ರಾಜಸ್ಥಾನ ರಾಯಲ್ಸ್ (rajasthan royals) ತಂಡದ ಯುವ ಆಟಗಾರ ಅಸ್ಸಾಂ ಮೂಲದ ಕ್ರಿಕೆಟಿಗರ ರಿಯಾನ್ ಪರಾಗ್ (riyan parag) ಅವರ ಯೂಟ್ಯೂಬ್ ಸರ್ಚ್ ಹಿಸ್ಟರಿ (youtube Search History)ಅಚಾನಕ್ ಆಗಿ ರಿವಿಲ್ ಆಗಿದೆ. ಇದರ ಬೆನ್ನಲ್ಲಿಯೇ ಅವರ ಪೋಲಿ ಸರ್ಚ್ ಹಿಸ್ಟರಿಗಳು ವೈರಲ್ ಆಗಿವೆ.
ನವದೆಹಲಿ (ಮೇ.28): ರಾಜಸ್ಥಾನ ರಾಯಲ್ಸ್ ತಂಡ ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ (riyan parag) ಈ ಬಾರಿ ಅದ್ಭುತ ಎನಿಸುವಂಥ ಐಪಿಎಲ್ (IPL) ಆಡಿದ ಖುಷಿಯಲ್ಲಿದ್ದಾರೆ. ರಾಜಸ್ಥಾನ (rajasthan royals) ತಂಡ ಪ್ಲೇ ಆಫ್ ಹಂತಕ್ಕೆ ಏರಲು ರಿಯಾನ್ ಪರಾಗ್ ಅವರ ಕೊಡುಗೆ ಬಹಳಷ್ಟಿದೆ. ಅಂದಾಜು 500ಕ್ಕೂ ಅಧಿಕ ರನ್‌ಗಳು ಅವರ ಬ್ಯಾಟ್‌ನಿಂದ ಬಂದಿದೆ. ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಕೆಟ್ಟ ನಿವರ್ಹಣೆಯನ್ನೇ ತೋರುತ್ತಿದ್ದ ರಿಯಾನ್ ಪರಾಗ್ ಈ ವರ್ಷದ ಐಪಿಎಲ್‌ನಲ್ಲಿ ರಾಜಸ್ಥಾನ ತಂಡದ ಬ್ಯಾಟಿಂಗ್‌ನ ಆಧಾರವಾಗಿದ್ದರು. ಆದರೆ, ಐಪಿಎಲ್ ಮುಕ್ತಾಯದ ಬೆನ್ನಲ್ಲಿಯೇ ಅಸ್ಸಾಂನ ಯುವ ಪ್ಲೇಯರ್ ವಿವಾದಗಳಿಗೆ ಆಹಾರವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಿಯಾನ್ ಪರಾಗ್ ಅವರ ವಿಡಿಯೋ ವೈರಲ್ ಆಗಿದೆ. ಹಾಗಂತ ಇದ್ಯಾವುದೇ ಅಶ್ಲೀಲ ವಿಡಿಯೋ ಅಲ್ಲ. ಅವರ ಯೂಟ್ಯೂಬ್ ಸರ್ಚ್ ಹಿಸ್ಟರಿಯ (youtube Search History) ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಆತ ಇತ್ತೀಚಿನ ದಿನಗಳಲ್ಲಿ ಏನೆಲ್ಲಾ ಸರ್ಚ್ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಇದರ ಬೆನ್ನಲ್ಲಿಯೇ ಅವರ 'ಪೋಲಿ' ಹಿಸ್ಟರಿ ವಿಡಿಯೋ ವೈರಲ್ ಆಗಿದೆ.
22 ವರ್ಷದ ರಾಜಸ್ಥಾನ್ ರಾಯಲ್ಸ್ ಸ್ಟಾರ್ ಆಟಗಾರ ರಿಯಾನ್ ಪರಾಗ್ ಕೂಡ ಯೂಟ್ಯೂಬ್‌ನಲ್ಲಿ ಸ್ಟ್ರೀಮ್ ಮಾಡುತ್ತಾರೆ. ಸ್ಟ್ರೀಮ್ ಮಾಡುವ ಅಲುವಾಗಿ ಅವರು ಯೂಟ್ಯೂಬ್‌ನಲ್ಲಿ ಕಾಪಿರೈಟ್ ಇರದೇ ಇದ್ದ ಮ್ಯೂಸಿಕ್‌ಅನ್ನು ಹುಡುಕಲು ಹೋಗಿದ್ದರು. ಯೂಟ್ಯೂಬ್‌ನಲ್ಲಿ ಇದನ್ನು ಸರ್ಚ್ ಮಾಡಲು ಸರ್ಚ್ ಬಾರ್‌ನಲ್ಲಿ ಕರ್ಸರ್ ಇಟ್ಟಾಗ ಅವರು ಈ ಹಿಂದೆ ಸರ್ಚ್ ಮಾಡಿದ ಎಲ್ಲಾ ವಿಷಗಳು ಕಾಣಿಸಿಕೊಂಡವು. ಇದರಲ್ಲಿ 'ಅನನ್ಯಾ ಪಾಂಡೆ ಹಾಟ್..' (ananya pandey Hot) ಮತ್ತು 'ಸಾರಾ ಅಲಿ ಖಾನ್ ಹಾಟ್..' (sara ali khan Hot) ಅನ್ನೋ ಸರ್ಚ್ ಕೂಡ ಮಾಡಿದ್ದಾರೆ. ಎಕ್ಸ್ ಯೂಸರ್ ಒಬ್ಬರು ರಿಯಾನ್ ಪರಾಗ್ ಅವರ ಯೂಟ್ಯೂಬ್ ಹಿಸ್ಟರಿಯ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ರಿಯಾನ್ ಪರಾಗ್ ಅವರ ಸರ್ಚ್ ಹಿಸ್ಟರಿ "ಸಾರಾ ಅಲಿ ಖಾನ್ ಹಾಟ್" "ವಿರಾಟ್ ಕೊಹ್ಲಿ" "ಅನನ್ಯ ಪಾಂಡೆ ಹಾಟ್" ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಿಯಾನ್ ಪರಾಗ್ ಅವರು ವಿವಾದಗಳೊಂದಿಗೆ ಇರದೇ ಇದ್ದ ದಿನವೇ ಇಲ್ಲ. ಐಪಿಎಲ್ ಸಮಯದಲ್ಲಿ, ಅವರು ಒಮ್ಮೆ ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಅವರಂತಹ ಹಿರಿಯ ಆಟಗಾರರೊಂದಿಗೆ ಜಗಳವಾಡಿದ್ದರು. ಕಳೆದ ವರ್ಷ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿದ ನಂತರ, ಅವರು ನನ್ನ ಲೆವಲ್ ಈಗ ಹೈ ಆಗಿದೆ ಅನ್ನೋ ಸನ್ನೆ ಮಾಡಿದ್ದರು. ಇದಲ್ಲದೆ, ರಿಯಾನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದಲೂ ವಿವಾದಕ್ಕೊಳಗಾಗಿದ್ದಾರೆ. ಅಭಿಮಾನಿಗಳು ಅವರ ಪೋಸ್ಟ್‌ಗಳಲ್ಲಿ ದುರಹಂಕಾರವನ್ನು ಗಮನಿಸುತ್ಥಾರೆ ಮತ್ತು ಇದರಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೂ ಒಳಲಾಗುತ್ತಾರೆ.
Search history of riyan Parag
"Sara ali khan hot"
"Virat Kohli"
"Ananya Pandey Hot" pic.twitter.com/CW49IwqldH
ಯಾರಿವರು ನಿಕೇಶ್ ಅರೋರಾ? ಗೂಗಲ್ ಸಿಇಒ ಸುಂದರ್ ಪಿಚೈಗಿಂತ ಹೆಚ್ಚಿನ ವೇತನ ಪಡೆಯೋ ಭಾರತೀಯ ಮೂಲದ ಸಿಇಒ
ರಿಯಾನ್ ಪರಾಗ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿರುವ ಪ್ಲೇಯರ್. ಕಳೆದ ಒಂದು ವರ್ಷದಲ್ಲಿ ಅವರ ಸಾಧನೆ ಅದ್ಭುತವಾಗಿದೆ. ಅವರು ಐಪಿಎಲ್ 2024 ರ 16 ಪಂದ್ಯಗಳಲ್ಲಿ 573 ರನ್ ಬಾರಿಸಿದ್ದು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕೊನೆಯ ಋತುವಿನಲ್ಲಿ ಅವರು 10 ಪಂದ್ಯಗಳಲ್ಲಿ 510 ರನ್ ಗಳಿಸಿದ್ದರು. ಇದರಲ್ಲಿ ಸತತ 7 ಅರ್ಧಶತಕಗಳ ಇನ್ನಿಂಗ್ಸ್ ಸೇರಿದೆ. ದೇವಧರ್ ಟ್ರೋಫಿಯ 5 ಇನ್ನಿಂಗ್ಸ್‌ಗಳಲ್ಲಿ ಅವರು 354 ರನ್ ಗಳಿಸಿದರು ಮತ್ತು 11 ವಿಕೆಟ್‌ಗಳನ್ನು ಪಡೆದಿದ್ದರು.
ಹುಡುಗಿಯರೇ ಸ್ಟ್ರಾಂಗ್ ಅಂತ ಸಿಗರೇಟ್ ಸೇದೋದ್ರಲ್ಲೂ ಪ್ರೂವ್ ಮಾಡಿದ ಹೆಣ್ಮಕ್ಕಳು!