ರೋಬೋಟ್ ತರ ಕೆಲಸ ಮಾಡಬೇಡಿ, ಫ್ಯಾಷನ್ ಇರಲಿ; ಪ್ರಿಯಾಂಕಾ ಚೋಪ್ರಾ ಕಿವಿ ಮಾತು!

Published : Jun 19, 2024, 12:59 PM IST
ರೋಬೋಟ್ ತರ ಕೆಲಸ ಮಾಡಬೇಡಿ, ಫ್ಯಾಷನ್ ಇರಲಿ; ಪ್ರಿಯಾಂಕಾ ಚೋಪ್ರಾ ಕಿವಿ ಮಾತು!

ಸಾರಾಂಶ

ನನ್ನ ಅದೃಷ್ಟಕ್ಕೆ ನನಗೆ ವಿವಿಧ ರೀತಿಯ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವ ಅವಕಾಶ ದೊರಕಿದೆ. ಆದರೆ, ಹಲವರ ಜೀವನದಲ್ಲಿ ಅದು ಸಾಧ್ಯವಾಗುವುದಿಲ್ಲ. ಒಂದೇ ಬಗೆಯ ಕೆಲಸ ಮಾಡುತ್ತಿದ್ದರೆ ಸ್ವಲ್ಪ ಕಾಲದಲ್ಲೇ ಏಕತಾನತೆ ಕಾಡುವ ಅಪಾಯ ಇರುತ್ತದೆ. 

ವೇದಿಕೆ ಮೇಲಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಯಂಗ್ ಗರ್ಲ್‌ ಒಬ್ಬರು ಕೇಳಿದ ಪ್ರಶ್ನೆಗೆ ನಟಿ ಪ್ರಿಯಾಂಕಾ ಮಾರ್ಮಿಕ ಉತ್ತರ ಕೊಟ್ಟಿದ್ದಾರೆ. 'ನಾನು ನನ್ನ ಜೀವನದಲ್ಲಿ ಕಂಡುಕೊಂಡ ಪಾಠ, ಯಶಸ್ವಿಯಾಗುವುದಕ್ಕೆ ಇರುವ ಮಂತ್ರ ಏನೆಂದರೆ, ನಾವು ಯಾವುದೇ ಕೆಲಸಕ್ಕೆ ಹೋಗುವಾಗ ನಾವೇಕೆ ಇದನ್ನು ಮಾಡುತ್ತಿದ್ದೇವೆ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ನಮಗೆ ನಿಜವಾಗಿಯೂ ಆ ಕೆಲಸದಲ್ಲಿ ಆಸಕ್ತಿ ಇದೆಯಾ? ಅದರಿಂದ ನಮಗೆ ಹಣ, ತೃಪ್ತಿ ಹಾಗು ಭವಿಷ್ಯಕ್ಕೆ ಸಹಾಯ ಎಲ್ಲವೂ ಆಗುತ್ತದೆಯಾ ಎಂದು ಪ್ರಶ್ನಿಸಿಕೊಳ್ಳಬೇಕು. 

ರೋಬೋಟ್ ತರ ಕೆಲಸ ಮಾಡಬಾರದು. ನಾವು ದಿನಾಲು ಯಾವುದೇ ಕೆಲಸವನ್ನು ಯಾಕೆ ಮಾಡುತ್ತೇವೆ ಎಂಬುದನ್ನು ಯೋಚಿಸಿ ಕೆಲಸ ಮಾಡಬೇಕು. ಯಾವುದೇ ರೀತಿಯಲ್ಲಿ ನಮಗೆ ಆ ಕೆಲಸ ಸರಿಹೊಂದುವುದಿಲ್ಲ ಎಂದಾದರೆ ಅಂತಹ ಕೆಲಸವನ್ನು ಮಾಡಬಾರದು. ನಾವು ಮಾಡುವ ಕೆಲಸದಲ್ಲಿ ನಮಗೆ ಫ್ಯಾಶನ್ ಫೀಲ್ ಇದ್ದರೆ ಮಾತ್ರ ಆ ಕೆಲಸ ಮಾಡಲು ನಮಗೆ ಉತ್ಸಾಹ ಇರುತ್ತೆ. ಇಲ್ಲದಿದ್ದರೆ ಮೆಕ್ಯಾನಿಕಲ್ ಆಗಿ ಮಾಡುವ ಯಾವುದೇ ಕೆಲಸ ನಮಗೆ ಬೋರ್ ಉಂಟುಮಾಡುತ್ತದೆ. 

ನನ್ನ ಅದೃಷ್ಟಕ್ಕೆ ನನಗೆ ವಿವಿಧ ರೀತಿಯ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವ ಅವಕಾಶ ದೊರಕಿದೆ. ಆದರೆ, ಹಲವರ ಜೀವನದಲ್ಲಿ ಅದು ಸಾಧ್ಯವಾಗುವುದಿಲ್ಲ. ಒಂದೇ ಬಗೆಯ ಕೆಲಸ ಮಾಡುತ್ತಿದ್ದರೆ ಸ್ವಲ್ಪ ಕಾಲದಲ್ಲೇ ಏಕತಾನತೆ ಕಾಡುವ ಅಪಾಯ ಇರುತ್ತದೆ. ಹೀಗಾಗಿ ನಾವು ಮಾಡುವ ಕೆಲಸದಲ್ಲಿ ವಿವಿಧತೆ ತಂದುಕೊಂಡು ಅದರಲ್ಲಿ ಎಕ್ಸೈಟ್‌ಮೆಂಟ್ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕೆಲಸ ಮಾಡುತ್ತಿರಲಿ, ನಿಮಗದು ಖುಷು ಕೊಡುವಂತಿದ್ದರೆ ನಿಮಗೆ ಅದರಿಂದ ತೃಪ್ತಿ ಸಿಗುತ್ತದೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

'ನನ್ನನ್ನು ಬ್ಲಾಕ್ ಕ್ಯಾಟ್, ಡಸ್ಕಿ ಎಂದೆಲ್ಲಾ ಕರೆಯುತ್ತಿದ್ದರು. ಬ್ಲಾಕ್ ಕ್ಯಾಟ್ ಎಂದರೇನು, ಡಸ್ಕಿ ಎಂದರೇನು? ಎಲ್ಲವೂ ಕಪ್ಪು ಬಣ್ಣದವಳು ಎಂದು ಹೇಳಿದಂತೆ ತಾನೇ? ಆದರೆ, ನಾನು ಕಪ್ಪು ಬಣ್ಣ ಹೊಂದಿದವರ ದೇಶದಲ್ಲಿ ಕಪ್ಪು ಬಣ್ಣದವಳಲ್ಲ, ಬ್ರೌನ್ ಕಲರ್ ಹೊಂದಿದವಳು. ಅದು ಹಾಗಿರಲಿ, ಬಣ್ಣದ ಗೀಳು ನಮಗೆ ಶುರುವಾಗಿದ್ದು ಬ್ರಿಟಿಷ್ ಆಡಳಿತದಲ್ಲಿ ನಾವು ಬಂಧಿಯಾದ ನಂತರವಷ್ಟೇ. ಆಂಗ್ಲರ ಆಳ್ವಿಕೆಯಿಂದ ಹೊರಬಂದು 75 ವರ್ಷಗಳು ಕಳೆದರೂ ನಾವಿನ್ನೂ ಆ ಬಿಳಿ ಬಣ್ಣದ ಕ್ರೇಜ್‌ನಿಂದ ಹೊರಬಂದಿಲ್ಲ. ಬಹುಶಃ ನಾವು ಬದಲಾಗಲು ಇನ್ನೂ ನೂರು ವರ್ಷ ಬೇಕೇನೋ!

ನಾನು ನನ್ನ ಇಪ್ಪತ್ತೊಂದು-ಇಪ್ಪತ್ತೆರಡು ವರ್ಷದವಳಾಗಿದ್ದಾಗ ನನ್ನ ಕಪ್ಪು ಬಣ್ಣದ ಬಗ್ಗೆ ತಿಳಿದುಕೊಂಡೆ. ಈ ಬಣ್ಣದಿಂದ ನನಗೆ ಆಗಬಹುದಾದ ಸಮಸ್ಯೆಯ ಬಗ್ಗೆಯೂ ಅರಿತುಕೊಂಡೆ. ನಾನು ನೋಡಲು ಅಷ್ಟೇನೂ ಚೆನ್ನಾಗಿಲ್ಲ ಎಂಬದನ್ನೂ ಅರ್ಥ ಮಾಡಿಕೊಂಡೆ. ಆದರೆ, ನಾನು ಇರುವುದೇ ಹಾಗೆ, ಬದಲಾಯಿಸುವುದು ಅಸಾಧ್ಯ ಎಂಬುದೂ ನನಗೆ ತಿಳಿದಿತ್ತು. ಆದರೆ, ನಾನು ಏನನ್ನಾದರೂ ಸಾಧಿಸಬೇಕು ಎಂದರೆ ತುಂಬಾ ಕಷ್ಟಪಡಬೇಕು. ಅದರಿಂದ ಮಾತ್ರ ನಾನು ಸಮಸ್ಯೆಗಳಿಂದ ಮುಕ್ತಿ ಪಡೆಯಬಲ್ಲೆ ಎಂಬುದನ್ನು ಅರಿತಿದ್ದೆ. 

ಹೀಗಾಗಿ ನಾನು ಮಾಡೆಲಿಂಗ್ ಹಾಗೂ ಸಿನಿಮಾ ನಟಿಯಾದಾಗ ತುಂಬಾ ಕಷ್ಟಪಡಬೇಕಾಯಿತು, ಪಟ್ಟೆ ಕೂಡ. ಏಕೆಂದರೆ, ನನಗೆ ಅದರ ಅಗತ್ಯವಿತ್ತು. ನನಗೆ ಯಶಸ್ಸು ಸುಲಭವಾಗಿ ಸಿಗುವಂತಿರಲಿಲ್ಲ. ಆದರೆ, ನಾನು ನನ್ನನ್ನು ಮಾತ್ರ ಬದಲಾಯಿಸಿಕೊಳ್ಳಲು ಸಾಧ್ಯವಿತ್ತು, ಆದರೆ ನನ್ನ ಸುತ್ತಲಿನ ಸಮಾಜವನ್ನಲ್ಲ. ಹೀಗಾಗಿ ನಾನು ಅನಿವಾರ್ಯವಾಗಿ ಎಲ್ಲವನ್ನೂ ಸಹಿಸಿಕೊಂಡೆ, ನಾನು ಬದಲಾದೆ, ನನ್ನ ಕೆರಿಯರ್‌ನಲ್ಲಿ ಯಶಸ್ಸು ಸಾಧಿಸಿದೆ. ಇಂದೂ ಕೂಡ ಸಾಕಷ್ಟು ಕಷ್ಟ ಪಡುತ್ತಲೇ ಇದ್ದೇನೆ. ಕಾರಣ, ನನಗೆ ನನ್ನ ಬಣ್ಣ ಕಪ್ಪು ಎಂಬುದು ಗೊತ್ತು. ನಿಜ ಹೇಳಬೇಕು ಎಂದರೆ ನನ್ನ ಬಣ್ಣ ಕಂದು, ಆದರೆ ಬೇರೆಯವರು ನನ್ನ ಬಣ್ಣವನ್ನು ಹೇಳುವುದು ಕಪ್ಪು ಎಂದು' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

ಅಂದಹಾಗೆ, ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮಿಸ್ ಇಂಡಿಯಾ, ಮಿಸ್ ವರ್ಲ್ಡ್‌ ಆಗಿ ಆಯ್ಕೆಯಾದವರು. ಬಳಿಕ ಅವರು ಮಾಡೆಲಿಂಗ್ ಹಾಗು ಸಿನಿಮಾ ವೃತ್ತಿಜೀವನ ಆರಂಭಿಸಿದವರು. ಬಹಳಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್‌ಫುಲ್ ನಟಿ ಎಂದು ಗುರುತಿಸಿಕೊಂಡವರು. ಸದ್ಯ ಅವರು ಅಮೆರಿಕಾದಲ್ಲಿ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ, ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿರುವುದು. ಸದ್ಯ ಪ್ರಿಯಾಂಕಾ ಅಲ್ಲಿನ ಹಾಲಿವುಡ್ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳಲ್ಲಿ ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ