ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಪ್ರತಾಪ್ ಸಿಂಹಗೆ ಮಾಹಿತಿ ಕೇಳಿದ ರಶ್ಮಿಕಾ

By Web Desk  |  First Published Sep 17, 2019, 11:33 AM IST

ಕೊಡಗು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಅಭಿಯಾನ | ಈ ಅಭಿಯಾನಕ್ಕೆ ಸ್ಯಾಂಡಲ್‌ವುಡ್ ಬೆಂಬಲ | ರಶ್ಮಿಕಾ, ಹರ್ಷಿಕಾ ಸಾಥ್ 


ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿತ್ತು. ಮುಖ್ಯಮಂತ್ರಿ, ಮೈಸೂರು-ಕೊಡಗು ಸಂಸದ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳನ್ನು ಎಚ್ಚರಿಸಲು  'ವಿ ನೀಡ್‌ ಎಮರ್ಜೆನ್ಸಿ ಹಾಸ್ಪಿಟಲ್‌ ಇನ್‌ ಕೊಡಗು' ಎಂಬ ಹ್ಯಾಶ್ ಟ್ಯಾಗ್‌ ಅಡಿಯಲ್ಲಿ ಟ್ವಿಟರ್‌ ಅಭಿಯಾನ ಶುರುವಾಗಿದ್ದು, ಜಿಲ್ಲೆಯ ಯುವ ಜನತೆ ಈ ಅಭಿಯಾನಕ್ಕೆ ದೊಡ್ಡ ಪ್ರಮಾಣದಲ್ಲಿ ಕೈ ಜೋಡಿಸಿದ್ದರು. ಅಭಿಯಾನಕ್ಕೆ ವ್ಯಾಪಕ ಬೆಂಬಲ ಕೂಡಾ ವ್ಯಕ್ತವಾಗಿತ್ತು. 

ಬಿಗ್ ಬಾಸ್ ಸೀಸನ್ 7ಗೆ ಪ್ರವೇಶ ಪಡೆಯಲಿರುವ ಸೆಲೆಬ್ರಿಟಿಗಳು

Tap to resize

Latest Videos

ಕೆಲದಿನಗಳಿಂದ ಈ ಕೂಗು ತಣ್ಣಗಾಗಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ, ಸಂಸದ ಪ್ರತಾಪ್ ಸಿಂಹ ಬಳಿ ಅಭಿಯಾನದ ಬಗ್ಗೆ ಮಾಹಿತಿ ಕೇಳಿದ್ದಾರೆ. 

 

Sir or this tweet is regarding the multi speciality hospital in Coorg. Can we get updates on it please? Would be glad if we get any information regarding the developments or the updates 😊

— Rashmika Mandanna (@iamRashmika)

‘ಕೂರ್ಗ್ ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಅಪ್ ಡೇಟ್ ಏನಿದೆ? ಡೆವಲೆಪ್ ಮೆಂಟ್ ಏನಾದ್ರು ಇದ್ದರೆ ತುಂಬಾ ಸಂತೋಷ’ ಎಂದು ರಶ್ಮಿಕಾ ಟ್ವೀಟ್ ಮಾಡಿ ಪ್ರತಾಪ್ ಸಿಂಹಗೆ ಡ್ಯಾಗ್ ಮಾಡಿದ್ದಾರೆ.

ಕನ್ನಡಿಗರ ಬಗ್ಗೆ ಒಂದೇ ಪದದಲ್ಲಿ ವರ್ಣಿಸಿ; ರಶ್ಮಿಕಾ ಉತ್ತರಕ್ಕೆ ಫ್ಯಾನ್ಸ್ ಬೋಲ್ಡ್!

 

ಈ ಹಿಂದೆ ರಶ್ಮಿಕಾ, ‘ ನಮಗೆ ತುಂಬಾ ಬೇಕಾಗಿರೋದು ಸುಸಜ್ಜಿತವಾದ ಆಸ್ಪತ್ರೆ. ನಮ್ಮ ಕೂರ್ಗ್ ನಲ್ಲಿ ಆಸ್ಪತ್ರೆ ಇಲ್ಲ. ಒಳ್ಳೆಯ ಆಸ್ಪತ್ರೆಗಾಗಿ ನಾನು ದೂರ ಪ್ರಯಾಣಿಸಬೇಕು. ಕೊಡಗಿನಲ್ಲಿ ಆಸ್ಪತ್ರೆಯಾದರೂ ನಿಜಕ್ಕೂ ಸಹಾಯವಾಗುತ್ತದೆ. ದಯವಿಟ್ಟು ಸ್ಪಂದಿಸಿ ಎಂದು ಸಿಎಂಗೆ ಕೇಳಿಕೊಂಡಿದ್ದರು.   

click me!