿ ಅವರು ದೊಡ್ಡ ಮಟ್ಟದ ಹಣ ಹೂಡಿಕೆ ಮಾಡಿದ್ದಾರೆ.
 

Shahid kapoor Mira bought a new luxurious house in Mumbai san

ಮುಂಬೈ (ಮೇ.28):  2024 ಇದುವರೆಗೆ ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್‌ಗೆ ಯಶಸ್ವಿ ವರ್ಷವಾಗಿದೆ. ಅವರ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಈ ವರ್ಷದ ಬಾಲಿವುಡ್‌ನ ಮೊದಲ ಹಿಟ್ ಚಿತ್ರವಾಯಿತು. ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಶಾಹಿದ್ ಈಗ ಮತ್ತೊಂದು ಒಪ್ಪಂದ ಮಾಡಿಕೊಂಡಿದ್ದು, ಈ ವರ್ಷವನ್ನು ಅವರಿಗೆ ಮತ್ತಷ್ಟು ಸ್ಮರಣೀಯವಾಗಿಸಿದೆ.ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ಕಪೂರ್ ಮುಂಬೈನ ವರ್ಲಿ ಪ್ರದೇಶದಲ್ಲಿ ಹೊಸ ಆಸ್ತಿಯನ್ನು ಖರೀದಿಸಿದ್ದಾರೆ. ಶಾಹಿದ್ ಮತ್ತು ಮೀರಾ ಮಧ್ಯ ಮುಂಬೈನ ಈ ಪ್ರದೇಶದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದಕ್ಕಾಗಿ ಸ್ಟಾರ್ ದಂಪತಿಗಳು ಸ್ಟ್ಯಾಂಪ್ ಡ್ಯೂಟಿ ಶುಲ್ಕ ಸೇರಿದಂತೆ 60 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ.

ಗಗನಚುಂಬಿ ಕಟ್ಟಡದಲ್ಲಿ ಐಷಾರಾಮಿ ಫ್ಲ್ಯಾಟ್‌: ಶಾಹಿದ್ ಮತ್ತು ಅವರ ಪತ್ನಿ ವರ್ಲಿಯಲ್ಲಿರುವ ಒಬೆರಾಯ್ 360 ವೆಸ್ಟ್ ಪ್ರಾಜೆಕ್ಟ್‌ನಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ. IndexTap.com ವರದಿಯ ಪ್ರಕಾರ, ಈ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು 5395 ಚದರ ಅಡಿ ರೆರಾ ಕಾರ್ಪೆಟ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಮೂರು ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಈ ಸೀ-ವ್ಯೂ ಅಪಾರ್ಟ್ಮೆಂಟ್ ಭಾಗವಾಗಿರುವ ಯೋಜನೆಯು ಎರಡು ಟವರ್‌ಗಳನ್ನು ಹೊಂದಿದ್ದು, ಅದರ ಎತ್ತರವು 360 ಮೀಟರ್. ಈ ವಸತಿ ಯೋಜನೆಗೆ ಈಗಾಗಲೇ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.

ವರದಿಯ ಪ್ರಕಾರ, ಶಾಹಿದ್-ಮೀರಾ ಈ ಆಸ್ತಿಗಾಗಿ 58.66 ಕೋಟಿ ರೂಪಾಯಿ ನೀಡಿದ್ದಾರೆ. ಇನ್ನು 1.75 ಕೋಟಿ ರೂಪಾಯಿಗಳನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸಿದ್ದಾರೆ ಎಂದು ದಾಖಲೆಗಳು ತೋರಿಸಿವೆ.  ಈ ಅಪಾರ್ಟ್‌ಮೆಂಟ್‌ನ ಬೆಲೆಯು ಶಾಹಿದ್ ಅವರ ಹಿಂದಿನ ಯಾವುದೇ ಥಿಯೇಟ್ರಿಕಲ್ ಬಿಡುಗಡೆಗಳ ಬಜೆಟ್‌ಗಿಂತ ಹೆಚ್ಚು ಎನ್ನುವುದ ವಿಶಷ. ಅವರ ಕೊನೆಯ ಹಿಟ್ 'ತೇರಿ ಬಾತೇನ್ ಮೇ ಐಸಾ ಉಲ್ಜಾ ಜಿಯಾ' ಚಿತ್ರದ ಬಜೆಟ್ ಸುಮಾರು 50 ಕೋಟಿ ಎಂದು ಹೇಳಲಾಗಿದೆ. ಶಾಹಿದ್ ಅವರ ಅತಿ ದೊಡ್ಡ ಸೋಲೋ ಹಿಟ್ 'ಕಬೀರ್ ಸಿಂಗ್' ಬಜೆಟ್ ಕೂಡ ಬಹುತೇಕ ಇದೇ ಆಗಿತ್ತು.

ಅದೇ ಅಪಾರ್ಟ್‌ಮೆಂಟ್‌ನಲ್ಲಿ ಶಾಹಿದ್‌ ಕಪೂರ್‌ ಮತ್ತೊಂದು ಫ್ಲ್ಯಾಟ್‌ ಕೂಡ ಹೊಂದಿದ್ದಾರೆ. ಇದೇ ಕಟ್ಟಡದಲ್ಲಿ ಶಾಹಿದ್ 2018 ರಲ್ಲಿ 8281 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ಮೆಂಟ್ ಖರೀದಿಸಿದ್ದರು. ಶಾಹಿದ್ 6 ವರ್ಷಗಳ ಹಿಂದೆ ಅಪಾರ್ಟ್‌ಮೆಂಟ್ ಖರೀದಿಸಲು ಸ್ಟಾಂಪ್ ಡ್ಯೂಟಿ ಸೇರಿದಂತೆ 58 ಕೋಟಿ ರೂಪಾಯಿ ಪಾವತಿ ಮಾಡಿದ್ದರು.

Tap to resize

Latest Videos

ಶಾಹೀದ್​ಗೆ ಇಬ್ಬರು ಅಪ್ಪಂದಿರು, ಮೂವರು ಅಮ್ಮಂದಿರು! ಚಾಕಲೇಟ್​ ಹೀರೋ ಫ್ಯಾಮಿಲಿ ಕಥೆಯೇ ಕುತೂಹಲ

ಶಾಹಿದ್ ಕಪೂರ್ ಪ್ರಸ್ತುತ 3 ಪ್ರಮುಖ ಸಿನಿಮಾ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ, ಅವರು ತಮ್ಮ ಆಕ್ಷನ್ ಥ್ರಿಲ್ಲರ್ 'ದೇವ' ಅನ್ನು ಘೋಷಿಸಿದರು, ಅದರ ಮೇಲೆ ಪ್ರಸ್ತುತ ಕೆಲಸ ನಡೆಯುತ್ತಿದೆ. ಶಾಹಿದ್ ಅವರ ಚಿತ್ರವನ್ನು ಆಕ್ಷನ್-ಎಂಟರ್ಟೈನರ್ ಎಂದು ವಿವರಿಸಲಾಗಿದೆ. ಇದಲ್ಲದೇ ಪೌರಾಣಿಕ ಕಥೆಯನ್ನಾಧರಿಸಿದ ‘ಅಶ್ವತ್ಥಾಮ’ ಕೂಡ ಅವರ ಹೆಸರಲ್ಲಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಇದರಲ್ಲಿ ಅವರು ಹಿಂದೆಂದೂ ನಟಿಸದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವೆರಡರ ನಂತರ, ಶಾಹಿದ್ ಕಪೂರ್ ಅವರ ಮೊದಲ ಫರ್ಜಿ ವೆಬ್ ಸರಣಿಯ ಎರಡನೇ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಯಂಗ್‌ ಆಗಿ ಕಾಣಲು ನಟಿಯರು ಮಾತ್ರವಲ್ಲ ಈ ನಟರೂ ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗಿದ್ದಾರೆ!

vuukle one pixel image
click me!
vuukle one pixel image vuukle one pixel image