Clarification: ರಿಷಬ್ ಶೆಟ್ಟಿ 'ಸಂಸಾರ'ದ ಬಗ್ಗೆ ಸ್ಪಷ್ಟೀಕರಣ, 'ಎನ್ನ ನಂಬಿ ಕುಟುಂಬ ಸಂಸಾರ' ಅಂದ್ರೇನು?

Published : Apr 07, 2025, 03:25 PM ISTUpdated : Apr 07, 2025, 04:00 PM IST
Clarification: ರಿಷಬ್ ಶೆಟ್ಟಿ 'ಸಂಸಾರ'ದ ಬಗ್ಗೆ ಸ್ಪಷ್ಟೀಕರಣ, 'ಎನ್ನ ನಂಬಿ ಕುಟುಂಬ ಸಂಸಾರ' ಅಂದ್ರೇನು?

ಸಾರಾಂಶ

ಸಿನಿಮಾ ಬಂದಾದ ಸಣ್ಣಪುಟ್ಟ ಅಡೆತಡೆಗಳು ಇರೋದು ಸಹಜ. ಅದನ್ನು ಅವರನ್ನು ನೋಡಿದಾಗ ದೈವ ಅವರಿಗೆ ಸೂಚನೆ ಕೊಟ್ಟಿದೆ ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ ಗಳು ಇರ್ತಾರೆ. ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ..

'ಸಂಸಾರ ಅಂದರೆ ರಿಷಬ್ ಅವರ ಸಿನಿಮಾ ಸಂಸಾರದ ಬಗ್ಗೆ ದೈವ ನುಡಿದಿದೆ' ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಜಾರಂದಾಯ ಮತ್ತು ಬಂಟ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ರವಿಪ್ರಸನ್ನ ಹೇಳಿಕೆ ನೀಡಿದ್ದಾರೆ. ರಿಷಬ್ ಶೆಟ್ಟಿಯವರು ಪತ್ನಿ ಮತ್ತು ಮಕ್ಕಳ ಜೊತೆಗೆ ದೈವಸ್ಥಾನಕ್ಕೆ ಬಂದಿದ್ದಾರೆ. ಮಗನ ಹುಟ್ಟುಹಬ್ಬವಾದ ಕಾರಣ ದೇವಸ್ಥಾನದಲ್ಲಿ ಕಳೆಯಲು ಬಂದಿದ್ದಾರೆ, ಪತ್ನಿ ಮತ್ತು ಮಕ್ಕಳ ಸಮೇತ ದೈವದ ಎದುರು ನಿಂತು‌ ಪ್ರಾರ್ಥನೆ ಸಲ್ಲಿಸಿದ್ದಾರೆ, ಈ ವೇಳೆ ದೈವ ತುಳುವಿನಲ್ಲಿ ಎನ್ನ ನಂಬಿ ಕುಟುಂಬ ಸಂಸಾರ ಎಂದು ಹೇಳಿದೆ. 

ದೈವಗಳ ನುಡಿಗಳ ಅರ್ಥದಲ್ಲಿ ಸಂಸಾರ ಅಂದರೆ ಪತ್ನಿ, ಮಕ್ಕಳು ಅಂತ ಮಾತ್ರವಲ್ಲ, ರಿಷಬ್ ಶೆಟ್ಟಿ ವಿಚಾರದಲ್ಲಿ ಅವರ ಸಿನಿಮಾ ಎನ್ನುವ ಸಂಸಾರದ ಬಗ್ಗೆ ಹೇಳಿದೆ. ಕಟೀಲು ಕ್ಷೇತ್ರದಲ್ಲಿ ಸಿಕ್ಕಿದ ರಿಷಬ್ ಶೆಟ್ಟಿಯವರಿಗೆ ನಾವು ಇದರ ಆಹ್ವಾನ ಕೊಟ್ಟಿದ್ದೆವು. ಅದರಂತೆ ನಿನ್ನೆ ಸಂಜೆ ಕರೆ ಮಾಡಿ ಬರ್ತೇನೆ ಅಂತ ಹೇಳಿದರು. ಅದರಂತೆ ಬಂದಾಗ ನಾವು ಅವರಿಗೆ ಕ್ಷೇತ್ರದ ವತಿಯಿಂದ ಗೌರವ ಸಲ್ಲಿಸಿದ್ದೇವೆ. ಆಗ ಕೇಳಿದಾಗಲೂ ಅವರು ನಮಗೆ ಒಳ್ಳೆದಾಗಬೇಕು ಅಂತ ಪ್ರಾರ್ಥನೆ ಅಷ್ಟೇ ಹೇಳಿದ್ದಾರೆ. 

ಸದ್ಯವೇ 'ಘಾಟಿ'ಯಾಗಿ ದರ್ಶನ ನೀಡಲಿರುವ ಅನುಷ್ಕಾ ಶೆಟ್ಟಿ; ಅರುಂಧತಿ ರೆಕಾರ್ಡ್ ಮೂಲೆ ಸೇರುತ್ತಾ?

ಮಗ ರನ್ ವಿತ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಸಂಸಾರ ಎನ್ನುವುದು ದೈವದ ಭಾಷೆಯಲ್ಲಿ ಸಮೂಹ ಅನ್ನೋ ಅರ್ಥಕ್ಕೆ ಒಳಪಡುತ್ತದೆ. ದೈವವನ್ನ ತಾಯಿ ಅಂತ ಸ್ವೀಕರಿಸಿ ಮನಸ್ಸಿನ ದುಃಖ ಹೇಳಿಕೊಳ್ತೇವೆ. ರಿಷಬ್ ಶೆಟ್ಟರಿಗೂ ಸಂಸಾರ ಎನ್ನುವ ಪದ ಬಳಸಿದೆ ದೈವ. ಅದರ ಪ್ರಕಾರ ಸಂಸಾರ ಅಂದರೆ ಅವರ ಇಡೀ ಸಿನಿಮಾ ಸಂಸಾರ. ಪಂಜುರ್ಲಿ‌ ನುಡಿ ಭವಿಷ್ಯತ್ತಿನಲ್ಲಿ ಜಾಗೃತೆಯಿಂದ ಇರಬೇಕು ಅಂತ ಇತ್ತು. ಇಡೀ ತಂಡ ಯಶಸ್ಸಾಗ್ತದೆ, ಆದರೆ ಐದು ತಿಂಗಳು ಜಾಗೃತೆಯಿಂದ ಇರಬೇಕು ಅಂತ ಹೇಳಿದೆ. 

ಅವರ ಸಿನಿಮಾ ಬಂದಾದ ಸಣ್ಣಪುಟ್ಟ ಅಡೆತಡೆಗಳು ಇರೋದು ಸಹಜ. ಅದನ್ನು ಅವರನ್ನು ನೋಡಿದಾಗ ದೈವ ಅವರಿಗೆ ಸೂಚನೆ ಕೊಟ್ಟಿದೆ
ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ ಗಳು ಇರ್ತಾರೆ. ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ ಸೂಚನೆ ಕೊಟ್ಟಿದೆ. ಮತ್ತೆ ಹರಕೆ ಎನ್ನುವುದು ಅವರು ಇಲ್ಲಿ ಕೊಡಬೇಕು ಅಂತ ಅಲ್ಲ, ಅವರು ಹರಕೆ ನೆನೆಸಿದ್ದಾರೆ, ಅದನ್ನು ಕೊಟ್ಟು ಬಿಡು ಅಂತಷ್ಟೇ ದೈವ ಹೇಳಿದೆ ಕೆಟ್ಟದ್ದನ್ನು ಅಳಿಸಿ, ಒಳ್ಳೆಯದನ್ನು ಉಳಿಸ್ತೀನಿ ಅಂತ ದೈವ ನುಡಿದಿದೆ' ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. 

ಯಾಕೆ ರಾಷ್ಟ್ರಪತಿಯನ್ನೂ ತಲುಪಲಿದೆ 'ಯುದ್ಧ ಕಾಂಡ'..?ಈ ಬಗ್ಗೆ ಅಜೇಯ್ ರಾವ್ ಹೇಳಿದ್ದೇನು..?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!