ದೀಪಿಕಾ ಪೋಸ್ಟರ್‌ಗೆ ರಣವೀರ್ ಚುಂಬನ, ಇದ್ಯಾಕೋ ಅತಿಯಾಯ್ತೆಂದ ನೆಟ್ಟಿಗರು!

By Suvarna News  |  First Published Nov 4, 2022, 1:16 PM IST

ದೆಹಲಿಯಲ್ಲಿ ಒಂದು ಸ್ಟೋರ್ ಲಾಂಚ್ ಪ್ರೋಗ್ರಾಂ. ಸದಾ ತನ್ನ ಓವರ್ ರಿಯಾಕ್ಷನ್ ಮೂಲಕ ಸುದ್ದಿಯಲ್ಲಿರೋ ದೀಪಿಕಾ ಪಡುಕೋಣೆ ಗಂಡ ರಣಬೀರ್ ಕಪೂರ್ ಇಲ್ಲಿ ಪತ್ನಿಯ ಪೋಸ್ಟರ್‌ಗೆ ನವ ಪ್ರೇಮಿಯಂತೆ ಕಿಸ್ ಪಾಸ್ ಮಾಡಿದರು. ಇದ್ಯಾಕೋ ಅತಿಯಾಯ್ತು ಅಂತ ನೆಟಿಜನ್ಸ್ ಕಮೆಂಟ್ ಮಾಡ್ತಿದ್ದಾರೆ.


ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೆಲ ಸಮಯ ಡೇಟಿಂಗ್ ಮಾಡಿ ಆಮೇಲೆ ಅದ್ದೂರಿ ವಿವಾಹವಾಗಿ ವರ್ಷಗಳೇ ಕಳೆದಿವೆ. ಈ ನಡುವೆ ಈ ಜೋಡಿ ನಡುವೆ ಸಮ್ ಈಸ್ ರಾಂಗ್ ಅನ್ನೋ ಗುಸು ಗುಸು ಕೇಳಿಬಂತು. ಅದಕ್ಕೆ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರ್ತಿದ್ದ ಈ ಜೋಡಿ ಸಡನ್ನಾಗಿ ಮಾಯ ಆಗ್ಬಿಟ್ರು. ಸಾರ್ವಜನಿಕವಾಗಿ ಕೈ ಕೈ ಹಿಡಿದು ಓಡಾಡಿಕೊಂಡಿದ್ದ ಡಿಪ್ಪಿ ಮತ್ತು ರಣವೀರ್ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಬಹಳ ಬೇಗ ಈ ಸೂಕ್ಷ್ಮ ಗಮನಿಸಿದ ಜನ ಇವರಿಬ್ಬರ ಬಗ್ಗೆ ರೂಪರ್ಸ್ ಹರಡಲು ಶುರು ಮಾಡಿದ್ರು. ಇದಕ್ಕೆ ಈ ಜೋಡಿ ಏನೂ ರಿಯಾಕ್ಟ್ ಮಾಡಿಲ್ಲ. ಇವರ ಈ ಮೌನವನ್ನು ಜನ ಬೇರೆ ರೀತಿ ಅರ್ಥ ಮಾಡ್ಕೊಂಡ್ರು. ಇವರಿಬ್ಬರೂ ಬೇರೆ ಆಗ್ತಿದ್ದಾರೆ. ಡಿವೋರ್ಸ್ ಗೆ ಮುಂದಾಗಿದ್ದಾರೆ ಅನ್ನೋ ಮಾತುಗಳೆಲ್ಲ ಬಾಲಿವುಡ್ ಗಲ್ಲಿಯಲ್ಲಿ ಹರಿದಾಡತೊಡಗಿದವು. ಇದ್ಯಾಕೋ ಓವರಾಗ್ತಿದೆ ಅಂತನಿಸಿದ್ದೇ ದೀಪಿಕಾ ಸ್ಪಷ್ಟನೆ ನೀಡಿದ್ರು- ನೀವಂದುಕೊಂಡ ಹಾಗೆಲ್ಲ ಏನೂ ಆಗಿಲ್ಲ. ನಾವಿಬ್ಬರೂ ಸಪರೇಟ್ ಆಗಿಲ್ಲ ಅಂತ. ಒಂದೆರಡು ದಿನಗಳ ಹಿಂದೆ ಈ ಜೋಡಿ ಮತ್ತೆ ಜೊತೆಯಾಗಿ ಸಾರ್ವಜನಿಕರೆದು ಬಂತು. ಸೋಷಿಯಲ್ ಮೀಡಿಯಾದಲ್ಲಿ ಗಂಡ ಹೆಂಡತಿ ಜೊತೆಯಾಗಿ ಟ್ರಾವೆಲ್ ಮಾಡಿರೋ ಫೋಟೋ ಶೇರ್ ಮಾಡಿದ್ರು.

ರಣವೀರ್ ಸಿಂಗ್‌ ಎಲ್ಲೂ ಯಾವುದಕ್ಕೂ ಲಿಮಿಟ್ ಹಾಕಿಕೊಂಡವರಲ್ಲ. ಕಾಫಿ ವಿತ್ ಕರಣ್‌ ಶೋದಲ್ಲೂ ರಣವೀರ್ ತಮ್ಮಿಬ್ಬರ ಸೆಕ್ಸ್ ಲೈಫ್ ಬಗೆಗೂ ಮುಕ್ತವಾಗಿ ಹೇಳಿಕೊಂಡಿದ್ದರು. ಇವರ ಜೊತೆಗೆ ಬಂದ ಅಲಿಯಾ ಭಟ್‌ ಫಸ್ಟ್ ನೈಟ್‌ ಬಗ್ಗೆ ಏನೋ ಹಾರಿಕೆ ಮಾತು ಹೇಳಿ ತಪ್ಪಿಸಿಕೊಂಡರೆ ರಣವೀರ್ ಮಾತ್ರ ಧೈರ್ಯದಿಂದ ಸತ್ಯ ಮಾತು ಹೇಳಿದರು. ಇದನ್ನು ನೋಡಿ ಒಂದಿಷ್ಟು ಜನ ಕಣ್ಣರಳಿಸಿದ್ರು. ಇತ್ತೀಚೆಗೆ ಬೆತ್ತಲೆ ಫೋಟೋ ಶೂಟ್‌ ಅನ್ನೂ ಮಾಡಿಸಿಕೊಂಡಿದ್ದ ರಣವೀರ್‌ ಆಮೇಲೆ ಅದನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದರು. ಇದೀಗ ಪತ್ನಿಯ ಪೋಸ್ಟರ್‌ ಗೆ ಸಾರ್ವಜನಿಕವಾಗಿ ರಣವೀರ್ ಈಗಷ್ಟೇ ಪ್ರೊಪೋಸ್ ಮಾಡಿ ಗ್ರೀನ್ ಸಿಗ್ನಲ್ ಪಡೆದ ಪ್ರೇಮಿಯ ಹಾಗೆ ಮುತ್ತು ಹಾರಿಸಿದ್ದಾರೆ.

Tap to resize

Latest Videos

ರಾಜಮೌಳಿ ಸಿನಿಮಾದಲ್ಲಿ ಕರಾವಳಿ ಸುಂದರಿ; ಪ್ರಭಾಸ್ ಬಳಿಕ ಮಹೇಶ್ ಬಾಬು ಜೊತೆ ದೀಪಿಕಾ ರೊಮ್ಯಾನ್ಸ್

ಅಷ್ಟಕ್ಕೂ ಇದು ನಡೆದದ್ದು ನವದೆಹಲಿಯಲ್ಲಿ. ಅಲ್ಲೊಂದು ಸ್ಟೋರ್ ಲಾಂಚ್‌ಗೆ ರಣವೀರ್ ಸಿಂಗ್ ಬಂದಿದ್ದರು. ಎಂದಿನ ಉತ್ಸಾಹದಲ್ಲಿ ಈ ಫಂಕ್ಷನ್ ನಲ್ಲಿ ಪಾಲ್ಗೊಂಡ ರಣವೀರ್ ಗೆ ಕಂಪನಿಯ ಬ್ರಾಂಡ್ ಪೋಸ್ಟರ್‌ನಲ್ಲಿ ದೀಪಿಕಾ ಫೋಟೋ ಕಾಣಿಸಿತು. ಇದಕ್ಕೆ ಗಲ್ಲಿಆಯ್ ಚಿತ್ರದ "ಅಪ್ನಾ ಟೈಮ್ ಆಯೆಗಾ' ಹಾಡಿನ ಜೊತೆಗೆ ಪತ್ನಿಯೆಡೆಗೆ ಫ್ಲೈಯಿಂಗ್ ಕಿಸ್ ಹಾರಿಸಿದರು. ರಣವೀರ್ ಈ ಫೋಟೋ ಇದೀಗ ವೈರಲ್ ಆಗಿದೆ.

ಇದನ್ನು ದೀಪಿಕಾ ಪಡುಕೋಣೆಯೂ ಇನ್‌ಸ್ಟಾದಲ್ಲಿ ಹಂಚಿ ಹಾರ್ಟ್(Heart) ಸಿಂಬಲ್ ಹಾಕಿ ಪ್ರೇಮ ಮೆರೆದಿದ್ದಾರೆ. ಆದರೆ ಎಂದಿನಂತೆ ಕೊಂಕುವ ನೆಟಿಜನ್ಸ್(Netizens) ಈ ಅವಕಾಶವನ್ನೂ ಮಿಸ್(Miss) ಮಾಡಿಲ್ಲ. 'ಯಾಕೆ ಮನೇಲಿ ಟೈಮ್ ಇರಲಿಲ್ವಾ?' ಅಂತ ಒಬ್ಬರು ಕಾಲೆಳೆದರೆ, ಇನ್ನೊಬ್ಬರು 'ಇದ್ಯಾಕೋ ಅತಿಯಾಯ್ತು' ಅಂತಿದ್ದಾರೆ. ಇನ್ನೊಬ್ಬರು, 'ಈ ರಣವೀರ್‌ ಕ್ಯಾಮರ(Camara) ಕಂಡಿದ್ದಕ್ಕೆ ಹೀಗೆಲ್ಲ ಆಡಿದ್ದಾರೆ' ಎಂದಿದ್ದಾರೆ. ಹೀಗೆ ಬಗೆ ಬಗೆಯ ಕಮೆಂಟ್ಸ್ ಹರಿದಾಡ್ತಿವೆ.

ಬ್ರೇಕಪ್ ವದಂತಿ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ದೀಪ್‌ವೀರ್; ಪ್ರವಾಸ ಫೋಟೋ ವೈರಲ್

ಆದರೆ ರಣವೀರ್ ಯಾವತ್ತೂ ಇಂಥಾ ನೆಗೆಟಿವ್ ಕಮೆಂಟ್ಸ್‌ಗೆಲ್ಲ(Comments) ತಲೆ ಕೆಡಿಸಿಕೊಂಡವರಲ್ಲ. ಅನಿಸಿದ್ದನ್ನು ಅನಿಸಿದ ಹಾಗೆ ಮಾಡುತ್ತಾ ಬಂದವರು. ಇಲ್ಲೂ ಅದೇ ಟ್ರಿಕ್(Tricks) ಅನುಸರಿಸಿದ್ದಾರೆ. ಆದರೆ ಈ ಜೋಡಿಯ ಅಭಿಮಾನಿಗಳು ಮಾತ್ರ ಪಾಸಿಟಿವ್ ಆಗಿ ರಿಯಾಕ್ಟ್ ಮಾಡುತ್ತಿದ್ದಾರೆ. ಕೊನೆಗೂ ಈ ಜೋಡಿ ಸಪರೇಟ್ ಆಗಿಲ್ವಲ್ಲ ಅಂತ ನಿಟ್ಟುಸಿರು ಬಿಟ್ಟಿದ್ದಾರೆ.

 

click me!