ಮನುಷ್ಯ ಸಂಬಂಧ ಹಾಳುಮಾಡಿದ ಅದ್ಭುತ ಮೊಬೈಲ್ ಸಾಮ್ರಾಜ್ಯ ಸುಖಿನೋಭವ; ನಟ ಜಗ್ಗೇಶ್

By Shriram Bhat  |  First Published Jun 8, 2024, 1:29 PM IST

'ಸತ್ಯ ಅಲ್ಲವೆ..!!, ಇಂದು ಮನುಷ್ಯ ಸ್ನೇಹ ಸಂಬಂಧ ಬಂಧು ಭ್ರಾತೃ ಮಡದಿ ಮಕ್ಕಳು ಸಮಾಜದಿಂದ ಮಾತಿಗೆ ಪ್ರತಿಯುತ್ತರ ಸಂತೋಷ ಸಿಗದ ಅನಾಥ..!!, ಆದರು ಮನುಷ್ಯ ಎಲ್ಲರು ನನ್ನವರೆ ನನ್ನಷ್ಟು ಸುಖಿ ಯಾರಿಲ್ಲಾ ಎಂದು ನಟಿಸಿ ಮುಖವಾಡ ಹಾಕಿ ಬದುಕಿ..


ಸ್ಯಾಂಡಲ್‌ವುಡ್ ನವರಸನಾಯಕ ಖ್ಯಾತಿಯ ನಟ ಜಗ್ಗೇಶ್ (Jaggesh) ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಭಗವದ್ಗೀತೆ ಹಾಗೂ ಮೊಬೈಲ್‌ ಕುರಿತು ಬರೆದಿರುವ ಒಂದು ಸಂದೇಶದ ಇಮೇಜನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋ ಪೋಸ್ಟ್‌ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಆ ಕ್ಯಾಪ್ಶನ್ ನೋಡಿ ಹಲವರು ಹಲವು ತರದಲ್ಲಿ ಕಾಮೆಂಟ್ ಮಾಡಿದ್ದಾರೆ. ಹಾಗಿದ್ದರೆ ಜಗ್ಗೇಶ್ ಹಂಚಿಕೊಂಡ ಪೋಸ್ಟ್ ನಲ್ಲಿ ಏನಿದೆ? 

'ಕರ್ಣ ಕೊಟ್ಟು ಕೆಟ್ಟ. ದುರ್ಯೋಧನ ಕೊಡದೇ ಕೆಟ್ಟ. ಧರ್ಮರಾಜ ಜೂಜಾಡಿ ಕೆಟ್ಟ. ದ್ರೌಪದಿ ನಕ್ಕು ಕೆಟ್ಟಳು. ಭೀಷ್ಮ ಮಾತನಾಡದೇ ಕೆಟ್ಟ.  ಧೃತರಾಷ್ಟ್ರ ಮೌನ ವಹಿಸಿ ಕೆಟ್ಟ. ಶಕುನಿ ತಂತ್ರದಿಂದ ಕೆಟ್ಟ. ಕುಂತಿ ಮಂತ್ರದಿಂದ ಕೆಟ್ಟಳು. ಅಭಿಮನ್ಯು ಅರ್ಧವಿದ್ಯೆಯಿಮದ ಕೆಟ್ಟ. ಅಶ್ವತ್ಥಾಮ ಅವಿವೇಕತನದಿಂದ ಕೆಟ್ಟ. ಈ ಎಲ್ಲ ಕೆಟ್ಟವರ ಮಧ್ಯೆ ನಮಗೆ ಸಿಕ್ಕಿದ್ದು ಸುಂದರ ಮಹಾ ಭಾರತ. ಹಾಗೂ ಪ್ರೇರಕ ಭಗವದ್ಗೀತೆ. ಇವುಗಳನ್ನು ಸರಿಯಾಗಿ ಓದದೇ ಮೊಬೈಲ್ ಹುಚ್ಚಿನಿಂದನಾವು ಕೆಟ್ಟಿದ್ದೇವೆ...' ಎಂದು ಬರೆದಿರುವ ಪೋಸ್ಟ್ ಅದಾಗಿದೆ. 

Tap to resize

Latest Videos

ವೈಷ್ಣವಿ ಗೌಡ ಮುತ್ತಿಗೆ ಪಟ್ಟು ಹಿಡಿದ ಅವನ ಆ ವೀಡಿಯೋ ಈಗ ವೈರಲ್!

ಮೇಲಿನ ಬರಹ ಇರುವ ಪೋಸ್ಟ್‌ಗೆ ನಟ ಜಗ್ಗೇಶ್ ಕೊಟ್ಟಿರುವ ಕ್ಯಾಪ್ಶನ್ ಹೀಗಿದೆ, ಓದಿಕೊಳ್ಳಿ.. 

'ಸತ್ಯ ಅಲ್ಲವೆ..!!, ಇಂದು ಮನುಷ್ಯ ಸ್ನೇಹ ಸಂಬಂಧ ಬಂಧು ಭ್ರಾತೃ ಮಡದಿ ಮಕ್ಕಳು ಸಮಾಜದಿಂದ ಮಾತಿಗೆ ಪ್ರತಿಯುತ್ತರ ಸಂತೋಷ ಸಿಗದ ಅನಾಥ..!!, ಆದರು ಮನುಷ್ಯ ಎಲ್ಲರು ನನ್ನವರೆ ನನ್ನಷ್ಟು ಸುಖಿ ಯಾರಿಲ್ಲಾ ಎಂದು ನಟಿಸಿ ಮುಖವಾಡ ಹಾಕಿ ಬದುಕಿ ಏಕಾಂತದಲ್ಲಿ ಕಣ್ಣೀರಿನ ಬಂಧುವಾಗಿ ಬದುಕುವ!! ವಾವ್ ಮನುಷ್ಯ ಸಂಬಂಧ ಹಾಳುಮಾಡಿದ ಅದ್ಭುತ ಮೊಬೈಲ್ ಸಾಮ್ರಾಜ್ಯ ಸುಖಿನೋಭವ!!..' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಪವನ್ ಕಲ್ಯಾಣ್ ಎರಡನೇ ಹೆಂಡತಿ ರೇಣು ದೇಸಾಯಿಗೆ ಎರಡನೇ ಮದ್ವೆಯಂತೆ!

ಜಗ್ಗೇಶ್ ಅವರ ಪೋಸ್ಟ್ ಬಗ್ಗೆ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಲವಾರು ವಿಭಿನ್ನ ಕಾಮೆಂಟ್‌ಗಳು ಬಂದಿವೆ. ಅದರಲ್ಲಿ ಒಂದು 'wow ಎಂಥ ಅದ್ಭುತ ಕಲಾವಿದರು ಸಾರ್ ನೀವು ಅಷ್ಟು ದೊಡ್ಡ ಭಗವದ್ಗೀತೆ ಅನ್ನು ಎಷ್ಟು ಚೆನ್ನಾಗಿ 12 ಸಾಲುಗಳಲ್ಲಿ ವಿತರಿಸಿದ ನಿಮಗೆ ನನ್ನ ಧನ್ಯವಾದಗಳು ಸರ್..' ಎಂದಿದ್ದರೆ, ಇನ್ನೊಂದು 'ಅಷ್ಟು ದೊಡ್ಡ ಭಗವದ್ಗೀತೆ ಎಷ್ಟು ವಿವಾರಿಸಿದ್ರಿ ಜಗ್ಗಣ್ಣ ನಿಜವಾಗಲು ಅದ್ಬುತ🙏.. ' ಎಂದಿದೆ. 

ಕುಕೀ, ಮುಂದಿನ ಜನ್ಮದಲ್ಲೂ ನಾನೇ ನಿನ್ ಹೆಂಡ್ತಿಯಾಗ್ಬೇಕಾ? ಹೌದು, ಒಂದೇ ಜನ್ಮ ಸಾಕಾಗಲ್ಲ ನಿಂಗ್ ಕಾಟ ಕೊಡೋಕೆ!

ಇನ್ನೊಂದು ಕಾಮೆಂಟ್ ಹೀಗಿದೆ.. 'ಮನೆಗಳಲ್ಲಿ ಎಲ್ಲರೂ ಇದ್ದಾಗ ಮೊಬೈಲ್ ಬಳಕೆ ಕಮ್ಮಿ ಮಾಡಬೇಕು.. ಮುಖತಃ ಮಾತುಕತೆ , ಮುಕ್ತಮಾತುಕತೆಗೆ ಜಾಗ ಕೊಡಬೇಕು.. ನಮ್ಮೊಂದಿಗೆ ಯಾರಾದರೂ ಮಾತಾಡುತ್ತಿದ್ದರೆ ಮೊಬೈಲ್ ಅಲ್ಲಿ ನಾವು ಮೊಬೈಲ್ ಅಲ್ಲಿ ಮುಳುಗಿ ಹೋಗಬಾರದು!! ಈ ಜಗವೇ ಒಂದು ರೀಲ್ಸ್ ಮಯ ಅಣ್ಣ. ಯುವಕರು ಅದರಿಂದ ಹೊರಬರಬೇಕು! ಎಲ್ಲರೂ ಕೂಡ..'.

ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?

 

 

click me!