ಸಿನಿಮಾ ಮುಗಿದು 17 ವರ್ಷದ ಬಳಿಕ ಉಪೇಂದ್ರ-ರಮ್ಯಾ ಅಭಿನಯದ ರಕ್ತ ಕಾಶ್ಮೀರ ಮುಂದಿನ ವರ್ಷ ರಿಲೀಸ್‌!

By Santosh Naik  |  First Published Dec 4, 2024, 2:56 PM IST

17 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಉಪೇಂದ್ರ ಮತ್ತು ರಮ್ಯಾ ಅಭಿನಯದ 'ರಕ್ತ ಕಾಶ್ಮೀರ' ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಯೋತ್ಪಾದನೆಯ ಕಥಾವಸ್ತುವನ್ನು ಒಳಗೊಂಡ ಈ ಚಿತ್ರದಲ್ಲಿ ಪುನೀತ್, ದರ್ಶನ್, ವಿಷ್ಣುವರ್ಧನ್ ಸೇರಿದಂತೆ ಹಲವು ನಟರು ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.


ಬೆಂಗಳೂರು (ಡಿ.4): ಹಿರಿಯ ನಿರ್ದೇಶಕ ಎಸ್‌ವಿ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನ ಮಾಡಿದ್ದ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಅಭಿನಯದ ರಕ್ತ ಕಾಶ್ಮೀರ ಸಿನಿಮಾ (Raktha Kashmira Movie) ಮುಂದಿನ ವರ್ಷ ರಿಲೀಸ್‌ ಆಗಲಿದೆ. ಎಂಡಿಎಂ ಪ್ರೊಡಕ್ಷನ್‌ ಲಾಂಛನದಲ್ಲಿ ನಿರ್ಮಾಣವಾಗಿರುವ ಸಿನಿಮಾವನ್ನು ಮುಂದಿನ ವರ್ಷ ತೆರೆಗೆ ತರಲೇಬೇಕು ಎಂದು ಪ್ರಯತ್ನ ನಡೆಯುತ್ತಿದೆ. 2007ರಲ್ಲಿ ಈ ಸಿನಿಮಾದ ಕೆಲಸಗಳು ಸಂಪೂರ್ಣವಾಗಿ ಮುಗಿದಿತ್ತು. ಆದರೆ, ಅಂದು ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾ ತೆರೆಗೆ ಬಂದಿರಲಿಲ್ಲ. ಮಕ್ಕಳ ಸಾಹಸ ಸಿನಿಮಾವಾಗಿ 'ಭೀಮೂಸ್‌ ಬ್ಯಾಂಗ್‌ ಬ್ಯಾಂಗ್‌ ಕಿಡ್ಸ್‌' ಎನ್ನು ಹೆಸರು ಹೊಂದಿತ್ತು. ಈ ಸಿನಿಮಾದಲ್ಲಿ ಬಿಗ್‌ ಸ್ಟಾರ್‌ಗಳಾದ ಪುನೀತ್‌ ರಾಜ್‌ಕುಮಾರ್‌, ದರ್ಶನ್‌, ವಿಷ್ಣುವರ್ಧನ್‌, ಅಂಬರೀಶ್‌, ರಮೇಶ್‌ ಹಾಗೂ ಇತರ ನಟರುಗಳು ಒಂದು ಹಾಡಿನಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಚಿತ್ರದಲ್ಲಿ ಈ ಕಾಲಕ್ಕೆ ಸಂಬಂಧಪಟ್ಟಂತೆ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರವನ್ನು ವಾಪಾಸ್‌ ಪಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಸಿನಿಮಾದಲ್ಲಿ ಸೇರಿಸಿಕೊಳ್ಳಲಾಗಿದೆ ಎನ್ನುವ ವರದಿಗಳಿದ್ದು, ಇದೇ ಸಿನಿಮಾದ ಕಥಾಹಂದರವೂ ಆಗಿದೆ. ದೇಶದ ಮೂಲೆ ಮೂಲೆಗೆ ವ್ಯಾಪಿಸಿರುವ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಕಥಾವಸ್ತು ಈ ಸಿನಿಮಾದ್ದಾಗಿದೆ.

Tap to resize

Latest Videos

ಫೋನ್‌ ಕಸಿದುಕೊಂಡು ಕಾಲ್‌ ರಿಸೀವ್‌ ಮಾಡಿದ ಕೋತಿ.. 'ಹಲೋ' ಅಂತಾ ಹೇಳೋದೊಂದ್‌ ಬಾಕಿ!

ಆ ಕಾಲದ ಅತ್ಯಂತ ದುಬಾರಿ ಬಜೆಟ್‌ನ ಸಿನಿಮಾ ಇದಾಗಿತ್ತು. ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಗ್ರಾಫಿಕ್ಸ್‌ ಕೆಲಸವೂ ನಡೆಯಬೇಕಾಗಿದ್ದ ಕಾರಣಕ್ಕೆ 6 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎನ್ನಲಾಗಿತ್ತು. ಈಗ 17 ವರ್ಷಗಳ ನಂತರ ಈ ಸಿನಿಮಾ ರಕ್ತ ಕಾಶ್ಮೀರ ಎನ್ನುವ ಹೆಸರಿನಲ್ಲಿ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಎಂಎಸ್‌ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದ್ದು, ಗುರುಕಿರಣ್‌ ಸಂಗೀತ ನೀಡಿದ್ದಾರ. ಉಪೇಂದ್ರ ರಮ್ಯಾ ಅಲ್ಲದೆ, ಪಾರ್ವತಿ ಮಿಲ್ಟನ್‌, ದೊಡ್ಡಣ್ಣ, ಓಂಪ್ರಕಾಶ್‌ ರಾವ್‌ ಮುಂತಾದವರಿದ್ದಾರೆ.

ನಟ ಧರ್ಮೇಂದ್ರನ 'ಸಂಸ್ಕಾರಿ' ಸೊಸೆ ಕಾಂಡೋಮ್ ಜಾಹೀರಾತಿನ ಮೂಲಕ ಸುದ್ದಿ ಮಾಡಿದ್ರು!

click me!