ಆನ್‌ಲೈನ್ ಟಿಕೆಟ್ ಅಗ್ರಿಗೇಟರ್ ಬುಕ್‌ಮೈಶೋ ಬ್ರಿಟಿಷ್ ರಾಕ್ ಬ್ಯಾಂಡ್ ಕೋಲ್ಡ್‌ಪ್ಲೇ ಕಾನ್ಸರ್ಟ್ ಟಿಕೆಟ್‌ಗಳು ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರಾಟವಾಗುತ್ತಿರುವ ಕುರಿತು ಎಫ್‌ಐಆರ್ ದಾಖಲು ಮಾಡಿದೆ. ಅನಧಿಕೃತವಾಗಿ ಮಾರಾಟವಾಗುವ ಟಿಕೆಟ್‌ಗಳನ್ನು ರದ್ದುಗೊಳಿಸುವುದನ್ನೂ ಪರಿಗಣಿಸಲಾಗುತ್ತಿದೆ.
ನವದೆಹಲಿ (ಅ.4): ಆನ್‌ಲೈನ್ ಟಿಕೆಟ್ ಅಗ್ರಿಗೇಟರ್ ಬುಕ್‌ಮೈಶೋ ಗುರುವಾರ ಬ್ರಿಟಿಷ್ ರಾಕ್ ಬ್ಯಾಂಡ್ ಕೋಲ್ಡ್‌ಪ್ಲೇ ಕಾನ್ಸರ್ಟ್ ಟಿಕೆಟ್‌ಗಳು ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರಾಟವಾಗುತ್ತಿರುವ ಕುರಿತು ಎಫ್‌ಐಆರ್ ದಾಖಲು ಮಾಡಿದೆ. ಬ್ಲಾಕ್ ಮಾರ್ಕೆಟಿಂಗ್ ಕುರಿತು ಎಫ್‌ಐಆರ್ ದಾಖಲಿಸಿದೆ ಎಂದು ಕಂಪನಿ ಹೇಳಿದೆ. ಅನಧಿಕೃತವಾಗಿ ಮಾರಾಟವಾಗುವ ಟಿಕೆಟ್‌ಗಳನ್ನು ಸಂಪೂರ್ಣವಾಗಿ ರದ್ದು ಮಾಡುವ ಬಗ್ಗೆಯೂ ಬುಕ್‌ಮೈಶೋ ಚಿಂತನೆ ನಡೆಸುತ್ತಿದೆ ಎಂದು ಹೇಳಿದೆ. "ಭಾರತದಲ್ಲಿ ಕೋಲ್ಡ್‌ಪ್ಲೇ ಮ್ಯೂಸಿಕ್ ಆಫ್ ದಿ ಸ್ಪಿಯರ್ಸ್ ವರ್ಲ್ಡ್ ಟೂರ್ 2025 ಗಾಗಿ ನಕಲಿ ಟಿಕೆಟ್ ಮತ್ತು ಟಿಕೆಟ್‌ಗಳ ಬ್ಲಾಕ್ ಮಾರ್ಕೆಟಿಂಗ್ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ, ಬುಕ್‌ಮೈಶೋ ಅಕ್ಟೋಬರ್ 2 ರಂದು ಔಪಚಾರಿಕ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಈ ಕ್ರಮವು ಸೆಪ್ಟೆಂಬರ್ 23 ರಂದು ನಾವು ಮುಂಬೈ ಪೊಲೀಸರಿಗೆ ಪೂರ್ವಭಾವಿಯಾಗಿ ಸಲ್ಲಿಸಿದ ಆರಂಭಿಕ ದೂರನ್ನು ಅನುಸರಿಸುತ್ತದೆ, ನಮ್ಮ ವಿರುದ್ಧ ಯಾವುದೇ ಔಪಚಾರಿಕ ದೂರು ಬರುವ ಮೊದಲು ಈ ಕಳವಳಗಳನ್ನು ಪರಿಹರಿಸಲಾಗಿದೆ. ಮುಂಬೈ ಪೊಲೀಸರಿಗೆ ಸಲ್ಲಿಸಿದ BookMyShow ನ ಎಫ್ಐಆರ್ ಸಹ ಟಿಕೆಟ್‌ಗಳ ಅನಧಿಕೃತ ಮರುಮಾರಾಟದ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯ ಮಾಡಲಾಗಿದೆ' ಎಂದು ತಿಳಿಸಿದೆ.
ಜನವರಿ 2025 ರಲ್ಲಿ ಮುಂಬೈನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಕೋಲ್ಡ್‌ಪ್ಲೇ ಕನ್ಸರ್ಟ್ ಟಿಕೆಟ್‌ಗೆ ಭಾರೀ ಬೇಡಿಕೆ ಬಂದಿದ್ದು, ಈಗಾಗಲೇ ಅನಧಿಕೃತವಾಗಿ ಲಕ್ಷಾಂತರ ಟಿಕೆಟ್‌ಗಳು ಮಾರಾಟವಾಗಿದೆ ಎನ್ನಲಾಗಿದೆ. ಲಕ್ಷಾಂತರ ಅಭಿಮಾನಿಗಳು ಸೀಮಿತ ಸಂಖ್ಯೆಯ ಟಿಕೆಟ್‌ಗಳಿಗಾಗಿ ಪರದಾಟ ಮಾಡಿದರು. ಬಳಿಕ ತಮ್ಮ ಆಕ್ರೋಶವನ್ನು ಸೋಶಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದರು.
ಕೆಲವು ಟಿಕೆಟ್‌ಗಳನ್ನು ನಂತರ ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಯಿತು, ಇದು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ತನಿಖೆಗೆ ಕಾರಣವಾಯಿತು. ಬ್ಯಾಂಡ್ ತನ್ನ "ಮ್ಯೂಸಿಕ್ ಆಫ್ ದಿ ಸ್ಪಿಯರ್ಸ್ ವರ್ಲ್ಡ್ ಟೂರ್ 2025" ನ ಭಾಗವಾಗಿ ಮುಂದಿನ ವರ್ಷ ಜನವರಿ 18, 19 ಮತ್ತು 21 ರಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮೂರು ಶೋಗಳನ್ನು ನಡೆಸಲಿದೆ.
ಗಂಡಸರ ಟಾಯ್ಲೆಟ್‌ಗೆ ನುಗ್ಗಿದ Deepika Padukone ಮತ್ತು ಆಲಿಯಾ ಭಟ್; ಶಾಕಿಂಗ್ ಘಟನೆ!
ಈ ವಾರದ ಆರಂಭದಲ್ಲಿ ಮುಂಬೈ ಪೊಲೀಸರು ದೂರಿಗೆ ಸಂಬಂಧಿಸಿದಂತೆ ಬುಕ್‌ಮೈಶೋನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಮಖಿಜಾ ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ. ಭಾರತದಲ್ಲಿ ಕೋಲ್ಡ್‌ಪ್ಲೇಯ ಕಾನ್ಸರ್ಟ್‌ಗಳು ಯೋಜಿಸಿದಂತೆ ಮುಂದುವರಿಯುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ನವರಾತ್ರಿಯ 2ನೆ ದಿನದ ಗುಡ್‌ನ್ಯೂಸ್, ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ್ಯಂತ ಟಿಕೆಟ್‌ಗಳನ್ನು ಮರುಮಾರಾಟ ಮಾಡುವ ಸ್ವತಂತ್ರ ವ್ಯಕ್ತಿಗಳು ಸೇರಿದಂತೆ ತಮ್ಮ ಗಮನಕ್ಕೆ ಬಂದಿರುವ ಎಲ್ಲಾ ಮರುಮಾರಾಟಗಾರರ ವಿವರಗಳನ್ನು ಒದಗಿಸಿದೆ ಎಂದು BookMyShow ಹೇಳಿದೆ.