
ಬೆಂಗಳೂರು[ಮೇ. 26] ನವರಸ ನಾಯಕ ಜಗ್ಗೇಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ 9 ವರ್ಷಗಳ ಹಿಂದಿನ ವಿಚಾರವೊಂದನ್ನು ಶೇರ್ ಮಾಡಿದ್ದಾರೆ. ಜತೆಗೆ ಸಹಾಯ ಮಾಡಬೇಕು ಎಂಬ ಮನವಿಯನ್ನು ಮಾಡಿದ್ದಾರೆ.
ಹಾಗಾದರೆ ಜಗ್ಗೇಶ್ ಏನು ಹೇಳಿದ್ದಾರೆ...
ಜೊತೆ ಇರುವವರು ನಮ್ಮವರಲ್ಲಾ..ಯಾರು ನಮ್ಮ ಜೊತೆ ಇರುತ್ತಾರೆ ಅವರೆ ನಮ್ಮವರು..
ಇದ ಹೇಳಲು ಕಾರಣ 2010ರ ಆಸುಪಾಸು
ಆರ್.ಅಶೋಕ್ ಸಾರಿಗೆ ಮಂತ್ರಿ ನಾನು ಕೆಎಸ್ ಆರ್ ಟಿಸಿ ಉಪಾಧ್ಯಕ್ಷ ಆಗಿದ್ದೆ..
ಕಾರ್ಯ ನಿಮಿತ್ತ ಅಶೋಕ್ ರವರನ್ನು ಬೆಂಗಳೂರು ರೈಲು ನಿಲ್ದಾಣದಲ್ಲಿ ರಾತ್ರಿ 10ಕ್ಕೆ
ರೈಲು ಹತ್ತಿಸಿ ವಾಪಸ್ ಹೊರಡುವಾಗ ರೈಲು ಹಳಿಯಿಂದ ಯಾರೋ ಚೀರುತ್ತಿದ್ದ ಶಬ್ದ ಕೇಳಿತು..ಗಾಬರಿಯಿಂದ ಬಗ್ಗಿ ನೋಡಿದಾಗ
ತುಂಡಾದ ಕಾಲು ನಿತ್ರಾಣಗೊಂಡ ವ್ಯೆಕ್ತಿ..ತಲೆ ರೈಲು ಚಕ್ರಗಳ ಮಧ್ಯೆ, ರೈಲು ಚಲಿಸಲು ಹಾರನ್ ಸೂಚನೆ! ಕೂಡಲೆ ನನ್ನ pa ರಾಮಲಿಂಗಯ್ಯನಿಗೆ ರೈಲು ನಿಲ್ಲಿಸಲು ಹೇಳಿದೆ ಆತ ಇಂಜಿನ್ ಮಂದೆ ನಿಂತೆಬಿಟ್ಟ..
ನಾನು ನನ್ನ ಗನ್ ಮ್ಯಾನ್ ರಾಘವೇಂದ್ರ ಅಡಿ ನುಗ್ಗಿ ಅವನ ಮೇಲೆ ಎಳೆದೆವು.. ತುಂಡಾದ ಕಾಲುಗಳು ರಕ್ತಸ್ರಾವ ಮಾತಾಡಲು ಆಗದೆ ಜೀವಹೋಗುತ್ತಿತ್ತು..
ದುಃಖ ತಾಳಲಾಗದೆ ಮೃತ್ಯುಂಜಯ ಚಪಮಾಡುತ್ತಾ ಅಂಬುಲೆನ್ಸ್ ತರಿಸಿ ಬೋರಿಂಗ್ ಆಸ್ಪತ್ರೆ ಮುಖ್ಯಸ್ಥರು ನನ್ನ ಆತ್ಮೀಯ ಡಾ:ತಿಲಕ್ ರವರಿಗೆ ಕರೆ ಮಾಡಿ ಆದ ಘಟನೆ ತಿಳಿಸಿ ಎಲ್ಲಾ ಚಿಕಿತ್ಸೆಗೆ ತಯಾರಾಗಿರಲು ತಿಳಿಸಿ..ಸಮಯಕ್ಕೆ ಸರಿಯಾಗಿ ಇವನನ್ನ ಅವರ ಕೈಯಲ್ಲಿ ಒಪ್ಪಿಸಿದೆ..ಸಾಕ್ಷಾತ್ ಶಿವನಂತೆ ಡಾ:ತಿಲಕ್ ಇವನ ಅಳಿದುಳಿದ ಮಾಂಸಕಂಡ ಶಸ್ತ್ರಚಿಕಿತ್ಸೆ ಮಾಡಿ ಉಳಿಸಿಬಿಟ್ಟರು.
ಅಪ್ಪನ ನೆನೆದು ಆಟೋ ಡ್ರೈವರ್ ಆಗಿ ರಸ್ತೆಗಿಳಿದ ಜಗ್ಗೇಶ್
6ತಿಂಗಳ ನಂತರ ಕೃತಕ ಕಾಲು ಹಾಕಿಸಿ ಇವನ ನಡೆಸಿ ನೋಡಿ ಆನಂದಪಟ್ಟು ಈ ಕಾರ್ಯ ಮಾಡಲು ಶಕ್ತಿ ಕೊಟ್ಟ ದೇವರಿಗೆ ಧನ್ಯವಾದ ಅರ್ಪಿಸಿದೆ..ಅಲ್ಲಿಂದ ಇಲ್ಲಿಯವರೆಗು ಇವನ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿರುವೆ.
ಅವನು ನನ್ನ ಕಂಡಾಗ ಹೇಳುವುದು ಒಂದೆ ಅಮ್ಮ ನನಗೆ ಫೋಟೋದ ದೇವರ ಪೂಜಿಸಲು ಹೇಳಿಕೋಟ್ಟಳು..ನನ್ನ ಬದುಕಿಸಿದ ಮೇಲೆ ನಿಮ್ಮಲ್ಲಿ ಆದೇವರ ಕಾಣುವೆ ಎನ್ನುತ್ತಾನೆ..ಶಕ್ತಿಮೀರಿ 8ವರ್ಷದಿಂದ ಸಹಾಯ ಮಾಡುತ್ತಿರುವೆ.
ಈ ಕಥೆ ಕೇಳಿದ ನಿಮಗೆ ಬಡಪಾಯಿ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಲು ರಾಯರು ಮನಸ್ಸು ಕೊಟ್ಟರೆ ದಯಮಾಡಿ ಕೈಲಾದಷ್ಟು ಇವನಿಗೆ ಸಹಾಯಮಾಡಿ ಎಂದು ವಿನಂತಿ..ಬಹಳ ಪ್ರತಿಭಾವಂತ ಇವನ ಮಗ. ಮಾಧ್ಯಮಮಿತ್ರರಿಗೂ ವಿನಂತಿ..
ದಯೇ ಧರ್ಮದ ಮೂಲ..
ಇವನ ಹೆಸರು..
ವಿಜಯ್ ಕುಮಾರ್..
ದೂರವಾಣಿ ಸಂಖ್ಯೆ.
8861123498
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.