ಆಸ್ತಿಯಲ್ಲಿ ನಟಿ ಮೀನಾ ಹೆಸರಿಗೆ ಬಿಡಿಗಾಸೂ ಕೂಡ ಬರೆಯದೇ, ತಮ್ಮ 300 ಕೋಟಿಗೂ ಮಿಕ್ಕ ಆಸ್ತಿಯನ್ನು ಪತ್ನಿ ಮೀನಾ ಬದಲು ಮಗಳು ನೈನಿಕಾ ಹೆಸರಿಗೆ ಬರೆದಿಟ್ಟಿದ್ದಾರೆ. ಅದರಲ್ಲೇನು ಸಮಸ್ಯೆ? ಮಗಳು ನೈನಿಕಾ..
ದಕ್ಷಿಣ ಭಾರತದ ಸ್ಟಾರ್ ನಟಿ ಮೀನಾ (Meena) ಬಗ್ಗೆ ಯಾರಿಗೆ ಗೊತ್ತಿಲ್ಲ? ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿ ಮೀನಾ ನಟಿಸಿ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧಿಸಿ ಸೈ ಎನ್ನಿಸಿಕೊಂಡಿರುವ ಮೀನಾ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಏನಾದ್ರೂ ಯಡವಟ್ಟು ಮಾಡಿಕೊಂಡಿದ್ದಾರೆಯೇ? ಹಾಗೇನೂ ಇಲ್ಲ ಎನ್ನಲೇಬೇಕು. ಆದರೆ, ಈ ಒಂದು ಸಂಗತಿ ಮಾತ್ರ ಹಲವರನ್ನು ಅಚ್ಚರಿಗೆ ದೂಡುವುದು ಖಂಡಿತ..! ಹಾಗಿದ್ದರೆ ಅದೇನು? ಮುಂದೆ ನೋಡಿ.. .
ನಟಿ ಮೀನಾ ಅವರು ವಿದ್ಯಾಸಾಗರ್ (Vidyasagar) ಅವರನ್ನು ಮದುವೆ ಆಗಿರುವುದು ಗೊತ್ತೇ ಇದೆ. 2009ರಲ್ಲಿ ಮೀನಾ ಹಾಗೂ ವಿದ್ಯಾ ಸಾಗರ್ ಅವರು ಮದುವೆ ಆಗಿದ್ದಾರೆ. ಆದರೆ, ದುರದೃಷ್ಷವಶಾತ್ ಎಂಬಂತೆ, ನಟಿ ಮೀನಾ ಪತಿ ವಿದ್ಯಾ ಸಾಗರ್ ಅವರು ವಿಚಿತ್ರ ಕಾಯಿಲೆ (ಶ್ವಾಸಕೋಶಕ್ಕೆ ಸಂಬಂಧಿಸಿದ್ದು) ಯಿಂದ ಬಳಲಿ 2022 ರಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಹೇಳಿಕೇಳಿ ವಿದ್ಯಾ ಸಾಗರ್ ಅವರು ದೊಡ್ಡ ಬಿಸಿನೆಸ್ ಮ್ಯಾನ್. ಅವರು ತಮ್ಮ 300 ಕೋಟಿಗೂ ಮಿಕ್ಕ ಆಸ್ತಿಯನ್ನು ಅದೇನು ಮಾಡಿದ್ದಾರೆ ಗೊತ್ತಾ?
ಕೆಜಿಎಫ್ ಸ್ಟಾರ್ ಯಶ್ 'ಯಾಣ'ಕ್ಕೆ ಹೋಗಿದ್ದೇಕೆ? ಅಲ್ಲಿ ಕಷ್ಟಕ್ಕೆ ಸಿಲುಕಿ ಒದ್ದಾಡಿದ್ದೇಕೆ...?
ಆಸ್ತಿಯಲ್ಲಿ ನಟಿ ಮೀನಾ ಹೆಸರಿಗೆ ಬಿಡಿಗಾಸೂ ಕೂಡ ಬರೆಯದೇ ವಿಧಿವಶರಾಗಿದ್ದಾರೆ ಪತಿ ವಿದ್ಯಾ ಸಾಗರ್. ಹೌದು, ಮೀನಾ ಪತಿ ವಿದ್ಯಾ ಸಾಗರ್ ಅವರು ತಮ್ಮ 300 ಕೋಟಿ ಆಸ್ತಿಯನ್ನು ಪತ್ನಿ ಮೀನಾ ಬದಲು ಮಗಳು ನೈನಿಕಾ ಹೆಸರಿಗೆ ಬರೆದಿಟ್ಟಿದ್ದಾರೆ. ಅದರಲ್ಲೇನು ಸಮಸ್ಯೆ? ಮಗಳು ನೈನಿಕಾ ಅಂದ್ರೆ ಅಪ್ಪ ವಿದ್ಯಾ ಸಾಗರ್‌ಗೆ ಹೆಚ್ಚು ಪ್ರೀತಿ ಇರಬಹುದು. ಅದಕ್ಕಾಗಿ ಅವರು ಪತ್ನಿ ಬದಲು ಮಗಳ ಹೆಸರಿಗೆ ಬರೆದಿರಬಹುದು. ಆದರೆ, ಮಗಳು ಹಾಗೂ ಪತ್ನಿಯ ಹೆಸರಿನಲ್ಲಿ 'ಜಾಯಿಂಟ್ ವಿಲ್' ಕೂಡ ಬರೆದಿರಬಹುದು. ಅದು ಸುದ್ದಿಯಾಗದಿರಬಹುದು.
ವಿಲ್ ಪತ್ರದಲ್ಲಿ ವಿದ್ಯಾ ಸಾಗರ್ ಅವರು ಮೀನಾ ಹೆಸರಿಗೆ ಏನೇನೂ ಬರೆದಿಲ್ಲ ಅಂತ ಹೇಳಲಾಗದು. ಮೀನಾ ಹೆಸರಿಗೆ ಮನೆ ಬರೆದಿರಬಹುದು, ಸ್ಥಿರಾಸ್ತಿಯನ್ನು ಮಗಳ ಹೆಸರಿಗೆ ಬರೆದಿರಬಹುದು. ಆದರೆ ಓಡಾಡುತ್ತಿರುವ ಸುದ್ದಿ ಪ್ರಕಾರ, ಮೀನಾ ಪತಿ ವಿದ್ಯಾ ಸಾಗರ್ ಅವರು ತಮ್ಮ ಎಲ್ಲಾ ಆಸ್ತಿಯನ್ನೂ ಮಗಳು ನೈನಿಕಾ ಹೆಸರಿಗೇ ಬರೆದಿದ್ದಾರೆ. ಆದರೆ ಈ ಸುದ್ದಿ ಅದೆಷ್ಟು ಮಟ್ಟಿಗೆ ನಿಜ ಎಂಬುದು ಸದ್ಯಕ್ಕೆ ಗೊತ್ತಿಲ್ಲ. ಇದ್ದರೂ ಇರಬಹುದು. ಮಗಳ ಹೆಸರಿಗೆ ಬರೆದರೂ ಕೂಡ ಮಗಳು ಅಮ್ಮನಿಗೆ ಕೊಡಬಹುದಲ್ಲ, ಜೊತೆಗೇ ಇರಬಹುದಲ್ಲ!
ರಾಕಿಂಗ್ ಸ್ಟಾರ್ ಯಶ್ ಮೇರು ನಟ ಡಾ ರಾಜ್‌ಕುಮಾರ್ ಬಗ್ಗೆ ಹೇಳಿರೋ ಮಾತು.. ಹೀಗಾ...!?