ಚಿಕ್ಕವನಾಗಿದ್ದಾಗ ಕರೀನಾ ಕಪೂರ್‌ ಜೊತೆ ಗಂಡ ಹೆಂಡ್ತಿ ಆಟ ಆಡ್ತಿದ್ದೆ ಎಂದ ಸ್ಟಾರ್‌ ನಟ!

By Santosh Naik  |  First Published Jun 3, 2024, 7:50 PM IST


Ranbir Kapoor Shares his Disturbing Childhood Memory: ರಣಬೀರ್‌ ಕಪೂರ್‌ ಹಾಗೂ ಕರೀನಾ ಕಪೂರ್‌ ಬಗ್ಗೆ ಹೆಚ್ಚೇನೂ ಹೇಳಬೇಕಾಗಿದ್ದ ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳ ನಡುವೆ ಮೊದಲಿನಿಂದಲೂ ಆತ್ಮೀಯ ಸಂಬಂಧವಿದೆ. ಇದರ ನಡುವೆ ರಣಬೀರ್‌ ಕಪೂರ್‌, ಕರೀನಾ ಕಪೂರ್‌ ಜೊತೆಗೆ ಬಾಲ್ಯದ ಅತ್ಯಂತ ಮುಜುಗರದ ಕ್ಷಣದ ಬಗ್ಗೆ ಮಾತನಾಡಿದ್ದಾರೆ.
 


ಬಾಲಿವುಡ್‌ನ ಮೋಸ್ಟ್‌ ಫೇವರಿಟ್‌ ಒಡಹುಟ್ಟಿದ ಜೋಡಿಗಳ ಲಿಸ್ಟ್‌ಗೆ ಬಂದಾಗ ಅದರಲ್ಲಿ ಮೊದಲಲ್ಲಿ ಇರುವ ಜೋಡಿ ರಣಬೀರ್ ಕಪೂರ್‌ ಹಾಗೂ ಕರೀನಾ ಕಪೂರ್‌. ಕುಟುಂಬದ ಹಿನ್ನಲೆಯ ನಡುವೆಯೂ ಬಾಲಿವುಡ್‌ನಲ್ಲಿ ತಮ್ಮ ಸಾಮರ್ಥ್ಯದಿಂದಲೇ ಪ್ರತಿಭೆಯನ್ನು ತೋರಿದ ಇಬ್ಬರು ದೊಡ್ಡ ಸ್ಟಾರ್‌ಗಳು. ಇನ್ನೂ ಇವರಿಬ್ಬರ ಕೂಡ ಗಾಸಿಪ್‌ನಲ್ಲಿ ಬೇಡಿಕೆಯಲ್ಲಿರುವ ಸ್ಟಾರ್‌ಗಳು ಎನ್ನಲಾಗುತ್ತದೆ. ಇವರ ಬಗ್ಗೆ ಆಗವಷ್ಟು ಗಾಸಿಪ್‌ಗಳು ಬೇರೆ ಯಾರ ಬಗ್ಗೆಯೂ ಆಗೋದಿಲ್ಲ. ಇವರ ಗಾಸಿಪ್‌ಗಳು ಎಂಟರ್‌ಟೇನ್‌ಮೆಂಟ್‌ ಪತ್ರಿಕೆಗಳಲ್ಲಿ ಹೆಡ್‌ಲೈನ್‌ ಆಗೋವಷ್ಟು ದೊಡ್ಡದಾಗಿ ಇರುತ್ತದೆ.  ರಣಬೀರ್ ಮತ್ತು ಕರೀನಾ ಕಾಫಿ ವಿತ್ ಕರಣ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾಗ, ಪರಸ್ಪರರ ಬಗ್ಗೆ ಕೆಲವು ಆಘಾತಕಾರಿ ವಿಚಾರಗಳನ್ನು ಬಹಿರಂಗ ಮಾಡಿದ್ದರು. 2013ರಲ್ಲಿ ಕಾಫಿ ವಿತ್‌ ಕರಣ್‌ನ 4ನೇ ಸೀಸನ್‌ನ 2ನೇ ಎಪಿಸೋಡ್‌ನಲ್ಲಿ ರಣಬೀರ್‌ ಕಪೂರ್‌ ಹಾಗೂ ಕರೀನಾ ಕಪೂರ್‌ ಭಾಗವಹಿಸಿದ್ದರು.

ಈ ವೇಳೆ ಕರಣ್‌ ಜೋಹರ್ ಜೊತೆಗಿನ ಮಾತುಕತೆಯ ವೇಳೆ ರಣಬೀರ್‌ ಕಪೂರ್‌ ತಮ್ಮ ಜೀವನದ ಅತ್ಯಂತ ಮುಜುಗರದ ಸನ್ನಿವೇಶವನ್ನು ಬಹಿರಂಗ ಮಾಡಿದ್ದಾರೆ. ಚಿಕ್ಕನವನಾಗಿದ್ದಾಗ ನನಗಿನ್ನೂ ನೆನಪಿದೆ. ರಿಧಿಮಾ (ರಣಬೀರ್‌ ಕಪೂರ್‌ ಅಕ್ಕ) ಹಾಗೂ ಕರೀನಾ ಕಪೂರ್‌ ಮನೆಯಲ್ಲಿ 'ಹೌಸ್‌ ಹೌಸ್‌' ಆಟ ಆಡುತ್ತಿದ್ದರು. ಈ ವೇಳೆ ನಾನು ಗಂಡನ ಪಾತ್ರ ಮಾಡುತ್ತಿದ್ದೆ. ಒಮ್ಮೊಮ್ಮೆ ನಾನು ರಿಧಿಮಾನ ಗಂಡನಾಗಿ ಆಡುತ್ತಿದ್ದರೆ, ಇನ್ನೊಮ್ಮೆ ಕರೀನಾ ಕಪೂರ್‌ ಗಂಡನಾಗಿ ಪಾತ್ರ ಮಾಡುತ್ತಿದ್ದೆ' ಎಂದು ಹೇಳಿದ್ದಾರೆ.

ಅಂದು ನಾನು ನಾಲ್ಕು ವರ್ಷದ ಹುಡುಗನಾಗಿದ್ದೆ. ಕರೀನಾ ಕಪೂರ್‌ ಹಾಗೂ ರಿಧಿಮಾ ಇಬ್ಬರೂ 6 ವರ್ಷದವರಾಗಿದ್ದರು. ಆದರೆ, ನನಗೆ ಈ ಗಂಡ ಹೆಂಡ್ತಿ ಆಟ ಮಾತ್ರ ಚೆನ್ನಾಗಿ ನೆನಪಿಸಿದೆ. ಈ ಆಟ ಇಂದಿಗೂ ನನಗೆ ಡಿಸ್ಟ್ರರ್ಬ್‌ ಮಾಡುತ್ತಿರುತ್ತದೆ' ಎಂದು ಹೇಳಿದ್ದಾರೆ. ಇದಕ್ಕೆ ಅಲ್ಲಿಯೇ ಉತ್ತರ ನೀಡಿರುವ ಕರೀನಾ ಕಪೂರ್‌, ಪುಣ್ಯಕ್ಕೆ ನನಗೆ ಇದು ಯಾವುದೂ ನೆನಪಿನಲ್ಲಿಲ್ಲ ಎಂದಿದ್ದಾರೆ.

ರಣಬೀರ್ ಕಪೂರ್ ಮತ್ತು ಕರೀನಾ ಕಪೂರ್ ಮೊದಲ ಸೋದರಸಂಬಂಧಿ. ರಿಧಿಮಾ ಕಪೂರ್ ಸಾಹ್ನಿ, ರಣಬೀರ್‌ ಅವರ ಸ್ವಂತ ಸಹೋದರಿ. ರಣಬೀರ್ ಕಪೂರ್,  ರಿಷಿ ಕಪೂರ್ ಮತ್ತು ನಿತು ಕಪೂರ್ ಅವರ ಮಗನಾಗಿದ್ದರೆ, ಕರೀನಾ ಕಪೂರ್, ರಣಧೀರ್ ಕಪೂರ್ ಮತ್ತು ಬಬಿತಾ ಕಪೂರ್ ಅವರ ಎರಡನೇ ಮಗಳು. ರಣಧೀರ್ ಕಪೂರ್ ಮತ್ತು ರಿಷಿ ಕಪೂರ್ ಸಹೋದರರು.

Tap to resize

Latest Videos

ಆಫ್‌ ಶೋಲ್ಡರ್‌ ಗೌನ್‌ನಲ್ಲಿ Sexiest ಆಗಿ ಕಾಣಿಸಿದ ಕರೀನಾ ಕಪೂರ್‌ ಖಾನ್‌, ವೈರಲ್‌ ಆದ Hot Photos!

ಕರೀನಾ ಕಪೂರ್‌ ಖಾನ್‌, ಸೈಫ್‌ ಅಲಿ ಖಾನ್‌ರನ್ನು ಮದುವೆಯಾಗಿದ್ದು, ತೈಮೂರ್‌ ಹಾಗೂ ಜಹಾಂಗೀರ್‌ ಹೆಸರಿನ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಇನ್ನು ರಣಬೀರ್‌ ಕಪೂರ್‌, ಆಲಿಯಾ ಭಟ್‌ರನ್ನು ವಿವಾಹವಾಗಿದ್ದು, ರಹಾ ಹೆಸರಿನ ಮಗಳನ್ನು ಹೊಂದಿದ್ದಾರೆ. ಕೆಲಸದ ವಿಚಾರದಲ್ಲಿ ನೋಡೋದಾದರೆ, ರಣಬೀರ್‌ ಕಪೂರ್‌ ತಮ್ಮ ಲವ್‌ & ವಾರ್‌ ಸಿನಿಮಾದಲ್ಲಿ ಪತ್ನಿ ಆಲಿಯಾ ಭಟ್‌ ಹಾಗೂ ವಿಕ್ಕಿ ಕೌಶಾಲ್‌ ಜೊತೆ ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆ ಕರೀನಾ ಕಪೂರ್‌, ಸಿಂಘಂ ಅಗೇನ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 

ಮಗಳೇ ಎಂದು ಕರೆದಿದ್ದವಳನ್ನೇ ಮದುವೆಯಾಗಿ ಮಕ್ಕಳನ್ನು ಕೊಟ್ಟ ಸೈಫ್ ಅಲಿ ಖಾನ್!

click me!