ಧೃತಿಗೆ ಶುಭ ಹಾರೈಸಿದ ಶಿವರಾಜ್‌ಕುಮಾರ್; ಪೋಸ್ಟ್‌ನಲ್ಲಿ ಬರೆದುಕೊಂಡಿದ್ದು ಹೀಗೆ..!

Published : May 17, 2025, 07:26 PM ISTUpdated : May 17, 2025, 07:43 PM IST
ಧೃತಿಗೆ ಶುಭ ಹಾರೈಸಿದ ಶಿವರಾಜ್‌ಕುಮಾರ್; ಪೋಸ್ಟ್‌ನಲ್ಲಿ ಬರೆದುಕೊಂಡಿದ್ದು ಹೀಗೆ..!

ಸಾರಾಂಶ

ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ ರಾಜ್‌ಕುಮಾರ್ ಅಮೆರಿಕದ ನಂ.1 ವಿನ್ಯಾಸ ಶಾಲೆ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್‌ನಿಂದ ಪದವಿ ಪಡೆದಿದ್ದಾರೆ. ಈ ಸಾಧನೆಗೆ ಶಿವರಾಜ್‌ಕುಮಾರ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೃತಿಯ ಸಾಧನೆ ತಂದೆಗೆ ಹೆಮ್ಮೆ ತರುವಂತಹದ್ದು ಎಂದು ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡದ ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಮಗಳು ಧೃತಿ ರಾಜ್‌ಕುಮಾರ್ ((Dhrithi Rajkumar) ) ಅವರು ಅಮೆರಿಕದ ನಂ. 1 ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ಈ ಸುದ್ದಿಯೀಗ ಸಾಕಷ್ಟು ವೈರಲ್ ಆಗುತ್ತಿದೆ. ಸಿನಿಮಾಗಳ ಜೊತೆಯಲ್ಲಿ ಸಾಮಾಜಿಕ ಕೆಲಸ ಮಾಡಿ ಹೆಸರು ಮಾಡಿದ್ದರು ಪುನೀತ್ ರಾಜ್‌ಕುಮಾರ್. ಈಗ ಅವರ ಮಗಳು ಕೂಡ ಹೆಮ್ಮೆಪಡುವ ವಿಷಯವನ್ನು ಹಂಚಿಕೊಂಡಿದ್ದಾರೆ.
 
ಕನ್ನಡ ನಟ ಪುನೀತ್‌ ರಾಜ್‌ಕುಮಾರ್‌ ಅವರ ಮಗಳು ಧೃತಿ ಅವರು ಅಮೆರಿಕದಲ್ಲಿ ಓದುತ್ತಿದ್ದರು ಎನ್ನೋದು ಅನೇಕರಿಗೆ ತಿಳಿದಿದೆ. ಕನ್ನಡ ನಟ ಪುನೀತ್‌ ರಾಜ್‌ಕುಮಾರ್‌ ದೈಹಿಕವಾಗಿ ನಮ್ಮನ್ನು ಅಗಲಿ ಹೋದ ಸಮಯದಲ್ಲಿ ಧೃತಿ ಅಮೆರಿಕದಲ್ಲಿ ಓದುತ್ತಿದ್ದರು. ಬರಸಿಡಿಲಿನಂತೆ ಎರಗಿದ ಅಪ್ಪನ ಸಾವಿನ ಸುದ್ದಿ ಕೇಳಿ ಭಾರತಕ್ಕೆ ಬಂದು ಅಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಅನುವಾರ್ಯವಾಗಿ ಮತ್ತೆ ಅಮೆರಿಕಕ್ಕೆ ಹೋಗಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಇದೀಗ ತಂದೆಗೆ ಅವರು ಹೆಮ್ಮೆ ತರಿಸುವಂತಹ ಕೆಲಸ ಮಾಡಿದ್ದಾರೆ. 

Parsons School of Design ಅಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪುತ್ರಿ ಧೃತಿ ಪದವಿ ಪಡೆದಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಧ್ರುತಿಯ ಪೋಸ್ಟ್‌ಗೆ ಇದೀಗ ನಟ ಅವರ ದೊಡ್ಡಪ್ಪ ಶಿವರಾಜ್‌ಕುಮಾರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಶಿವಣ್ಣ ಮಾಡಿರುವ ಪೋಸ್ಟ್ ಹೀಗಿದೆ:-

Hi ಟೋಟೊ, Congratulations! ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ  ದಿನ. You made me and dodappa very proud. Lots of good memories with ಅಪ್ಪು, ಅಶ್ವಿನಿ, you and ನುಕ್ಕಿ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ, ನಿನ್ನಲಿಯೇ ಅಪ್ಪು. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. Congratulations once again on your graduation ಟೋಟೊ.

ಅಂದಹಾಗೆ, Parsons School of Design ಅಮೆರಿಕದಲ್ಲಿ ನಂ 1 ಸ್ಥಾನ ಪಡೆದಿದೆ ಎಂದು ಹೇಳಲಾಗುವುದು. ಪುನೀತ್‌ ರಾಜ್‌ಕುಮಾರ್‌ ಅವರ ಮಗಳು ಧೃತಿ ಸಾಧನೆಗೆ ಅನೇಕರು ಮೆಚ್ಚುಗೆ ಪಡೆದಿದ್ದಾರೆ. ಧ್ರುತಿ ಅಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಖುಷಿ ಹಂಚಿಕೊಂಡಿದ್ದಾರೆ. ಇದೀಗ ನಟ ಶಿವಣ್ಣ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದು ಬಹಳಷ್ಟು ಜನರು ಅದಕ್ಕೆ ರಿಯಾಕ್ಟ್ ಮಾಡಿದ್ದಾರೆ. 

ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್, ನ್ಯೂಯಾರ್ಕ್ ನಗರದ ದಿ ನ್ಯೂ ಸ್ಕೂಲ್‌ನ ಭಾಗವಾಗಿದ್ದು, ಯುನೈಟೆಡ್ ಸ್ಟೇಟ್ಸ್‌ನ ನಂಬರ್ ಒನ್ ಡಿಸೈನ್ ಸ್ಕೂಲ್ ಎಂದು QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ 2022ರಲ್ಲಿ 5 ವರ್ಷಗಳಿಂದ ಮನ್ನಣೆ ಪಡೆದಿತ್ತು. 1896 ರಲ್ಲಿ ವಿಲಿಯಂ ಮೆರಿಟ್ ಚೇಸ್ ಸ್ಥಾಪಿಸಿದ ಈ ಶಾಲೆ, 1941 ರಲ್ಲಿ ಫ್ರಾಂಕ್ ಅಲ್ವಾ ಪಾರ್ಸನ್ಸ್ ಹೆಸರಿನಲ್ಲಿ ಮರುನಾಮಕರಣ ಆಯ್ತು. ಕಲೆ, ವಿನ್ಯಾಸ, ಸಾಮಾಜಿಕ ನ್ಯಾಯ, ಸಮರ್ಥನೀಯತೆಯ ಮೇಲೆ ಕೇಂದ್ರೀಕರಣ ಆಗಿತ್ತು. 

ಕನ್ನಡದ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಮಗಳು, ಡಾ ರಾಜ್‌ಕುಮಾರ್ ಮೊಮ್ಮಗಳು ಅಮೆರಿಕದ ಖ್ಯಾತ ಕಾಲೇಜಿನಲ್ಲಿ ಪದವಿ ಮುಗಿಸಿದ ಸುದ್ದಿ ಕೇಳಿ ಹಲವರು ವೈಯಕ್ತಿಕವಾಗಿ ಶುಭ ಹಾರೈಸಿದ್ದಾರೆ. ಜೊತೆಗೆ, ಕೆಲವರು ಸೋಷಿಯಲ್ ಮೀಡಿಯಾಗಳ ಮೂಲಕ ಕೂಡ ಶುಭ ಹಾರೈಸಿದ್ದಾರೆ. ಧೃತಿ ಸಾಧನೆಗೆ ಇಡೀ ಡಾ ರಾಜ್‌ಕುಮಾರ್ ಇಡೀ ಕುಟುಂಬ ಸಂಭ್ರಮಿಸುತ್ತಿದೆ.

 

https://twitter.com/NimmaShivanna/status/1923726860778865095

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!