ರಾಜ್ಯದಾದ್ಯಂತ ಅಭಿಮಾನಿಗಳಿಂದ ಅಪ್ಪು ಪುಣ್ಯಸ್ಮರಣೆ, ಪ್ರತೀ ಜಿಲ್ಲೆಯಲ್ಲೂ ಅನ್ನ ಸಂತರ್ಪಣೆ

Published : Oct 29, 2022, 05:47 PM IST
ರಾಜ್ಯದಾದ್ಯಂತ ಅಭಿಮಾನಿಗಳಿಂದ ಅಪ್ಪು ಪುಣ್ಯಸ್ಮರಣೆ, ಪ್ರತೀ ಜಿಲ್ಲೆಯಲ್ಲೂ ಅನ್ನ ಸಂತರ್ಪಣೆ

ಸಾರಾಂಶ

ಪುನೀತ್ ರಾಜ್ ಕುಮಾರ್ ನಮ್ಮನಗಲಿ ಇಂದಿಗೆ ಒಂದು ವರ್ಷ ಸಂದಿದೆ. ಇವರ ಪುಣ್ಯಸ್ಮರಣೆ ದಿನ ಪುನೀತ್ ಅಭಿಮಾನಿಗಳು ರಾಜ್ಯದಾದ್ಯಂತ ಅನ್ನ ಸಂತರ್ಪಣೆ ಮಾಡಿದ್ದಾರೆ.

ಬಾಗಲಕೋಟೆ (ಅ.29): ತಮ್ಮ ಮನೆಯಲ್ಲಿಯೇ ಆಚರಿಸಿದ ಪುನೀತ್ ಅಭಿಮಾನಿ. ಬಾಗಲಕೋಟೆಯ ಅಭಿಮಾನಿಯೊಬ್ಬರು ತಮ್ಮ ಮನೆಯಲ್ಲಿಯೇ  ಅಪ್ಪು ಪ್ರಥಮ ವರ್ಷದ ಪುಣ್ಯತಿಥಿಯನ್ನು ಆಚರಿಸಿದ್ದಾರೆ. ನಾರಾಯಣ ಢಗೆ ಎಂಬ ಅಭಿಮಾನಿ. ಬಾಗಲಕೋಟೆಯ ನವನಗರದ 3ನೇ ಸೆಕ್ಟರ್ ನಲ್ಲಿರುವ ತಮ್ಮ ಮನೆಯಲ್ಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೈಮುಗಿದು ಅಪ್ಪುಗೆ ಪ್ರೀಯವಾದ ಭಕ್ಷ್ಯಭೋಜನಗಳನ್ನಿಟ್ಟು ಅಪ್ಪು ಪುಣ್ಯತಿಥಿ ಆಚರಣೆ ಮಾಡಿದ್ದಾರೆ. ಮಟನ್ ಬಿರಿಯಾನಿ, ನಾಟಿಕೋಳಿ ಸಾರು, ತಲೆಮಾಂಸ, ಚಿಕನ್ ಕಬಾಬ್, ರಾಗಿಮುದ್ದೆ ಸೇರಿ ಹಲವು ಖಾದ್ಯಗಳನ್ನಿಟ್ಟು ಪುಣ್ಯತಿಥಿ ಆಚರಣೆ ಮಾಡಿದ್ದಾರೆ. ಅಪ್ಪು ನೆನೆದು ಭಾವುಕರಾದ ಅಭಿಮಾನಿ ನಾರಾಯಣ. ಅಪ್ಪು ಅಣ್ಣಾ, ಮತ್ತೇ ಹುಟ್ಟಿಬನ್ನಿ ಎಂದು ಕೈಮುಗಿದ ಅಭಿಮಾನಿ. ನಿನ್ನದೇ ನೆನಪು ದಿನವೂ ಮನದಲ್ಲಿ ಎಂಬ ಹಾಡು ಹಾಡಿ ಅಪ್ಪುಗೆ ನುಡಿ ನಮನ ಸಲ್ಲಿಸಿದ ಅಭಿಮಾನಿ ನಾರಾಯಣ. ಬಾಗಲಕೋಟೆಯ ನವನಗರದಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಪುನೀತ್ ಅಭಿಮಾನಿ ನಾರಾಯಣ ಢಗೆ. 

ವಿಜಯನಗರ : ಅಪ್ಪು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ. ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿರೋ ಅಪ್ಪು ಕಂಚಿನ ಪ್ರತಿಮೆಯ ಬಳಿ ಅನ್ನ ಸಂತರ್ಪಣೆ. ಬೆಳಗ್ಗೆ ಪೂಜೆ ಮಾಡಿ, ಸ್ಮರಣೆ ಮಾಡಿದ ಅಭಿಮಾನಿಗಳು. ಕಿಚಡಿ ವಿಶ್ವ, ಜೋಗಿ ತಾಯಪ್ಪ, ಸಿದ್ದಾರ್ಥ್ ಸಿಂಗ್ ನೇತೃತ್ವದಲ್ಲಿ ಅನ್ನ ಸಂತರ್ಪಣೆ. 

ತುಮಕೂರು: ಇಂದು ಪುನೀತ್ ರಾಜಕುಮಾರ್ ಪ್ರಥಮ ಪುಣ್ಯಸ್ಮರಣೆ ಹಿನ್ನೆಲೆ. ಅಪ್ಪು ಅಭಿಮಾನಿಗಳಿಗೆ ಉಚಿತ  ಟಿಕೆಟ್ ವಿತರಿಸಿದ ಮಾಜಿ ಸಚಿವ ಸೊಗಡು ಶಿವಣ್ಣ ಪುತ್ರ. ಅಪ್ಪು ಅಪ್ಪಟ ಅಭಿಮಾನಿಯಾಗಿರೋ ಸೊಗಡು ಶಿವಣ್ಣ ಪುತ್ರ ಕುಮಾರಸ್ವಾಮಿ, ತುಮಕೂರಿನ ಎಸ್ ಮಾಲ್ ನಲ್ಲಿರುವ ಐನಾಕ್ಸ್ ನ ಒಂದು ಸಿನಿಮಾ ಹಾಲ್ ಕಂಪ್ಲೀಟ್ ಬುಕ್ ಮಾಡಿ  ಅಭಿಮಾನ ಮೆರೆದಿದ್ದಾರೆ. ಒಟ್ಟು 250 ಅಭಿಮಾನಿಗಳಿಗೆ ಉಚಿತ ಟಿಕೆಟ್‌ ವಿತರಿಸಿದ ಸೊಗಡು ಶಿವಣ್ಣ ಪುತ್ರ. ಚಿತ್ರ ವೀಕ್ಷಣೆ ಬಳಿಕ ಪ್ರತಿಯೊಬ್ಬರಿಗೂ ಸಸಿ ವಿತರಣೆ. ಗಂಧದಗುಡಿ ಸಾಕ್ಷ್ಯಚಿತ್ರದಲ್ಲಿ ಅರಣ್ಯ ಉಳಿಸುವ ಸಂದೇಶ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸಸಿ ವಿತರಿಸಿದ ಶಿವಣ್ಣ ಪುತ್ರ.

ಮಂಡ್ಯ: ಮೊದಲನೇ ವರ್ಷದ ಅಪ್ಪು ಪುಣ್ಯ ಸ್ಮರಣೆ. ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳಿಂದ ಅಪ್ಪು ನೆನಪು. 5000 ಜನರಿಗೆ ಬಿರಿಯಾನಿ ವಿತರಿಸಿದ ಅಪ್ಪು ಅಭಿಮಾನಿ ರಘು. ಅಪ್ಪು ಹೆಸರಲ್ಲಿ ಬಿರಿಯಾನಿ ಹೋಟೆಲ್ ಆರಂಭಿಸಿರುವ ಅಭಿಮಾನಿ. ಮಂಡ್ಯದಾದ್ಯಂತ ಅಪ್ಪು ಬಿರಿಯಾನಿ ಅಂತಲೇ ಪ್ರಖ್ಯಾತಿ. ಅಪ್ಪು ಪುಣ್ಯಸ್ಮರಣೆ ದಿನ 2ನೇ ಬ್ರಾಂಚ್ ಆರಂಭ. ಮಂಡ್ಯದ ಬನ್ನೂರು ರಸ್ತೆಯಲ್ಲಿ ನೂತನ ಹೋಟೆಲ್ ಆರಂಭಿಸಿದ ಅಭಿಮಾನಿ ರಘು. ಹೋಟೆಲ್ ಬಳಿ ಜನರಿಗೆ ಉಚಿತ ಬಿರಿಯಾನಿ ಹಂಚಿಕೆ. ಸುಮಾರು 5 ಸಾವಿರ ಜನರಿಗೆ ಬಿರಿಯಾನಿ ಹಂಚಿದ ಅಭಿಮಾನಿ. ಪುನೀತ್ ಅವರ ಕಾರ್ಯಗಳು ನಮಗೆಲ್ಲಾ ಪ್ರೇರಣೆ. ಕೈಲಾದ ಸಾಮಾಜಿಕ ಸೇವೆ ಮೂಲಕ ಅಪ್ಪು ನೆನಪಿಸಿಕೊಳ್ಳುತ್ತೇವೆ. ಅಪ್ಪು ಅಭಿಮಾನಿ ಹೋಟೆಲ್ ಮಾಲೀಕ ರಘು ಹೇಳಿಕೆ.

Puneeth Rajkumar: ಅಪ್ಪು ಸರ್‌ ನಮ್ಮ ಜೀವನದ ದಾರಿ ದೀಪ: ಬಾಡಿಗಾರ್ಡ್‌ ಛಲಪತಿ

ಶಿವಮೊಗ್ಗದಲ್ಲಿ ಅಪ್ಪು ಪುಣ್ಯಸ್ಮರಣೆ: ಶಿವಮೊಗ್ಗದ ಡಾ. ಪುನೀತ್ ರಾಜಕುಮಾರ್ ರಸ್ತೆಯ ಅಭಿಮಾನಿಗಳಿಂದ ಪುಣ್ಯ ಸ್ಮರಣೆ. ಅಪ್ಪು ಪುಣ್ಯ ಸ್ಮರಣೆ ಹಿನ್ನೆಲೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ ಅಭಿಮಾನಿಗಳು. ಶಿವಮೊಗ್ಗದ ಶರಾವತಿ ನಗರದ ಬಳಿ ಅನ್ನಸಂತರ್ಪಣೆ. 
 ಅಪ್ಪು ಅಭಿಮಾನಿಗಳಾದ ವೆಂಕಟೇಶ್ ಪುರುಷೋತ್ತಮ್ ಮಧುಸೂದನ್ ಬಸವರಾಜ್ ಮೊದಲಾದವರ ನೇತೃತ್ವದಲ್ಲಿ ಅನ್ನದಾನ. ಅಪ್ಪುವಿನ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿ ಅನ್ನದಾನದಲ್ಲಿ ಪಾಲ್ಗೊಂಡ ಸಾರ್ವಜನಿಕರು. ಪುನೀತ್ ರಾಜಕುಮಾರ್ ರಸ್ತೆಯಲ್ಲಿ ಅಪ್ಪು ಪುತ್ಥಳಿ ಸ್ಥಾಪಿಸಲು ಸಹಿ ಸಂಗ್ರಹ. ಸಾರ್ವಜನಿಕರ ದೇಣಿಗೆಯಿಂದ ಅಪ್ಪು ಪುತ್ಥಳಿ ಸ್ಥಾಪನೆಗೆ ಸಹಿ ಸಂಗ್ರಹ, ಮಹಾನಗರ ಪಾಲಿಕೆ ವತಿಯಿಂದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಿದ್ಧವಾಗುತ್ತಿರುವ ರಸ್ತೆ. ಶರಾವತಿ ನಗರ ಪ್ರವೇಶಿಸುವ ಭಾಗದಲ್ಲಿ ಪುತ್ಥಳಿ ಸ್ಥಾಪನೆಗೆ ನಿರ್ಧಾರ.

 

22 ದಿನದ ಮಗುವಿನೊಂದಿಗೆ ಅಪ್ಪು ಸಮಾಧಿಗೆ ಬಂದ ದಂಪತಿ; ಪುನೀತ್ ಎಂದು ನಾಮಕರಣ!

ಚಾಮರಾಜನಗರ: ಇಲ್ಲಿನ ಯಳಂದೂರು ತಾಲ್ಲೂಕು ಕಛೇರಿ ಮುಂಭಾಗದ ಬಸ್ ತಂಗುದಾಣಕ್ಕೆ  ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್  ಬಸ್ ನಿಲ್ದಾಣ ವೆಂದು ನಾಮಕರಣ. ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಅಭಿಮಾನಿಗಳು ನಾಮಕರಣ. ಕಳೆದ ಎಂಟು ತಿಂಗಳ ಹಿಂದೆಯೇ ಈ ಬಸ್ ನಿಲ್ದಾಣಕ್ಕೆ ನಾಮಕರಣ. ಈ ಹೆಸರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌