ನನ್ನ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲರಿಗೂ ವಿವರ ಕೊಡುವ ಅಗತ್ಯವಿಲ್ಲ. ಹಿರಿಯರು ಒಪ್ಪಿಗೆ ಪಡೆದು ಸೂಕ್ತ ವ್ಯಕ್ತಿಯನ್ನು ಮದುವೆಯಾಗಬೇಕು ಎಂದುಕೊಂಡೆ. ಕುಟುಂಬದ ಸ್ನೇಹಿತರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆಯಿತ್ತು. ನಿಶ್ಚಿತಾರ್ಥದ ಬಳಿಕ ಮಕ್ಕಳಿದ್ದಾರೆ ಅವರಿಗೆ ಬೆಂಬಲವಾಗಿ..
ಟಾಲಿವುಡ್ ಪವರ್ ಸ್ಟಾರ್ ಮಾಜಿ ಪತ್ನಿ ರೇಣು ದೇಸಾಯಿ ಅವರು ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿ ಈಗ ಬಿರುಗಾಳಿಯಂತೆ ಹಬ್ಬುತ್ತಿದೆ. 2009ರಲ್ಲಿ ನಟ ಪವನ್ ಕಲ್ಯಾಣ್ ಅವರನ್ನು ಮದುವೆಯಾಗಿದ್ದ ನಟಿ ರೇಣು ದೇಸಾಯಿ 2012ರಲ್ಲಿ ಪರಸ್ಪರ ಮನಸ್ತಾಪ ಮೂಡಿದ್ದ ಕಾರಣಕ್ಕೆ ಡಿವೋರ್ಸ್ ಪಡೆದಿದ್ದರು. ಇದೀಗ, ರೇಣು ದೇಸಾಯಿ ಎರಡನೇ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ.
ರವಿ ತೇಜ ನಟನೆಯ 'ಟೈಗರ್ ನಾಗೇಶ್ವರ್ ರಾವ್' ಸಿನಿಮಾದಲ್ಲಿ ನಟಿಸಿರುವ ರೇಣು ಪ್ರಚಾರದ ಭಾಗವಾಗಿ ನೀಡಿದ್ದ ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಒಂದು ವರ್ಷದ ಹಿಂದೆಯೇ ರೇಣು ಮಾತನಾಡಿದ್ದರು. 2009ರಲ್ಲಿ ಪವನ್ ಕಲ್ಯಾಣ್‌ರನ್ನು ಮದುವೆ ಮಾಡಿಕೊಂಡು 2012ರಲ್ಲಿ ಡಿವೋರ್ಸ್ ಪಡೆದು ಈಗ ಇಬ್ಬರು ಮಕ್ಕಳ ಜೊತೆ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ಉಂಗುರ ಬದಲಾಯಿಸಿಕೊಂಡಿರುವುದರ ಬಗ್ಗೆ ರಿವೀಲ್ ಮಾಡಿದ್ದರು.
ನನ್ನ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲರಿಗೂ ವಿವರ ಕೊಡುವ ಅಗತ್ಯವಿಲ್ಲ. ಹಿರಿಯರು ಒಪ್ಪಿಗೆ ಪಡೆದು ಸೂಕ್ತ ವ್ಯಕ್ತಿಯನ್ನು ಮದುವೆಯಾಗಬೇಕು ಎಂದುಕೊಂಡೆ. ಕುಟುಂಬದ ಸ್ನೇಹಿತರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆಯಿತ್ತು. ನಿಶ್ಚಿತಾರ್ಥದ ಬಳಿಕ ಮಕ್ಕಳಿದ್ದಾರೆ ಅವರಿಗೆ ಬೆಂಬಲವಾಗಿ ಇರಬೇಕು ಎಂದು ನನ್ನ ಫ್ಯಾಮಿಲಿ ಫ್ರೆಂಡ್ಸ್ ಹೇಳಿದ್ದಾರೆ. ನನ್ನ ನಿಶ್ಚಿತಾರ್ಥದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು. ಅದು ದೊಡ್ಡ ಸುದ್ದಿಯಾಗಿದೆ.
ಮನರಂಜನಾ ಕ್ಷೇತ್ರದ ದಿಗ್ಗಜ ರಾಮೋಜಿ ರಾವ್ ನಿಧನ
ಆದರೆ ಈಗ ನನಗೆ ಅರಿವಾಗಿದೆ, ನನ್ನ ಮಗನಿಗೆ ಕೇವಲ 7 ವರ್ಷ. ಮತ್ತೆ ಮದುವೆ ಮಾಡಿಕೊಂಡ ನಂತರ ಅವರಿಗೂ ಸಮಯ ಕೊಡಬೇಕು ಎಂದು. ಇನ್ನು ನನ್ನ ಮಗಳಿಗೆ ಬಹಳ ಚಿಕ್ಕ ವಯಸ್ಸು ತಂದೆ ಕೂಡ ಇಲ್ಲ' ಎಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 'ನಾನು ಮಾಡಿದ್ದು ತಪ್ಪೋ ಸರಿನೋ ಗೊತ್ತಿಲ್ಲ. ಎಲ್ಲಾ ಗೊತ್ತಿದ್ದು ಆ ನಿರ್ಣಯ ಕೈಗೊಂಡೆ. ಮದುವೆ ಕ್ಯಾನ್ಸಲ್ ಮಾಡಿಕೊಂಡೆ. ಈಗ ಮಗಳ ವಯಸ್ಸು 13 ವರ್ಷ. ಬಿಟ್ಟು ಬಂದಾಗ 7 ವರ್ಷ. ಆ ಸಮಯದಲ್ಲಿ ನಾನು ಆ ನಿರ್ಧಾರ ತೆಗೆದುಕೊಂಡಿದ್ದರೆ ಸರಿ ಅನಿಸುತ್ತಿರಲಿಲ್ಲ.
ಕುಕೀ, ಮುಂದಿನ ಜನ್ಮದಲ್ಲೂ ನಾನೇ ನಿನ್ ಹೆಂಡ್ತಿಯಾಗ್ಬೇಕಾ? ಹೌದು, ಒಂದೇ ಜನ್ಮ ಸಾಕಾಗಲ್ಲ ನಿಂಗ್ ಕಾಟ ಕೊಡೋಕೆ!
ನನಗೆ ಮದುವೆ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ಮಂದುವೆ ಆಗಬೇಕು ಅನಿಸುತ್ತದೆ. ನನಗೆ ಮದುವೆಯಲ್ಲಿ ತುಂಬಾ ನಂಬಿಕೆ ಇದೆ. ಮದುವೆ ಎಂಬ ಪರಿಕಲ್ಪನೆ ನನಗೆ ಬಹಳ ಇಷ್ಟ. ಸಂಬಂಧವಿಲ್ಲದ ಇಬ್ಬರು ಜೀವನ ಹಂಚಿಕೊಳ್ಳುವ ಆ ಬಾಂಧವ್ಯ ಬಹಳ ಗಟ್ಟಿಯಾದದ್ದರು' ಎಂದು ರೇಣು ಹೇಳಿದ್ದಾರೆ. 'ನಾನು ಮತ್ತೊಂದು ಮದುವೆ ಮಾಡಿಕೊಳ್ಳಲು ಕಾಯುತ್ತಿರುವೆ. ಆದ್ಯಾ ಕಾಲೇಜ್‌ಗೆ ಹೋದ ಮೇಲೆ ನನ್ನ ಬಗ್ಗೆ ಯೋಚಿಸುತ್ತೇನೆ. ನನ್ನ ಮಕ್ಕಳು ನನಗೆ ಮದುವೆಯಾಗಬೇಕೆಂದು ಬಯಸುತ್ತಾರೆ. ಅವರ ಸಂತೋಷವಾಗಿದ್ದರೆ ಅದೇ ನನಗೆ ಖುಷಿ.
ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?
'ಮದುವೆ ಅನ್ನೋದು ದೇವರ ವರ, ನನ್ನ ಮಕ್ಕಳು ದಾಂಪತ್ಯದ ಫಲ' ಅನ್ನೋದು ನನ್ನ ಅಭಿಪ್ರಾಯ. ಇನ್ನೆರಡು ವರ್ಷಗಳಲ್ಲಿ ಮಕ್ಕಳು ದೊಡ್ಡವರಾಗುತ್ತಾರೆ ಆಗ ಮದುವೆ ಬಗ್ಗೆ ಯೋಜಿಸುತ್ತೀನಿ' ಎಂದಿದ್ದರು ರೇಣು ದೇಸಾಯಿ. ಇದೀಗ, ತಮ್ದ ಮಾಜಿ ಗಂಡ ಪವನ್ ಕಲ್ಯಾಣ್ ಅವರು ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹೊತ್ತಲ್ಲೇ ಅವರ ಮಾಜಿ ಹೆಂಡತಿ ಎರಡನೇ ಮದುವೆಗೆ ಸಜ್ಜಾಗಿದ್ದಾರೆ.
ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನಕ್ಕೆ ಇದೇ ಕಾರಣ; ಬೆಸ್ಟ್ ಕಾಮೆಂಟ್ ಇದಪ್ಪ ಅಂತಿದಾರೆ, ಹೌದಾ?