'ಹೆಂಡ್ತಿ ಹೇಳಿದಂತೆ ಮಾಡಿ..' ಐಶ್ವರ್ಯಾ ರೈಗೆ ವಿಚ್ಛೇದನದ ರೂಮರ್‌ ನಡುವೆ ಅಭಿಷೇಕ್‌ ಬಚ್ಛನ್‌ ಹೀಗ್ಯಾಕಂದ್ರು?

Published : Dec 02, 2024, 08:12 PM ISTUpdated : Dec 02, 2024, 08:16 PM IST
'ಹೆಂಡ್ತಿ ಹೇಳಿದಂತೆ ಮಾಡಿ..' ಐಶ್ವರ್ಯಾ ರೈಗೆ ವಿಚ್ಛೇದನದ ರೂಮರ್‌ ನಡುವೆ ಅಭಿಷೇಕ್‌ ಬಚ್ಛನ್‌ ಹೀಗ್ಯಾಕಂದ್ರು?

ಸಾರಾಂಶ

ಫಿಲ್ಮ್‌ಫೇರ್ OTT ಅವಾರ್ಡ್ಸ್ 2024 ರಲ್ಲಿ ಅಭಿಷೇಕ್ ಬಚ್ಚನ್, ಕರೀನಾ ಕಪೂರ್‌ಗೆ ಪ್ರಶಸ್ತಿ ನೀಡಿದರು. ಮದುವೆಯಾದ ಪುರುಷರು ಹೆಂಡತಿ ಹೇಳಿದಂತೆ ಕೆಲಸ ಮಾಡಬೇಕು ಎಂಬ ಅವರ ಹಾಸ್ಯದ ಮಾತು ವೈರಲ್ ಆಗಿದೆ. ಐಶ್ವರ್ಯಾ ಜೊತೆಗಿನ ವಿಚ್ಛೇದನದ ವದಂತಿಗಳ ನಡುವೆ ಈ ಹೇಳಿಕೆ ಹೆಚ್ಚು ಗಮನ ಸೆಳೆದಿದೆ.

ನವದೆಹಲಿ (ಡಿ.2): ಮುಂಬೈನಲ್ಲಿ ನಡೆದ ಫಿಲ್ಮ್‌ಫೇರ್ OTT ಅವಾರ್ಡ್ಸ್ 2024 ರಲ್ಲಿ ಅಭಿಷೇಕ್ ಬಚ್ಚನ್ ಭಾಗವಹಿಸಿದರು ಮತ್ತು ಕರೀನಾ ಕಪೂರ್ ಅವರಿಗೆ ಪ್ರಶಸ್ತಿಯನ್ನು ನೀಡಿದರು. ಕರೀನಾ ಕಪೂರ್‌ ಅವರೊಂದಿಗೆ 2000ರಲ್ಲಿ ರೆಫ್ಯುಜಿ ಸಿನಿಮಾದ ಮೂಲಕ ಅಭಿಷೇಕ್‌ ಬಚ್ಛನ್‌ ಸಿನಿಮಾರಂಗಕ್ಕೆ ಇಳಿದಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ, ನಿರೂಪಕಿಯೊಂದಿಗೆ ಅಭಿಷೇಕ್‌ ಬಚ್ಛನ್‌ ಮಾಡಿದ ಫನ್‌ ಮಾತುಕತೆ ಸಖತ್‌ ವೈರಲ್‌ ಆಗಿದೆ. ಮದುವೆಯಾದ ಪುರುಷರು ಮಾಡಬೇಕಾದ ಒಂದು ಕೆಲಸವೇನು ಎಂದು ಅಭಿಷೇಕ್‌ ಬಳಿ ಸಲಹೆ ಕೇಳಲಾಯಿತು. ಅಭಿಷೇಕ್‌ ನೀಡಿದ ಹಸ್ಬೆಂಡ್‌ ಟಿಪ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅದಕ್ಕೆ ಕಾರಣ ಐಶ್ವರ್ಯಾ ರೈ ಬಚ್ಛನ್‌ ಜೊತೆಗಿನ ವಿಚ್ಛೇದನ ಕುರಿತಾದ ರೂಮರ್ಸ್‌. 'ನಿಮ್ಮ ಪರ್ಫಾಮೆನ್ಸ್‌ ಮೂಲಕವೇ ನೀವು ಟೀಕಾಕಾರರನ್ನು ಹೇಗೆ ಬಾಯಿ ಮುಚ್ಚಿಸುತ್ತೀರಿ? ಇದನ್ನು ಹೇಗೆ ಮಾಡಲು ಸಾಧ್ಯ? ಎಂದು ಪ್ರಶ್ನೆ ಕೇಳಲಾಯಿತು.

ಇದಕ್ಕೆ ಉತ್ತರ ನೀಡುವ ಐಶ್ವರ್ಯಾ ಪತಿ, 'ಇದು ತುಂಬಾ ಸಿಂಪಲ್‌. ನಮ್ಮೊಂದಿಗೆ ಸಮಸ್ಯೆ ಆಗುವ ಯಾವುದೇ ಅಂಶವಿಲ್ಲ. ನಿರ್ದೇಶಕರು ಏನು ಹೇಳ್ತಾರೋ ನಾವದನ್ನು ಚಾಚೂ ತಪ್ಪದೆ ಮಾಡ್ತೀವಿ. ಒಂದೇ ಒಂದು ಮಾತನಾಡದೆ ಕೆಲಸ ಮಾಡಿ ಮನೆಗೆ ಹೋಗುತ್ತೇವೆ' ಎಂದು ಹೇಳಿದ್ದಾರೆ. ಈ ವೇಳೆ ನಿರೂಪಕಿ ಅಭಿಷೇಕ್‌ ನೀಡಿದ ಟಿಪ್ಸ್ಅನ್ನು ಪತ್ನಿಯ ವಿಚಾರಕ್ಕೆ ಹೋಲಿಕೆ ಮಾಡಿದರು. ಇದಕ್ಕೆ ಥಟ್ಟನೆ ಉತ್ತರ ನೀಡಿದ ಅಭಿಷೇಕ್‌, ಹೌದು, ಎಲ್ಲಾ ಮದುವೆಯಾದ ಪುರುಷರೂ ಇದನ್ನೇ ಮಾಡುತ್ತಾರೆ. ಹೆಂಡತಿ ಹೇಳಿದಂತೆ ಅವರು ಕೆಲಸ ಮಾಡ್ತಾರೆ' ಎಂದು ಹೇಳಿದ್ದಾರೆ. ಇದನ್ನು ಫಿಲ್ಮ್‌ಫೇರ್‌ ತನ್ನ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಶೇರ್‌ ಮಾಡಿದ್ದು ಸಖತ್‌ ವೈರಲ್‌ ಆಗಿದೆ.

ಅಭಿಷೇಕ್‌ ಬಚ್ಛ್‌ ಹಾಗೂ ಐಶ್ವರ್ಯಾ ರೈ ವಿಚ್ಛೇನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.  ರೂಮರ್‌ ನಿಜ ಅನ್ನೋದನ್ನ ಸಾಬೀತುಪಡಿಸುವಂತೆ ಕೆಲವೊಂದು ವಿಚಾರಗಳು ಅವರ ಬಾಳಿನಲ್ಲಿ ಆಗುತ್ತಿದೆ. ಇಲ್ಲಿಯವರೆಗೂ ಹೀಗೆ ಕೇಳಿಬರುತ್ತಿರುವ ರೂಮರ್‌ಗಳು ನಿಜವಲ್ಲ ಎನ್ನುವ ಯಾವುದೇ ಹೇಳಿಕೆ ಇಬ್ಬರಿಂದಲೂ ಬಂದಿಲ್ಲ. ಇತ್ತೀಚೆಗೆ ಪುತ್ರ ಆರಾಧ್ಯಳ 13ನೇ ವರ್ಷದ ಜನ್ಮದಿನಕ್ಕೆ ಐಶ್ವರ್ಯಾ ರೈ ಹಂಚಿಕೊಂಡ ಫೋಟೋದಲ್ಲಿ ಅಭಿಷೇಕ್‌ ಬಚ್ಛನ್‌ ಇದ್ದಿರಲಿಲ್ಲ. ಅಭಿಷೇಕ್‌ ಇದರಲ್ಲಿ ಭಾಗವಹಿಸಿರಲಿಲ್ಲ ಎನ್ನುವ ಮಾತಿನೊಂದಿಗೆ ಇಬ್ಬರ ಡಿವೋರ್ಸ್ ಹೆಚ್ಚೂ ಕಡಿಮೆ ಖಚಿತ ಎನ್ನುವ ಮಾತುಗಳು ಬಂದಿದ್ದವು. 

'ಆಕೆ ನಟಿ ಅನ್ನೋದೇ ಗೊತ್ತಿರ್ಲಿಲ್ಲ..' ಸೊಸೆಯ ಸಾವಿನ ಬಗ್ಗೆ ಮೌನ ಮುರಿದ ಶೋಭಿತಾ ಶಿವಣ್ಣ ಮಾವ

ಇದರ ಬೆನ್ನಲ್ಲಿಯೇ ಬರ್ತ್‌ಡೇ ಪಾರ್ಟಿ ಆಯೋಜನೆ ಮಾಡಿದ್ದ ಕಂಪನಿ ಅಭಿಷೇಕ್‌ ಬಚ್ಛನ್‌ ಬರ್ತ್‌ಡೇ ಪಾರ್ಟಿಯಲ್ಲಿ ಇದ್ದ ಎರಡು ವಿಡಿಯೋಗಳನ್ನು ಹಂಚಿಕೊಂಡಿತ್ತು. ಒಂದು ವಿಡಿಯೋದಲ್ಲಿ ಐಶ್ವರ್ಯಾ ಮಗಳ ಜೊತೆ ನಿಂತು ಮಾತನಾಡಿದ್ದು, ಕಳೆದ 13 ವರ್ಷಗಳಿಂದ ಉತ್ತಮವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಕಂಪನಿಗೆ ಥ್ಯಾಂಕ್ಸ್‌ ಹೇಳುತ್ತಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಅಭಿಷೇಕ್‌ ಬಚ್ಛನ್‌ ಕೂಡ ಕಂಪನಿಗೆ ಇದೇ ಮಾತನ್ನು ಹೇಳಿದ್ದಾರೆ.

ಪೊಲೀಸರಿಗೆ ಸಿಕ್ತು ಶೋಭಿತಾ ಶಿವಣ್ಣ ಡೆತ್‌ ನೋಟ್‌, ಸ್ಫೋಟಕ ಮಾಹಿತಿ ಬಹಿರಂಗ..

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!