ವಿಜಯ್ ಸೂರ್ಯ ಹಾಗು ವೈಷ್ಣವಿ ಗೌಡ ನಟಿಸಿದ್ದ ಸೀರಿಯಲ್ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡತೊಡಗಿದೆ. ಸನ್ನಿಧಿ, ಅಂದರೆ ವೈಷ್ಣವಿ ಗೌಡ ಹಾಗೂ ವಿಜಯ್ ಸೂರ್ಯ ಜೋಡಿ..
ನಟಿ ವೈಷ್ಣವಿ ಗೌಡ (Vaishnavi Gowda) ಹಾಗು ನಟ ವಿಜಯ್ ಸೂರ್ಯ (Vijay Suria) ಅವರಿಬ್ಬರು ಕೂಡ ಕನ್ನಡಿಯ ಎದುರು ನಿಂತಿದ್ದಾರೆ. ಇಬ್ಬರಿಗೂ ರೆಡಿಯಾಗುವ ಅರ್ಜೆಂಟ್. ವೈಷ್ಣವಿ ಸಜ್ಜಾಗುತ್ತಿರುವಂತೆ ಅವಳನ್ನು ಪಕ್ಕಕ್ಕೆ ತಳ್ಳಿ ತಾನು ರೆಡಿಯಾಗಲು ಹಾತೊರೆಯುವ ವಿಜಯ ಸೂರ್ಯ ಅವರಿಗೆ ವೈಷ್ಣವಿ ಕಡೆಯಿಂದ ಆವಾಜ್. ಹೀಗೆ ಅವರಿಬ್ಬರ ಹುಸಿಕೋಪದ ಮಾತುಕತೆ ನಡೆಯುತ್ತಿರುವಂತೆ, ವಿಜಯ್ ಸೂರ್ಯ- 'ನಿಂಗೆ ಕನ್ನಡಿ ಬಿಟ್ಟುಕೊಡಬೇಕು ಅಂದ್ರೆ ಒಂದ್ ಕಂಡೀಷನ್. ನಂಗೆ ಒಂದು ಪಪ್ಪಿ ಕೊಡ್ಬೇಕು' ಅಂತಾರೆ. ಅದಕ್ಕೆ ವೈಷ್ಣವಿ ನೋ ಅಂತಾರೆ.
ಹಾಗಿದ್ರೆ ನಾನು ನಿಂಗೆ ಕನ್ನಡಿ ಬಿಟ್ಟುಕೊಡಲ್ಲ ಅಂತಾರೆ ವಿಜಯ್ ಸೂರ್ಯ. ಕೋಪಗೊಳ್ಳುವ ವೈಷ್ಣವಿ ಅವರನ್ನು ಸೈಡ್‌ಗೆ ತಳ್ಳಿ ತಾನು ಕನ್ನಡಿ ಮುಂದೆ ನಿಲ್ಲಲು ವಿಜಯ್ 'ನಿಂಗೆ ಇವತ್ತು ಒಂದ್ ಕನ್ಸೇಷನ್ ಎನ್ನಲು ವೈಷ್ಣವಿ ಗೌಡ ಏನು ಎನ್ನುವರು. ಇವತ್ತು ಒಂದೇ ಕೆನ್ನೆಗೆ ಕೊಟ್ಟರೆ ಸಾಕು ಎನ್ನುವರು. ಅದಕ್ಕೆ ವೈಷ್ಣವಿ ಹುಸಿ ಕೋಪ ತೋರಿಸುತ್ತ ಸರಿ, ಬೇಗ ಎನ್ನುತ್ತಾ ರೊಮ್ಯಾಂಟಿಕ್ ಮೂಡನಲ್ಲಿ ವಿಜಯ್ ಒಂದು ಕೆನ್ನೆಗೆ ಮುತ್ತು ಕೊಡುವಳು. ಅಂತೂ ಇಂತೂ ಚುಂಬನ ಪಡೆದ ಖುಷಿಯಲ್ಲಿ ವಿಜಯ್ ಸೂರ್ಯಾಲ್ಲಿಂದ ಹೊರಡುವರು.
ಪವನ್ ಕಲ್ಯಾಣ್ ಎರಡನೇ ಹೆಂಡತಿ ರೇಣು ದೇಸಾಯಿಗೆ ಎರಡನೇ ಮದ್ವೆಯಂತೆ!
ವಿಜಯ್ ಸೂರ್ಯ ಹಾಗು ವೈಷ್ಣವಿ ಗೌಡ ನಟಿಸಿದ್ದ ಸೀರಿಯಲ್ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡತೊಡಗಿದೆ. ಸನ್ನಿಧಿ, ಅಂದರೆ ವೈಷ್ಣವಿ ಗೌಡ ಹಾಗೂ ವಿಜಯ್ ಸೂರ್ಯ ಜೋಡಿ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದರು. ಅವರಿಬ್ಬರ ಜೋಡಿಯನ್ನು ಕಿರುತೆರೆ ವೀಕ್ಷಕರು ಅದೆಷ್ಟು ಮನಸ್ಸಿಗೆ ಹತ್ತಿರ ತಂದುಕೊಂಡಿದ್ದರು ಎಂದರೆ, ಅವರಿಬ್ಬರನ್ನೂ ನಿಜ ಜೀವನದಲ್ಲಿಯೂ ಗಂಡ-ಹೆಂಡತಿ ಎಂಬಂತೆ ನೋಡತೊಡಗಿದ್ದರು. ಆದರೆ, ವಿಜಯ್ ಈಗಾಗಲೇ ದಾಂಪತ್ಯದಲ್ಲಿದ್ದಾರೆ. ವೈಷ್ಣವಿಗೆ ಮದುವೆ ಆಗಿಲ್ಲ.
ಕುಕೀ, ಮುಂದಿನ ಜನ್ಮದಲ್ಲೂ ನಾನೇ ನಿನ್ ಹೆಂಡ್ತಿಯಾಗ್ಬೇಕಾ? ಹೌದು, ಒಂದೇ ಜನ್ಮ ಸಾಕಾಗಲ್ಲ ನಿಂಗ್ ಕಾಟ ಕೊಡೋಕೆ!
ಇದೀಗ ವೈರಲ್ ಆಗುತ್ತಿರುವ ಈ ವೀಡಿಯೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಕಾಮೆಂಟ್‌ಗಳು ಹರಿದಾಡುತ್ತಿವೆ, ಇನ್ನೂ ಬಹಳಷ್ಟು ಬರಲಿವೆ. ಸದ್ಯ ನಟಿ ವೈಷ್ಣವಿ ಗೌಡ ಸೀತಾರಾಮ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ನಟ ವಿಜಯ್ ಸೂರ್ಯ ಸಿನಿಮಾಗಳ ಕಡೆ ಗಮನ ಹರಿಸುತ್ತಿದ್ದಾರೆ. ಅವರಿಬ್ಬರ ಜೋಡಿಯನ್ನು ಅಂದರೆ, ಸೂಪರ್ ಹಿಟ್ ಸೀರಿಯಲ್ ಅಗ್ನಿಸಾಕ್ಷಿ ಜೋಡಿಯನ್ನು ವೀಕ್ಷಕರು ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತಿದೆ. ಮುಂದೆ ಈ ಜೋಡಿ ಒಟ್ಟಿಗೇ ಸೀರಿಯಲ್ ಮಾಡಲಿ ಎಂದು ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ ಎನ್ನಲಾಗಿದೆ.
ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?